ಉತ್ತರ ಪ್ರದೇಶ: ಕೆಲವೊಮ್ಮೆ ನಾವು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡುತ್ತಿರುವ ವಿಡಿಯೋಗಳಲ್ಲಿ ಈ ದೊಡ್ಡ ದೊಡ್ಡ ಕಟ್ಟಡಗಳು ಮತ್ತು ಬಂಗಲೆಗಳು ಅನೇಕ ರೀತಿಯ ಕಾರಣಗಳಿಂದಾಗಿ ಕ್ಷಣ ಮಾತ್ರದಲ್ಲಿ ನೆಲಕ್ಕುರುಳಿದ ಎದೆ ಝಲ್ ಎನ್ನುವಂತಹ ದೃಶ್ಯಗಳನ್ನು ಆಗಾಗ್ಗೆ ನೋಡುತ್ತಲೇ ಇರುತ್ತೇವೆ. ಇಂತಹ ದುರ್ಘಟನೆಗಳು ಸಂಭವಿಸಿದಾಗ ತುಂಬಾ ಕಡಿಮೆ ಜನರು ಅದೃಷ್ಟವಶಾತ್ ಆಗಿ ಚಮತ್ಕಾರ ಎಂಬಂತೆ ಬದುಕುಳಿದಿರುತ್ತಾರೆ ಅಂತ ಹೇಳಬಹುದು. ಆದರೆ ಕೆಲವೊಂದು ಕಟ್ಟಡಗಳು (Building) ನೋಡ ನೋಡುತ್ತಿದ್ದಂತೆಯೇ ನೆಲಕ್ಕುರುಳಿ ಬೀಳುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಇದನ್ನೇ ಕೆಲವರು ತಪ್ಪಿ ವಿಡಿಯೋ ಮಾಡಿರುತ್ತಾರೆ, ಅದು ಮಾತ್ರ ಸಖತ್ ವೈರಲ್ (Viral) ಆಗುತ್ತದೆ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ (Video Viral) ಆಗಿದೆ.
ಈ ದೊಡ್ಡ ನಗರಗಳಲ್ಲಿರುವ ದೊಡ್ಡ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಗಳು, ಬಹು ಅಂತಸ್ತಿನ ಮನೆಗಳು, ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಅಗ್ನಿ ಅವಘಡಗಳು ಆಗಿದ್ದನ್ನು ಮತ್ತು ಕೆಲವೊಮ್ಮೆ ಭೂಕಂಪದಿಂದಾಗಿ ಕಟ್ಟಡಗಳು ನೆಲಕ್ಕುರುಳಿರುವುದನ್ನು ಮತ್ತು ಇನ್ನೂ ಕೆಲವೊಮ್ಮೆ ಪಕ್ಕದಲ್ಲಿರುವ ಭೂಮಿಯನ್ನು ಅಗೆಯಲು ಹೋದಾಗ ಬಿಲ್ಡಿಂಗ್ ನ ಬೆಸ್ಮೆಂಟ್ ಸಡಿಲಾಗಿ ಬಿಲ್ಡಿಂಗ್ ಕುಸಿಯುವ ಅನೇಕ ಪ್ರಕರಣಗಳನ್ನು ಸಹ ನಮ್ಮ ಗಮನಕ್ಕೆ ಬಂದಿರುತ್ತವೆ.
ಇದರ ಬಗ್ಗೆ ನಾವು ಹೀಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆಲ್ಲಾ ಆಶ್ಚರ್ಯವಾಗಬಹುದು. ಇಲ್ಲಿ ಒಂದು ಎರಡು ಅಂತಸ್ತಿನ ಬಿಲ್ಡಿಂಗ್ ನೋಡ ನೋಡುತ್ತಿದ್ದಂತೆಯೇ ನೆಲಕ್ಕುರುಳಿದೆ ನೋಡಿ.
ಯುಪಿಯಲ್ಲಿ ನೆಲಕ್ಕುರುಳಿದ 2 ಅಂತಸ್ತಿನ ಕಟ್ಟಡ
ಉತ್ತರ ಪ್ರದೇಶದ ಹರ್ದೋಯ್ ನಲ್ಲಿ ಶುಕ್ರವಾರ ಬಾಡಿಗೆಗೆ ಅಂತ ನೀಡಿದ್ದ ಎರಡು ಅಂತಸ್ತಿನ ಕಟ್ಟಡವು ನೋಡು ನೋಡುತ್ತಿದ್ದಂತೆಯೇ ನೆಲಕ್ಕುರುಳಿದೆ. ಒಂದು ಬದಿಗೆ ಪೂರ್ತಿಯಾಗಿ ನೆಲಕ್ಕೆ ಉರುಳಿದ್ದು, ಕಟ್ಟಡದಲ್ಲಿದ್ದವರು ಪ್ರಾಣಾಪಾಯದಿಂದ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
ಇದನ್ನೂ ಓದಿ: ಈಗಷ್ಟೇ ಹುಟ್ಟಿದ ಪುಟ್ಟ ಪ್ರಾಣಿಗಳು ಎಷ್ಟು ಮುದ್ದಾಗಿವೆ ನೋಡಿ!
ಬಿಲ್ಡಿಂಗ್ ನೆಲಕ್ಕುರುಳಿದ ನಂತರ ಕುಟುಂಬವೊಂದು ಭಯಾನಕ ವಿಧಿಯಿಂದ ಪಾರಾಗಿದ್ದಾರೆ. ಅದರ ಪಕ್ಕದ ಪ್ಲಾಟ್ ನಲ್ಲಿದ್ದ ಅನುಮತಿ ಪಡೆಯದ ನೆಲಮಾಳಿಗೆಯನ್ನು ಅಗೆಯಲಾಗುತ್ತಿದ್ದು, ಇದು ಬಿಲ್ಡಿಂಗ್ ಕುಸಿತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಲ್ಡಿಂಗ್ ನಲ್ಲಿದ್ದವರು ಹೊರಗೆ ಬಂದು ಬಿಲ್ಡಿಂಗ್ ಬೀಳುವ ದೃಶ್ಯವನ್ನು ನೋಡಿದ್ರು
ಹರ್ದೋಯ್ ನಿವಾಸಿ ರಾಜ್ ಕುಮಾರ್ ತನ್ನ ಕುಟುಂಬದೊಂದಿಗೆ ಬಾಗಿದ ಕಟ್ಟಡದಿಂದ ಕೂಡಲೇ ಹೊರಬಂದು, ಅಲ್ಲಿ ನೆರೆದಿದ್ದ ಜನರ ಮಧ್ಯೆ ನಿಂತು ತಮ್ಮ ಮನೆ ಒಳ್ಳೆ ಇಸ್ಪೀಟ್ ಎಲೆಗಳ ರೀತಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಪಕ್ಕದಲ್ಲಿ ಖಾಲಿ ಇದ್ದ ಪ್ಲಾಟ್‌ನಲ್ಲಿ ಕುಸಿದು ಬೀಳುವುದನ್ನು ನೋಡಿದರು.
ಕಟ್ಟಡ ಕುಸಿತವನ್ನು ವಿವಿಧ ಕಡೆಯಿಂದ ಸೆರೆಹಿಡಿದ ಹಲವಾರು ವಿಡಿಯೋಗಳು, ಕೆಲವೇ ಕೆಲವು ಸೆಕೆಂಡುಗಳಲ್ಲಿ ಪೂರ್ತಿ ಕಟ್ಟಡವು ಧೂಳಿಗೆ ಇಳಿಯುವುದನ್ನು ತೋರಿಸಿದೆ.
ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋದಲ್ಲಿ ಏನೆಲ್ಲಾ ಇದೆ?
ಎರಡು ಅಂತಸ್ತಿನ ಬಿಲ್ಡಿಂಗ್ ಬಳಿಯ ಖಾಲಿ ನಿವೇಶನದಲ್ಲಿ ಅನುಮತಿ ಪಡೆಯದ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇದು ಅದರ ಅಡಿಪಾಯದ ಮೇಲೆ ಪರಿಣಾಮ ಬೀರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡದ ಮೊದಲು ತೆಗೆದ ದೃಶ್ಯಾವಳಿಗಳು ಕಟ್ಟಡದ ಎಡ ಗೋಡೆಯ ಪಕ್ಕದಲ್ಲಿ ಪ್ಲಾಟ್‌ನ ಡಗೌಟ್ ಭಾಗವನ್ನು ತೋರಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋಗಳು, ಕಟ್ಟಡ ನೆಲಸಮವಾಗುವುದನ್ನು ಪೂರ್ತಿಯಾಗಿ ತೋರಿಸಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಪೊಲೀಸರು..
ಈ ರೀತಿ ಬಿಲ್ಡಿಂಗ್ ಕುಸಿದಿರುವ ಬಗ್ಗೆ ಮಾಹಿತಿ ತಿಳಿದ ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಕೂಡಲೇ ಧಾವಿಸಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ತನಿಖೆ ಇನ್ನೂ ನಡೆಯುತ್ತಿದೆ ಮತ್ತು ಸಲ್ಲಿಸಿದ ದೂರಿನ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ