Deadly Pool: ಸಮುದ್ರದ ಕೆಳಗೊಂದು ಇದ್ಯಂತೆ ಅಪಾಯಕಾರಿ ಪೂಲ್‌! ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ

ವಿಜ್ಞಾನಿಗಳು ಈಗೊಂದು ಹೊಸ ಅನ್ವೇಷಣೆಯನ್ನು ಕಂಡುಹಿಡಿದ್ದಾರೆ. ಅದೇನು ಎಂದು ಆಶ್ಚರ್ಯವಾಗುತ್ತಿದೆಯೇ? ಕುತೂಹಲ ಹೆಚ್ಚಾಗುತ್ತಿದ್ದರೆ ಈ ಲೇಖನವನ್ನು ಒಮ್ಮೆ ಓದಿ. ನಾವಿಂದು ಈ ಲೇಖನದಲ್ಲಿ ವಿಜ್ಞಾನ ಲೋಕದ ಹೊಸ ಅನ್ವೇಷಣೆ ಬಗ್ಗೆ ಮಾತನಾಡೋಣ ಬನ್ನಿ.

ಸಮುದ್ರದ ಕೆಳಗೊಂದು ಅಪಾಯಕಾರಿ ಪೂಲ್‌

ಸಮುದ್ರದ ಕೆಳಗೊಂದು ಅಪಾಯಕಾರಿ ಪೂಲ್‌

  • Share this:
ವಿಜ್ಞಾನದ ಲೋಕದಲ್ಲಿ ದಿನವೂ ಹೊಸ-ಹೊಸ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ಒಂದು ಸಣ್ಣ ವಿಷಯ ಸಿಕ್ಕರೂ ಸಾಕು, ವಿಜ್ಞಾನಿಗಳು (Scientists) ಅದರ ಜಾಲ ಹಿಡಿದು ಹೊರಟೆ ಬಿಡುತ್ತಾರೆ. ಅದರ ಮೂಲವನ್ನು ತಿಳಿಯುವವರೆಗೂ ಅದರ ಅನ್ವೇಷಣೆ ನಿಲ್ಲಿಸುವುದೇ ಇಲ್ಲ. ಇನ್ನು ಸಮುದ್ರದ ಆಳದಲ್ಲಿ (depth of the sea) ಸಂಶೋಧನೆ (ಸಂಶೋಧನೆ) ನಡೆಸುವುದೆಂದರೆ ಸಾಮಾನ್ಯವೇ? ಸಮುದ್ರದ ಆಳದಲ್ಲಿ ಏನು ಇದೆ? ಅದು ಎಷ್ಟು ವರ್ಷಗಳಿಂದ ಅಲ್ಲಿದೆ? ಇದು ನಮ್ಮ ವಿಜ್ಞಾನ ಲೋಕಕ್ಕೆ ಹೊಸ ಕೊಡುಗೆ ಆಗಬಹುದೇ? ಇದರ ಮತ್ತಷ್ಟು ಆಳಕ್ಕೆ ನಾವು ಸಂಶೋಧನೆ ಮಾಡಿದರೆ ಈ ಭೂ ಗ್ರಹದ ಆರಂಭದ ದಿನಗಳ ಬಗ್ಗೆ ನಮಗೆ ಮಾಹಿತಿ ಸಿಗಬಹುದೇ? ಈ ಮಾಹಿತಿಯಿಂದ ನಾವು ಸಮಾಜಕ್ಕೆ ಏನಾದರೂ ವಿಶೇಷ ಕೊಡುಗೆ ನೀಡಬಹುದೇ ?

ಅನೇಕ ಪ್ರಶ್ನೆಗಳೇ ವಿಜ್ಞಾನದ ಸಂಶೋಧಕರಿಗೆ ಸಂಶೋಧನೆ ಮಾಡಲು ಸಹಾಯವಾಗುತ್ತವೆ.  ಇದಕ್ಕೆ ಪೂರಕವೆಂಬಂತೆ ವಿಜ್ಞಾನಿಗಳು ಈಗೊಂದು ಹೊಸ ಅನ್ವೇಷಣೆಯನ್ನು ಕಂಡುಹಿಡಿದ್ದಾರೆ. ಅದೇನು ಎಂದು ಆಶ್ಚರ್ಯವಾಗುತ್ತಿದೆಯೇ? ಕುತೂಹಲ ಹೆಚ್ಚಾಗುತ್ತಿದ್ದರೆ ಈ ಲೇಖನವನ್ನು ಒಮ್ಮೆ ಓದಿ. ನಾವಿಂದು ಈ ಲೇಖನದಲ್ಲಿ ವಿಜ್ಞಾನ ಲೋಕದ ಹೊಸ ಅನ್ವೇಷಣೆ ಬಗ್ಗೆ ಮಾತನಾಡೋಣ ಬನ್ನಿ.

ಕೆಂಪು ಸಮುದ್ರದ ಕೆಳಭಾಗದಲ್ಲಿ ಒಂದು ಅಪಾಯಕಾರಿ ಪೂಲ್‌ 
ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕೆಂಪು ಸಮುದ್ರದ ಕೆಳಭಾಗದಲ್ಲಿ ಒಂದು ಅಪಾಯಕಾರಿ ಪೂಲ್‌ ಒಂದನ್ನು ಕಂಡುಹಿಡಿದಿದ್ದಾರೆ. ಅದರಲ್ಲಿ ಈ ಪೂಲ್‌ನಲ್ಲಿರುವ ವಿಷವು ಇಲ್ಲಿಗೆ ಬರುವ ಎಲ್ಲ ಪ್ರಾಣಿಗಳನ್ನು ಸಾಯಿಸುತ್ತದೆ. ಸಂಶೋಧನೆಯ ಪ್ರಕಾರ, ರಿಮೋಟ್ ಚಾಲಿತ ನೀರೊಳಗಿನ ವಾಹನವನ್ನು ಬಳಸಿಕೊಂಡು ಮೇಲ್ಮೈಯಿಂದ 1.7 ಕಿಲೋಮೀಟರ್‌ಗಳಷ್ಟು ಕೆಳಗೆ ಇರುವ ಉಪ್ಪುನೀರಿನ ಪೂಲ್ ಅನ್ನು ಈ ಮುಂಚೆ ಕಂಡುಹಿಡಿಯಲಾಯಿತು. ಇದರ ನಂತರ ಹತ್ತು ಗಂಟೆಗಳ ಆನಂತರದ ಡೈವ್‌ನ ಕೊನೆಯ ಐದು ನಿಮಿಷಗಳ ಅವಧಿಯಲ್ಲಿ ವಿಜ್ಞಾನಿಗಳು ಈ ಅಪಾಯಕಾರಿ ಪೂಲ್‌ ಅನ್ನು ಕಂಡುಹಿಡಿದಿದ್ದಾರೆ.

ರಾಸಾಯನಿಕ ಅಂಶಗಳಿಂದ ಕೂಡಿರುವ ನೀರು
ಈ ಉಪ್ಪುನೀರಿನ ಪೂಲ್‌ ಸಮುದ್ರದ ತಳದಲ್ಲಿನ ಹೆಚ್ಚು ಉಪ್ಪು ನೀರು ಮತ್ತು ಇತರ ರಾಸಾಯನಿಕ ಅಂಶಗಳಿಂದ ತುಂಬಿದೆ. ಇದು ಸುತ್ತಮುತ್ತಲಿನ ಸಮುದ್ರ ನೀರಿಗಿಂತ ಹೆಚ್ಚಿನ ಲವಣ ಅಂಶವನ್ನು ಹೊಂದಿದೆ ಎಂದು ಸಂಶೋಧಕರು ವಿವರಿಸಿದರು. ಈ ನೀರೊಳಗಿನ ಪೂಲ್‌ಗಳು ಪ್ರಾಣಿಗಳನ್ನು ಕೊಲ್ಲಬಹುದು ಮತ್ತು ಜೀವಂತವಾಗಿ ಆ ಪ್ರಾಣಿಗಳು ಹೊರ ಬಂದರೂ ಸಹ ಅವು ಜಾಸ್ತಿ ದಿನ ಬದುಕಲು ಸಾದ್ಯವಿಲ್ಲದ ಹಾಗೆ ಮಾಡಿ ಬಿಡುತ್ತದೆ.

ಇದನ್ನೂ ಓದಿ: Rooster: ಸತ್ತುಹೋದ ಹುಂಜದ 13ನೇ ದಿನದ ಕಾರ್ಯ ಆಚರಿಸಿದ ಕುಟುಂಬ! ಅಂತದ್ದೇನು ಸಾಧನೆ ಮಾಡಿದೆ ಇದು

“ಇಂತಹ ಉಪ್ಪು ಸಮುದ್ರಗಳ ಪೂಲ್‌ಗಳ ಅನ್ವೇಷಣೆಯು ನಮ್ಮ ಭೂ ಗ್ರಹದಲ್ಲಿ ಮೊದಲು ಈ ಸಮುದ್ರ ಮತ್ತು ಸಾಗರಗಳು ಹೇಗೆ ರೂಪುಗೊಂಡವು ಎಂಬುದರ ಬಗ್ಗೆ ಸಂಶೋಧಕ ವಿಜ್ಞಾನಿಗಳಿಗೆ ಇನ್ನು ಉತ್ತಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತವೆ” ಎಂದು ಪ್ರಮುಖ ಸಂಶೋಧಕರು ಹೇಳಿದರು.

ಉಪ್ಪುನೀರಿನ ಪೂಲ್‌ ಸೂಕ್ಷ್ಮಜೀವಿಗಳಿಗೆ ಆಶ್ರಯ ತಾಣವಂತೆ
“ಉಪ್ಪುನೀರಿನ ಪೂಲ್‌ಗಳು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳಿಗೆ ಆಶ್ರಯ ತಾಣವಾಗಿದೆ ಮತ್ತು ವೈವಿಧ್ಯತೆಯಿಂದ ಸಮೃದ್ಧವಾಗಿವೆ” ಎಂದು ಅವರು ಹೇಳಿದರು. ಇದೇ ರೀತಿಯ ಪ್ರತಿಕೂಲ ಪರಿಸ್ಥಿತಿಗಳನ್ನು ಹೊಂದಿರುವ ಅನ್ಯಗ್ರಹಗಳು ಯಾವುದೇ ಜೀವಿಗಳಿಗೆ ಆತಿಥ್ಯ ನೀಡಬಹುದೇ ಎಂದು ನಿರ್ಧರಿಸಲು ಈ ಆವಿಷ್ಕಾರಗಳು ಅತ್ಯಗತ್ಯ ಎಂದು ಅವರು ಮತ್ತೆ ಮತ್ತೆ ಹೇಳಿದರು. "ಭೂಮಿಯ ಮೇಲಿನ ಜೀವನದ ಇತಿ-ಮಿತಿಗಳನ್ನು ನಾವು ಅರ್ಥಮಾಡಿಕೊಳ್ಳುವವರೆಗೆ, ಬೇರೆ ಗ್ರಹಗಳು ಬೇರೆ ಯಾವುದೇ ಜೀವಿಗಳನ್ನು ಉಳಿಸಿಕೊಳ್ಳಬಹುದೇ ಎಂದು ನಿರ್ಧರಿಸುವುದು ಬಹು ಕಷ್ಟವಾಗುತ್ತದೆ" ಎಂದು ಶ್ರೀ ಪುರ್ಕಿಸ್ ಹೇಳಿದರು.

ಇದನ್ನೂ ಓದಿ: Worst Genocides: ಗರ್ಭಿಣಿಯರಿಗೆ ಚಿತ್ರಹಿಂಸೆ ನೀಡುತ್ತಿದ್ದರಂತೆ ಈ ದೇಶದ ಸೈನಿಕರು! ಘಟನೆ ಬಗ್ಗೆ ಕೇಳಿದ್ರೆ ಮೈ ಜುಂ ಎನ್ನುತ್ತೆ 

ನ್ಯೂಯಾರ್ಕ್‌ನ ಪೋಸ್ಟ್‌ವೊಂದರ ಪ್ರಕಾರ, ವಿಜ್ಞಾನಿಗಳು ಕಂಡುಹಿಡಿದ ಮೊದಲ ಉಪ್ಪುನೀರಿನ ಪೂಲ್ ಇದಲ್ಲ. ಕಳೆದ 30 ವರ್ಷಗಳಲ್ಲಿ, ಸಮುದ್ರಶಾಸ್ತ್ರಜ್ಞರು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಮೆಕ್ಸಿಕೋ ಕೊಲ್ಲಿಯ "ಕೆಲವು ಡಜನ್‌ಗಳಷ್ಟು ಈ ರೀತಿಯ ಉಪ್ಪುನೀರಿನ ಅತ್ಯಂತ ಅಪಾಯಕಾರಿ" ಮಾರಣಾಂತಿಕ ಸಮುದ್ರದ ಪೂಲ್‌ಗಳನ್ನು ಈಗಾಗಲೇ ಕಂಡುಹಿಡಿಯುವಲ್ಲಿ ಸಮರ್ಥರಾಗಿದ್ದಾರೆ.
Published by:Ashwini Prabhu
First published: