ಟಿಕ್ ಟಾಕ್ (Tiktok) ಬ್ಯಾನ್ ಆದ ನಂತರ ಅದೆಷ್ಟೋ ಹೊಸ ಹೊಸ ಆಪ್ಗಳು ಪ್ಲೇಸ್ಟೋರ್ಗಳಲ್ಲಿ ಬಂದವು. ಇನ್ಸ್ಟಾಗ್ರಾಮ್ ಕೂಡ ನವೀಕೃತಗೊಂಡಿತು. ಇದರಲ್ಲಿಯೂ ಕೂಡ ರೀಲ್ಸ್, ಡಬ್ಬಿಂಗ್ (Dubbing) ಮಾಡುವ ಆಪ್ಷನ್ಗಳು ಬರತೊಡಗಿದವು. ರೀಲ್ಸ್ ಮಾಡುವ ಜನರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದ್ದಾರೆ. ಇದು ಆಕ್ಟಿಂಗ್ನಲ್ಲಿ (Acting) ಇಂಟ್ರೆಸ್ಟಿಂಗ್ ಇದ್ದು ಯಾವುದೇ ಅವಕಾಶಗಳು ಸಿಗದೇ ಇದ್ದವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ತಮಗೆ ಬೇಕಾದ ಹಾಡು, ಡೈಲಾಗ್ಗಳಿಗೆ ಲಿಪ್ ಸಿಂಕ್ ಮಾಡುವುದೇ ಈಗಿನ ಕ್ರೇಝಿ ತಿಂಗ್ ಆಗಿದೆ ಅಂತ ಹೇಳಬಹುದು. ಹೀಗೆಯೇ ಬರ್ತಾ ಬರ್ತಾ ಇದು ಫುಲ್ ಟ್ರೆಂಡ್ ಆಯ್ತು. ಕೆಲ ಜನರು ಇದರಲ್ಲಿಯೇ ಹುಚ್ಚರಾಗಿರುತ್ತಾರೆ.
ಎಸ್, ಕಾಲ ಬದಲಾದಂತೆ ಜನರೂ ಕೂಡ ಬದಲಾಗುತ್ತಾ ಇದ್ದಾರೆ. ಹಾಗೆಯೇ ಅವರ ಕ್ರೇಜ್ಗಳನ್ನು ನಾವು ಊಹಿಸಲೂ ಅಸಾಧ್ಯ ಬಿಡಿ. ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಗೇನೂ ಕೊರತೆ ಇಲ್ಲ ಬಿಡಿ. ದಿನಕ್ಕೊಂದು ವಿಡಿಯೋ, ಫೊಟೋ, ಟ್ರೋಲ್ಗಳು ನಮ್ಮ ಮೊಬೈಲ್ಗಳಲ್ಲಿ ಎದ್ದು ಕುಣಿದಾಡುತ್ತಿರುತ್ತವೆ.
ಅದ್ರಲ್ಲೂ ರೀಲ್ಸ್ಗಳನ್ನುನೋಡ್ತಾ ಇದ್ರೆ ಫುಲ್ ಜಗಮಗ ಅಂತ ಜನರ ಕಣ್ಣಿಗೆ ಹಬ್ಬಗಳನ್ನು ಕೊಡುವ ಸ್ಟೋರಿಗಳು ಒಂದಾದ ಮೇಲೊಂದು ಬರ್ತನೇ ಇರುತ್ತವೆ. ಮೊಬೈಲ್ ಸ್ಕ್ರೋಲ್ ಮಾಡಿದ ಹಾಗೆಯೇ ಮತ್ತಷ್ಟು ಮಗದಷ್ಟು ವಿಡಿಯೋಗಳು ಬರ್ತಾನೇ ಇರುತ್ತವೆ. ಅವುಗಳಿಗೆ ಕಮೆಂಟ್ಗಳನ್ನು ಕೊಡಲು ಅಥವಾ ಟ್ರೋಲ್ ಮಾಡಲೆಂದೇ ಅದೆಷ್ಟೋ ಪೇಜ್ಗಳು ಕಾತುರದಲ್ಲಿ ಕಾಯುತ್ತಾ ಇರುತ್ತಾರೆ.
ಇದನ್ನೂ ಓದಿ: ಜೀವರಕ್ಷಣೆಗೆ ಅಂತ ನೀವು ಸೇವಿಸುವ ಮಾತ್ರೆಗಳು ನಕಲಿಯಂತೆ! ಡ್ರಗ್ಸ್ ಕಂಪನಿ ಮೇಲೆ ಕಣ್ಣಿಟ್ಟ ಇಲಾಖೆ
ಆದರೆ ಅತಿಯಾದ್ರೆ ಅಮೃತನೂ ವಿಷ ಎಂಬಂತೆ ಯಾವುದೂ ಕೂಡ ಜಾಸ್ತಿ ಆಗಬಾರದು. ಈ ರೀತಿಯಾಗಿ ಇದ್ದಬದ್ದ ಜಾಗಗಳಲ್ಲಿ ಎಲ್ಲಾ ಕಡೆ ರೀಲ್ಸ್ಗಳನ್ನು ಮಾಡಿ ಅದೆಷ್ಟೋ ಜನರು ಟ್ರೋಲ್ ಆಗಿದ್ದಾರೆ. ಆದರೂ ಅವರಿಗೇನೂ ಅವೆಲ್ಲ ಲೆಕ್ಕಕ್ಕೆ ಇಲ್ಲ ಬಿಡಿ.
ಇದೀಗ ಡೆಲ್ಲಿಯ ಯುವಕನೊಬ್ಬ ಸಖತ್ ವೈರಲ್ ಆಗ್ತಾ ಇದ್ದಾನೆ. ಅದೂ ಕೂಡ ಬೀದಿ ಮಧ್ಯೆ ಕುಣಿದು ಅದು ಯಾವ ಜನರನ್ನು ಒಲಿಸಬೇಕೊ ಏನೋ ಗೊತ್ತಿಲ್ಲ. ಈತ ಕಿವಿಗೆ ಬ್ಲೂಟೂತ್ ಇಯರ್ ಫೋನ್ ಹಾಕಿ ಕೊಂಡಿದ್ದಾರೆ. ರಸ್ತೆಯಲ್ಲೇ ಮಲಗೋದು ಏಳೋದುಎಲ್ಲಾ ರೀತಿಯ ಡ್ಯಾನ್ಸ್ ಪ್ರದರ್ಶನವನ್ನು ಮಾಡುತ್ತಾ ಇದ್ದಾರೆ. ಸಧ್ಯ ಯಾರೂ ಈತನಿಗೆ ದುಡ್ಡನ್ನ ಹಾಕಿಲ್ಲ.
View this post on Instagram
ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗೋದು ಬೇಗ. ಅದೇ ರೀತಿಯಾಗಿ ಟ್ರೋಲ್ ಆಗೋದು ಕೂಡ ಬೇಗ. ಹಾಗಾಗಿ ನಾವು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕು. ಅದರ ಜೊತೆಗೆ ನಾವು ಎಲ್ಲೆಲ್ಲಿ ಹೇಗೆ ಇರಬೇಕು, ಎಲ್ಲಿ ರೀಲ್ಸ್ ಮಾಡಬಾರದು, ಎಲ್ಲಿ ಮಾಡಬೇಕು ಎಂಬುದು ಚೆನ್ನಾಗಿ ಅರಿತಿರಬೇಕು. ಒಟ್ಟಿನಲ್ಲಿ ಈ ವಿಡಿಯೋ ಅಂತೂ ಫುಲ್ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ