• Home
  • »
  • News
  • »
  • trend
  • »
  • Birthday Celebration: 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪವಾಡ ಹುಡುಗ, ಈತನ ಬಗ್ಗೆ ತಾಯಿ ಏನು ಹೇಳಿದ್ದಾರೆ ನೋಡಿ

Birthday Celebration: 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪವಾಡ ಹುಡುಗ, ಈತನ ಬಗ್ಗೆ ತಾಯಿ ಏನು ಹೇಳಿದ್ದಾರೆ ನೋಡಿ

ಟ್ರೆಸ್ ಜಾನ್ಸನ್

ಟ್ರೆಸ್ ಜಾನ್ಸನ್

ಎರಡು ಮುಖಗಳೊಂದಿಗೆ ಅಸಾಮಾನ್ಯ ಕಾಯಿಲೆಯೊಂದಿಗೆ ಜನಿಸಿದ ಹುಡುಗನೊಬ್ಬ, ತನ್ನ ಜೀವನದ ಪ್ರತಿಯೊಂದು ಹಂತದಲ್ಲೂ ತಾನು ಬದುಕುಳಿಯುವುದಿಲ್ಲ ಎಂಬ ವೈದ್ಯರ ಊಹೆಗಳನ್ನು ತಪ್ಪಾಗಿಸುತ್ತ ಈಗ ತನ್ನ 18ನೇ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಎಲ್ಲಾ ಊಹೆಗಳನ್ನು ಸುಳ್ಳು ಅಂತ ಸಾಬೀತು ಮಾಡಿದ್ದಾನೆ.

ಮುಂದೆ ಓದಿ ...
  • Share this:

ಅನುವಂಶಿಕ ಕಾಯಿಲೆಯು ವಂಶವಾಹಿಗಳು ಅಥವಾ ಕ್ರೋಮೋಸೋಮ್ ( ಗಳಲ್ಲಿನ (Chromosome) ಅಪಸಾಮಾನ್ಯತೆಯಿಂದ ಉಂಟಾಗುವ ಅಸ್ವಸ್ಥತೆಯಾಗಿದ್ದು, ಕೆಲವು ಮಕ್ಕಳು (Children) ಹುಟ್ಟಿನಿಂದಲೇ ಈ ರೀತಿಯ ಅಸ್ವಸ್ಥತೆಗೆ ಗುರಿಯಾಗಿರುತ್ತಾರೆ. ಈ ರೀತಿಯ ಅಸ್ವಸ್ಥತೆಗೆ ಗುರಿಯಾದ ಮಕ್ಕಳು ಜಾಸ್ತಿ ವರ್ಷಗಳ ಕಾಲ ಬದುಕಿರುವುದು ತುಂಬಾನೇ ಕಷ್ಟ ಅಂತ ವೈದ್ಯರು (Doctors) ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಎಲ್ಲವೂ ಬರೀ ಔಷಧ (Medicine) ಮತ್ತು ಮಾತ್ರೆಗಳ ಮೇಲೆ ಅವಲಂಬಿತವಾಗಿರುವುದಿಲ್ಲ ಅಲ್ಲವೇ? ಕೆಲವೊಮ್ಮೆ ಪವಾಡ ಎಂಬಂತೆ ಇಂತಹ ಅಸ್ವಸ್ಥತೆಗೆ ಗುರಿಯಾದ ಮಕ್ಕಳು ಚೆನ್ನಾಗಿಯೇ ಬದುಕುಳಿಯುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.


18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪವಾಡ ಹುಡುಗ
ಹೌದು.. ಎರಡು ಮುಖಗಳೊಂದಿಗೆ ಅಸಾಮಾನ್ಯ ಕಾಯಿಲೆಯೊಂದಿಗೆ ಜನಿಸಿದ ಹುಡುಗನೊಬ್ಬ, ತನ್ನ ಜೀವನದ ಪ್ರತಿಯೊಂದು ಹಂತದಲ್ಲೂ ತಾನು ಬದುಕುಳಿಯುವುದಿಲ್ಲ ಎಂಬ ವೈದ್ಯರ ಊಹೆಗಳನ್ನು ತಪ್ಪಾಗಿಸುತ್ತ ಈಗ ತನ್ನ 18ನೇ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಎಲ್ಲಾ ಊಹೆಗಳನ್ನು ಸುಳ್ಳು ಅಂತ ಸಾಬೀತು ಮಾಡಿದ್ದಾನೆ.


ಯುನೈಟೆಡ್ ಸ್ಟೇಟ್ಸ್ ನ ಮಿಸ್ಸೌರಿಯ ಟ್ರೆಸ್ ಜಾನ್ಸನ್ ಕ್ರಾನಿಯೋಫೇಸಿಯಲ್ ಅನ್ನು ಹೊಂದಿದ್ದಾರೆ, ಇದನ್ನು ಡಿಪ್ರೋಸೊಪಸ್ ಎಂದೂ ಸಹ ಕರೆಯಲಾಗುತ್ತದೆ. ಇದು "ಎರಡು ಮುಖಗಳು" ಎಂಬ ಅರ್ಥ ಬರುವ ಗ್ರೀಕ್ ಪದವಾಗಿದೆ.


ಈ ರೋಗವು ಯಾವ ಜೀನ್ ನಿಂದ ಉಂಟಾಗುತ್ತದೆ?
ಈ ರೋಗವು 'ಸೋನಿಕ್ ದಿ ಹೆಡ್ಜ್ಹಾಗ್' (ಎಸ್ಎಚ್ಎಚ್) ವಂಶವಾಹಿಯಿಂದ ಉಂಟಾಗುತ್ತದೆ. ವಂಶವಾಹಿಯ ಹೆಸರು ಅದರ ಡೆಂಟಿಕಲ್ ಗಳಿಂದ ಬಂದಿದೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ.


ಇದನ್ನೂ ಓದಿ: Deepinder Goyal: ಸ್ವತಃ ಫುಡ್‌ ಆರ್ಡರ್‌ ಡೆಲಿವರಿ ಮಾಡ್ತಾರಂತೆ ಜೊಮೆಟೊ CEO!


ಅವನು ಎರಡು ವಿಭಿನ್ನ ಮೂಗಿನ ಹೊಳ್ಳೆಗಳೊಂದಿಗೆ ಜನಿಸಿದನು, ವಿಶಿಷ್ಟವಾದ ಇನ್ನೊಂದು ತಲೆಬುರುಡೆ, ಅರಿವಿನ ಕೊರತೆಗಳು ಮತ್ತು ಸೆಳೆತಗಳಿಂದ ಬಳಲುತ್ತಿದ್ದಾನೆ. ಅವನ ಮುಖದಲ್ಲಿ ಒಂದು ದೊಡ್ಡ ಸೀಳು ಇದೆ, ಅದು ಎಷ್ಟು ದೊಡ್ಡದಿದೆಯೆಂದರೆ ಅದು ಅವನ ಮೂಗಿನ ಮೇಲೆ ಹರಿದು ಹೋಗಿದೆ. ಅವರು ಪ್ರತಿದಿನ 400 ಸೆಳವುಗಳನ್ನು ಅನುಭವಿಸುತ್ತಿದ್ದ.


ಜಾನ್ಸನ್ ಅವರ ಜೀವನವು ಔಷಧೋಪಚಾರದಿಂದ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಅವರ ಪೋಷಕರ ಪ್ರಕಾರ, ಕೆನ್ನಾಬಿಸ್ ತೈಲ ಸೇವನೆಯು, ಅವರು ಪ್ರತಿದಿನ ಪಡೆಯುವ ಸೆಳೆತಗಳ ಸಂಖ್ಯೆಯನ್ನು ಕೇವಲ 40ಕ್ಕೆ ಇಳಿಸಲು ಸಹಾಯ ಮಾಡಿದೆ. ಏಳು ವರ್ಷಗಳ ಹಿಂದೆ ಅವರು ಈ ನಿರ್ದಿಷ್ಟ ತೈಲವನ್ನು ಬಳಸಲು ನಿರ್ಧರಿಸಿದರು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.


ಮಗು ಜನಿಸಿದ ಮೊದಲ ಕ್ಷಣವನ್ನು ನೆನಪು ಮಾಡಿಕೊಂಡ ತಾಯಿ
ಅವರ 40 ವರ್ಷದ ತಾಯಿ ಬ್ರ್ಯಾಂಡಿ, ತಮ್ಮ ಮಗನು ಜನಿಸಿದ ಸಮಯವನ್ನು ನೆನಪಿಸಿಕೊಂಡು "ವೈದ್ಯರು ನನ್ನ ಮಗುವನ್ನು ನನ್ನ ಕೋಣೆಗೆ ಮೊದಲ ಬಾರಿಗೆ ಕರೆತಂದಾಗ, ಅವನು ತನ್ನ ಎಲ್ಲಾ ಅಂಗಾಂಗಗಳಿಗೆ ಮಾನಿಟರ್ ಗಳನ್ನು ಹೊಂದಿದ್ದನು ಮತ್ತು ನಾನು ಅವನ ಮೃದುವಾದ ಕಾಲುಗಳನ್ನು ಮಾತ್ರವೇ ಮುಟ್ಟಲು ಸಾಧ್ಯವಾಯಿತು" ಎಂದು ಹೇಳಿದರು.


"ನನ್ನ ಗಂಡ ವೈದ್ಯರೊಂದಿಗೆ ಮಾತುಕತೆ ಆಡಿ ಅವರನ್ನು ಮನವೊಲಿಸದೆ ಹೋಗಿದ್ದರೆ, ವೈದ್ಯರು ಟ್ರೆಸ್ ನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವನು ನಂತರ ಇನ್ನೂ ಜೀವಂತವಾಗಿದ್ದಾರೆ ಅಂತ ನನಗೆ ತಿಳಿದ ನಂತರ, ನಮಗೆ ತುಂಬಾನೇ ಖುಷಿಯಾಯಿತು" ಎಂದು ಅವರು ಹೇಳಿದರು. ಟ್ರೆಸ್, ಮಾನಸಿಕ ಸಾಮರ್ಥ್ಯದ ಸಮಸ್ಯೆಯನ್ನು ಹೊಂದಿದ್ದರೂ, ಅವನು ತನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾನೆ ಎಂದು ಬ್ರ್ಯಾಂಡಿ ಹೇಳಿದರು. ಟ್ರೆಸ್ ನ ಕಾಯಿಲೆಯು ತುಂಬಾ ಅಸಾಮಾನ್ಯವಾಗಿರುವುದರಿಂದ, ಕುಟುಂಬವು ವೈದ್ಯಕೀಯ ಸಹಾಯವನ್ನು ಪಡೆಯುವಲ್ಲಿ ತುಂಬಾನೇ ತೊಂದರೆ ಅನುಭವಿಸಿದೆ.


ಇದನ್ನೂ ಓದಿ:  Bacteria: ದೇಹದ ಬ್ಯಾಕ್ಟೀರಿಯಾದಿಂದಲೇ ಆಭರಣ ತಯಾರಿಕೆ: ಮಹಿಳೆಯಿಂದ ಅಚ್ಚರಿಯ ಸಾಧನೆ


ವರದಿಯೊಂದರ ಪ್ರಕಾರ, ಟಾಬಿನ್ ಲ್ಯಾಬ್ ನ ಸ್ಕಾಲರ್ ರಾಬರ್ಟ್ ರಿಡಲ್, ಅವರು ತಮ್ಮ ಹೆಂಡತಿ ಸೋನಿಕ್ ದಿ ಹೆಡ್ಜ್ಹಾಗ್ ವೀಡಿಯೋ ಗೇಮ್ ನ ಜಾಹೀರಾತನ್ನು ಹೊಂದಿರುವ ನಿಯತಕಾಲಿಕವನ್ನು ಮನೆಗೆ ತಂದಾಗ ಅದರಿಂದ ಪ್ರಭಾವಿತರಾಗಿ, ಸೋನಿಕ್ ದಿ ಹೆಡ್ಜ್ಹಾಗ್ ಜೀನ್ ಎಂದು ಹೆಸರಿಸಿದರು.

Published by:Ashwini Prabhu
First published: