ಜಮ್ಮು ಮತ್ತು ಕಾಶ್ಮೀರ: ಪವಾಡಗಳನ್ನು (Miracle) ನೀವು ನಂಬುತ್ತೀರೋ, ಇಲ್ಲವೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ಊಹೆಗೂ ನಿಲುಕದ ಘಟನೆಗಳು (Incident) ನಡೆದು ಬಿಡುತ್ತವೆ. ಅದಕ್ಕೆ ಪವಾಡ ಅಂತನಾದ್ರೂ ಹೇಳಬಹುದು, ಬೇರೆ ಹೆಸರನ್ನಾದರೂ (Name) ಕೊಡಬಹುದು. ಜಮ್ಮು ಕಾಶ್ಮೀರದ (Jammu and Kashmir) ಹಳ್ಳಿಯೊಂದರಲ್ಲಿ (Village) ನಡೆದಿದ್ದೂ ಅದೇ. ಗರ್ಭಿಣಿ ಮಹಿಳೆಯೊಬ್ಬಳು (Pregnant Lady) ಹೆರಿಗೆಗೆ (Delivery) ಅಂತ ಆಸ್ಪತ್ರೆಗೆ (Hospital) ದಾಖಲಾಗಿದ್ದಳು. ಹೆರಿಗೆ ಆಗಿ, ಮಗುವೂ ಜನಿಸಿತ್ತು. ಆದರೆ ಮಗು (Baby) ಮಾತ್ರ ಯಾವುದೇ ಚಟುವಟಿಕೆಯ ತೋರಿಸ್ತಾನೇ ಇರಲಿಲ್ಲ. ಇದರಿಂದ ಮಗುವನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಿದ ವೈದ್ಯರು (Doctor), ಮಗು ಸತ್ತಿದೆ ಅಂತ ಘೋಷಿಸಿದ್ರು. ಆದರೆ ಮುಂದಾಗಿದ್ದು ಮಾತ್ರ ಪವಾಡ!
ಮಗು ಸತ್ತಿದೆ ಅಂತ ಘೋಷಿಸಿದ ವೈದ್ಯರು
ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಸತ್ತು ಬದುಕಿದ ಘಟನೆ ನಡೆದಿದೆ. ಆಗ ತಾನೆ ಜನಿಸಿದ ಕಂದಮ್ಮ ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ರು. ಬಂಕೂಟ್ ಎಂಬ ಗ್ರಾಮದ ನಿವಾಸಿ ಬಶರತ್ ಅಹ್ಮದ್ ಎಂಬುವರು ತಮ್ಮ ಪತ್ನಿಯನ್ನು ಹೆರಿಗೆಗೆ ಅಂತ ಶ್ರೀನಗರದ ಆಸ್ಪತ್ರೆಗೆ ಸೇರಿಸಿದ್ರು. ಆಗ ನವಜಾತ ಶಿಶು ಮೃತಪಟ್ಟಿದೆ ಅಂತ ವೈದ್ಯರು ಘೋಷಿಸಿದ್ರು.
ಪರೀಕ್ಷೆ ಬಳಿಕವೂ ಮಗು ಸತ್ತಿದ್ದಾಗಿ ಘೋಷಣೆ
ವೈದ್ಯರ ಮಾತು ಕೇಳಿ ಪೋಷಕರು ದುಃಖಗೊಂಡಿದ್ದಾರೆ. ಹೇಗಾದರೂ ಮಾಡಿ ಬದುಕಿಸಿ ಕೊಡಿ, ಮತ್ತೊಮ್ಮೆ ಮಗುವನ್ನು ಪರೀಕ್ಷೆ ಮಾಡಿ ಅಂತ ಕಣ್ಣೀರಿಟ್ಟಿದ್ದಾರೆ. ಆದರೆ ವೈದ್ಯರು ಮಗು ಸತ್ತಿದೆ ಅಂತ ದೃಢಪಡಿಸಿದ್ದಾರೆ. ಆಗ ಬೇರೆ ದಾರಿಕಾಣದೇ ಮಗುವನ್ನು ಪೋಷಕರು ಮನೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: Viral Video: ಈ 80 ವರ್ಷದ ಅಜ್ಜಿಯ ಸಾಹಸ ನೋಡಿ ನೀವೇ ಬೆರಗಾಗಿ ಬಿಡ್ತೀರಾ! ಅಂತಿಂಥಾ ಅಜ್ಜಿ ಇವರಲ್ಲಾ
ಸಮಾಧಿ ಮಾಡೋಕೆ ಅಂತ ತಂದಾಗ ಎಚ್ಚರಗೊಂಡ ಕಂದಮ್ಮ
ಇನ್ನೇನು ಮಾಡಲು ತೋಚದೇ ಮಗುವನ್ನು ಸಮಾಧಿ ಮಾಡಬೇಕು ಅಂತ ಗ್ರಾಮಕ್ಕೆ ಕರೆ ತಂದರು. ಮುಸ್ಲಿಂ ಸಂಪ್ರದಾಯದಂತೆ ಮನೆಯಲ್ಲಿ ವಿಧಿವಿಧಾನ ಮಾಡಿ, ಸಮಾಧಿ ಸ್ಥಳಕ್ಕೂ ಕರೆಯೊಯ್ದರು. ಆಗ ಪವಾಡವೊಂದು ಸಂಭವಿಸಿದೆ.
ಮಗು ಬದುಕಿದ್ದು ನೋಡಿ ಕುಟುಂಬಸ್ಥರ ಸಂತಸ
ಹೌದು, ಇನ್ನೇನು ಮಗುವನ್ನು ಸಮಾಧಿ ಮಾಡಬೇಕು ಅಂತ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಆಗ ನವಜಾತ ಶಿಶು ಎಚ್ಚರಗೊಂಡು, ಅಳುವುದಕ್ಕೆ ಶುರು ಮಾಡಿದೆ. ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಂದ ವಿಶೇಷ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ರವಾನಿಸಲಾಗಿದೆ.
ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರ ಆಕ್ರೋಶ
ಇನ್ನು ಮಗು ಕೂಗಿಕೊಳ್ಳುತ್ತಿದ್ದಂತೆ ಕಂದಮ್ಮ ಸತ್ತಿಲ್ಲ, ಬದುಕಿದೆ ಅಂತ ಕುಟುಂಬಸ್ಥರಿಗೆ ಗೊತ್ತಾಗಿದೆ. ಇದರಿಂದ ಅವರೆಲ್ಲ ಸಂತಸಗೊಂಡಿದ್ದಾರೆ. ಇನ್ನು ವೈದ್ಯರು ಸರಿಯಾಗಿ ತಪಾಸಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ ಅಂತ ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕೋಪಗೊಂಡ ಮಗುವಿನ ಕುಟುಂಬ ಸದಸ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Viral Video: ಯಾರನ್ನಾದ್ರೂ ತುಂಬಾ ಮಿಸ್ ಮಾಡಿಕೊಳ್ತಿದ್ದೀರಾ? ಹೀಗೆ ಮಾಡಿದ್ರೆ ಸ್ವಲ್ಪ ಖುಷಿಯಾಗ್ಬಹುದು ನೋಡಿ
ಆಸ್ಪತ್ರೆಯ ಇಬ್ಬರು ನೌಕರರು ಅಮಾನತು
ಇನ್ನು ಘಟನೆ ಕುರಿತಂತೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಗುವಿನ ಕುಟುಂಬದವರ ಪ್ರತಿಭಟನೆಯ ನಂತರ ಇಬ್ಬರು ಆಸ್ಪತ್ರೆ ನೌಕರರನ್ನು ಅಮಾನತುಗೊಳಿಸಿದ್ದಾರೆ ಆರೋಗ್ಯ ಅಧಿಕಾರಿಗಳು ಆದೇಶಿಸಿದ್ದಾರೆ. ಏತನ್ಮಧ್ಯೆ, ಎಸ್‌ಎಚ್‌ಒ ಬನಿಹಾಲ್ ಮುನೀರ್ ಖಾನ್ ನೇತೃತ್ವದ ಪೊಲೀಸ್ ತಂಡವು ಆಸ್ಪತ್ರೆಗೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು ಮತ್ತು ನಿರ್ಲಕ್ಷ್ಯಕ್ಕೆ ತಪ್ಪಿತಸ್ಥರೆಂದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ