ವೈರಲ್​ ವಿಡಿಯೋ| ಹಿಂದಿ ಹಾಡಿಗೆ ಭಾರತೀಯ ಯೊಧನ ನೃತ್ಯ


Updated:August 9, 2018, 1:07 PM IST
ವೈರಲ್​ ವಿಡಿಯೋ| ಹಿಂದಿ ಹಾಡಿಗೆ ಭಾರತೀಯ ಯೊಧನ ನೃತ್ಯ
(Image: DefenceLover)

Updated: August 9, 2018, 1:07 PM IST
ನ್ಯೂಸ್​ 18 ಕನ್ನಡ 

ದೇಶ ಕಾಯೋ ಭಾರತೀಯ ಸೈನಿಕನೊಬ್ಬ ಹಿಂದಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ವೈರಲ್​ ಆಗಿದೆ.

ಡೆಹ್ರಾಡೂನ್​ನ ನಿವಾಸಿ ದೀಪೇಶ್​ ಥಾಪಾ ಎಂಬ ಯೋಧ, ಖ್ಯಾತ ಗಾಯಕ ಕೈಲಾಶ್​ ಖೇರ್​ ಹಾಡಿರುವ 'ಮಿಲ್ಕೆ ಸಾರೆ ಆ್ಯಶ್​ ಕರೆ' ಎಂಬ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. ಸುಮಾರು 2.24 ನಿಮಿಷದ ಈ ವಿಡಿಯೋ ವೈರಲ್​ ಆಗಿದ್ದು, ಡಿಫೆನ್ಸ್​ ಲವರ್​ ಎಂಬ ಫೇಸ್​ಬುಕ್​ ಪೇಜ್​ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದೆ.

ಈತನ ಡ್ಯಾನ್ಸ್​ಗೆ ಇತರೇ ಯೋಧರೂ ಕೂಡಾ ಸಾಥ್​ ನೀಡಿದ್ದು, ಚಪ್ಪಾಳೆ ತಟ್ಟಿ ಈತನ ನೃತ್ಯವನ್ನು ಪ್ರೋತ್ಸಾಹಿಸಿದ್ದಾರೆ. ಈ ಕುರಿತು ಕಾಮೆಂಟ್​ ಮಾಡಿರುವ ದೀಪೇಶ್​ ಥಾಪಾ, 'ವಿಡಿಯೋ ನನಗೆ ಸಿಗುವ ಮೊದಲೇ ವೈರಲ್​ ಆಗಿದೆ. ಈ ಡ್ಯಾನ್ಸ್​ ಹಿಂದೆ ಸಾಕಷ್ಟು ಶ್ರಮ ವಹಿಸಿದ್ದೆ. ಕೊನೆಗೂ ನನ್ನ ಕನಸು ನನಸಾಗಿದೆ' ಎಂದು ಬರೆದುಕೊಂಡಿದ್ದಾರೆ.First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ