Healthy Heart: ದಿನಾ ಸ್ಟ್ರಾಬೆರಿ ಹಣ್ಣು ತಿಂದ್ರೆ ಹಾರ್ಟ್ ಹ್ಯಾಪಿಯಾಗಿರುತ್ತಂತೆ !

ಸಣ್ಣ ಗಾತ್ರದ ತಾಜಾ ಹಣ್ಣಿನ ಚಿಕ್ಕ ಗಾತ್ರ 7 ಸ್ಟ್ರಾಬೆರಿಗಳಿಗೆ ಸಮವಾಗಿರುತ್ತದೆ. ಬೆಳಗ್ಗಿನ ಉಪಹಾರದಲ್ಲಿ, ಊಟದ ನಡುವಿನ ತಿನಿಸಿನಂತೆ ಅಥವಾ ಮೊಸರಿನೊಂದಿಗೆ ತಿನ್ನುವುದರಿಂದ ನಿತ್ಯವೂ ಸೇವಿಸಬೇಕಾದ ಹಣ್ಣಿನ ಅಗತ್ಯ ಮತ್ತು ಆರೋಗ್ಯಕರ ಲಾಭಗಳು ಎರಡನ್ನೂ ಪಡೆದಂತಾಗುತ್ತದೆ

ಸ್ಟ್ರಾಬೆರಿ ಹಣ್ಣು

ಸ್ಟ್ರಾಬೆರಿ ಹಣ್ಣು

  • Share this:

Strawberry: ಸ್ಟ್ರಾಬೆರಿಗಳನ್ನು ತಿಂದರೆ ಕಾರ್ಡಿಯೋಮೆಟಬೋಲಿಕ್ ಅಪಾಯ ಕಡಿಮೆ ಇರುತ್ತದೆ ಎಂಬುವುದು ಅಧ್ಯಯನದಿಂದ ತಿಳಿದು ಬಂದಿದೆ.
ಸ್ಟ್ರಾಬೆರಿ ಕೇಕ್ ಇರಲಿ ಅಥವಾ ಸ್ಟ್ರಾಬೆರಿ ಐಸ್‍ಕ್ರೀಂ ಇರಲಿ, ಸ್ಟ್ರಾಬೆರಿ ಹಾಕಿರುವ ತಿನಿಸುಗಳನ್ನು ಇಷ್ಟಪಡದವರಿಲ್ಲ. ಕೆಂಪಗಿನ, ರಸವತ್ತಾದ ಮತ್ತು ಸಿಹಿ ಸ್ಟ್ರಾಬೆರಿ ಹಣ್ಣಿನ ಸ್ವಾದವೇ ಅಂತದ್ದು. ನ್ಯೂಟ್ರಿಯೆಂಟ್ಸ್‍ನಲ್ಲಿ ಪ್ರಕಟವಾಗಿರುವ, “ಸ್ಟ್ರಾಬೆರಿಯು ಬೊಜ್ಜು ಸಮಸ್ಯೆ ಇರುವವರಲ್ಲಿ ಕಾರ್ಡಿಯೋಮೆಟಾಬಾಲಿಕ್ ಅಪಾಯಗಳನ್ನು ಸುಧಾರಿಸುತ್ತದೆ”ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಸ್ಟ್ರಾಬೆರಿಗಳನ್ನು ತಿಂದರೆ ಕಾರ್ಡಿಯೋಮೆಟಬೋಲಿಕ್ ಅಪಾಯ ಕಡಿಮೆ ಇರುತ್ತದೆ. ಈ ಅಧ್ಯಯನದಲ್ಲಿ ಭಾಗವಹಿಸಿದ 33 ವ್ಯಕ್ತಿಗಳ ಆಹಾರ ಕ್ರಮಗಳನ್ನು 14 ವಾರಗಳವರೆಗೆ ಗಮನಿಸಲಾಯಿತು. ಅವರುಗಳು ಸ್ಟ್ರಾಬೆರಿಗಳನ್ನು ಹೊರತು ಪಡಿಸಿ ಬೇರೆ ಹಣ್ಣುಗಳನ್ನು ತಿನ್ನುವ ಹಾಗಿರಲಿಲ್ಲ.


ತಜ್ಞರ ಮಾತು


ಬೆರಿ ಇಂಡಸ್ಟ್ರಿ ಬಾಡಿ ಬ್ರಿಟೀಷ್ ಸಮ್ಮರ್ ಫ್ರುಟ್‍ನ , ಪಬ್ಲಿಕ್ ಹೆಲ್ತ್ ನ್ಯೂಟ್ರಿಶಿಯನಿಸ್ಟ್ ಮತ್ತು ಸಲಹೆಗಾರರಾದ ಡಾ.ಎಮ್ಮ ಡೆರ್ಬಿಶೈರ್ ಅವರು ಹೇಳುವಂತೆ , “ಇವು ನಿಜಕ್ಕೂ ಆಸಕ್ತಿದಾಯಕ ಸಂಶೋಧನೆ. ಇಂಗ್ಲೆಂಡ್‌ನಲ್ಲಿ ಸುಮಾರು 7.6 ಮಿಲಿಯನ್ ಜನರು ಹೃದಯ ಮತ್ತು ರಕ್ತ ಪರಿಚಲನೆಗೆ ಸಂಬಂಧಿಸಿದ ಕಾಯಿಲೆಗಳನ್ನು ಹೊಂದಿದ್ದಾರೆ. ಆರೋಗ್ಯಕರ ಆಹಾರ ಅಭ್ಯಾಸವುಳ್ಳ ಆರೋಗ್ಯಕರ ಜೀವನಶೈಲಿ, ಹೃದಯದ ಕಾಯಿಲೆ, ತೂಕ ಹೆಚ್ಚಳ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಲ್ಲದು ಎಂಬುವುದು ನಮಗೆ ತಿಳಿದೆ”.


ಇದನ್ನೂ ಓದಿ: Insurance Plan: ಈ 3 ಇನ್ಶೂರೆನ್ಸ್ ಪಾಲಿಸಿ ಇದ್ದರೆ ಮಳೆಗಾಲವನ್ನು ನೀವು ನಿಶ್ಚಿಂತೆಯಾಗಿ ಕಳೆಯಬಹುದು !“ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಅಗತ್ಯ. ಬೆರಿಗಳನ್ನು ತಿನ್ನುವುದು ಕೆಲವರ ಪಾಲಿಗೆ ಒಳ್ಳೆಯ ಆಯ್ಕೆ ಎಂಬುವುದು ಇದು ಇನ್ನೊಂದು ಸೂಚನೆ.ನಾವು ದಿನಕ್ಕೆ 5 ಬಾರಿ ಹಣ್ಣು ತರಕಾರಿಗಳನ್ನು ತಿನ್ನುವ ಗುರಿ ಹೊಂದಿರಬೇಕು ಎಂಬುದನ್ನು ಬಲ್ಲೆವು. ಇಂಗ್ಲೆಂಡ್‌ನಲ್ಲಿ ಸಣ್ಣ ಗಾತ್ರದ ತಾಜಾ ಹಣ್ಣಿನ ಚಿಕ್ಕ ಗಾತ್ರ 7 ಸ್ಟ್ರಾಬೆರಿಗಳಿಗೆ ಸಮವಾಗಿರುತ್ತದೆ. ಬೆಳಗ್ಗಿನ ಉಪಹಾರದಲ್ಲಿ, ಊಟದ ನಡುವಿನ ತಿನಿಸಿನಂತೆ ಅಥವಾ ಮೊಸರಿನೊಂದಿಗೆ ತಿನ್ನುವುದರಿಂದ ನಿತ್ಯವೂ ಸೇವಿಸಬೇಕಾದ ಹಣ್ಣಿನ ಅಗತ್ಯ ಮತ್ತು ಆರೋಗ್ಯಕರ ಲಾಭಗಳು ಎರಡನ್ನೂ ಪಡೆದಂತಾಗುತ್ತದೆ” ಎನ್ನುತ್ತಾರೆ ಅವರು.


ಸ್ಟ್ರಾಬೆರಿ ಹಣ್ಣಿನ ಉಪಯೋಗಗಳು


ಸ್ಟ್ರಾಬೆರಿ ಹಣ್ಣನ್ನು ತಿನ್ನುವುದರಿಂದ ಆಗುವ ಕೆಲವು ಆರೋಗ್ಯ ಸಂಬಂಧಿ ಲಾಭಗಳು ಈ ಕೆಳಗಿನಂತಿವೆ;
• ಅವುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‍ಗಳು ಹೇರಳವಾಗಿರುತ್ತವೆ ಮತ್ತು ಅದರಿಂದ ಆಕ್ಸಿಡೇಟಿವ್ ಒತ್ತಡ ಕಡಿಮೆ ಆಗಲು ಸಹಕಾರಿ ಆಗುತ್ತದೆ.
• ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡಬಲ್ಲದು.
• ಸ್ಟ್ರಾಬೆರಿ ಹಣ್ಣುಗಳಲ್ಲಿ ಫೈಬರ್ ಹೆಚ್ಚಿರುತ್ತದೆ ಮತ್ತು ಸರಳ ಸಕ್ಕರೆ ಇರುತ್ತದೆ, ಇದರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆ ಆಗುತ್ತದೆ.


ಇದನ್ನೂ ಓದಿ: Study Abroad: ವಿದೇಶದಲ್ಲಿ ಕಲಿಯೋಕೆ ಹಣ ಹೊಂದಿಸುವುದು ಹೇಗೆ ? ಇಲ್ಲಿವೆ ಸುಲಭ ಮಾರ್ಗಗಳು...ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನುವ ವಿಧಾನ
ಸ್ಟ್ರಾಬೆರಿ ಹಣ್ಣುಗಳನ್ನು ಹಾಗೆಯೇ ತಿಂದರೂ ರುಚಿ. ಆದರೆ ಬೇರೆ ಪದಾರ್ಥಗಳೊಂದಿಗೆ ಸೇವಿಸಿದಾಗ ರುಚಿ ಇನ್ನಷ್ಟು ಹೆಚ್ಚುತ್ತದೆ.
• ಸಿಹಿ ತಿನಿಸು ಅಥವಾ ಓಟ್‍ಮೀಲ್‍ಗೆ ಕತ್ತರಿಸಿದ ಸ್ಟ್ರಾಬೆರಿ ಹಣ್ಣುಗಳನ್ನು ಸೇರಿಸಿ, ನಿಮ್ಮ ಊಟವನ್ನು ರುಚಿಯಾಗಿಸಿ.
• ಸ್ಟ್ರಾಬೆರಿ ಹಣ್ಣುಗಳನ್ನು ಬೇರೆ ಪದಾರ್ಥಗಳೊಂದಿಗೆ ರುಬ್ಬಿ, ಸ್ಮೂದಿಯನ್ನು ಕೂಡ ತಯಾರಿಸಬಹುದು.
• ಸ್ಟ್ರಾಬೆರಿ ಹಣ್ಣುಗಳನ್ನು ಕತ್ತರಿಸಿ, ಫ್ರೂಟ್ ಸಲಾಡ್‍ಗೆ ಹಾಕಿ ತಿನ್ನಬಹುದು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: