Viral News: ಉದ್ಯೋಗಿಗೆ ಸರ್‌ಪ್ರೈಸ್ ನೀಡಿದ್ದಕ್ಕೆ 4.5 ಲಕ್ಷ ಡಾಲರ್ ದಂಡ ತೆತ್ತ ಕಂಪನಿ!

ಅಸಲಿಗೆ ಈ ಘಟನೆ ನಡೆದಿದ್ದು 2019 ರಲ್ಲಿ. ಅಂದಿನಿಂದ ಇಲ್ಲಿಯವರೆಗೆ ಪ್ರಕರಣ ನಡೆದಿದ್ದು ಇತ್ತೀಚೆಗಷ್ಟೆ ಈ ಆದೇಶ ಹೊರಬಿದ್ದಿದೆ. ಆದೇಶದ ಪ್ರಕಾರ, ಕಂಪನಿಯು ಕೆವಿನ್ ಅವರಿಗೆ ನೀಡಿದ ಮಾನಸಿಕ ಆಘಾತಕ್ಕೆ ಪರಿಹಾರವಾಗಿ 300,000 ಡಾಲರ್ ದಂಡವನ್ನೂ ಹಾಗೂ ಕೆಲಸ ಕಳೆದುಕೊಂಡಿದ್ದರ ಪರಿಹಾರ ಶುಲ್ಕವಾಗಿ 150,000 ಡಾಲರ್ ದಂಡವನ್ನು ನೀಡಬೇಕೆಂದು ಹೇಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಒಮ್ಮೊಮ್ಮೆ ಲೋಕದಲ್ಲಿ ಹೀಗು ಆಗುತ್ತದೆಯಾ..? ಎನ್ನುವಷ್ಟರ ಮಟ್ಟಿಗೆ ಘಟನಾವಳಿಗಳು (Incidents) ನಡೆಯುತ್ತವೆ. ಪ್ರಸ್ತುತ ಇಲ್ಲಿ ಹೇಳ ಹೊರಟಿರುವ ಕಥೆ (Story) ಅಂದರೆ ನಡೆದ ಘಟನೆ ಕೇಳಿದರೆ ಅಚ್ಚರಿಯ ಜೊತೆಗೆ ಶಾಕ್ (Shock) ಕೂಡ ಆಗಬಹುದು. ಸಾಮಾನ್ಯವಾಗಿ ಉದ್ಯೋಗಿಯಾದವನೊಬ್ಬ (Employee) ಯಾವುದೋ ಅಹಿತಕರ ಘಟನೆಯಿಂದಾಗಿ ತನ್ನ ಕಂಪನಿಯನ್ನು (Company) ತೊರೆದು ಕಂಪನಿಯ ವಿರುದ್ಧ ದಾವೆ (Litigation) ಹೂಡಿದರೆ ಅವನಿಗೆ 'ನ್ಯಾಯ' ದೊರಕುವುದು ಸ್ವಲ್ಪ ಕಷ್ಟವೇ ಆಗಬಹುದು. ಆದರೆ, ಕೆಂಟುಕಿ ಮೂಲದ ಉದ್ಯೋಗಿಯೊಬ್ಬನ ಕಥೆ ಭಿನ್ನವಾಗಿದ್ದು, ತನ್ನ ಕಂಪನಿಯ ವಿರುದ್ಧದ ಮೊಕದ್ದಮೆಯನ್ನು ಗೆದ್ದಿದ್ದಾನೆ.

  ಸರ್‌ಪ್ರೈಸ್‌ ಕೊಡಲು ಹೋಗಿ ಯಡವಟ್ಟು

  ಗ್ರ್ಯಾವಿಟಿ ಡಯಾಗ್ನಾಸ್ಟಿಕ್ ಎಂಬ ಸಂಸ್ಥೆಯಲ್ಲಿ ಕೆಂಟುಕಿ ಮೂಲದ ಕೆವಿನ್ ಬರ್ಲಿಂಗ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದ. ಈ ಸಂಸ್ಥೆಯು ಕೋವಿಡ್ ಪರೀಕ್ಷೆಗಳನ್ನು ನಡೆಸುವ ಡಯಾಗ್ನಾಸ್ಟಿಕ್ ಕೇಂದ್ರವಾಗಿದೆ. ತನ್ನ ರೂಢಿಯಂತೆ ಕಂಪನಿಯು ತನ್ನ ಉದ್ಯೋಗಿಗಳ ಜನ್ಮದಿನಕ್ಕೆ ಅವರನ್ನು ಸರ್ಪ್ರೈಸ್ ಮಾಡಿ ಪಾರ್ಟಿ ಕೊಡುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದೆ.

  ಪಾರ್ಟಿ ನೀಡದಂತೆ ವಿನಂತಿಸಿದ್ದ ಉದ್ಯೋಗಿ

  ಈ ಬಾರಿ ಕೆವಿನ್ ಅವರ ಜನ್ಮದಿನ ಹತ್ತಿರ ಬಂದಿತ್ತು. ಆದರೆ, ಕೆವಿನ್ ಅವರಿಗೆ ಆರೋಗ್ಯದ ಕೆಲ ಪರಿಸ್ಥಿತಿಗಳಿದ್ದು ಯಾವುದೇ ರೀತಿಯ ಸರ್ಪ್ರೈಸ್ ಪಾರ್ಟಿಗಳನ್ನು ಆತ ಸಹಿಸಲಾರನಾಗಿದ್ದ. ಹಾಗಾಗಿ ಮುಂಚಿತವಾಗಿಯೇ ಈ ಬಗ್ಗೆ ಆತ ತನ್ನ ವ್ಯವಸ್ಥಾಪಕರಿಗೆ ತಿಳಿಸಿ ಯಾವುದೇ ಸರ್ಪ್ರೈಸ್ ಪಾರ್ಟಿ ಆತನಿಗೆ ನೀಡಬಾರದೆಂದು ವಿನಂತಿಸಿದ್ದ.

  ಇದನ್ನೂ ಓದಿ:

  ಸರ್‌ಪ್ರೈಸ್‌ ಪಾರ್ಟಿಯಿಂದ ಬೇಸರಗೊಂಡ ಉದ್ಯೋಗಿ

  ಆದರೂ, ಕಂಪನಿ ಸುಮ್ಮನೆ ಕೂರಲಿಲ್ಲ, ಅವನ ಜನ್ಮದಿನದ ಸಂದರ್ಭದಂದು ಕೆವಿನ್ ಅವರಿಗೆ ಸರ್ಪ್ರೈಸ್ ಪಾರ್ಟಿ ನೀಡಿತು. ಅದರಿಂದ ಪ್ಯಾನಿಕ್ ಅಟ್ಯಾಕ್‌ಗೆ ಒಳಪಟ್ಟ ಕೆವಿನ್ ಅದರಿಂದ ಬೇಸರಗೊಂಡು ತನ್ನ ಕಚೇರಿಯಿಂದ ಹೊರ ಹೋಗಿ ತನ್ನ ಕಾರಿನಲ್ಲಿ ಕುಳಿತು ಊಟ ಮುಗಿಸಿಕೊಂಡು ಬಂದಿದ್ದ. ಅವನ ಈ ವರ್ತನೆ ಇತರೆ ಸಹೋದ್ಯೋಗಿಗಳಿಗೆ ಬೇಸರ ತರಿಸಿತ್ತು.

  ಅದಾದ ಮರುದಿನ ನಡೆದ ಮೀಟಿಂಗ್‌ನಲ್ಲಿ ಕಂಪನಿ ಆಡಳಿತವು ಕೆವಿನ್ ವಿರುದ್ಧ ತನ್ನ ತೀವ್ರ ಬೇಸರ ವ್ಯಕ್ತಪಡಿಸಿತ್ತೆನ್ನಲಾಗಿದೆ. ಇದರಿಂದ ಮಾನಸಿಕವಾಗಿ ಮತ್ತಷ್ಟು ಕುಸಿದಿದ್ದ ಕೆವಿನ್ ಎರಡು ದಿನಗಳ ಕಾಲ ಕಚೇರಿಗೆ ಕಾಲಿಟ್ಟಿರಲಿಲ್ಲ.

  ನೌಕರಿಯಿಂದ ಕಿತ್ತು ಹಾಕಿದ ಕಂಪನಿ

  ಈ ಸಂದರ್ಭದಲ್ಲಿ ಕಂಪನಿಯು ಕೆವಿನ್ ಅವರಿಗೆ ಎರಡು ಬಾರಿ ರಿಮೈಂಡರ್ ನೋಟಿಸ್ ಕಳುಹಿಸಿ ನಂತರ ಅವನನ್ನು ನೌಕರಿಯಿಂದ ಕಿತ್ತು ಹಾಕಿತ್ತು. ತದನಂತರ ಕಂಪನಿಯ ಈ ಕ್ರಮವನ್ನು ಖಂಡಿಸಿ ಕೆವಿನ್ ನ್ಯಾಯಾಲಯದಲ್ಲಿ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಂಪನಿಯನ್ನು ತಪ್ಪಿತಸ್ಥನನ್ನಾಗಿ ಮಾಡಿ ಕಂಪನಿಯು ಕೆವಿನ್ ಅವರಿಗೆ 450,000 ಡಾಲರ್‌ಗಳನ್ನು ದಂಡದ ರೂಪದಲ್ಲಿ ಕೊಡಬೇಕೆಂದು ಆದೇಶಿಸಿದೆ.

  3 ವರ್ಷಗಳ ಬಳಿಕ ಹೊರಬಿತ್ತು ತೀರ್ಪು

  ಅಸಲಿಗೆ ಈ ಘಟನೆ ನಡೆದಿದ್ದು 2019 ರಲ್ಲಿ. ಅಂದಿನಿಂದ ಇಲ್ಲಿಯವರೆಗೆ ಪ್ರಕರಣ ನಡೆದಿದ್ದು ಇತ್ತೀಚೆಗಷ್ಟೆ ಈ ಆದೇಶ ಹೊರಬಿದ್ದಿದೆ. ಆದೇಶದ ಪ್ರಕಾರ, ಕಂಪನಿಯು ಕೆವಿನ್ ಅವರಿಗೆ ನೀಡಿದ ಮಾನಸಿಕ ಆಘಾತಕ್ಕೆ ಪರಿಹಾರವಾಗಿ 300,000 ಡಾಲರ್ ದಂಡವನ್ನೂ ಹಾಗೂ ಕೆಲಸ ಕಳೆದುಕೊಂಡಿದ್ದರ ಪರಿಹಾರ ಶುಲ್ಕವಾಗಿ 150,000 ಡಾಲರ್ ದಂಡವನ್ನು ನೀಡಬೇಕೆಂದು ಹೇಳಿದೆ.

  ಮೇಲ್ಮನವಿ ಸಲ್ಲಿಕೆಗೆ ಕಂಪನಿ ನಿರ್ಧಾರ

  ಇದೀಗ ಗ್ರ್ಯಾವಿಟಿ ಡಯಾಗ್ನಾಸ್ಟಿಕ್ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ಜೂಲಿ ಬ್ರೆಜಿಲ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು ಅದರಲ್ಲಿ ಕೆವಿನ್ ಅವರು ಸಂಸ್ಥೆಯ "ಕಚೇರಿಯ ಕೆಲಸದ ಸ್ಥಳ ಸಂಪ್ರದಾಯದ ಉಲ್ಲಂಘನೆ" ಮಾಡಿದ್ದು ಕಂಪನಿ ತೆಗೆದುಕೊಂಡ ನಿರ್ಧಾರ ಸಮರ್ಥಿಸಿಕೊಂಡಿದ್ದಲ್ಲದೆ ಆದೇಶವನ್ನು ಪ್ರಶ್ನಿಸಿ ಮತ್ತೊಂದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ.

  ಇದನ್ನೂ ಓದಿ:

  ಇನ್ನೊಂದು ಕಡೆ ಕೆವಿನ್ ಅವರ ವಕೀಲರಾದ ಟೋನಿ ಬುಚರ್ ಎಂಬುವವರು ಬಿಬಿಸಿ ಮಾಧ್ಯಮಕ್ಕೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತ, ಕಂಪನಿಯು ಕೆವಿನ್ ಅವರನ್ನು ಕೆಲಸದಿಂದ ವಜಾಗೊಳಿಸಲು ಯಾವುದೇ ಸೂಕ್ತ ಕಾರಣವಿಲ್ಲ ಎಂದು ಹೇಳಿದ್ದಾರೆ.
  Published by:Annappa Achari
  First published: