Self Love: ಈ ಸ್ಟೋರಿ ಓದಿದ್ರೆ ನಿಮಗೆ ನಿಮ್ಮ ಮೇಲೆ ಲವ್ವಾಗೋದು ಗ್ಯಾರೆಂಟಿ! ಅಷ್ಟಕ್ಕೂ ಏನಿದೆ ನೋಡಿ

ನಮ್ಮನ್ನು ನಾವೇ ಪ್ರೀತಿಸಿಕೊಳ್ಳುವುದು ಜೀವನದಲ್ಲಿ ಬಲು ಅವಶ್ಯಕ ಎನ್ನಲಾಗುತ್ತದೆ. ಏಕೆಂದರೆ ಯಾವಾಗ ನಾವು ಹೀಗೆ ಮಾಡಲು ಪ್ರಾರಂಭಿಸುತ್ತೇವೆಯೋ ಆಗ ನಮಗೆ ಇನ್ನೊಬ್ಬರಲ್ಲೂ ಒಳ್ಳೆಯದೇ ಕಂಡುಬರುತ್ತದೆ. ಇದು ನಾವು ಮಾನಸಿಕವಾಗಿ ಎಷ್ಟು ಸಹಾನುಭೂತಿ ಹೊಂದಿದ್ದೇವೆ ಎಂಬುದನ್ನು ತೋರ್ಪಡಿಸುತ್ತದೆ.

ಅಲಿಶಿಯಾ ಮೆಕ್‌ಕಾರ್ವೆಲ್

ಅಲಿಶಿಯಾ ಮೆಕ್‌ಕಾರ್ವೆಲ್

  • Share this:
ಕೆನಡಾದ ಇನ್‌ಫ್ಲುಯೆನ್ಸರ್ ಅಲಿಶಿಯಾ ಮೆಕ್‌ಕಾರ್ವೆಲ್ (Alicia Mccarvell) ತಮ್ಮ ಪತಿ ಸ್ಕಾಟ್ ಮೆಕ್‌ಕಾರ್ವೆಲ್ಯೊಂದಿಗೆ ಕಡಲತೀರದಲ್ಲಿ ಕಳೆದ ಫೋಟೋಗಳನ್ನು ಉತ್ತಮ ಬರವಣಿಗೆಯೊಂದಿಗೆ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇದುವರೆಗಿನ ಪ್ರಯಾಣವು ವ್ಯಸನದಿಂದ ಕೂಡಿದ್ದರೂ ತಮ್ಮನ್ನು ತಾವು ಪ್ರೀತಿಸುವ (Love) ಅಂಶ ಈ ಬೇಸರವನ್ನು ನೀಗಿಸುತ್ತದೆ ಎಂಬುದಾಗಿ ತಾಣದಲ್ಲಿ ಹಂಚಿಕೊಂಡಿದ್ದಾರೆ.  ಫೋಟೋಗಳಲ್ಲಿ ಟಿಕ್‌ಟಾಕ್ ಸ್ಟಾರ್ ಅಲಿಶಿಯಾ ಚೀತಾ ಪ್ರಿಂಟ್ ಇರುವ ಸ್ವಿಮ್‌ಸೂಟ್ (Swimsuit) ಹಾಗೂ ಸನ್‌ಗ್ಲಾಸ್ ಧರಿಸಿದ್ದಾರೆ. ಕಡಲ ತೀರದಲ್ಲಿ ಇಬ್ಬರೂ ದಂಪತಿಗಳು ಆನಂದಮಯ ಕ್ಷಣಗಳನ್ನು ಕಳೆದಿದ್ದಾಗಿ ಅಲಿಶಿಯಾ ತಿಳಿಸಿದ್ದು ಇಬ್ಬರು ಸೆಲ್ಫಿಯನ್ನು (Selfie) ತೆಗೆದಿರುವುದನ್ನು ಪೋಸ್ಟ್‌ನಲ್ಲಿ  ಪೋಸ್ಟ್ ಮಾಡಿದ್ದಾರೆ,

ಧನಾತ್ಮಕ ಚಿಂತನೆ ನಿಮ್ಮಲ್ಲಿರಲಿ:
ದೇಹದ ಬಗೆಗಿನ ಧನಾತ್ಮಕ ಚಿಂತನೆಗಳು, ಸೆಲ್ಫ್ ಲವ್ ಹಾಗೂ ಮಾನಸಿಕ ಆರೋಗ್ಯದಂತಹ ಪ್ರಮುಖ ವಿಷಯಗಳತ್ತ ಗಮನ ಸೆಳೆಯಲು ತಮ್ಮ ಇನ್‌ಸ್ಟಾಗ್ರಾಮ್ ಪ್ಲ್ಯಾಟ್‌ಫಾರ್ಮ್ ಅನ್ನು ಬಳಸುವ ಅನೇಕ ಪ್ರಭಾವಶಾಲಿ ಇನ್‌ಪ್ಲುಯನ್ಸರ್‌ಗಳಲ್ಲಿ ಅಲಿಶಿಯಾ ಮೆಕ್‌ಕಾರ್ವೆಲ್ ಕೂಡ ಒಬ್ಬರು.

ನಾನು ನನ್ನ ಪತಿ ಕಡಲಿನಲ್ಲಿ ಈಜುತ್ತಿದ್ದರೂ ಒಂದು ರೀತಿಯ ಕೊರಗು ಹಾಗೂ ಭಾವನೆಯ ಮಿಳಿತಕ್ಕೆ ನಾನು ಒಳಗಾದೆ. ಈ ಪ್ರಯಾಣದಲ್ಲಿ ನಾವಿಬ್ಬರೂ ಎಷ್ಟೋ ಮುಂದೆ ಬಂದಿದ್ದೇವೆ. ಈ ಕುರಿತು ನನ್ನ ಪತಿ ಹಾಗೂ ನಾನು ಮಾತನಾಡುತ್ತಿದ್ದೆವು. ನನ್ನ ಪ್ರಯಾಣದ ಬಗ್ಗೆ ನನಗೆ ಹೆಮ್ಮೆ ಇದೆ. ಜೀವನದ ಕೆಲವೊಂದು ಸನ್ನಿವೇಶಗಳನ್ನು ನೆನೆದಾಗ ಒಂದು ಬಗೆಯ ದುಃಖದ ಭಾವನೆ ನನ್ನನ್ನು ಆವರಿಸಿಕೊಂಡಿದೆ. ಅದಾಗ್ಯೂ ನನ್ನ ಜೀವನವನ್ನು ನಾನು ಪ್ರೀತಿಸುತ್ತಿದ್ದೇನೆ ಮತ್ತು ಈ ಪ್ರಯಾಣವನ್ನು ಆನಂದಮಯವಾಗಿ ನಾನು ಮುನ್ನಡೆಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸೆಲ್ಫ್ ಲವ್ ಏಕೆ ಮುಖ್ಯ?
ನಮ್ಮನ್ನು ನಾವೇ ಪ್ರೀತಿಸಿಕೊಳ್ಳುವುದು ಜೀವನದಲ್ಲಿ ಬಲು ಅವಶ್ಯಕ ಎನ್ನಲಾಗುತ್ತದೆ. ಏಕೆಂದರೆ ಯಾವಾಗ ನಾವು ಹೀಗೆ ಮಾಡಲು ಪ್ರಾರಂಭಿಸುತ್ತೇವೆಯೋ ಆಗ ನಮಗೆ ಇನ್ನೊಬ್ಬರಲ್ಲೂ ಒಳ್ಳೆಯದೇ ಕಂಡುಬರುತ್ತದೆ. ಇದು ನಾವು ಮಾನಸಿಕವಾಗಿ ಎಷ್ಟು ಸಹಾನುಭೂತಿ ಹೊಂದಿದ್ದೇವೆ ಎಂಬುದನ್ನು ತೋರ್ಪಡಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಎಂದಿಗೂ ನಮಗೆ ಕೆಡುಕುಂಟು ಮಾಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳದ ಹಾಗೆ ಪ್ರೇರೇಪಿಸುತ್ತದೆ ಎಂದರೂ ತಪ್ಪಾಗಲಾರದು. ಈ ಬಗ್ಗೆಯು ಅಲಿಶಿಯಾ ಸ್ಪಷ್ಟವಾದ ನಂಬಿಕೆ ಹೊಂದಿದ್ದಾರೆಂತಲೇ ಹೇಳಬಹುದಾಗಿದೆ.

ಇದನ್ನೂ ಓದಿ: Viral Video: ದಶಕಗಳ ಹಿಂದೆ ಕಳೆದುಹೋದವರು ಮತ್ತೆ ಸಿಕ್ಕ ಅದ್ಭುತ ಕ್ಷಣ, ವಿಡಿಯೋ ನೋಡಿ

ನನ್ನನ್ನು ನಾನು ಪ್ರೀತಿಸುತ್ತೇನೆ ಮತ್ತು ನನ್ನ ದೇಹದ ಬಗ್ಗೆ ಆರಾಧನಾ ಭಾವನೆ ನನಗಿದೆ. ಸಾಮಾಜಿಕ ತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅಲಿಶಿಯಾ ತಮ್ಮ ಉತ್ತಮ ಬರವಣಿಗೆಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಿಮ್ಮ ಬರವಣಿಗೆ ನಮಗೆ ಸ್ಫೂರ್ತಿದಾಯಕ ಎಂದು ಬರೆದುಕೊಂಡಿರುವ ಅಭಿಮಾನಿಗಳು, ನಿಮ್ಮಿಬ್ಬರದೂ ಅತ್ಯುತ್ತಮ ಜೋಡಿ ಎಂದು ಬಣ್ಣಿಸಿದ್ದಾರೆ.

ನಿಮ್ಮನ್ನು ನೀವು ಪ್ರೀತಿಸುವುದು ಹೇಗೆ?
ಅಲಿಶಿಯಾ ಸೆಲ್ಫ್ ಲವ್ ಕುರಿತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವುದು ಇದು ಮೊದಲ ಬಾರಿಯಲ್ಲ. ಇವರು 886,000 ಫಾಲೋವರ್ಸ್‌ಗಳನ್ನು ಇನ್‌ಸ್ಟಾದಲ್ಲಿ ಹೊಂದಿದ್ದು ಆಂತರಿಕ ಶಾಂತಿಯನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ತಿಳಿಸುವ ಧನಾತ್ಮಕ ಫೋಟೋವನ್ನು ಹಂಚಿಕೊಂಡಿದ್ದಾರೆ. ನಿಮ್ಮನ್ನು ನೀವು ಪ್ರೀತಿಸುವುದು ಹೇಗೆ ಜೀವನವನ್ನು ಬದಲಾಯಿಸಿದೆ ಎಂಬ ಅಂಶವನ್ನು ತಿಳಿಯಪಡಿಸಿದ್ದಾರೆ. ನಿಮ್ಮ ಕೆಲಸ ಆ ದಿನವನ್ನು ಪ್ರತಿಬಿಂಬಿಸಲಿ. ಸಂತೋಷಮಯವಾಗಿ ಪ್ರತೀ ದಿನವನ್ನು ಕಳೆಯಿರಿ. ಯಾವುದೇ ದುಃಖ, ನಿರಾಸೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಎದುರಿಸದಿರಿ.

ಇದನ್ನೂ ಓದಿ:  Arthur: 8 ಹೆಂಡತಿಯರಿಗೆ ಬಂಗಲೆ ನಿರ್ಮಿಸುತ್ತಿರುವ ದೇವರಂಥಾ ಗಂಡ! ಅವರೊಂದಿಗೆ ಮುದ್ದಾಡಲು ಟೈಂ ಟೇಬಲ್​ ಕೂಡ ಫಿಕ್ಸ್ 

ಕೆಲವೊಂದು ವಿಷಯಗಳು ಜೀವನದಲ್ಲಿ ಅಷ್ಟೊಂದು ಪ್ರಮುಖವಾದುದಲ್ಲ ಎಂಬುದಾಗಿ ಕಾಣಿಸಬಹುದು ಆದರೆ ಇಂತಹವೇ ದೊಡ್ಡ ವಿಷಯಗಳಿಗೆ ಬುನಾದಿಯಾಗಿವೆ ಎಂದು ಅಲಿಶಿಯಾ ಬರೆದುಕೊಂಡಿದ್ದಾರೆ. ಬೆಳಗ್ಗೆ ಎದ್ದೊಡನೆ ನಿಮ್ಮ ಹಾಸಿಗೆಯನ್ನು ವ್ಯವಸ್ಥಿತವಾಗಿರಿಸುವುದು ನೀವು ಸಂಘಟಿತರು ಹಾಗೂ ಸ್ಥಿರವಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಉತ್ತಮ ಸಲಹೆಯನ್ನು ನೀಡುವುದು ನೀವೊಬ್ಬ ಸಹಾನುಭೂತಿಯುಳ್ಳವರು ಅಂತೆಯೇ ಕೇಳುಗರು ಎಂಬುದನ್ನು ತೋರಿಸುತ್ತದೆ. ಓದಲು ಸಮಯ ಮೀಸಲಿರಿಸುವುದು ನಿಮಗಾಗಿ ಸಮಯ ಹೊಂದಿಸಲು ನೀವು ಸಮರ್ಥರು ಎಂಬುದನ್ನು ತಿಳಿಯಪಡಿಸುತ್ತದೆ ಎಂದು ಅಲಿಶಿಯಾ ಹೇಳಿದ್ದಾರೆ.
Published by:Ashwini Prabhu
First published: