IVF Miracle: ಲ್ಯಾಬ್​ನಲ್ಲಿ ಶೇಖರಿಸಿದ ಭ್ರೂಣಗಳಿಂದ ನಾಲ್ಕು ವರ್ಷಗಳಲ್ಲಿ ಮೂರು ಮಕ್ಕಳನ್ನು ಪಡೆದ ದಂಪತಿ!

ಒಬ್ಬ ಹೆಣ್ಣು ಗರ್ಭಧರಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲ ಸಾಮಾನ್ಯ ಸಮಸ್ಯೆಗಳನ್ನು ಹೊಂದಿದ್ದು ಆಕೆಗೆ ಸಂತಾನ ಭಾಗ್ಯ ಸಿಗುವುದೇ ಇಲ್ಲವೆ ಎಂದು ಹೇಳಲೂ ಸಹ ಸಾಧ್ಯವಿಲ್ಲ. ಇಂದಿನ ವೈದ್ಯಕೀಯ ವಿಜ್ಞಾನ ಎಂಬುದು ಎಷ್ಟು ಮುಂದುವರೆದಿದೆ ಎಂದರೆ ಐವಿಎಫ್ ಮೂಲಕವೂ ಸಮಸ್ಯೆ ಹೊಂದಿರುವ ಹೆಣ್ಣು ಗರ್ಭ ಧರಿಸಬಹುದಾಗಿದೆ. ಇದಕ್ಕೆ ಉದಾಹರಣೆ ಇಲ್ಲಿದೆ ಓದಿ.

ನಾಲ್ಕು ವರ್ಷಗಳ ಅಂತರದಲ್ಲಿ 'ತ್ರಿವಳಿ' ಸಂತಾನ 

ನಾಲ್ಕು ವರ್ಷಗಳ ಅಂತರದಲ್ಲಿ 'ತ್ರಿವಳಿ' ಸಂತಾನ 

  • Share this:
ಸಂತಾನ ಭಾಗ್ಯ ಎಂಬುದು ನಿಜಕ್ಕೂ ವಿಶೇಷವಾದುದು. ಮದುವೆಯಾದ (Marriage) ಪ್ರತಿ ದಂಪತಿ (Couple) ಸಂತಾನಕ್ಕಾಗಿ ಸಾಮಾನ್ಯವಾಗಿ ಹಾತೊರೆಯುತ್ತಾರೆ. ಆದರೆ ಮದುವೆಯಾಗುವ ಪ್ರತಿಯೊಬ್ಬರಿಗೂ ಸಂತಾನ ಭಾಗ್ಯ ಶೀಘ್ರವೇ ಪ್ರಾಪ್ತಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗಿಗಂತೂ ಹೆಣ್ಣಿನಲ್ಲಿ ಬಂಜೆತನದ ಸಮಸ್ಯೆಗಳು (Infertility problem) ಹೆಚ್ಚಾಗಿ ಕಾಣಿಸುತ್ತಿವೆ. ಅಷ್ಟೇ ಏಕೆ ಹಲವು ಪುರುಷರು (Men's)  ಸಹ ಈ ನಿಟ್ಟಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದರೂ ತಪ್ಪಿಲ್ಲ. ಆದಾಗ್ಯೂ ಒಬ್ಬ ಹೆಣ್ಣು ಗರ್ಭಧರಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲ ಸಾಮಾನ್ಯ ಸಮಸ್ಯೆಗಳನ್ನು ಹೊಂದಿದ್ದು ಆಕೆಗೆ ಸಂತಾನ ಭಾಗ್ಯ ಸಿಗುವುದೇ ಇಲ್ಲವೆ ಎಂದು ಹೇಳಲೂ ಸಹ ಸಾಧ್ಯವಿಲ್ಲ. ಇಂದಿನ ವೈದ್ಯಕೀಯ ವಿಜ್ಞಾನ ಎಂಬುದು ಎಷ್ಟು ಮುಂದುವರೆದಿದೆ ಎಂದರೆ ಐವಿಎಫ್ (IVF) ಮೂಲಕವೂ ಸಮಸ್ಯೆ ಹೊಂದಿರುವ ಹೆಣ್ಣು ಗರ್ಭ ಧರಿಸಬಹುದಾಗಿದೆ.

ಐವಿಎಫ್ ಅಥವಾ ಇನ್ ವಿಟ್ರೋ ಫರ್ಟಿಲೈಸೇಷನ್ ಎಂದರೇನು?
ಐವಿಎಫ್ ಅಥವಾ ಇನ್ ವಿಟ್ರೋ ಫರ್ಟಿಲೈಸೇಷನ್ ಎಂಬುದು ಪ್ರಣಾಳ ಶಿಶುವಿನ ಪರಿಕಲ್ಪನೆಯನ್ನು ಹೊಂದಿದ್ದು ಸಾಕಷ್ಟು ಸಮಸ್ಯೆಯ ಸಂದರ್ಭದಲ್ಲೂ ಹೆಣ್ಣು ಈ ವಿಧಾನದ ಮೂಲಕ ತಾಯಿಯಾಗುವ ಭಾಗ್ಯ ಪಡೆಯುತ್ತಾಳೆ. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಯುಕೆ ಮೂಲದ ದಂಪತಿಯೊಂದು ನಾಲ್ಕು ವರ್ಷಗಳ ಅಂತರದಲ್ಲಿ ಮೂರು ಮಕ್ಕಳನ್ನು ಐವಿಎಫ್ ಮೂಲಕವೇ ಪಡೆದು ಎಲ್ಲರೂ ಚಕಿತರಾಗುವಂತೆ ಮಾಡಿದ್ದಾರೆ. ಅಷ್ಟಕ್ಕೂ ಅದರಲ್ಲೇನಿದೆ ವಿಶೇಷ ಎಂದು ಹಲವರು ಪ್ರಶ್ನೆ ಮಾಡಬಹುದು. ಹೌದು, ಅದರಲ್ಲಿ ಒಂದು ವಿಶೇಷತೆ ಅಡಗಿದೆ, ಅದು ಏನೆಂದು ಮುಂದೆ ಓದಿ.

ನಾಲ್ಕು ವರ್ಷಗಳ ಅಂತರದಲ್ಲಿ 'ತ್ರಿವಳಿ' ಸಂತಾನ 
ಯುಕೆಯ ಸೋಮರ್ಸೆಟ್ ನಲ್ಲಿ ನೆಲೆಸಿರುವ ಕೇರನ್ ಹಾಗೂ ಜೇಮ್ಸ್ ದಂಪತಿ ಮೊದಲ ಬಾರಿಗೆ ಐವಿಎಫ್ ಮೂಲಕ ಸಂತಾನ ಪಡೆಯಲು ಬಯಸಿದ್ದರು. ಅದರಂತೆ ಅವರು ಮೊದಲ ಸಂತಾನ ಪಡೆಯುವ ಪ್ರಕ್ರಿಯೆ ನಡೆಯುವಾಗ ಭವಿಷ್ಯದಲ್ಲಿ ಮತ್ತೆ ತಮ್ಮ ಕುಟುಂಬವನ್ನು ವಿಸ್ತರಿಸಲು ಬಯಸಿದರೆ ಅದಕ್ಕೆ ಅನುಕೂಲವಾಗುವಂತೆ ಮೊದಲೇ ತಮ್ಮ ಎಂಬ್ರಿಯೋಗಳನ್ನು ಲ್ಯಾಬಿನಲ್ಲಿ ಸಂರಕ್ಷಿಸಿಡಲು ನಿರ್ಧರಿಸಿದ್ದರು. ಆ ನಂತರ ಐವಿಎಫ್ ಮೂಲಕ ಅವರಿಗೆ ಮೊದಲ ಸಂತಾನ ಗಂಡು ಮಗುವಾಯಿತು. ಕ್ಯಾಮೆರಾನ್ ಎಂಬ ಹೆಸರನ್ನಿಟ್ಟಿರುವ ಆ ಮಗು ಜನಿಸಿದ್ದು 2018 ರಲ್ಲಿ.

ತದನಂತರ ದಂಪತಿಯು ಮತ್ತೊಂದು ಸಂತಾನಕ್ಕೆ ನಿರ್ಧರಿಸಿ ಈ ಮುಂಚೆ ಮೊದಲ ಸಂತಾನದ ಸಂದರ್ಭದಲ್ಲಿ ತೆಗೆದಿರಿಸಿ ಸಂರಕ್ಷಿಸಲಾಗಿದ್ದ ಎರಡು ಎಂಬ್ರಿಯೋಗಳ ಪೈಕಿ ಒಂದನ್ನು ಬಳಸಿಕೊಂಡು ಕೇರನ್ ಮತ್ತೆ ಗರ್ಭಧರಿಸುವಂತಾಯಿತು. ಈ ಬಾರಿ ಅವರಿಗೆ 2020 ರಲ್ಲಿ ಇಸಾಬೆಲ್ಲಾ ಎಂಬು ಹೆಣ್ಣು ಮಗು ಹುಟ್ಟಿತು. ಕೊನೆಗೆ ಅಂತಿಮವಾಗಿ ಉಳಿದಿದ್ದ ಇನ್ನೊಂದು ಎಂಬ್ರಿಯೋ ಬಳಸಿಕೊಂಡಾಗ 2022 ರಲ್ಲಿ ಕೇರನ್ ಅವರಿಗೆ ಗ್ಯಾಬ್ರಿಯೆಲ್ಲಾ ಎಂಬ ಮತ್ತೊಂದು ಹೆಣ್ಣು ಮಗು ಹುಟ್ಟಿತು. ಹೀಗೆ ಮೊದಲ ಸಂದರ್ಭದಲ್ಲಿ ಶೇಖರಿಸಿಡಲಾಗಿದ್ದ ಎಂಬ್ರಿಯೋಗಳಿಂದಲೇ ಅವರಿಗೆ ನಾಲ್ಕು ವರ್ಷಗಳ ಅಂತರದಲ್ಲಿ ಮೂರು ಸಂತಾನಗಳು ಲಭಿಸಿದ್ದು ಅವು ತಾಂತ್ರಿಕವಾಗಿ 'ತ್ರಿವಳಿ' ಸಂತಾನ ಅನಿಸಿಕೊಂಡಿವೆ. ಇದೆಯಲ್ಲವೇ ಅಚ್ಚರಿಯ ಸಂಗತಿ.

ಈ ಬಗ್ಗೆ ಕೇರನ್ ಏನು ಹೇಳಿದ್ದಾರೆ  
ಈ ಬಗ್ಗೆ ದಂಪತಿಯು ಅತೀವ ಸಂತಸ ವ್ಯಕ್ತಪಡಿಸಿದೆ. ಕೇರನ್ ಅವರಂತೂ ತಮ್ಮನ್ನು ತಾವು ತುಂಬ ಅದೃಷ್ಟವಂತರು ಎಂದೇ ಭಾವಿಸಿದ್ದಾರೆ, ಅವರು ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸುತ್ತ ಹೀಗೆ ನುಡಿಯುತ್ತಾರೆ, "ನಾವು ನಿಜಕ್ಕೂ ತುಂಬಾ ಅದೃಷ್ಟವಂತರು. ಅದೆಷ್ಟೋ ದಂಪತಿಗಳು ಐವಿಎಫ್ ಮೂಲಕ ಕೇವಲ ಒಂದು ಸಂತಾನವನ್ನು ಪಡೆಯಲೂ ಸಹ ವಿಫಲವಾಗುವ ಸಂದರ್ಭದಲ್ಲಿ ನಮಗೆ ಮೂರು ಸಂತಾನಗಳಾಗಿರುವುದು ನಿಜಕ್ಕೂ ಸಂತಸಕರ ವಿಷಯ, ನನ್ನನ್ನು ನಾನು ತುಂಬಾ ಅದೃಷ್ಟವಂತೆ ಅಂದುಕೊಳ್ಳುತ್ತೇನೆ".

ಇದನ್ನೂ ಓದಿ:  No Entry To Indians: ಭಾರತದ ಈ ಪ್ರದೇಶಗಳಿಗೆ ವಿದೇಶಿಗರಿಗೆ ಮಾತ್ರ ಪ್ರವೇಶವಂತೆ! ಆದ್ರೆ ಭಾರತೀಯರಿಗೆ ನೋ ಎಂಟ್ರಿ

ಮುಂದುವರೆಯುತ್ತ ಅವರು ಹೇಳುತ್ತಾರೆ, "ನನಗೆ ಗ್ಯಾಬ್ರಿಯೆಲ್ಲಾ ಹುಟ್ಟುವ ಮುಂಚೆಯೇ ನನಗೆ ಗೊತ್ತಿತ್ತು ನನಗೆ ಇನ್ನೊಂದು ಸಂತಾನ ಬೇಕೆಂದು, ಹಾಗಾಗಿ ನಾನು ಜೇಮ್ಸ್ (ಕೇರನ್ ಅವರ ಪತಿ) ಗೆ ಇನ್ನೊಂದು ಎಂಬ್ರಿಯೋ ಉಳಿದಿದೆ, ಅದನ್ನೂ ಸಹ ಪ್ರಯತ್ನಿಸೋಣ, ಇದು ಯಶಸ್ವಿಯಾಗದೆ ಹೋದರೆ ನಾವು ಮತ್ತೆ ಹಣ ಉಳಿತಾಯ ಮಾಡಿ ಮತ್ತೊಮ್ಮೆ ಪ್ರಯತ್ನಿಸೋಣ ಎಂದು ಹೇಳಿದ್ದೆ, ಆದರೆ, ಅದು ಹಾಗಾಗಲಿಲ್ಲ, ಗ್ಯಾಬ್ರಿಯೆಲ್ಲಾ ನನ್ನ ಮೂರನೇ ಹಾಗೂ ಕೊನೆಯ ಸಂತಾನವಾಗಿ ನನಗೆ ಜನ್ಮಿಸಿದಳು, ನನ್ನ ಕುಟುಂಬ ಈಗ ಪರಿಪೂರ್ಣ ಅನ್ನಿಸುತ್ತಿದೆ".

ಈ ರೀತಿಯ ಐವಿಎಫ್ ಜನನಗಳ ಬಗ್ಗೆ ವಿಜ್ಞಾನ ಹೇಳುವುದೇನು?
ಬೆಂಗಳೂರಿನಲ್ಲಿ ಸ್ಥಿತವಿರುವ ನೋವಾ ಫರ್ಟಿಲಿಟಿ ಸೌಲಭ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಫರ್ಟಿಲಿಟಿ ತಜ್ಞೆಯಾದ ಡಾ. ಪಲ್ಲವಿ ಪ್ರಸಾದ್ ಹೇಳುತ್ತಾರೆ, "ಈ ರೀತಿಯ ಪ್ರಕರಣ ಅನನ್ಯವಾದದ್ದು ಅಂತ ಹೇಳಲು ಸಾಧ್ಯವಿಲ್ಲ, ಏಕೆಂದರೆ, ಉತ್ತಮ ಗುಣಮಟ್ಟದ ಎಂಬ್ರಿಯೋ ಹೊಂದಿರುವ ದಂಪತಿಯು ವಿಟ್ರಿಫಿಕೇಷನ್ ಪ್ರಕ್ರಿಯೆಗೆ ಹೋಗಿ ಅದನ್ನು ಸಂರಕ್ಷಿಸಿಡಬಹುದಾಗಿದೆ. ಕಾಲಾಂತರದಲ್ಲಿ ತಮಗೆ ಸಂತಾನದ ಅವಶ್ಯಕತೆ ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ".

ತಜ್ಞರು, ಐವಿಎಫ್ ಚಕ್ರದಲ್ಲಿ ಸೃಷ್ಟಿಸಲಾಗುವ ಎಂಬ್ರಿಯೋಗಳು (ಭ್ರೂಣ) ದಂಪತಿಯಲ್ಲಿರುವ ಗುಣಮಟ್ಟದ ಹಾಗೂ ಎಷ್ಟು ಸಂಖ್ಯೆಯಲ್ಲಿವೆ ಎನ್ನಬಹುದಾದ ವೀರ್ಯ ಹಾಗೂ ಅಂಡಾಣುಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ರೀತಿಯ ವಿಧಾನವು, ವಿಳಂಬವಾಗಿ ಸಂತಾನ ಬಯಸುವ ದಂಪತಿಗಳಿಗೆ, ಚಿಕಿತ್ಸೆಯ ಸಂದರ್ಭದಲ್ಲಿ ವೀರ್ಯ ಅಥವಾ ಅಂಡಾಣುಗಳಿಗೆ ಹಾನಿ ಆಗುವ ಸಂದರ್ಭದಲ್ಲಿ ದಂಪತಿಗಳು ವಿಧಾನದ ಮೂಲಕ ಸಂತಾನ ಪಡೆಯಬಹುದಾಗಿದೆ.

ಇದನ್ನೂ ಓದಿ:  Condom Gift: ಮಗಾ ಲಡ್ಡು ಬಂದು ಬಾಯಿಗ್ ಬಿತ್ತಾ? ನವ ದಂಪತಿಗೆ ಸರ್ಕಾರದಿಂದ ಕಾಂಡೋಮ್, ಮಾತ್ರೆ ಗಿಫ್ಟ್!

ಐವಿಎಫ್ ಚಕ್ರದಲ್ಲಿ ಎಷ್ಟು ಎಂಬ್ರಿಯೋಗಳನ್ನು ವರ್ಗಾಯಿಸಲಾಗುತ್ತದೆ?
ಡಾ. ಪಲ್ಲವಿ ಪ್ರಸಾದ್ ಅವರು ಹೇಳುವಂತೆ ಇದು ದಂಪತಿಯ ವೈದ್ಯಕೀಯ ಇತಿಹಾಸ ಹಾಗೂ ಅವರು ಭೇಟಿ ನೀಡುವ ಫರ್ಟಿಲಿಟಿ ಕೇಂದ್ರದ ನೀತಿಯ ಮೇಲೆ ಅವಲಂಬಿತವಾಗಿದೆ. ಆದರೆ, ಬಹು ಸಂದರ್ಭದಲ್ಲಿ ತಾಯಿಯಾಗಬಯಸುವ ಹೆಣ್ಣು ಉತ್ತಮ ಆರೋಗ್ಯ ಸ್ಥಿತಿ ಹೊಂದಿದ್ದರೆ ಅಥವಾ ಯಾವುದೇ ಅನಾರೋಗ್ಯದ ಇತಿಹಾಸ ಹೊಂದಿಲ್ಲದೆ ಇದ್ದರೆ ಎರಡು ಎಂಬ್ರಿಯೋಗಳನ್ನು ಸಾಮಾನ್ಯವಾಗಿ ವರ್ಗಾಯಿಸಲಾಗುತ್ತದೆ. ಆದರೆ, ಈಗಾಗಲೇ ಹೆಣ್ಣು ಒಂದು ಸಂತಾನ ಹೊಂದಿದ್ದರೆ, ಅಥವಾ ಅವಳಿಗೆ ಯಾವುದಾದರೂ ಹೃದಯ ಕಾಯಿಲೆಯ ಸ್ಥಿತಿ ಅಥವಾ ಯಾವುದಾದರೂ ಮೇಜರ್ ಆಪರೇಷನ್ ಆಗಿದ್ದರೆ ಆ ಸಂದರ್ಭದಲ್ಲಿ ಅವರು ಕೇವಲ ಒಂದು ಎಂಬ್ರಿಯೋ ವರ್ಗಾವಣೆ ಮಾಡಿಸಿಕೊಳ್ಳುವಂತೆ ನಾವು ಶಿಫಾರಸ್ಸು ಮಾಡುತ್ತೇವೆ ಎನ್ನುತ್ತಾರೆ ಡಾ. ಪಲ್ಲವಿ.
Published by:Ashwini Prabhu
First published: