Viral Photo: ಇದು ಗಂಗೂಬಾಯಿ ಅಲ್ಲ ಗಂಗೂ ಕ್ಯಾಟ್; ಬೆಕ್ಕಿನ ವೇಷಕ್ಕೆ ನೆಟ್ಟಿಗರು ಫ್ಲ್ಯಾಟ್!

ಬೆಕ್ಕು ಕೂಡ ಗಂಗೂಬಾಯಿ ಅಭಿಮಾನಿಯೇ ಎಂದು ಕೇಳಬೇಡಿ? ಬೆಕ್ಕಿಗೆ ಗಂಗೂಬಾಯಿ ಬಗ್ಗೆ ಎಷ್ಟು ಗೊತ್ತೋ ನಮಗೆ ಗೊತ್ತಿಲ್ಲ, ಆ ಬೆಕ್ಕಿನ ಯಜಮಾನರು ಮಾತ್ರ ಗಂಗೂಬಾಯಿಯ ಬಹು ದೊಡ್ಡ ಅಭಿಮಾನಿ ಎಂಬುದಂತೂ ಖಚಿತ. ತನ್ನ ಬೆಕ್ಕಿಗೂ ಗಂಗೂಬಾಯಿಯಂತೆ ಅಲಂಕಾರ ಮಾಡಿ, ಸುಂದರವಾದ ಪೋಟೋ ತಗೆಸಿದ್ದಾರೆ ಆ ಮಹಾನುಭಾವ!

ಬೆಕ್ಕಿನ ಗಂಗೂಬಾಯಿ ವೇಷ

ಬೆಕ್ಕಿನ ಗಂಗೂಬಾಯಿ ವೇಷ

  • Share this:
ಆಲಿಯಾ ಭಟ್ (Alia Bhatt) ನಟನೆಯ ಗಂಗುಬಾಯಿ ಕಾಥಿಯಾವಾಡಿ (Gangubai Kathiawadi) ಸಿನಿಮಾ, ಪ್ರಸ್ತುತ ವಿಶ್ವದಾದ್ಯಂತ ನೆಟ್‍ಫ್ಲಿಕ್ಸಿನ (Netflix) ಟಾಪ್ 10 ಸಿನಿಮಾಗಳಲ್ಲಿ ಒಂದಾಗಿದ್ದು, ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಮೆಚ್ಚುಗೆ ಪಡೆಯುತ್ತಿದೆ. ಟ್ವಿಟ್ಟರ್ (Twitter), ಇನ್‍ಸ್ಟಾಗ್ರಾಂ (Instagram), ಫೇಸ್‍ಬುಕ್ (Facebook),  ಯೂಟ್ಯೂಬ್ (Youtube) ಹೀಗೆ ಎಲ್ಲೆಡೆ ಗಂಗೂಬಾಯಿ ಕ್ರೇಜ್. ಸಾಕಷ್ಟು ಮಂದಿ ಗಂಗೂಬಾಯಿ ಕಾಸ್ಟೂಮ್, ಡಾನ್ಸ್, ಮೇಕಪ್‍ಗಳ ಮರುಸೃಷ್ಟಿ ವಿಡಿಯೋಗಳನ್ನು ಮಾಡಿ, ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಅಂತವರ ಸಾಲಿಗೆ ಒಂದು ಬೆಕ್ಕು (Cat) ಕೂಡ ಸೇರಿಕೊಂಡಿದೆ! ಅಂದರೆ ಆ ಬೆಕ್ಕು ಕೂಡ ಗಂಗೂಬಾಯಿ ಅಭಿಮಾನಿಯೇ ಎಂದು ಕೇಳಬೇಡಿ? ಬೆಕ್ಕಿಗೆ ಗಂಗೂಬಾಯಿ ಬಗ್ಗೆ ಎಷ್ಟು ಗೊತ್ತೋ ನಮಗೆ ಗೊತ್ತಿಲ್ಲ, ಆ ಬೆಕ್ಕಿನ ಯಜಮಾನರು ಮಾತ್ರ ಗಂಗೂಬಾಯಿಯ ಬಹು ದೊಡ್ಡ ಅಭಿಮಾನಿ ಎಂಬುದಂತೂ ಖಚಿತ. ತನ್ನ ಬೆಕ್ಕಿಗೂ ಗಂಗೂಬಾಯಿಯಂತೆ ಅಲಂಕಾರ ಮಾಡಿ, ಸುಂದರವಾದ ಪೋಟೋ ತಗೆಸಿದ್ದಾರೆ ಆ ಮಹಾನುಭಾವ!

ಬೆಕ್ಕಿನ ಗಂಗೂಬಾಯಿ ವೇಷ
ಆ ಮುದ್ದಾದ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ, ನೋಡಿದವರೆಲ್ಲಾ ‘ಹಯ್, ಎಷ್ಟು ಮುದ್ದಾಗಿದೆ’ ಎನ್ನುವಂತಾಗಿದೆ. ಇನ್ನು ಕೆಲವರಂತೂ ಬೆಕ್ಕಮ್ಮನ ಗಂಗೂಬಾಯಿ ವೇಷ ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ. ಗಂಗೂಬಾಯಿ ಸಿನಿಮಾದಲ್ಲಿ ಆಲಿಯಾ ಭಟ್ ದಂತದ ವರ್ಣದ ಸೀರೆಗಳನ್ನು ತೊಟ್ಟು, ಸಿನಿಮಾದ ಉದ್ದಕ್ಕೂ ಅನೇಕ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿಯಲ್ಲಿ, ಬಿಳಿ ಬಣ್ಣದ ದುಪಟ್ಟಾವನ್ನು ಸೆರಗಿನಂತೆ ಹೊದ್ದು, ಮೂಗಿಗೆ ದೊಡ್ಡ ಮೂಗುತಿ, ಹಣೆಗೆ ಕಾಸಗಲ ಬಿಂದಿ, ಕೈಗಳಿಗೆ ಗಾಜಿನ ಬಳೆ ತೊಟ್ಟ ಬೆಕ್ಕಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.ಈ ಫೋಟೊವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಬಳಕೆದಾರರು, ತಮಗೆ ಆ ಫೋಟೋ ಸಬ್ಟಲ್ ಕರಿ ಟ್ರೈಟ್ಸ್ ಎಂಬ ಫೇಸ್‍ಬುಕ್ ಗ್ರೂಪ್‍ನಲ್ಲಿ ಸಿಕ್ಕಿತ್ತು ಮತ್ತು ಅದರ ಬಳಕೆದಾರರು ಫೋಟೋಗೆ “ಪರಂಪರ-ಪ್ರತಿಷ್ಠ- ಅನುಶಾಸನ್” ಎಂಬ ಶೀರ್ಷಿಕೆಯನ್ನು ನೀಡಿದ್ದರು ಎಂದು ತಿಳಿಸಿದ್ದಾರೆ. “ಪರಂಪರ-ಪ್ರತಿಷ್ಠ- ಅನುಶಾಸನ್” ಮೊಹಬ್ಬತೆ ಸಿನಿಮಾದಲ್ಲಿನ ಅಮಿತಾಭ್ ಬಚ್ಚನ್ ಅವರ ಜನಪ್ರಿಯ ಸಾಲುಗಳು.
ಈ ಫೋಟೋ ಕಂಡು ನೆಟ್ಟಿಗರೊಬ್ಬರು “ಆಹ್ , ನನ್ನ ಮುದ್ದು ಗಂಗೂಬೆಕ್ಕು” ಎಂದು ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು “ನನಗೆ ಇದರ ಮೇಲೆ ಪ್ರೀತಿ ಮೂಡಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Viral News: 11 KGಯ ಬೃಹತ್ ಗೋಲ್ಡ್​ ರಿಂಗ್, ಚಿನ್ನದ ವೈನ್! ವಾವ್ ಇಲ್ಲಿವೆ ಅದ್ಭುತ ಸಂಗತಿಗಳು

ಹಿಂದಿ ಸಿನಿಮಾ ಗಂಗೂಬಾಯಿ ಕಾಥಿಯಾವಾಡಿ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಿದ್ದು, ಇಷ್ಟು ತಿಂಗಳುಗಳು ಕಳೆದರೂ, ದೇಶದಾದ್ಯಂತ ಮಾತ್ರವಲ್ಲ ವಿದೇಶದಲ್ಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಲೇ ಇದೆ.

ಸಿನಿಮಾದ ಲುಕ್‍ಗಳನ್ನು ಮರುಸೃಷ್ಟಿ ಮಾಡಿದ ಅಭಿಮಾನಿ
ಈ ಮೊದಲು, ಥಾಯ್‍ಲ್ಯಾಂಡ್‍ನ ಹಿರಿಯ ವಯಸ್ಸಿನ ಅಭಿಮಾನಿಯೊಬ್ಬರು, ಗಂಗೂಬಾಯಿ ಸಿನಿಮಾದ ಒಂದಲ್ಲ, ಎರಡು ಲುಕ್‍ಗಳನ್ನು ಮರುಸೃಷ್ಟಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಆಲಿಯಾ ಭಟ್ ಕೂಡ, ತಮ್ಮ ಆ ಹಿರಿಯ ಅಭಿಮಾನಿಯ ಆ ಪ್ರಯತ್ನವನ್ನು ಕಂಡು ಖುಷಿಯಾಗಿ, ಆಕೆಗೆ ಧನ್ಯವಾದ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಆ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದರು ಕೂಡ.

ಇದೀಗ ಬೆಕ್ಕಮ್ಮ ಕೂಡ ಗಂಗೂಬಾಯಿ ಆಗಿರುವ ಫೋಟೋವನ್ನು ನೆಟ್ಟಿಗರು, ಆಲಿಯಾ ಭಟ್‍ಗೆ ಕೂಡ ಟ್ಯಾಗ್ ಮಾಡಿದ್ದು, ಆಕೆ ಕೂಡ ಅದನ್ನು ನೋಡಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಆಲಿಯಾ ಭಟ್‍ಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ, ಅದರಲ್ಲೂ ಬೆಕ್ಕುಗಳೆಂದರೆ ಅಚ್ಚುಮೆಚ್ಚು ಎಂಬುವುದು ಆಕೆಯ ಅಭಿಮಾನಿಗಳಿಗೆಲ್ಲರಿಗೂ ತಿಳಿದೇ ಇದೆ. ಏಕೆಂದರೆ, ಆಲಿಯಾ ಅವರ ಬಳಿ ಕೂಡ ಸಾಕು ಬೆಕ್ಕುಗಳಿವೆ.

ಇದನ್ನೂ ಓದಿ:  Viral Video: ಪುಟ್ಟ ಕಂದಮ್ಮನ ಜೊತೆ ಪದವಿ ಸ್ವೀಕರಿಸಿದ ತಾಯಿ, ವಿಡಿಯೋ ವೈರಲ್

ಅವುಗಳ ಜೊತೆಗಿನ ಫೋಟೋಗಳನ್ನು ಆಲಿಯಾ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ರಣ್‍ಬೀರ್ ಕಪೂರ್ ಅವರನ್ನು ಮದುವೆಯಾದ ಸಂದರ್ಭದಲ್ಲಿ, ವಧುವಿನ ಪೋಷಾಕಿನಲ್ಲಿ ತಮ್ಮ ಮುದ್ದು ಬೆಕ್ಕಿನ ಜೊತೆ ಪೋಟೋ ಒಂದನ್ನು ತೆಗಿಸಿಕೊಂಡಿದ್ದ ಆಲಿಯಾ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟಿಗೆ “ ಕ್ಯಾಟ್ ಆಫ್ ಹಾನರ್” ಎಂಬ ಶೀರ್ಷಿಕೆಯನ್ನು ಕೂಡ ನೀಡಿದ್ದರು.
Published by:Ashwini Prabhu
First published: