ಕಿವುಡ-ಕುರುಡನ ಫುಟ್ಬಾಲ್ ಆಟದ ಗಮ್ಮತ್ತು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್​ ವೈರಲ್​

news18
Updated:July 1, 2018, 8:23 PM IST
ಕಿವುಡ-ಕುರುಡನ ಫುಟ್ಬಾಲ್ ಆಟದ ಗಮ್ಮತ್ತು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್​ ವೈರಲ್​
news18
Updated: July 1, 2018, 8:23 PM IST
ನ್ಯೂಸ್ 18 ಕನ್ನಡ

ಫಿಫಾ ವಿಶ್ವಕಪ್ ಜ್ವರ ವೈರಲ್ ಬೆನ್ನಲ್ಲೇ ಫುಟ್ಬಾಲ್ ಅಭಿಮಾನಿಯೊಬ್ಬನ ವಿಡಿಯೋ ಇಂಟರ್​ನೆಟ್​ನಲ್ಲಿ ಕೂಡ ಸಖತ್ ವೈರಲ್​​ ಆಗಿ ಹರಿದಾಡುತ್ತಿದೆ. ಕೊಲಂಬಿಯಾ ತಂಡದ ಅಭಿಮಾನಿ ರಿಚರ್ಡ್​ ಗಲ್ಲೆಂಗೋ ಎಂಬಾತನಿಗೆ ತನ್ನ 9 ವರ್ಷ ವಯಸ್ಸಿನಲ್ಲಿ ಕಣ್ಣು ಕಾಣದೆ ಕಿವಿಯೂ ಕೇಳದಂತಾಗಿದೆ.

ಆದರೆ ಇದರಿಂದ ಕುಗ್ಗದ ರಿಚರ್ಡ್ ಅವರು ಫುಟ್ಬಾಲ್ ಬಗೆಗಿನ ಅಭಿಮಾನವನ್ನು ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೆ ರಿಚರ್ಡ್ ಅವರ ಸ್ನೇಹಿತ ಸೀಸರ್ ಡಾಜಾ ಕೂಡ ಸಾತ್ ನೀಡಿದ್ದಾರೆ. ತನ್ನ ಸ್ನೇಹಿತನಿಗಾಗಿ ಸೂಕ್ಷ್ಮವಾಗಿ ಸೀಸರ್​ ಅಂದರ ಭಾಷೆ ಕಲಿತಿದ್ದಾರೆ.

ಸೀಸರ್ ಅವರು, ಸ್ಪರ್ಷ ಸನ್ನೆಯ ಮೂಲಕವೆ ರಿಚರ್ಡ್ ಅವರಿಗೆ ಫುಟ್ಬಾಲ್​ನ ಪ್ರತಿ ಸನ್ನಿವೇಶವನ್ನು ವಿವರಿಸುತ್ತಾರೆ. ಈ ಮೂಲಕ ಪುಟ್​ಬಾಲ್​ ಬಗ್ಗೆ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ತಿಳಿಸುತ್ತಿದ್ದು, ಅದನ್ನು ರಿಚರ್ಡ್​ ಗ್ರಹಿಸುತ್ತಾರೆ.ರಿಚರ್ಡ್​ಗೆ ತನ್ನ ಸ್ನೇಹಿತ ವಿವರಿಸುತ್ತಿದ್ದ ಸನ್ನಿವೇಶ ಕೊಲಂಬಿಯಾ ಹಾಗೂ ಪೋಲೆಂಡ್ ನಡುವಣ ಪಂದ್ಯದ ವೇಳೆ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಇವರಿಬ್ಬರ ಸ್ನೇಹಕ್ಕೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.
First published:July 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...