• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ವೀಲ್ ಚೇರ್​ನಲ್ಲಿದ್ದ ಹುಡುಗನಿಗೆ ರೈಲು ಹತ್ತಲು ಸಹಾಯ ಮಾಡಿದ ಭದ್ರತಾ ಸಿಬ್ಬಂದಿ! ಹೃದಯಸ್ಪರ್ಶಿ ವಿಡಿಯೋ ವೈರಲ್

Viral Video: ವೀಲ್ ಚೇರ್​ನಲ್ಲಿದ್ದ ಹುಡುಗನಿಗೆ ರೈಲು ಹತ್ತಲು ಸಹಾಯ ಮಾಡಿದ ಭದ್ರತಾ ಸಿಬ್ಬಂದಿ! ಹೃದಯಸ್ಪರ್ಶಿ ವಿಡಿಯೋ ವೈರಲ್

ರೈಲು ಹತ್ತಲು ಹುಡುಗನ ನೆರವಿಗೆ ಆಗಮಿಸಿದ ಅಧಿಕಾರಿ

ರೈಲು ಹತ್ತಲು ಹುಡುಗನ ನೆರವಿಗೆ ಆಗಮಿಸಿದ ಅಧಿಕಾರಿ

ರೈಲ್ವೇಯ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಗಾಲಿಕುರ್ಚಿಯಲ್ಲಿದ್ದ 19 ರ ಹರೆಯದ ಹುಡುಗನಿಗೆ ದೇವತಾ ಪುರುಷರಂತೆ ಆಗಮಿಸಿ ರೈಲು ಹತ್ತಲು ಸಹಾಯ ಮಾಡಿದ್ದಾರೆ. ತಾನೊಬ್ಬ ರೈಲ್ವೇ ಅಧಿಕಾರಿ ಎಂಬ ಜಂಭವನ್ನು ತೋರಿಸಿದೆಯೇ ಈ ಅಧಿಕಾರಿ ಗಾಲಿ ಕುರ್ಚಿಯಲ್ಲಿದ್ದ ಹುಡುಗನ ನೆರವಿಗೆ ಧಾವಿಸಿದ್ದಾರೆ.

ಮುಂದೆ ಓದಿ ...
  • Share this:

ಜೀವನದಲ್ಲಿ ಕೆಲವೊಮ್ಮೆ ನಮ್ಮ ಸಹಾಯಕ್ಕೆ (Help) ದೇವರೇ ಬರಬೇಕಾಗಿಲ್ಲ ದೇವತಾ ಸ್ವರೂಪಿ ಮನುಷ್ಯರೂ ಬರುತ್ತಾರೆ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ. ಆ ಸಮಯದಲ್ಲಿ ದೇವರೇ (God) ಇವರನ್ನು ಕಳುಹಿಸಿಕೊಟ್ಟಿದ್ದಾರೆ ಎಂಬುದು ನಮ್ಮ ಮನಸ್ಸಿಗೆ ತೋಚುತ್ತದೆ. ಅಪಘಾತದ (Accident) ಸಮಯದಲ್ಲಿ ಪಾರುಮಾಡುವುದು, ಕಷ್ಟದಲ್ಲಿದ್ದಾಗ ನೆರವಿನ ಹಸ್ತ ಚಾಚುವುದು, ಅಂಗವೈಕಲ್ಯದಿಂದ (Disability) ಬಳಲುವವರ ನೆರವಿಗೆ ಧಾವಿಸುವುದು, ರಸ್ತೆ ದಾಟಿಸುವುದು ಹೀಗೆ ಸಣ್ಣ ಸಣ್ಣ ನೆರವನ್ನೀಯುವವರು ಕೂಡ ಪರಮಾತ್ಮ ಸ್ವರೂಪಿಗಳೇ ಆಗಿರುತ್ತಾರೆ. ಒಮ್ಮೊಮ್ಮೆ ತೀರಾ ಕಷ್ಟ ಬಂದಾಗ ದೇವರಿಗೆ ಇದೆಲ್ಲವೂ ಕಾಣುವುದಿಲ್ಲವೇ ಎಂದು ಬೇಸರ ವ್ಯಕ್ತಪಡಿಸುತ್ತೇವೆ. ಆದರೆ ದೇವರು ಪ್ರತ್ಯಕ್ಷವಾಗಿ ನಮಗೆ ಸಹಾಯ ಮಾಡದೇ ಇದ್ದರೂ ಪರೋಕ್ಷವಾಗಿ ಯಾವುದಾದರೂ ವಸ್ತು ಇಲ್ಲವೇ ವ್ಯಕ್ತಿಯ ಮೂಲಕ ನಮ್ಮ ನೆರವಿಗೆ ಧಾವಿಸುತ್ತಾರೆ ಕಣ್ಣೀರು ಒರೆಸುತ್ತಾರೆ.


ಹೀಗೆ ನೇರವಾಗಿ ದೇವರು ನಮ್ಮ ಸಹಾಯಕ್ಕೆ ಬಾರದೇ ಇದ್ದರೂ ಆ ಸಂದರ್ಭ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಯಾರಾದರೂ ಪ್ರತ್ಯಕ್ಷರಾಗುತ್ತಾರೆ.


ಖಾಕಿ ತೊಟ್ಟ ದೇವತಾ ಪುರುಷ


ಖಾಕಿ ತೊಟ್ಟವರೆಲ್ಲರೂ ಧಿಮಾಕ್‌ನಿಂದ ವರ್ತಿಸುತ್ತಾರೆ ಎಂದೇ ನಾವು ಭಾವಿಸುತ್ತೇವೆ. ರೈಲು ನಿರ್ವಾಹಕರು, ಬಸ್ ಚಾಲಕ ನಿರ್ವಾಹಕರು, ಭದ್ರತಾ ಸಿಬ್ಬಂದಿಗಳು, ಆರಕ್ಷಕರು ಹೀಗೆ ಖಾಕಿ ತೊಟ್ಟವರೆಲ್ಲರೂ ದರ್ಪದಿಂದ ಜನರೊಂದಿಗೆ ವರ್ತಿಸುವುದಿಲ್ಲ ಅವರಲ್ಲಿ ಕೂಡ ಎಷ್ಟೊ ಜನರು ಕರುಣೆಯಿಂದ ವರ್ತಿಸುವವರಿರುತ್ತಾರೆ. ಯಾವುದೇ ಪ್ರಚಾರ ನಿರ್ದೇಶನಗಳಿಲ್ಲದೆಯೇ ಇವರೆಲ್ಲರೂ ಸಹಾಯ ಮಾಡುತ್ತಾರೆ ಅಂತೆಯೇ ಯಾವುದೇ ಅಪೇಕ್ಷೆಗಳಿಲ್ಲದೆಯೇ ಜನರನ್ನು ಪ್ರೀತಿಸುತ್ತಾರೆ ಮತ್ತು ಅವರ ನೆರವಿಗೆ ಧಾವಿಸುತ್ತಾರೆ


ಗಾಲಿಕುರ್ಚಿಯಲ್ಲಿದ್ದ ಹುಡುಗನಿಗೆ ಸಹಾಯ ಹಸ್ತ


ಇಂದಿನ ಲೇಖನದಲ್ಲಿ ಹೇಳಹೊರಟಿರುವುದೂ ಕೂಡ ಇಂತಹುದ್ದೇ ವ್ಯಕ್ತಿಯೊಬ್ಬರ ಕುರಿತಾಗಿದೆ. ರೈಲ್ವೇಯ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಗಾಲಿಕುರ್ಚಿಯಲ್ಲಿದ್ದ 19 ರ ಹರೆಯದ ಹುಡುಗನಿಗೆ ದೇವತಾ ಪುರುಷರಂತೆ ಆಗಮಿಸಿ ರೈಲು ಹತ್ತಲು ಸಹಾಯ ಮಾಡಿದ್ದಾರೆ. ತಾನೊಬ್ಬ ರೈಲ್ವೇ ಅಧಿಕಾರಿ ಎಂಬ ಜಂಭವನ್ನು ತೋರಿಸಿದೆಯೇ ಈ ಅಧಿಕಾರಿ ಗಾಲಿ ಕುರ್ಚಿಯಲ್ಲಿದ್ದ ಹುಡುಗನ ನೆರವಿಗೆ ಧಾವಿಸಿದ್ದಾರೆ.


ಇದನ್ನೂ ಓದಿ:  Teacher: ಶಾಲೆಯಲ್ಲಿ ಪಾಠ ಮಾಡುವುದಷ್ಟೇ ಅಲ್ಲ, ಈ ಶಿಕ್ಷಕಿ ಮಾಡುವ ಕೆಲಸ ಎಂಥದ್ದು ನೋಡಿ


ರೈಲು ಹತ್ತಲು ಹುಡುಗನ ನೆರವಿಗೆ ಆಗಮಿಸಿದ ಅಧಿಕಾರಿ


ರೈಲ್ವೇಯ ಭದ್ರತಾ ಪಡೆಯಲ್ಲಿ (RPF) ಸಹಾಯಕ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುವ ಎಮ್ ಶರವಣನ್ 19 ರ ಹರೆಯದ ಕಡಲೂರು ಜಿಲ್ಲೆಯ ವಿರುಧಾಚಲಂ ನ ಶಿವಕುಮಾರ್‌ಗೆ ಸಹಾಯ ಮಾಡಿದ್ದು ಈ ಸುದ್ದಿ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಗಾಲಿಕುರ್ಚಿಯನ್ನೇ ಆಧರಿಸಿಕೊಂಡಿರುವ ಶಿವಕುಮಾರ್ ತಮ್ಮ ಅಜ್ಜಿಯೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಕಡಲೂರು ಜಿಲ್ಲೆಯ ವಿರುಧಾಚಲಂನಿಂದ ಕೇರಳದ ವಡಕರಕ್ಕೆ ಪ್ರಯಾಣಿಸುತ್ತಿದ್ದರು.


ರಾತ್ರಿ ಸಮಯದಲ್ಲಿ ತಮಿಳುನಾಡಿ ರೈಲು ಏರಲು ಆಗದೆ ಶಿವಕುಮಾರ್ ಹಾಗೂ ಆತನ ಅಜ್ಜಿ ಕಂಗೆಟ್ಟಿದ್ದ ಸಮಯದಲ್ಲಿ ಸರವಣನ್ ಯಾರ ನಿರ್ದೇಶನವೂ ಇಲ್ಲದೆ ಹುಡುಗನ ಸಹಾಯಕ್ಕೆ ಬಂದಿದ್ದಾರೆ. ಗಾಲಿ ಕುರ್ಚಿಯಿಂದ ಶಿವಕುಮಾರ್‌ನನ್ನು ನಿಧಾನಕ್ಕೆ ಎಬ್ಬಿಸಿದ ಸರವಣನ್ ನಂತರ ಹುಡುಗನನ್ನು ಎತ್ತಿಕೊಂಡೇ ಸೀಟ್ ಮೇಲೆ ಮಲಗಿಸುತ್ತಾರೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ: Viral Video: ರೈಲಿನಲ್ಲಿ ಚಾಕೊಲೇಟ್ ಮಾರಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಈ ವೃದ್ಧೆ, ವಿಡಿಯೋವನ್ನೊಮ್ಮೆ ನೋಡಿ


ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಐಎಎಸ್ ಅಧಿಕಾರಿ


ವಯಸ್ಸಾದ ಶಿವಕುಮಾರನ ಅಜ್ಜಿಗೆ ಶಿವಮಕುಮಾರನನ್ನು ಹೊತ್ತೊಯ್ಯುವುದು ದುಸ್ಸಾಧ್ಯವಾಗಿತ್ತು. ಅಜ್ಜಿ ಮೊಮ್ಮಗನನ್ನು ಕರೆದೊಯ್ಯಲು ಪ್ರಯಾಸಪಡುತ್ತಿರುವುದನ್ನು ನೋಡಿದ ಶರವಣನ್ ಖುದ್ದು ಮುಂದೆ ಬಂದು ನೆರವಿನ ಹಸ್ತ ಚಾಚಿದ್ದಾರೆ. ರೈಲು ಬಂದೊಡನೆ ಸರವಣನ್ ಕೈಕೊಟ್ಟು ಬಾಲಕನನ್ನು ರೈಲು ಹತ್ತಿಸಲು ಸಹಕರಿಸಿದ್ದು ಕಂಪಾರ್ಟ್‌ಮೆಂಟ್‌ನಲ್ಲಿರುವ ಸೀಟಿನ ಮೇಲೆ ಮಲಗಿಸಿದ್ದಾರೆ.


ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ದೃಶ್ಯವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಶಿವಕುಮಾರ್‌ಗೆ ಹಠಾತ್ತನೇ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದು ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಈತ ಚಿಕಿತ್ಸೆಗಾಗಿ ಕೇರಳದ ವಡಕರಕ್ಕೆ ಅಜ್ಜಿಯೊಂದಿಗೆ ತೆರಳುತ್ತಿದ್ದನು.

Published by:Ashwini Prabhu
First published: