• Home
  • »
  • News
  • »
  • trend
  • »
  • Viral Photo: ಗಾಳಿಯಲ್ಲಿ ತೇಲುವಾಸೆ ಅಂತ ಆಡ್ತಾ ಇದ್ದ ಹುಡುಗನಿಗೆ ಏನಾಯ್ತು ನೋಡಿ!

Viral Photo: ಗಾಳಿಯಲ್ಲಿ ತೇಲುವಾಸೆ ಅಂತ ಆಡ್ತಾ ಇದ್ದ ಹುಡುಗನಿಗೆ ಏನಾಯ್ತು ನೋಡಿ!

ಹುಚ್ಚಾಟವನ್ನು ಆಡುತ್ತಾ ಇರುವ ಯುವಕ

ಹುಚ್ಚಾಟವನ್ನು ಆಡುತ್ತಾ ಇರುವ ಯುವಕ

Viral Photo: ಹುಚ್ಚಾಟಗಳು ಜೀವನದಲ್ಲಿ ಇರಬೇಕು. ಆದರೆ, ಹುಚ್ಚೇ ಜೀವನವಾಗಬಾರದು. ಅದರಲ್ಲಿಯೂ ಈ ರೀಲ್ಸ್ ವಿಡಿಯೋಗಳನ್ನು ಮಾಡುವ ಸಮಯದಲ್ಲಿ ಎಚ್ಚರವಹಿಸಬೇಕು. ಯಾವ ಜಾಗದಲ್ಲಿ ವಿಡಿಯೋ ಮಾಡ್ಬೇಕು ಎಂಬ ಅರಿವು ಇರಲೇಬೇಕು.

  • Share this:

ಹಿಂದೆ ಒಂದು ಕಾಲ ಇತ್ತು. ನಾನು ಫಿಲ್ಮ್ ಇಂಡಸ್ಟ್ರಿಯಲ್ಲಿ (Film Industry) ಮೆರಿಬೇಕು. ನಾಯಕ / ನಾಯಕಿ ಆಗ್ಬೇಕು, ದೊಡ್ಡ ಸ್ಕ್ರೀನ್​ಗಳಲ್ಲಿ ಕಾಣ್ಬೇಕು ಅಂತ. ಆದಕ್ಕಾಗಿ ಹಲವಾರು ಆಡಿಷನ್​ಗಳನ್ನು ಕೂಡ ನೀಡುತ್ತಾ ಇದ್ದರು. ಫ್ಲಾಪ್ ಆದರೆ ಮತ್ತೊಂದು ಮಗದೊಂದು ಆಡಿಷನ್​ಗಳಿಗೆ (Audition) ಹೋಗುತ್ತಿದ್ದರು. ಆದರೆ, ಯಾವಾಗ ಮೊಬೈಲ್​ನಲ್ಲಿಯೇ ಟಿಕ್​ಟಾಕ್​, ಡಬ್ಬಿಂಗ್​ಗಳು ಆರಂಭವಾದವೋ ಅಲ್ಲಿಂದ ಮನೆ ಮನೆಗಳಲ್ಲಿ ನಟರಯ, ನಟಿಯರು ಹುಟ್ಟಿದರು. ಟಿಕ್​ಟಾಕ್​ ಬ್ಯಾನ್ ಆದಾಗ ಜೀವನನೇ ಹೋಯ್ತು ಅನ್ನುವ ಹಾಗೆ ರಿಯಾಕ್ಟ್​ ಆಗಿದ್ರು. ತದನಂತರ ರೀಲ್ಸ್​ಗಳು ಆರಂಭವಾದ್ವು. ಹೌದು, ಇವೆಲ್ಲ ಒಂದು ರೀತಿಯ ಪ್ಯಾಷನ್. ಇದರಿಂದ ಎಷ್ಟೋ ಜನರಿಗೆ ಸಿನಿಮಾ, ಧಾರವಾಹಿ ಇಂಡಸ್ರ್ಟಿಗಳ್ಲಿ ಅವಕಾಶ ಸಿಕ್ಕಿದ್ವು. ಆದರೆ ಇದು ಅತರೇಖವಾಗಬಾರದು.


ರೀಲ್ಸ್​ ಮಾಡಿ ಅದರಿಂದ ಲೈಕ್ಸ್​ ಮತ್ತು ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ಳಲು ಹುಚ್ಚಾಟಗಳನ್ನು ಮಾಡುವುದು ಅತಿರೇಖ ಅಂತ ಹೇಳಿದ್ರೂ ತಪ್ಪಾಗಲಾರದು.ಯಾಕೆಂದರೆ ಬೆಟ್ಟದ ತುದಿಯಲ್ಲಿ ನಿತ್ತು ರೀಲ್ಸ್​ ಮಾಡಲು ಹೋಗಿ ಸತ್ತಿದ್ದು ಉದಾಹರಣೆಗಳಿವೆ. ಹಾಗೆಯೇ ತಿರುಚಿತ್ರಂಬಲಂ ಚಿತ್ರದ ಟ್ರೆಂಡಿಂಗ್ ಸಾಂಗ್ ಪರಕ್ ಪರಕ್ ಈ ಹಾಡಿಗೆ ಟ್ರಾಫಿಕ್ ಸಿಗ್ನಲ್​ನಲ್ಲಿಯೂ ಡ್ಯಾನ್ಸ್ ಮಾಡಿದ್ದಾನೆ. ಇಂತಹ ಅದೆಷ್ಟೋ ಉದಾಹರಣೆಗಳು ದಿನಿನತ್ಯ ಜೀವನದಲ್ಲಿ ನಾವು ಕಾಣಬಹುದು.


ಇವುಗಳನ್ನ ಕೇಳ್ತಾ ಇದ್ರೇನೆ ಎದೆ ಝಲ್ ಅನ್ನುತ್ತೆ. ಯಾಕೆಂದ್ರೆ ಕೇವಲ ವಿಡಿಯೋಗೋಸ್ಕರ ಪ್ರಾಣ ಹೋಗುತ್ತೆ ಅಂದ್ರೆ ತಮಾಷೆಯ ಮಾತೇ ಅಲ್ಲ.ಇಷ್ಟೆಲ್ಲಾ ಯಾಕೆ ಹೇಳ್ತಾ ಇರೋದು ಅಂದ್ರೆ ಇಲ್ಲೊಬ್ಬ ತನ್ನ ಹುಚ್ಚಾಟದಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.


ಇದನ್ನೂ ಓದಿ: ಮೂರು ಹಾವುಗಳೊಂದಿಗೆ ಯುವಕನ ಹುಚ್ಚಾಟ! ವಿಷ ಸರ್ಪದ ದಾಳಿಯ ಭಯಾನಕ ವಿಡಿಯೋ ಇಲ್ಲಿದೆ


ಏನಿದು ವಿಷಯ?
ರೈಲಿನ ಬಾಗಿಲಿನಲ್ಲಿ ಹೊರಗೆ ನೋಡುತ್ತಾ ನಿಸರ್ಗದ ಸೌಂದರ್ಯವನ್ನು ಸವಿಯುವುದೇ ಚೆಂದ. ರೈಲು ಚಾಲ್ತಿಯಲ್ಲಿರುವಾಗ ಎಷ್ಟು ವೇಗವಾಗಿ ಇರುತ್ತದೆ ಎಂದು ನಿಮಗೇ ಗೊತ್ತು. ಅದೇ ಬಸ್ಸಿನಲ್ಲಿ ಜೋತಾಡುವ ಹಾಗೆ ರೌಲಿನ ಬಾಗಿಲಿನಲ್ಲಿ ಜೋತಾಡುವುದು, ನಮ್ಮ ಸಾವನ್ನು ನಾವೇ ಬಾ ಎಂದು ಆಹ್ವಾನ ನೀಡಿದ ಹಾಗೆ.


ಇಲ್ಲೊಬ್ಬ ಯುವಕ ವಿಡಿಯೋ ಮಾಡಲು ಎಷ್ಟೆಲ್ಲಾ ಸ್ಟಂಟ್​ಗಳನ್ನು ಮಾಡುತ್ತಾನೆ. ಅದು ಅವನು ರೈಲಿನ ಕಂಬಿಯನ್ನು ಹಿಡಿದು ವಾಲಿಕೊಂಡು ಆಟ ಆಡ್ತಾ ಇರ್ತಾನೆ. ಬಹಳಷ್ಟು ದೂರಗಳ ಕಾಲ ಇದೇ ಆಟವನ್ನು ಮುಂದುವರೆಸುತ್ತಿರುತ್ತಾನೆ. ಆದರೆ ಅವತ್ತೇ ಅವನ ಕೊನೆಯ ಆಟವಾಯ್ತು. ಯಾಕೆಂದ್ರೆ ಕೆಲ ದೂರಗಳ ಸಾಗಿದ ನಂತರ ಅವನು ತನ್ನ ಕಾಲನ್ನು ನೋಡಿಕೊಳ್ತಾ ಕಂಬಿಯಲ್ಲಿ ವಾಲ್ತಾ ಇರುವಾಗ ಒಂದು ಕಂಬವು ರಭಸದಿಂದ ಕುಟ್ಟಿ, ಯುವಕ ಹಾರಿ ರೈಲಿನ ಭೋಗಿಯ ಮೇಲೆ ಬಿದ್ದು ಉರುಳಿಕೊಂಡು ಹೋಗುತ್ತಾನೆ.


ಆಗ ವಿಡಿಯೋಗ್ರಾಫರ್ ವಿಡಿಯೋವನ್ನು ಆಫ್ ಮಾಡ್ತಾನೆ. ಆ ಯುವಕ ಮಾಡುತ್ತಿದ್ದ ಸರ್ಕಸ್ ನೋಡಿದ್ರೆ ಒಳಗೆ ಬಾ ಮಾರಾಯ ಸಾಕು ಅಂತ ಹೇಳ್ಬೇಕು ಅನ್ಸುತ್ತೆ. ಆದರೆ, ವಿಡಿಯೋಗ್ರಾಫರ್ ತನ್ನ ಪಾಡಿಗೆ ತಾನು ಆತನ ಹುಚ್ಚು ವಿಡಿಯೋ ಮಾಡುತ್ತಾ ಇರುತ್ತಾನೆ.


ಇದನ್ನೂ ಓದಿ: Malpe Beachನಲ್ಲಿ ಸೆಲ್ಫಿ ಹುಚ್ಚಾಟ, ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು


ಮೊದಲೇ ವಿಡಿಯೋ ಆಫ್ ಮಾಡಿದ್ರೆ ಒಂದು ಪ್ರಾಣ ಉಳಿತಾ ಇತ್ತು. ಅವನ ಹುಚ್ಚು ಆಟವೂ ಕೂಡ ಸ್ವಲ್ಪ ಸಮಯದ ತನಕ ಮಾತ್ರವಾಗಿದ್ದರೆ ಉಳಿತಿದ್ದ. ಹಣೆಬರಹವನ್ನು ತಪ್ಪಿಸಲು ಅಸಾಧ್ಯ. ಆದರೆ, ಇಂತಹ ಮುಂಡಾಟಗಳನ್ನು ತಪ್ಪಿಸಲು ಹಣೆಬರಹವನ್ನು ದೂರಬಾರದು. ಈ ಫೋಟೋ ನೀವು ನೋಡ್ತಾ ಇದ್ರೆ ಬಹುಶಃ ರೈಲು ಹತ್ತೋಕು ಭಯ ಆಗ್ಬೋದು.

First published: