Sky: ಆಕಾಶದಲ್ಲಿ ಕಂಡು ಬಂತು ಕೆಂಪು ಬಣ್ಣದ ಸರ್ಕಲ್! ಇದು ಕೌತುಕವೋ, ಆತಂಕವೋ?

ಆಕಾಶದಲ್ಲಿ ಕಂಡ ಕೆಂಪು ಸರ್ಕಲ್​

ಆಕಾಶದಲ್ಲಿ ಕಂಡ ಕೆಂಪು ಸರ್ಕಲ್​

ಆಕಾಶದಲ್ಲಿ ಐದು ಗ್ರಹಗಳು ಒಟ್ಟಿಗೆ ಕಾಣಿಸಿಕೊಂಡ ವಿದ್ಯಾಮಾನದ ನಂತರ ಆಕಾಶ ಮತ್ತೊಂದು ಕೌತುಕಕ್ಕೆ ಸಾಕ್ಷಿಯಾಗಿದೆ. ಕಳೆದ ವಾರ ಸೆಂಟ್ರಲ್ ಇಟಲಿಯಲ್ಲಿ ಆಕಾಶದಲ್ಲಿ ಕೆಂಪು ಬಣ್ಣದ ಸರ್ಕಲ್​ ಮತ್ತು ಮಿಂಚು ಕಂಡುಬಂದಿದೆ. ‌ಸದ್ಯ ಇದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

  • Share this:

ಆಕಾಶದಲ್ಲಿ (Sky) ಐದು ಗ್ರಹಗಳು ಒಟ್ಟಿಗೆ ಕಾಣಿಸಿಕೊಂಡ ವಿದ್ಯಾಮಾನದ ನಂತರ ಆಕಾಶ ಮತ್ತೊಂದು ಕೌತುಕಕ್ಕೆ ಸಾಕ್ಷಿಯಾಗಿದೆ. ಕಳೆದ ವಾರ ಸೆಂಟ್ರಲ್ ಇಟಲಿಯಲ್ಲಿ ಆಕಾಶದಲ್ಲಿ ಕೆಂಪು ಬಣ್ಣದ ಸರ್ಕಲ್ (Red Colored Circle)​ ಮತ್ತು ಮಿಂಚು (Lightning) ಕಂಡುಬಂದಿದೆ. ‌ಕೇವಲ ಮಿಲಿ ಸೆಕೆಂಡ್‌ಗಳಲ್ಲಿ ಮಾಯವಾದ ಈ ಕೆಂಪು ಬಣ್ಣದ ಉಂಗುರದ ಆಕೃತಿ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.


ಆಕಾಶದಲ್ಲಿ ಕೆಂಪು ಬಣ್ಣದ ಸರ್ಕಲ್​, ದೃಶ್ಯ ಸೆರೆಹಿಡಿದ ಛಾಯಾಗ್ರಾಹಕ


ಇಟಲಿಯಲ್ಲಿ ಸುಮಾರು ಜನ ಈ ದೃಶ್ಯವನ್ನು ಕಣ್ತುಂಬಿಕೊಂಡಿದ್ದು, ಛಾಯಾಗ್ರಾಹಕ ವಾಲ್ಟರ್ ಬಿನೊಟ್ಟೊ ಅವರು ಮಾರ್ಚ್ 27 ರಂದು ಉತ್ತರ ಇಟಲಿಯ ಪೊಸಾಗ್ನೊ ಪಟ್ಟಣದಲ್ಲಿ ಈ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.


ELVE ಎಂದು ಹೆಸರಿಸಿದ ವರದಿಗಳು


ಲೈವ್ ಸೈನ್ಸ್ ಈ ಬಗ್ಗೆ ವರದಿ ಮಾಡಿದ್ದು, ಛಾಯಾಗ್ರಾಹಕ ವಾಲ್ಟರ್ ಬಿನೊಟ್ಟೊ ಆಕಾಶದಲ್ಲಿ ಕಂಡುಬಂದ ELVE ಎಂಬ ಪ್ರಕಾಶಮಾನ ಪ್ರಭಾವಲಯದ ದೃಶ್ಯವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮತ್ತು ಈ ಕೆಂಪು ಬಣ್ಣದ ಉಂಗುರಾಕೃತಿಯನ್ನು ELVE ಎಂದು ಹೆಸರಿಸಿದೆ. ಇನ್ನು ಈ ಸರ್ಕಲ್ ಕೆಂಪು ಬಣ್ಣದ ಹೊಳೆಯುವ ಬೃಹತ್ ವೃತ್ತವು ಸುಮಾರು 360 ಕಿಲೋಮೀಟರ್ ವ್ಯಾಸವನ್ನು ಹೊಂದಿದೆ ಮತ್ತು ಮಧ್ಯ ಇಟಲಿ ಮತ್ತು ಆಡ್ರಿಯಾಟಿಕ್ ಸಮುದ್ರದ ಭಾಗದಲ್ಲಿ ಕಾಣಿಸಿಕೊಂಡಿದೆ ಎಂದು ಲೈವ್‌ ಸೈನ್ಸ್‌ ತನ್ನ ವರದಿಯಲ್ಲಿ ಹೇಳಿದೆ.


ಇದನ್ನೂ ಓದಿ: ಒಮಿಕ್ರಾನ್ ಐದನೇ ತಳಿ ಎಷ್ಟು ಅಪಾಯಕಾರಿ? ಎದುರಾಗುತ್ತಾ ಕೊರೊನಾದ ನಾಲ್ಕನೇ ಅಲೆ?


ಹೇಗೆ ಉಂಟಾಗುತ್ತದೆ ELVE?


Spaceweather.com ಆಕಾಶದಲ್ಲಿ ಕಂಡುಬಂದ ಈ ರಿಂಗ್ ಫ್ಲ್ಯಾಶ್ ಅನ್ನು "ಬೆಳಕಿನ ಹೊರಸೂಸುವಿಕೆ ಮತ್ತು ವಿದ್ಯುತ್ಕಾಂತೀಯ ಮೂಲಗಳಿಂದಾಗಿ ಅತಿ ಕಡಿಮೆ ಆವರ್ತನದ ಪ್ರಕ್ಷುಬ್ಧತೆ" ಅಥವಾ ELVE ಎಂದು ಕರೆಯಲಾಗುತ್ತದೆ ಎಂದು ತಿಳಿಸಿದೆ. ಗುಡುಗು ಸಿಡಿಲಿನ ಸಮಯದಲ್ಲಿ ಕ್ಯುಮುಲೋನಿಂಬಸ್ ಮೋಡದ ಮೇಲ್ಭಾಗದಿಂದ ಮೇಲ್ಮುಖವಾಗಿ ಹೊರಸೂಸುವ ವಿದ್ಯುತ್ ವಿಸರ್ಜನೆಯ ಒಂದು ರೂಪ ಮತ್ತು ಅದು ಸಾಮಾನ್ಯವಾಗಿ ಕಡಿಮೆ ಸಮಯದಲ್ಲಿ ಹಾಗೂ ಕೆಂಪು ಬಣ್ಣದ ಬೆಳಕಿನ ವೃತ್ತದಂತೆ ಕಂಡುಬರುತ್ತದೆ ಎಂದು ಹೇಳಲಾಗಿದೆ. "ಎಲ್ವೆಸ್" ಒಂದು ಮಿಲಿಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಕಣ್ಮರೆಯಾಗುವ ಬೆಳಕಿನ ಆಕೃತಿ ಆಗಿದ್ದು, ಇದು ವೇಗವಾಗಿ ವಿಸ್ತರಿಸುತ್ತದೆ ಎಂದು ತಿಳಿಸಿದೆ.


ಮಿಂಚಿಗಿಂತ 10 ಪಟ್ಟು ಶಕ್ತಿಶಾಲಿ


ಸಾಮಾನ್ಯವಾಗಿ, ಮಿಂಚಿನ ಬೋಲ್ಟ್​​ಗಳು EMPಗಳನ್ನು ಹೊರಸೂಸುವುದಿಲ್ಲ ಏಕೆಂದರೆ ಅವುಗಳು ಸಾಕಷ್ಟು ಕರೆಂಟ್ ಅನ್ನು ಸಾಗಿಸುವುದಿಲ್ಲ. ಆದರೆ ಈ ಚಂಡಮಾರುತ, ಗುಡುಗು, ಸಿಡಿಲಿನ ಸಮಯದಲ್ಲಿ ಉಂಟಾದ ಈ ರೀತಿಯ ಮಿಂಚಿನ ರಚನೆ ಸಾಮಾನ್ಯ ಮಿಂಚಿನ ಬೋಲ್ಟ್‌ಗಳಿಗಿಂತ ಕನಿಷ್ಠ 10 ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಇದು ವಿದ್ಯುತ್ ಶಾಕ್​ ತರಂಗವನ್ನು ಉಂಟುಮಾಡುತ್ತದೆ ಎಂದು ವರದಿಗಳು ತಿಳಿಸಿವೆ.
ಕೆಂಪು ಬಣ್ಣ ಹೇಗೆ ಬರುತ್ತದೆ?


ಇವುಗಳು ತೀವ್ರವಾದ ಗುಡುಗು ಸಹಿತ ವಿದ್ಯುದೀಕರಣದಿಂದ ಉಂಟಾಗುವ ಅಪರೂಪದ ವಾಯುಮಂಡಲ/ಮೆಸೋಸ್ಫಿರಿಕ್ ಪ್ರಕ್ಷುಬ್ಧತೆಗಳಾಗಿವೆ. ಮಿಂಚಿನಿಂದ ಹೊರಹೊಮ್ಮಿದ ವಿದ್ಯುತ್ಕಾಂತೀಯವು (EMP) ಭೂಮಿಯ ಗೋಳವನ್ನು ಸ್ಪರ್ಶಿಸಿದಾಗ ಕೆಂಪು ಉಂಗುರಗಳನ್ನು ರಚನೆಯಾಗುತ್ತದೆ. EMP ಒಳಗಿನ ಎಲೆಕ್ಟ್ರಾನ್‌ಗಳು ಅಯಾನುಗೋಳಕ್ಕೆ ಡಿಕ್ಕಿಯಾದಾಗ, ಚಾರ್ಜ್ಡ್ ಕಣಗಳು ಸಾರಜನಕ ಪರಮಾಣುಗಳನ್ನು ಪ್ರಚೋದಿಸುತ್ತದೆ. ಅದು ನಂತರ ಕೆಂಪು ಬಣ್ಣಕ್ಕೆ ತಿರುಗುತ್ತದೆ ಎನ್ನಲಾಗಿದೆ.
ELVE ಗಳನ್ನು ಯಾವಾಗ ಕಂಡುಹಿಡಿಯಲಾಯಿತು?

top videos


    ಅವುಗಳ ಅಲ್ಪಾವಧಿಯ ಸ್ವಭಾವದಿಂದಾಗಿ, ELVE ಗಳು ಸಾಮಾನ್ಯವಾಗಿ ಭೂಮಿಯ ಸುತ್ತ ಸುತ್ತುತ್ತಿರುವ ಉಪಗ್ರಹಗಳಿಗೆ ಮಾತ್ರ ಗೋಚರಿಸುತ್ತವೆ ಮತ್ತು ಮೊದಲ ಬಾರಿಗೆ ಇದನ್ನು 1990 ರಲ್ಲಿ ಕಂಡುಹಿಡಿಯಲಾಯಿತು. ಇಟಲಿಯಲ್ಲಿ ಈ ದೃಶ್ಯ ಈಗ ಎಲ್ಲರ ಮಾತಾಗಿದ್ದು, ಮೊದಲಿಗೆ ಅಂಕೋನಾದಲ್ಲಿ ದೊಡ್ಡ ಗುಡುಗು ಕೇಳಿಸಿತು. ನಂತರ ಇಂತಹ ಕೆಂಪು ಬಣ್ಣದ ಉಂಗುರಾಕೃತಿ ಕಂಡು ಬಂದಿದೆ ಎಂದು ಕೆಲವರು ಹೇಳಿದ್ದಾರೆ.

    First published: