• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Photo: ಯಾರ್ ಗುರು ಇವನು? ಜಗಳವಾಡಿ ತವರು ಮನೆಗೆ ಹೋದ ಪತ್ನಿಯ ಮನವೊಲಿಸಲು ರಜೆ ಕೇಳಿದ್ದಾನೆ; ರಜಾರ್ಜಿ ಫುಲ್ ವೈರಲ್

Viral Photo: ಯಾರ್ ಗುರು ಇವನು? ಜಗಳವಾಡಿ ತವರು ಮನೆಗೆ ಹೋದ ಪತ್ನಿಯ ಮನವೊಲಿಸಲು ರಜೆ ಕೇಳಿದ್ದಾನೆ; ರಜಾರ್ಜಿ ಫುಲ್ ವೈರಲ್

ವೈರಲ್ ರಜೆಯ ಪತ್ರ

ವೈರಲ್ ರಜೆಯ ಪತ್ರ

ಒಬ್ಬ ಕ್ಲರ್ಕ್ ಎಂದರೆ ಗುಮಾಸ್ತ ಮೂರು ದಿನಗಳ ರಜೆ ಕೋರಿ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಬ್ಬಬ್ಬಾ.. ರಜೆಯ ಕೋರಿ ಬರೆದಂತಹ ಪತ್ರ ವೈರಲ್ ಆಗುವುದಕ್ಕೆ ಏನು ಕಾರಣವಿರಬಹುದು ಅಂತ ನೀವು ಯೋಚನೆ ಮಾಡುತ್ತಿರಬೇಕಲ್ಲವೇ? ಹೌದು.. ಇದಕ್ಕೆ ಕಾರಣ ಆ ಗುಮಾಸ್ತ ನೀಡಿದ ಕಾರಣ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಜನರು ತಾವು ಕೆಲಸ (Work) ಮಾಡುವಂತಹ ಕಚೇರಿಗಳಲ್ಲಿ (Office) ಮತ್ತು ಕಂಪನಿಗಳಲ್ಲಿ ತಮಗೆ ‘ಆರೋಗ್ಯ ಹುಷಾರಿಲ್ಲ, ನನಗೆ ಒಂದೆರಡು ದಿನಗಳ ರಜೆ ಬೇಕು’, ‘ನಮಗೆ ಏನೋ ಕೆಲಸವಿದೆ, ನಾಳೆ ಒಂದು ದಿನ ರಜೆ ಬೇಕು’ ಅಥವಾ ‘ಹತ್ತಿರದ ಸಂಬಂಧಿಕರಲ್ಲಿ ಮದುವೆ (Marriage) ಇದೆ, ಹೋಗಬೇಕು’ ಅಂತೆಲ್ಲಾ ಕಾರಣಗಳನ್ನು ನೀಡಿ ರಜೆಯ ಕೋರಿ ಅರ್ಜಿಯನ್ನು (Leave Letter) ಹಾಕುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ನಮಗೆ ಆಶ್ಚರ್ಯವಾಗುವುದು ಯಾವುದಾದರೂ ಹೊಸ ಹೊಸ ಕಾರಣಗಳನ್ನು ಹೇಳಿ ರಜೆ (Leave) ಬೇಕು ಅಂತ ಹೇಳೋದು. ಕೆಲವೊಬ್ಬರು ತಮಗೆ ಬೇಕಾದ ರಜೆಗಳನ್ನು ತೆಗೆದುಕೊಳ್ಳುವುದಕ್ಕೆ ಏನೆಲ್ಲಾ ಕಾರಣಗಳನ್ನು ಹುಡುಕಬೇಕೋ, ಅದೆಲ್ಲವನ್ನು ಹುಡುಕುತ್ತಾರೆ.


ರಜೆ ಕೋರಿ ಬರೆದಂತಹ ಪತ್ರ ವೈರಲ್
ಇನ್ನೂ ಕೆಲವರು ನಿಯತ್ತಾಗಿ ತಮಗೆ ಯಾವ ಕಾರಣಕ್ಕೆ ರಜೆ ಬೇಕೋ, ಆ ಕಾರಣವನ್ನು ಮೇಲಾಧಿಕಾರಿಗಳಿಗೆ ಹೇಳಿದರೆ ಏನು ಅಂದು ಕೊಳ್ಳುತ್ತಾರೆ ಅಂತ ಸ್ವಲ್ಪನೂ ಯೋಚನೆ ಮಾಡದೆ ಹೇಳಿ ಬಿಡುತ್ತಾರೆ. ಇಲ್ಲಿಯೂ ಒಬ್ಬ ಕ್ಲರ್ಕ್ ಎಂದರೆ ಗುಮಾಸ್ತ ಮೂರು ದಿನಗಳ ರಜೆ ಕೋರಿ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಬ್ಬಬ್ಬಾ.. ರಜೆ ಕೋರಿ ಬರೆದಂತಹ ಪತ್ರ ವೈರಲ್ ಆಗುವುದಕ್ಕೆ ಏನು ಕಾರಣವಿರಬಹುದು ಅಂತ ನೀವು ಯೋಚನೆ ಮಾಡುತ್ತಿರಬೇಕಲ್ಲವೇ? ಹೌದು.. ಇದಕ್ಕೆ ಕಾರಣ ಆ ಗುಮಾಸ್ತ ನೀಡಿದ ಕಾರಣ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಇದನ್ನೂ ಓದಿ: Farting: ಅದೊಂದು ರೋಲ್ ತಿಂದು ಐದು ವರ್ಷ ಆಯ್ತಂತೆ, ಗ್ಯಾಸ್ ಬಿಡೋದು ಮಾತ್ರ ಇನ್ನೂ ನಿಂತಿಲ್ಲ! ಅಕಟಕಟಾ!!


ಕಾನ್ಪುರ ಮೂಲದ ಗುಮಾಸ್ತರೊಬ್ಬರು ಬರೆದ ರಜೆ ಅರ್ಜಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಏನೆಂದರೆ ಮೂರು ದಿನಗಳ ರಜೆ ಕೋರಿ ಬರೆದ ಪತ್ರದಲ್ಲಿ ಇವರು ನೀಡಿದ ಕಾರಣ ಕೇಳಿದರೆ ನಿಮಗೂ ನಗು ಬರುವುದು ಗ್ಯಾರೆಂಟಿ.


ರಾಜಾರ್ಜಿಯಳ್ಳಿ ಏನು ಬರೆದಿದ್ದಾರೆ?
ಉದ್ಯೋಗಿ ಶಂಶಾದ್ ಅಹ್ಮದ್ ತನ್ನ ಉನ್ನತ ಅಧಿಕಾರಿಗೆ ಬರೆದ ಪತ್ರದಲ್ಲಿ, ತನ್ನ ಹೆಂಡತಿಯೊಂದಿಗೆ ತಾನು ಆಡಿದ ಜಗಳವನ್ನು ವಿವರಿಸಿದನು. ಜಗಳದ ನಂತರ, ಅವರ ಪತ್ನಿ ತಮ್ಮ ಒಬ್ಬ ಮಗಳು ಮತ್ತು ಇಬ್ಬರು ಮೊಮ್ಮಕ್ಕಳನ್ನು ಹಳ್ಳಿಯಲ್ಲಿರುವ ತನ್ನ ಹೆತ್ತವರ ಮನೆಗೆ ಕರೆದೊಯ್ದರು ಎಂದು ಅಹ್ಮದ್ ಹೇಳಿದರು. ತನ್ನ ಹೆಂಡತಿ ತನ್ನ ತವರುಮನೆಗೆ ಹೋದ ಬಗ್ಗೆ ತಾನು ತುಂಬಾ ಅಸಮಾಧಾನಗೊಂಡಿದ್ದೇನೆ ಮತ್ತು ಅವಳನ್ನು ಮತ್ತೆ ಮಾತನಾಡಿಸಿ ಎಲ್ಲವೂ ಸರಿ ಮಾಡಿ, ಆಕೆಯನ್ನು ಮರಳಿ ಮನೆಗೆ ಕರೆತರಲು ಅವರ ಊರಿಗೆ ಹೋಗಬೇಕು. ಆದ್ದರಿಂದ ನನಗೆ ಆಗಸ್ಟ್ 4 ರಿಂದ 6ನೇ ತಾರೀಖಿನವರೆಗೆ ರಜೆಯನ್ನು ನೀಡಬೇಕಾಗಿ ನಿಮ್ಮಲ್ಲಿ ಕೋರುತ್ತೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.


ಹೌದು..ಇಷ್ಟಕ್ಕೂ ಈ ಗಂಡ ಹೆಂಡತಿಯ ಮಧ್ಯೆ ಜಗಳ ಆದದ್ದಾದರೂ ಏಕೆ ಅಂತ ಕೇಳಿದರೆ ಇನ್ನೂ ನಗ್ತೀರಾ. 'ಪ್ರೀತಿ, ಪ್ರೇಮದ ಬಗ್ಗೆ ಗಂಡ ಮತ್ತು ಹೆಂಡತಿಯ ನಡುವೆ ಶುರುವಾದ ಚರ್ಚೆ ಜಗಳವಾಗಿ ದೊಡ್ಡ ವಾಗ್ವಾದ ನಡೆದಿದೆ" ಎಂದು ಆ ವ್ಯಕ್ತಿ ರಜೆಯನ್ನು ಕೋರಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸುದ್ದಿ ಮಾಧ್ಯಮದ ಒಂದು ವರದಿಯ ಪ್ರಕಾರ, ವ್ಯಕ್ತಿಯ ರಜೆ ವಿನಂತಿಯನ್ನು ಈಗಾಗಲೇ ಮೇಲಾಧಿಕಾರಿಗಳು ಅನುಮೋದಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪತ್ರವನ್ನು ನೋಡಿ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ಕಾಮೆಂಟ್ ನಲ್ಲಿ ಬರೆದಿದ್ದಾರೆ.


ಇದನ್ನೂ ಓದಿ:  Turkey Teeth: ಟರ್ಕಿ ಹಲ್ಲುಗಳಿಗಾಗಿ ಈ ವ್ಯಕ್ತಿ 8 ಲಕ್ಷ ರೂಪಾಯಿ ಖರ್ಚು ಮಾಡಿದ್ರಂತೆ; ಆದ್ರೂ ಟ್ರೊಲ್ ಆಗ್ತಿರೋದು ಯಾಕೆ?


ಈ ವೈರಲ್ ಪತ್ರ ನೋಡಿ "ಯುಪಿ (ಉತ್ತರ ಪ್ರದೇಶ) ಯ ಜನರ ಮಾತೇ ಬೇರೆ, ಅವರು ತುಂಬಾನೇ ವಿಶಿಷ್ಟವಾಗಿರುತ್ತಾರೆ" ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಶಂಶಾದ್ ಅವರ ಸಹೋದ್ಯೋಗಿಗಳು ಅವರನ್ನು ಈ ಕಾರಣ ಪತ್ರದಲ್ಲಿ ಬರೆದಿದ್ದಕ್ಕೆ ಗೇಲಿ ಮಾಡಿದರು, ಆದರೆ ಅವರು ಇರೋ ವಿಚಾರ ಬರೆದಿದ್ದಾರೆ ಎಂದು ಅವರು ಹೇಳಿದರು" ಎಂದು "ಉನ್ನಾವೋ ಏಕ್ ಸೋಚ್" ಎಂಬ ಹೆಸರಿನ ಖಾತೆಯು ಟ್ವೀಟ್ ಮಾಡಿದೆ.

Published by:Ashwini Prabhu
First published: