• Home
 • »
 • News
 • »
 • trend
 • »
 • Trending Story: ರಾಜ್ಮಾ ಚಾವಲ್ ಮಾರಾಟ ಮಾಡಿ ತಿಂಗಳಿಗೆ 60 ಸಾವಿರ ಗಳಿಸುತ್ತಿರುವ ದಂಪತಿಗಳು!

Trending Story: ರಾಜ್ಮಾ ಚಾವಲ್ ಮಾರಾಟ ಮಾಡಿ ತಿಂಗಳಿಗೆ 60 ಸಾವಿರ ಗಳಿಸುತ್ತಿರುವ ದಂಪತಿಗಳು!

ರಾಜ್ಮಾ ಚಾವಲ್​ನಿಂದ ಲಾಭ ಪಡೆದ ದಂಪತಿಗಳು

ರಾಜ್ಮಾ ಚಾವಲ್​ನಿಂದ ಲಾಭ ಪಡೆದ ದಂಪತಿಗಳು

ಕೆಲಸವನ್ನು ಕಳೆದುಕೊಂಡ ಉದ್ಯೋಗಿಗಳು ಏನು ಮಾಡ್ಬೇಕು ಎಂದು ಯೋಚನೆಯಲ್ಲಿರುವಾಗ ಇಲ್ಲೊಂದು ದಂಪತಿಗಳು ರಾಜ್ಮಾ - ಚಾವಲ್ ಮಾಡಿ ತಿಂಗಳಿಗೆ ಸಾವಿರಾರು ಲಾಭವನ್ನು ಗಳಿಸುತ್ತಿದ್ದಾರೆ,

 • Share this:

  ಕೆಲವೊಮ್ಮೆ ಕೈಯಲ್ಲಿರುವ ಕೆಲಸ (Jobs) ಕಳೆದುಕೊಂಡಾಗ ‘ಏನಪ್ಪಾ ಮಾಡೋದು, ಇರೋ ಕೆಲಸ ಇದ್ದಕ್ಕಿದ್ದಂತೆ ಹೊರಟು ಹೋಯಿತು, ಸಂಸಾರ ಹೇಗೆ ನಡೆಸೋದು’ ಅಂತ ತುಂಬಾನೇ ಚಿಂತೆಯಾಗುತ್ತದೆ. ಕೆಲವರು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಅವರು ಬದುಕುವ ದಾರಿಯನ್ನು ಕಂಡುಕೊಳ್ಳುತ್ತಾರೆ, ಎಂದರೆ ತಮ್ಮನ್ನು ನಂಬಿದವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೋವಿಡ್ (Covid) ಸಂದರ್ಭದಲ್ಲಿ ಎಷ್ಟೋ ಜನರು ತಮ್ಮ ಕೆಲಸವನ್ನು ಕಳೆದುಕೊಂಡು ತಾವು ಇರುವಂತಹ ನಗರ ಪ್ರದೇಶಗಳನ್ನು ಬಿಟ್ಟು ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಹಳ್ಳಿಗೆ ಹೋಗಿ ಕೆಲವರು ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ, ಇನ್ನೂ ಕೆಲವರು ತಮ್ಮ ಸ್ವಂತ ಕೆಲಸಗಳನ್ನು (Own business) ಶುರುಮಾಡಿದರು ಅಂತ ಹೇಳಬಹುದು.


  ಅದರಲ್ಲೂ ಈ ಕೆಲಸದ ಮಹತ್ವ ಮತ್ತು ಪ್ರತಿ ತಿಂಗಳು ಬರುವ ಆ ಸಂಬಳ ಎಷ್ಟು ಮಹತ್ವದ್ದು ಅಂತ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಅನೇಕರಿಗೆ ತುಂಬಾನೇ ಚೆನ್ನಾಗಿ ಅರ್ಥವಾಗಿರುತ್ತದೆ.


  ತುಂಬಾ ಜನ ಏನು ಮಾಡುವುದು ಅಂತ ತೋಚದೆ ತಮಗೆ ತಿಳಿದ ಮಟ್ಟಿಗೆ ಚಿಕ್ಕದೊಂದು ಹೊಟೇಲ್, ಕಿರಾಣಿ ಅಂಗಡಿ ಹೀಗೆ ಚಿಕ್ಕದಾಗಿದ್ದರೂ ಸಹ ಮೊದಲನೇ ದಿನದಿಂದ ಆದಾಯ ಬರುವಂತಹ ಕೆಲಸವನ್ನು ಶುರು ಮಾಡಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಇದೇ ರಿತಿಯಲ್ಲಿ ಇಲ್ಲೊಂದು ದಂಪತಿಗಳು ರಾಜ್ಮಾ - ಚಾವಲ್ ಮಾಡಿ ಹಣ ಗಳಿಸುತ್ತಿದ್ದಾರೆ.


  A couple earning 60 thousand per month by selling Rajma Chawal
  ರಾಜ್ಮಾ ಚಾವಲ್​ನಿಂದ ಲಾಭ ಪಡೆದ ದಂಪತಿಗಳು


  ರಾಜ್ಮಾ- ಚಾವಲ್ ಮಾಡಿ ದೆಹಲಿಯ ದಂಪತಿಗಳು ಗಳಿಸಿದರು ಸಾವಿರಾರು ರೂಪಾಯಿ


  ಕರಣ್ ಮತ್ತು ಅಮೃತಾ ಅವರ ಆಲ್ಟೋ ಕಾರು ದಿನದ ರಾಜ್ಮಾ ಮತ್ತು ಚಾವಲ್ ಗಳ ಪಾತ್ರೆಗಳಿಂದ ತುಂಬಿತ್ತು. ಅವರು ಅದನ್ನು ತಮ್ಮ ನೆಚ್ಚಿನ ಸ್ಥಳವಾದ ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದ ಜಂಕ್ಷನ್ ನಲ್ಲಿ ನಿಲ್ಲಿಸಿದ್ದರು. ಅವರು ತಮ್ಮ ಕಾರನ್ನು ನಿಲ್ಲಿಸಿ 'ಅಮೃತಾ ಜಿ ಕೆ ಸ್ಪೆಷಲ್ ರಾಜ್ಮಾ ಚಾವಲ್' (ಅಮೃತಾ ಅವರ ವಿಶೇಷವಾದ ರಾಜ್ಮಾ ಪಲ್ಯ ಮತ್ತು ಅನ್ನ) ಅಂತ ಕೂಗಿ ಪಾತ್ರೆಗಳ ಮುಚ್ಚಳ ತೆರೆದ ತಕ್ಷಣ, ಜನರು ಅಲ್ಲಿಗೆ ಬಂದು ಗುಂಪುಗಳಾಗಿ ನಿಂತು ಅವರನ್ನು ಸುತ್ತುವರೆಯುತ್ತಾರೆ ಮತ್ತು ಇದು ಅವರ ದೈನಂದಿನ ವ್ಯವಹಾರವಾಗಿದೆ.


  ಇದನ್ನೂ ಓದಿ: ಸಂಸ್ಕೃತದಲ್ಲಿ ಮಾತಾಡಿ ಜನರಿಂದ ಮೆಚ್ಚುಗೆ ಪಡೆದ ದೆಹಲಿ ಕ್ಯಾಬ್ ಚಾಲಕ ಮತ್ತು ಪ್ರಯಾಣಿಕ! ಇಲ್ಲಿದೆ ನೋಡಿ ವೀಡಿಯೋ


  ಆದಾಗ್ಯೂ, ಈ ದೆಹಲಿಯ ದಂಪತಿಗಳು ತಮ್ಮ ಆಹಾರ ವ್ಯವಹಾರದ ಯಶಸ್ಸನ್ನು ಸವಿಯುವ ಮೊದಲು ತಮ್ಮ ಪಾಲಿನ ಅನೇಕ ಕಷ್ಟವನ್ನು ಅನುಭವಿಸಿದ್ದಾರೆ ಅಂತಾನೆ ಹೇಳಬಹುದು.


  ಕಷ್ಟಪಟ್ಟು ದುಡಿದ ದಂಪತಿಗಳಿಗೆ ಈಗ ಯಶಸ್ಸು;


  ಚಾಲಕನಾಗಿದ್ದ ಕರಣ್ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಯಿತು ಮತ್ತು ದಂಪತಿಗಳು ರಾತ್ರೋರಾತ್ರಿ ಮನೆಯನ್ನು ಸಹ ಕಳೆದುಕೊಂಡರು. ಅವನು ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ “ಉದ್ಯೋಗದಾತರು ಒಂದೇ ದಿನದಲ್ಲಿ ಮನೆಯನ್ನು ತೊರೆಯುವಂತೆ ನಮ್ಮನ್ನು ಕೇಳಿದರು ಮತ್ತು ನಮ್ಮ ಸಾಮಾನುಗಳನ್ನು ಎಲ್ಲವನ್ನೂ ಹೊರಕ್ಕೆ ಬಿಸಾಡಿದರು" ಎಂದು ಹೇಳಿದರು.


  ಈ ಘಟನೆಯ ನಂತರ, ದಂಪತಿಗಳು ಎರಡು ತಿಂಗಳು ದೆಹಲಿಯ ಬೀದಿಗಳಲ್ಲಿ ಅಲೆದಾಡುತ್ತಾ, ಸಾರ್ವಜನಿಕ ಶೌಚಾಲಯಗಳನ್ನು ಬಳಸಿಕೊಂಡು ಮತ್ತು ಲಂಗರ್ ಗಳಲ್ಲಿ ಆಹಾರ ಸೇವಿಸುತ್ತಾ ಸಮಯ ಕಳೆಯಬೇಕಾಯಿತು. ಕರಣ್ ಅಮೃತಾಳನ್ನು ತನ್ನ ತಂದೆಯ ಮನೆಯಲ್ಲಿಯೇ ಇರುವಂತೆ ವಿನಂತಿಸಿದನು, ಆದರೆ ಪ್ರತಿಕೂಲ ಸಮಯದಲ್ಲಿ ಅವಳಿಗೆ ಅವನೊಬ್ಬನನ್ನೇ ಬಿಟ್ಟು ಹೋಗಲು ಮನಸ್ಸು ಬಾರದೇ ತಂದೆಯ ಮನೆಗೆ ಹೋಗಲು ನಿರಾಕರಿಸಿದಳು.


  ಅಂತಿಮವಾಗಿ, ಅವರು ತಮ್ಮ ಮನೆಯಲ್ಲಿದ್ದ ಕೆಲವು ಪೀಠೋಪಕರಣಗಳನ್ನು ಸಹ ಮಾರಾಟ ಮಾಡಿದರು ಮತ್ತು ತಮ್ಮ ಕಾರಿನಲ್ಲಿ ಒಂದು ಸಣ್ಣ ಆಹಾರ ವ್ಯವಹಾರವನ್ನು ಪ್ರಾರಂಭಿಸಲು ಅಮೃತಾ ಅವರ ಪೋಷಕರ ಸಹಾಯವನ್ನು ಪಡೆದರು. ಆಹಾರ ಉತ್ಸಾಹಿಯೊಬ್ಬರು ಇದೆಲ್ಲವನ್ನೂ ವೀಡಿಯೋದಲ್ಲಿ ತೋರಿಸಿದಾಗ ಈ ವ್ಯವಹಾರವು ಶೀಘ್ರದಲ್ಲಿಯೇ ಇತರರ ಗಮನ ಸೆಳೆಯಿತು.


  ಪ್ರತಿ ತಿಂಗಳು 60 ಸಾವಿರ ರೂಪಾಯಿ ಗಳಿಸುತ್ತಿರುವ ದಂಪತಿಗಳು


  "ನಾವು ದಿನಕ್ಕೆ 320 ರೂಪಾಯಿಗಳ ಲಾಭವನ್ನು ಗಳಿಸುವ ಮೂಲಕ ಪ್ರಾರಂಭಿಸಿದೆವು, ಅದು ಕ್ರಮೇಣ 450 ರೂಪಾಯಿಗಳಿಗೆ ಮತ್ತು ನಂತರ 600 ರೂಪಾಯಿಗೆ ಏರಿತು" ಎಂದು ಕರಣ್ ಹೇಳುತ್ತಾರೆ. ಇಂದು ದಂಪತಿಗಳು ತಿಂಗಳಿಗೆ 60,000 ರೂಪಾಯಿಗಳ ಸ್ಥಿರ ಆದಾಯವನ್ನು ಗಳಿಸುತ್ತಾರೆ. ಅವರ ಆಹಾರ ತಟ್ಟೆಗಳಿಗೆ ಪ್ರತಿ ಪ್ಲೇಟ್ ಗೆ 30 ರಿಂದ 50 ರೂಪಾಯಿ ತೆಗೆದುಕೊಳ್ಳುತ್ತಾರೆ.

  Published by:Prajwal B
  First published: