Viral Video: 8ನೇ ಮಹಡಿಯಲ್ಲಿ ಕಿಟಕಿಯ ಹೊರ ಭಾಗದಲ್ಲಿ ನೇತಾಡುತ್ತಿರುವ ಮಗು! ನಿಜವಾಗ್ಲೂ ಭಯ ಹುಟ್ಟಿಸುತ್ತೆ ಈ ವಿಡಿಯೋ

8 ನೇ ಮಹಡಿಯಲ್ಲಿ ನೇತಾಡುತ್ತಿರುವ ಮಗುವೊಂದನ್ನು ರಕ್ಷಿಸಲು, ಆ ಕಟ್ಟಡವನ್ನು ಹತ್ತುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ಅದು. ಸಬಿತ್ ಶೋಂಟಕ್‍ಬೇವ್ ಎಂಬ ವ್ಯಕ್ತಿ, ಮಗುವೊಂದು ಕಟ್ಟಡವೊಂದರ ಬ್ಲಾಕ್‍ನ ಕಿಟಕಿಯ ಹೊರ ಭಾಗದಲ್ಲಿ ನೇತಾಡುತ್ತಿರುವುದನ್ನು ಕಂಡು, ಅದನ್ನು ರಕ್ಷಿಸಲು ಮುಂದಾದದ್ದನ್ನು ವಿಡಿಯೋದಲ್ಲಿ ನಾವು ಕಾಣಬಹುದು

ಕಿಟಕಿಯ ಹೊರ ಭಾಗದಲ್ಲಿ ನೇತಾಡುತ್ತಿರುವ ಮಗು

ಕಿಟಕಿಯ ಹೊರ ಭಾಗದಲ್ಲಿ ನೇತಾಡುತ್ತಿರುವ ಮಗು

  • Share this:
ಈ ದಿನಗಳಲ್ಲಿ ಸಾಮಾನ್ಯವಾಗಿ ತಮ್ಮ ಸುತ್ತಮುತ್ತ ಯಾವುದೇ ಅವಘಡ ನಡೆದರೂ, ಮೊಬೈಲ್‍ನಲ್ಲಿ (Mobile) ಅದರ ವಿಡಿಯೋ ಚಿತ್ರೀಕರಣ(Video Shooting) ಮಾಡುವ ಅಥವಾ ದೂರದಲ್ಲೇ ನಿಂತು ಅಯ್ಯೋ ಪಾಪ, ಹೀಗಾಗಬಾರದಿತ್ತು ಎನ್ನುವ ಜನರನ್ನೇ ಹೆಚ್ಚಾಗಿ ಕಾಣುತ್ತೇವೆ. ಅಂತಹ ಸಂದರ್ಭಗಳಲ್ಲಿ, ರಕ್ಷಕ ದಳದವರು (Guard) ಬಂದು ಕಾಪಾಡಲಿ ಎಂದು ಕಾಯುವವರೇ ಹೆಚ್ಚು, ಅಪಾಯಕ್ಕೆ ಸಿಲುಕಿದವರ ರಕ್ಷಣೆಗೆ (Protection) ತಾವೇ ರಕ್ಷಣೆಗೆ ಧಾವಿಸುವವಂತ ಧೈರ್ಯವಂತರನ್ನು (Courage) ದುರ್ಬಿನು ಹಿಡಿದುಕೊಂಡು ಹುಡುಕಬೇಕು ಬಿಡಿ. ಹಾಗಾಗಿ, ಅಂತಹ ಧೈರ್ಯಶಾಲಿ, ಹೃದಯವಂತರ ಬಗ್ಗೆ ಆಗೊಮ್ಮೆ ಈಗೊಮ್ಮೆ ಕೇಳಿದಾಗ ಖುಷಿ ಮತ್ತು ಅಚ್ಚರಿ ಎರಡೂ ಆಗುತ್ತದೆ.

8 ನೇ ಮಹಡಿಯಲ್ಲಿ ನೇತಾಡುತ್ತಿರುವ ಮಗು
ಕೆಲವೊಮ್ಮೆ ತಮ್ಮ ಆಪ್ತರೆ ಅಪಾಯಕ್ಕೆ ಸಿಲುಕಿದಾಗ ಕೆಲವರಿಗೆ ಕಾಪಾಡಲು ಎಲ್ಲಿಲ್ಲದ ಧೈರ್ಯ ಬರುತ್ತದೆ ನಿಜ, ಆದರೇ ಯಾರೋ ಅಪರಿಚಿತರನ್ನು ಪ್ರಾಣವನ್ನು ಲೆಕ್ಕಿಸದೆ ಕಾಪಾಡುವ ಮನಸ್ಸು ಎಷ್ಟು ಜನರಿಗೆ ಬಂದೀತು ಹೇಳಿ? ಇತ್ತೀಚೆಗೆ ಅಂತಹ ಧೈರ್ಯಶಾಲಿ ವ್ಯಕ್ತಿಯೊಬ್ಬನ ವಿಡಿಯೋವೊಂದು ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ. ಕಟ್ಟಡವೊಂದರ 8 ನೇ ಮಹಡಿಯಲ್ಲಿ ನೇತಾಡುತ್ತಿರುವ ಮಗುವೊಂದನ್ನು ರಕ್ಷಿಸಲು, ಆ ಕಟ್ಟಡವನ್ನು ಹತ್ತುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ಅದು.

ಈ ವಿಡಿಯೋದಲ್ಲಿನ ಘಟನೆ ನಡೆದಿರುವುದು ಕಜಕೀಸ್ಥಾನದಲ್ಲಿ. ಸಬಿತ್ ಶೋಂಟಕ್‍ಬೇವ್ ಎಂಬ ವ್ಯಕ್ತಿ, ಮಗುವೊಂದು ಕಟ್ಟಡವೊಂದರ ಬ್ಲಾಕ್‍ನ ಕಿಟಕಿಯ ಹೊರ ಭಾಗದಲ್ಲಿ ನೇತಾಡುತ್ತಿರುವುದನ್ನು ಕಂಡು, ಅದನ್ನು ರಕ್ಷಿಸಲು ಮುಂದಾದದ್ದನ್ನು ವಿಡಿಯೋದಲ್ಲಿ ನಾವು ಕಾಣಬಹುದು.

ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ಯುವಕ
ವ್ಯಕ್ತಿಯೊಬ್ಬ ಯಾರದೋ ಮಗುವನ್ನು ರಕ್ಷಿಸಲು, ಪ್ರಾಣವನ್ನೇ ಪಣಕ್ಕಿಟ್ಟು ಪ್ರಯತ್ನಪಡುತ್ತಿರುವ ಆ ದೃಶ್ಯದ ವಿಡಿಯೋವನ್ನು ಲೆಕ್ಕವಿಲ್ಲದಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂತವರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ಅನುಷ್ಕಾ, ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಆ ವಿಡಿಯೋಗೆ “ಹೀರೋ” ಎಂಬ ಶೀರ್ಷಿಕೆಯನ್ನು ಕೂಡ ನೀಡಿದ್ದಾರೆ.

ಇದನ್ನೂ ಓದಿ: Cobra Drinking Water: ವಿಪರೀತ ಬಾಯಾರಿ ಗ್ಲಾಸ್​ನಿಂದ ನೀರು ಕುಡಿದ ಕೋಬ್ರಾ, ಗ್ಲಾಸ್ ಹಿಡಿದವನು ಧೈರ್ಯವಂತ ಬಿಡಿ

ಗುಡ್ ನ್ಯೂಸ್ ಕರೆಸ್ಪಾಡೆಂಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ವೈರಲ್
ಗುಡ್ ನ್ಯೂಸ್ ಕರೆಸ್ಪಾಡೆಂಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕಟ್ಟದ ಕಿಟಕಿಯಲ್ಲಿ ನೇತಾಡುತ್ತಿರುವ ಮೂರು ವರ್ಷದ ಬಾಲಕಿಯನ್ನು ರಕ್ಷಿಸಲು ಸುಮಾರು 80 ಅಡಿ ಎತ್ತರಕ್ಕೆ ಹತ್ತಿರುವುದನ್ನು ಮತ್ತು ಕೆಳಮಹಡಿಯ ಕಿಟಕಿಯನ್ನು ಹಿಡಿದುಕೊಂಡು ಆತ ಹೇಗೋ ಕಷ್ಟಪಟ್ಟು ಕೊನೆಗೂ ಆ ಮಗುವನ್ನು ರಕ್ಷಿಸುವುದನ್ನು ನೋಡಬಹುದು.



ವಿಡಿಯೋದ ಜೊತೆ “ಸಬಿತ್ ಶೋಂಟಕ್‍ಬೇವ್ ನಿನ್ನೆ ಸ್ನೇಹಿತರೊಬ್ಬರ ಜೊತೆ ನಡೆದುಕೊಂಡು ಹೋಗುತ್ತಿರುವಾಗ, ಅಂಬೆಗಾಲಿಡುವ ವಯಸ್ಸಿನ ಮಗುವೊಂದು ಕಟ್ಟಡವೊಂದರ 8 ನೇ ಮಹಡಿಯ ಕಿಟಕಿಯನ್ನು ಹಿಡಿದುಕೊಂಡು ನೇತಾಡುತ್ತಾ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿರುವುದನ್ನು ನೋಡಿದನು. ಕೂಡಲೇ ಸಬಿತ್ ಕಟ್ಟಡದ ಕಡೆಗೆ ಓಡಿದನು ಮತ್ತು ಕೆಳ ಭಾಗದಿಂದ ಕಟ್ಟಡವನ್ನು ಪ್ರವೇಶಿಸಿದನು” ಎಂಬ ಅಡಿಬರಹ ಕೂಡ ಇದೆ.

ಮಗುವನ್ನು ರಕ್ಷಿಸಿದ ಯುವಕ ಹೇಳಿದ್ದು ಹೀಗೆ
“ಸಬಿತ್ ಹೇಳಿರುವುದು: ನನ್ನ ಬಳಿ ಯಾವುದೇ ಸುರಕ್ಷತಾ ಸಾಮಾನು ಇರಲಿಲ್ಲ, ಹಾಗಾಗಿ ನನ್ನ ಸ್ನೇಹಿತ ನನ್ನ ಕಾಲುಗಳನ್ನು ಹಿಡಿದಿದ್ದ. ‘ಆ ಕ್ಷಣ ನಾನು ಬೇರೆ ಯಾವುದರ ಬಗ್ಗೆಯೂ ಯೋಚಿಸಲಿಲ್ಲ, ಕೇವಲ ಮಗುವಿಗೆ ಸಹಾಯ ಮಾಡುವುದು ನನ್ನ ಉದ್ದೇಶವಾಗಿತ್ತು’. ಸಬಿತ್‍ ಸ್ವತಃ ನಾಲ್ಕು ಮಕ್ಕಳ ತಂದೆ. ಅವರಿಗೆ ಸಿಟಿ ಡೆಪ್ಯುಟಿ ಎಮರ್ಜೆನ್ಸಿ ಮಿನಿಸ್ಟರ್, ಪದಕ ನೀಡಿ ಸನ್ಮಾನಿಸಿದ್ದಾರೆ” ಎಂದು ಟ್ವೀಟ್‍ ಥ್ರೆಡ್‍ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:  Murder case: ಸೋಮಾರಿ ಗಂಡನನ್ನು ಚಾಕುವಿನಿಂದ ಚುಚ್ಚಿ ಕೊಂದ ಹೆಂಡತಿ! ಮಗಳು ನೀಡಿದ ಸಾಕ್ಷಿಯಿಂದ ಸಿಕ್ಕಿ ಬಿದ್ದಳು

ಪ್ರಾಣವನ್ನೇ ಪಣಕ್ಕಿಟ್ಟಿದ್ದ ವ್ಯಕ್ತಿಗೆ ಧನ್ಯವಾದ ತಿಳಿಸಿದ ನೆಟ್ಟಿಗರು
ಈ ವಿಡಿಯೋ ಈಗಾಗಲೇ 12 ಸಾವಿರಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿದೆ. ಆ ಮಗುವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಆ ವ್ಯಕ್ತಿಗೆ ಜನರು ಧನ್ಯವಾದ ಸಲ್ಲಿಸಿದ್ದಾರೆ. “ಒಳ್ಳೆಯ ಕೆಲಸ ಗೆಳೆಯ. ಇಂತಹ ವ್ಯಕ್ತಿಯಂತಹ ಇನ್ನಷ್ಟು ಜನರ ಅಗತ್ಯವಿದೆ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಹೊಗಳಿದ್ದರೆ, “ನಂಬಲು ಅಸಾಧ್ಯವಾದದ್ದು” ಎಂದು ಮತ್ತೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಇದನ್ನು ಎಷ್ಟು ಹೊಗಳಿದರೂ ಕಡಿಮೆಯೇ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Published by:Ashwini Prabhu
First published: