Viral Video: 3 ಹುಲಿಗಳಿಗೆ ಸೆಡ್ಡು ಹೊಡೆದ ಬೆಕ್ಕು.. ಬದುಕಿ ಬಂದಿದ್ದೇ ರಣ ರೋಚಕ!

Viral Video: ಇಲ್ಲಿ ಬೆಕ್ಕೊಂದು, ಒಂದಲ್ಲ.. ಎರಡಲ್ಲ.. ಮೂರು ಹುಲಿಗಳಿಗೆ ಸೆಡ್ಡು ಹೊಡೆದು  ಬದುಕಿ ಬಂದಿದೆ. ಹೌದು, ಈ ರೋಮಾಂಚನಕಾರಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹುಲಿಗಳ ಜೊತೆ ಹೋರಾಡಿ ಬದುಕಿದ ಬೆಕ್ಕು

ಹುಲಿಗಳ ಜೊತೆ ಹೋರಾಡಿ ಬದುಕಿದ ಬೆಕ್ಕು

  • Share this:
    ಪ್ರತಿದಿನ ಒಂದಲ್ಲ ಒಂದು ವಿಡಿಯೋ(Video)ಗಳು  ವೈರಲ್(Viral)​ ಆಗುತ್ತಲೇ ಇರುತ್ತವೆ. ಕೆಲವೊಂದು ನಮಗೆ ಆಶ್ಚರ್ಯ ತರಿಸಿದರೆ, ಮತ್ತೆ ಕೆಲವು ವಿಡಿಯೋಗಳು ಭಯ ಹುಟ್ಟಿಸುತ್ತೆ. ಇಲ್ಲೂ ಅಂಥದ್ದೇ ಒಂದು ವಿಡಿಯೋ ಸಖತ್​ ವೈರಲ್​ ಆಗಿದೆ. ಆ ವಿಡಿಯೋವನ್ನು  ಸ್ವತಃ ದುಬೈ ದೊರೆ(Dubai King)ಯ ಪುತ್ರಿಯಲ್ಲಿ ಒಬ್ಬರಾದ ಶೇಖ್​ ಲತೀಫಾ(Shek Latifaa) ಅವರು ಶೇರ್​ ಮಾಡಿದ್ದಾರೆ. ಕಾಡು ಪ್ರಾಣಿಗಳು(Wild animals) ಎಷ್ಟು ಕ್ರೂರ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಈ ಹುಲಿ(Tiger)ಗಳು ಮಾತ್ರ ಅಬ್ಬಬ್ಬಾ ಭಾರೀ ಡೇಂಜರ್(Danger)​.. ಆದರೆ ದುಬೈನಲ್ಲಿ, ಹುಲಿ, ಸಿಂಹಗಳನ್ನು ಸಾಕು ಪ್ರಾಣಿಗಳಂತೆ ಜೊತೆಯಲ್ಲೇ ಇಟ್ಟುಕೊಳ್ಳುತ್ತಾರೆ. ಭಾರತದಲ್ಲಿ ಬೆಕ್ಕು(Cat)ಗಳನ್ನು ಹೆಚ್ಚು ಸಾಕಲಾಗುತ್ತೆ. ಹೀಗೆ ಹುಲಿ ಮತ್ತು ಬೆಕ್ಕು ಕಾದಾಟ ಮಾಡಲು ಸಾಧ್ಯವೇ. ಗಾತ್ರದಲ್ಲಿ ಬೆಕ್ಕು ತುಂಬ ಸಣ್ಣ. ಆದರೆ ಹುಲಿಗಳ ಗಾತ್ರ ದೊಡ್ಡದು. ಬೆಕ್ಕಿಗೂ, ಹುಲಿಗೂ ಕಾದಾಟ ಅಂದರೆ ಯಾರು ನಂಬುವುದಿಲ್ಲ. ಇದು ಸಾಧ್ಯನೂ ಇಲ್ಲ ಅನ್ನುತ್ತಾರೆ. ಆದರೆ ಇಲ್ಲಿ ಬೆಕ್ಕೊಂದು, ಒಂದಲ್ಲ.. ಎರಡಲ್ಲ.. ಮೂರು ಹುಲಿಗಳಿಗೆ ಸೆಡ್ಡು ಹೊಡೆದು  ಬದುಕಿ ಬಂದಿದೆ. ಹೌದು, ಈ ರೋಮಾಂಚನಕಾರಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗೈನಲ್ಲಿ ಹಿಡಿಯಬಹುದಾದ ಚಿಕ್ಕ ಬೆಕ್ಕೊಂದು ಮೂರು ಹುಲಿಗಳ ಕೈಗೆ ಸಿಕ್ಕು, ಬಳಿಕ ಅವುಗಳಿಂದ ತಪ್ಪಿಸಿಕೊಂಡು ಬಂದಿದೆ. ನಿಮ್ಮ ಎದೆ ಝಲ್​ ಎನ್ನಿಸುವ ವಿಡಿಯೋ ಇಲ್ಲಿದೆ ನೋಡಿ.

    3 ಹುಲಿಗಳ ಜೊತೆ ಬೆಕ್ಕಿನ ಕಾದಾಟ!

    3 ಹುಲಿಗಳಿರುವ ಕೇಜ್​ನೊಳಗೆ ಬೆಕ್ಕೊಂದು ನುಗ್ಗಿದೆ. ತನಗೆ ಅರಿವಿಲ್ಲದೇ ಹುಲಿಗಳ ಬಳಿ ಬಂದಿದೆ. ಬೆಕ್ಕನ್ನು ಕಂಡ ಕೂಡಲೇ ಬಿಳಿ ಹುಲಿಯೊಂದು ಮೊದಲು ಓಡಿ ಬಂದು ಅದನ್ನು ಬಾಯಿಯಲ್ಲಿ ಕಚ್ಚಿ ಕರೆದ್ಯೊಯ್ದಿದೆ. ಬಳಿಕ ಅಲ್ಲೇ ಇದ್ದ ಮತ್ತೆರಡು ಹುಲಿಗಳು ಬೆಕ್ಕಿನ ಮರಿಯನ್ನು ಸುತ್ತುವರಿದಿದೆ. ದೊಡ್ಡ ಗಾತ್ರದ ಮೂರು ಬಿಳಿ ಹುಲಿಗಳು ಇದ್ದರೂ, ಬೆಕ್ಕು ಕೊಂಚ ಕೂಡ ಅಂಜದೇ ಹೋರಾಟ ಮಾಡಿದೆ. ಇಲ್ಲಿಂದ ತಪ್ಪಿಸಿಕೊಂಡು ಅಲ್ಲಿ, ಅಲ್ಲಿಂದ ತಪ್ಪಿಸಿಕೊಂಡು ಇಲ್ಲಿಗೆ ಓಡಿ ಹೋರಾಟ ಮಾಡಿದೆ. ಈ ವಿಡಿಯೋವನ್ನು ನೋಡಿದರೇ, ನಿಜಕ್ಕೂ ರೋಮಾಂಚನವಾಗುವುದು ಗ್ಯಾರಂಟಿ. ಮೂರು ಹುಲಿಗಳು ಆ ಬೆಕ್ಕನ್ನು ಸುತ್ತಿವರಿದಿದ್ದರು, ಬೆಕ್ಕಿನ ಮರಿ ತನ್ನ ಪಂಜದಿಂದ ಹುಲಿಗಳಿಗೆ ಪರಚಲು ಮುಂದಾಗಿದೆ.




    ಇದನ್ನು ಓದಿ: ಸರಸರನೇ ಬಂದು ಗಟಗಟನೇ ನೀರು ಕುಡಿದ ಹಾವು: ಮೈ ಜುಮ್ಮೆನ್ನುವ ವಿಡಿಯೋ ನೋಡಿ

    ಕೊನೆಗೆ ಸಿಬ್ಬಂದಿಯಿಂದ ಬೆಕ್ಕಿನ ರಕ್ಷಣೆ!

    ಹುಲಿಗಳ ಆರ್ಭಟಕ್ಕೆ ಕೊಂಚವು ಬೆಕ್ಕಿನ ಮರಿ ಬೆದರಿಲ್ಲ. ಬದಲಾಗಿ ಅವುಗಳ ಎದುರು ಹೋರಾಟ ನಡೆಸಿದೆ. ಹುಲಿಗಳು ಘರ್ಜಿಸಿದರು, ಬೆಕ್ಕು ಮಿಯಾಂವ್​ ಅನ್ನುತ್ತಲೇ ಕಾದಾಡಿದೆ. ಕೊನೆಗೆ 3 ಹುಲಿಗಳು ಮತ್ತೆ ಆ ಬೆಕ್ಕನ್ನು ಬಾಯಿಯಲ್ಲಿ ಕಚ್ಚಿ ಮತ್ತೊಂದೆಡೆ ಎಳೆದುಕೊಂಡು ಹೋಗಿದೆ. ಕೂಡಲೇ ಅಲ್ಲಿದ್ದ ಸಿಬ್ಬಂದಿ ಒಳಗೆ ಓಡಿಬಂದಿದ್ದಾರೆ. ಆ ಬೆಕನ್ನು ಮೂರು ಹುಲಿಗಳಿಂದ ರಕ್ಷಣೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್  ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ದುಬೈನ ಯುವರಾಣಿ ಲತೀಫಾ ರಶೆದ್​ ಅಲ್​ ಮಕ್ತೌಮ್​ ಅವರು ಹಂಚಿಕೊಂಡಿದ್ದಾರೆ.

    ಇದನ್ನು ಓದಿ : ಪಾರ್ಸೆಲ್ ಮೇಲೆ ಮೊಬೈಲ್ ಸಂಖ್ಯೆ ಬರೆಯಬೇಡಿ! ಈ ಯುವತಿಗೆ ಎದುರಿಸಿದ ಸಮಸ್ಯೆಯೇ ಇದಕ್ಕೆ ದೊಡ್ಡ ಉದಾಹರಣೆ!

    ಪ್ರಾಣಿಪ್ರಿಯೆ ಈ ದುಬೈ ಯುವರಾಣಿ!

    ಈ  ಘಟನೆ ನಡೆದಿರುವುದು ಯುವರಾಣಿ ಅವರ ಅರಮನೆಯಲ್ಲಿ. ಶೇಖಾ ಲತೀಫಾ ಅವರು ಹಲವಾರು ವಿಲಕ್ಷಣ ಸಾಕುಪ್ರಾಣಿಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ. ತನ್ನ ಇನ್‌ಸ್ಟಾಗ್ರಾಮ್ ಬಯೋದಲ್ಲಿ, ಪ್ರಾಣಿ ಪ್ರೇಮಿ ಮತ್ತು ತನ್ನ ಖಾತೆಯಲ್ಲಿನ ಹೆಚ್ಚಿನ ಪೋಸ್ಟ್‌ಗಳು ತನ್ನ ಸಾಕುಪ್ರಾಣಿಗಳನ್ನು ಒಳಗೊಂಡಿದೆ. ಹೀಗೆ ತಾವು ಸಾಕಿರುವ ಹುಲಿಗಳ ಕೇಜ್​ನೊಳಗೆ ತಮ್ಮ ಬೆಕ್ಕೇ ನುಗ್ಗಿದೆ. ಆ ಬೆಕ್ಕನ್ನು ರಕ್ಷಿಸಿ ಯುವರಾಣಿ ಪೋಸ್ಟ್​ ಹಾಕಿದ್ದಾರೆ.  "ಈ ಪುಟ್ಟ ಬೆಕ್ಕು ದಾರಿತಪ್ಪಿ ಹುಲಿಗಳ ಆವರಣಗಳಲ್ಲಿ ಸಿಲುಕಿತು.ಬಳಿಕ ರಕ್ಷಣೆ ಮಾಡಲಾಗಿದೆ. ಕೆಚ್ಚೆದೆಯ ಪವಾಡ ಕಿಟನ ರಕ್ಷಿಸಲ್ಪಟ್ಟ ನಂತರ ಅದು ಆರಾಮಾಗಿ ಇದೆ. ಇನ್ನೂ ಮುಂದೆ ಎಂದೂ ಈ ಬೆಕ್ಕಿನ ಮರಿ ದಾರಿ ತಪ್ಪುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
    Published by:Vasudeva M
    First published: