• Home
  • »
  • News
  • »
  • trend
  • »
  • Indian Army: ಭಾರತೀಯ ಸೇನೆಯನ್ನೇ ಮದ್ವೆಗೆ ಆಹ್ವಾನಿಸಿದ ವಧು-ವರ! ಗಡಿಯಿಂದಲೇ ಬಂತು ಶುಭಸಂದೇಶ!

Indian Army: ಭಾರತೀಯ ಸೇನೆಯನ್ನೇ ಮದ್ವೆಗೆ ಆಹ್ವಾನಿಸಿದ ವಧು-ವರ! ಗಡಿಯಿಂದಲೇ ಬಂತು ಶುಭಸಂದೇಶ!

ಭಾರತೀಯ ಸೇನೆಗೆ ಆಹ್ವಾನ ನೀಡಿದ ವಧು-ವರ

ಭಾರತೀಯ ಸೇನೆಗೆ ಆಹ್ವಾನ ನೀಡಿದ ವಧು-ವರ

ಕೇರಳದ ವಧು-ವರ ಕಾರ್ತಿಕಾ ಹಾಗೂ ರಾಹುಲ್ ಎಂಬುವರು ಭಾರತೀಯ ಸೇನೆಯನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಭಾರತೀಯ ಸೇನೆಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ಆಹ್ವಾನ ಪತ್ರಿಕೆಯನ್ನು ಹಂಚಿಕೊಳ್ಳಲಾಗಿದೆ.

  • Trending Desk
  • Last Updated :
  • Kerala, India
  • Share this:

    ಕೇರಳ: ನಾವೆಲ್ಲರೂ ರಾತ್ರಿ ಹೊತ್ತಿನಲ್ಲಿ ನಮ್ಮ ಮನೆಯಲ್ಲಿ (Our Home) ನೆಮ್ಮದಿಯಾಗಿ ನಿದ್ರಿಸುತ್ತಿದ್ದೇವೆ (Sleeping) ಮತ್ತು ನಮ್ಮ ದೇಶದಲ್ಲಿ ನಾವು ನೆಮ್ಮದಿಯಾಗಿ ಜೀವನವನ್ನು ನಡೆಸುತ್ತಿದ್ದೇವೆ ಅಂತ ಹೇಳಿದರೆ ಅದಕ್ಕೆ ಕಾರಣ ನಮ್ಮ ದೇಶದ ಯೋಧರು (soldiers). ಏಕೆಂದರೆ ಅವರು ಹಗಲು-ರಾತ್ರಿ ಮತ್ತು ಮಳೆ-ಚಳಿ-ಬಿಸಿಲು ಹೀಗೆ ಯಾವುದನ್ನೂ ಲೆಕ್ಕಿಸದೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶದ ಸುರಕ್ಷತೆಗಾಗಿ ದೇಶದ ಗಡಿ ಭಾಗದಲ್ಲಿ (border) ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ನಮ್ಮ ಯೋಧರಿಗೆ ಎಷ್ಟೇ ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ. ನಮ್ಮ ನೆರೆಹೊರೆಯ ಶತ್ರು ದೇಶಗಳಿಂದ ನಮ್ಮ ದೇಶವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿಕೊಂಡು ಹೋಗುವಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿಭಾಯಿಸುತ್ತಿರುವಂತಹ ಯೋಧರ ತ್ಯಾಗ (sacrifices) ತುಂಬಾನೇ ದೊಡ್ಡದು, ಹೀಗಾಗಿ ಅವರಿಗೆ ಸೆಲ್ಯೂಟ್ (salute) ಹೊಡೆಯಲೇ ಬೇಕು. ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡುವ ಯೋಧರಿಗೆ ನಮ್ಮ ಸಂಭ್ರಮಾಚರಣೆಯಲ್ಲಿಯೂ ಸಹ ಪಾಲ್ಗೊಳ್ಳುವ ಆ ಸುಸಂದರ್ಭಗಳನ್ನು ನೀಡುವುದು ಅವರಿಗೆ ನಾವು ಕೊಡುವ ಗೌರವ ಅಂತ ಹೇಳಬಹುದು. ಆದರೆ ಅದು ಕಷ್ಟ ಸಾಧ್ಯ.


    ಭಾರತೀಯ ಸೇನೆಯನ್ನೇ ಮದುವೆಗೆ ಆಹ್ವಾನಿಸಿದ ನವ ಜೋಡಿ


    ಕೇರಳ ದಂಪತಿಗಳು ಇಡೀ ಭಾರತೀಯ ಸೇನೆಯನ್ನೇ ತಮ್ಮ ಮದುವೆಗೆ ಆಹ್ವಾನಿಸಿದ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ. ಕೇರಳದ ದಂಪತಿಗಳು ತಮ್ಮ ಮದುವೆಗೆ ನೂರಾರು ಅತಿಥಿಗಳನ್ನು ಕರೆಯುವ ಬದಲು ದೇಶದ ಗಡಿಯಲ್ಲಿ ಗಸ್ತು ತಿರುಗುತ್ತಿರುವ ಧೈರ್ಯಶಾಲಿ ಯೋಧರಿಗೆ ಧನ್ಯವಾದ ಹೇಳಲು ನಿರ್ಧರಿಸಿದ್ದಾರೆ. ಅವರನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಈ ದಂಪತಿಗಳ ಪ್ರಶಂಸನೀಯ ಕೆಲಸ ನೆಟ್ಟಿಗರಿಂದ ತುಂಬಾನೇ ಮೆಚ್ಚುಗೆಗೆ ಪಾತ್ರವಾಗಿದೆ.


    A bride and groom invited the entire Indian Army to their wedding in Kerala, and the invitation card has now gone viral
    ವೈರಲ್ ಆದ ಆಹ್ವಾನ ಪತ್ರಿಕೆ


    ಮದುವೆ ಆಮಂತ್ರಣ ಪತ್ರಿಕೆ ಹಂಚಿಕೊಂಡ ಭಾರತೀಯ ಸೇನೆ


    ಕೇರಳದ ವಧು-ವರ ಕಾರ್ತಿಕಾ ಹಾಗೂ ರಾಹುಲ್ ಎಂಬುವರು ಭಾರತೀಯ ಸೇನೆಯನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಭಾರತೀಯ ಸೇನೆಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ರಾಹುಲ್ ಮತ್ತು ಕಾರ್ತಿಕಾ ಅವರು ಕಳುಹಿಸಿದ ಮದುವೆ ಆಮಂತ್ರಣ ಪತ್ರಿಕೆಯ ಫೋಟೋವನ್ನು ತೆಗೆದುಕೊಂಡು ಅದನ್ನು ಹಂಚಿಕೊಳ್ಳಲಾಗಿದೆ.


    ರಾಹುಲ್-ಕಾರ್ತಿಕಾ


    ಇದನ್ನೂ ಓದಿ: Men Will Be Men: ಹಾಡು ಹೇಳಿಯೇ 19ರ ಹುಡುಗಿಯ ಮನಗೆದ್ದ 70ರ ಅಜ್ಜ! ಮನೆಯವರ ವಿರೋಧದ ನಡುವೆ ಪ್ರೇಮವಿವಾಹ!


    ಯೋಧರಿಗೆ ವಧು-ವರರಿಂದ ಪ್ರೀತಿಯ ಆಹ್ವಾನ


    "ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಾವು ನಿಮಗೆ ತುಂಬಾನೇ ಕೃತಜ್ಞರಾಗಿದ್ದೇವೆ. ನಿಮ್ಮಿಂದಾಗಿ, ನಾವು ರಾತ್ರಿ ಹೊತ್ತಿನಲ್ಲಿ ಶಾಂತಿಯುತವಾಗಿ ಮಲಗುತ್ತೇವೆ. ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದ ದಿನಗಳನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮಿಂದಾಗಿ, ನಾವು ಸಂತೋಷದಿಂದ ಮದುವೆಯಾಗುತ್ತಿದ್ದೇವೆ. ನಮ್ಮ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ನಾವು ತುಂಬಾ ಸಂತೋಷಪಡುತ್ತೇವೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದವನ್ನು ನಾವು ಬಯಸುತ್ತೇವೆ" ಎಂದು ಆಹ್ವಾನದೊಂದಿಗೆ ಕಳುಹಿಸಲಾದ ಟಿಪ್ಪಣಿಯಲ್ಲಿ ಬರೆಯಲಾಗಿದೆ.


    ಶುಭ ಹಾರೈಸಿದ ಭಾರತೀಯ ಸೇನೆ


    ಭಾರತೀಯ ಸೇನೆಯು ಕೃತಜ್ಞತೆಯ ಸಂದೇಶದೊಂದಿಗೆ ಆಹ್ವಾನವನ್ನು ಹಂಚಿಕೊಂಡಿದೆ. "'ಶುಭ ಹಾರೈಕೆಗಳು' ಭಾರತೀಯ ಸೇನೆಯು ತನ್ನ ಕಡೆಯಿಂದ ರಾಹುಲ್ ಮತ್ತು ಕಾರ್ತಿಕಾ ಅವರಿಗೆ ಮದುವೆಯ ಆಮಂತ್ರಣಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತದೆ ಮತ್ತು ದಂಪತಿಗಳಿಗೆ ತುಂಬಾ ಸಂತೋಷದ ಮತ್ತು ಆನಂದದಾಯಕ ವೈವಾಹಿಕ ಜೀವನಕ್ಕೆ ಶುಭ ಹಾರೈಸುತ್ತದೆ" ಎಂದು ಶೀರ್ಷಿಕೆಯಲ್ಲಿ ಬರೆದಿದೆ.


    ಇದನ್ನೂ ಓದಿ: Viral Story: ಪ್ರೇಮಿಗಾಗಿ ಗಡಿ ದಾಟಿ ಬಂದ 83ರ ಅಜ್ಜಿ! ಆಕೆಯನ್ನು ಮದ್ವೆಯಾದ ಹುಡುಗನ ವಯಸ್ಸು 28!


    ಪೋಸ್ಟ್ ಗೆ 86 ಸಾವಿರಕ್ಕೂ ಹೆಚ್ಚು ಲೈಕ್ಸ್


    ಈ ಪೋಸ್ಟ್ 86 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ಆಹ್ವಾನವು ದಂಪತಿಗಳಿಂದ ಹೇಗೆ ಅತ್ಯಂತ ಉದಾರವಾದ ಸನ್ನೆಯಾಗಿದೆ ಎಂಬುದರ ಬಗ್ಗೆ ಕೆಲವರು ಬರೆದರೆ, ಇನ್ನು ಕೆಲವರು ಭಾರತೀಯ ಸೇನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಗಮನ ಸೆಳೆದರು.

    Published by:Annappa Achari
    First published: