• Home
  • »
  • News
  • »
  • trend
  • »
  • Viral Video: ಮಹಿಳೆಯ ಏರ್‌ಪಾಡ್ ಕದ್ದು ಹಾರಿ ಹೋದ ಪಕ್ಷಿ! ಮುಂದೇನಾಯ್ತು ನೋಡಿ.

Viral Video: ಮಹಿಳೆಯ ಏರ್‌ಪಾಡ್ ಕದ್ದು ಹಾರಿ ಹೋದ ಪಕ್ಷಿ! ಮುಂದೇನಾಯ್ತು ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಾಣಿ, ಪಕ್ಷಿಗಳು ಇತ್ತೀಚೆಗೆ ಮನುಷ್ಯರ ಕೈಯಲ್ಲಿದ್ದ ಏನಾದರೊಂದು ವಸ್ತುವನ್ನು ಕದ್ದುಕೊಂಡು ಹೋಗುವ ಅಭ್ಯಾಸವನ್ನು ಮಾಡಿದೆ. ಆದರೆ ಈ ರೀತಿ ಮಅಡುವ ಮೂಲಕ ಪ್ರಾಣಿಗಳು ಏನೋ ಸಂಭ್ರಮಿಸುತ್ತದೆ. ಅದೇ ರೀತಿ ಇಲ್ಲೊಂದು ಪಕ್ಷಿಯ ವಿಡಿಯೋ ಸಖತ್ ವೈರಲ್ ಆಗ್ತಿದೆ.

  • Share this:

    ಸಾಮಾನ್ಯವಾಗಿ ನಾವು ಯಾವುದಾದರೂ ದೇವಸ್ಥಾನಕ್ಕೊ (Temple) ಅಥವಾ ಹಳೆಯ ಕೋಟೆಗಳನ್ನು ನೋಡಲು ಹೋದರೆ, ಅಲ್ಲಿ ಅನೇಕ ಕೋತಿಗಳು (Monkey) ಅತ್ತಿಂದಿತ್ತ ಓಡಾಡುವುದನ್ನು ಮತ್ತು ಮರದಲ್ಲಿ ಕೊಂಬೆಯಿಂದ ಕೊಂಬೆಗೆ ಛಂಗನೆ ಹಾರುವುದನ್ನು ನೋಡಿರುತ್ತೇವೆ.ಈ ಕೋತಿಗಳು ಮನುಷ್ಯರ (Humans) ಕೈಯಲ್ಲಿ ಚಿಕ್ಕ ಬ್ಯಾಗ್, ಒಡೆದ ತೆಂಗಿನಕಾಯಿ, ಆಹಾರ ಪದಾರ್ಥಗಳ ಪ್ಯಾಕೆಟ್ (Packet), ಬಾಳೆಹಣ್ಣು ಹೀಗೆ ಏನಾದರೂ ಇರುವುದನ್ನು ನೋಡಿದರೆ ಸಾಕು, ಮೆಲ್ಲಗೆ ಬಂದು ಮನುಷ್ಯರ ಕೈಯಲ್ಲಿರುವುದನ್ನು ಕಿತ್ತುಕೊಂಡು ಓಡಿ ಹೋಗುತ್ತವೆ.ಈ ಪ್ರಾಣಿಗಳಿಗೆ ಮನುಷ್ಯರ ಕೈಯಲ್ಲಿರುವ ವಸ್ತುಗಳನ್ನು ಕಸಿದುಕೊಂಡು ಹೋಗುವುದು ಮತ್ತು ಮನುಷ್ಯರ ಆ ಪರದಾಟವನ್ನು ನೋಡಲು ಏನೋ ಒಂದು ರೀತಿಯ ಖುಷಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಹೀಗೆ ಮನುಷ್ಯರ ಕೈಯಲ್ಲಿರುವ ವಸ್ತುಗಳನ್ನು ಕಸಿದುಕೊಳ್ಳುವುದು ಬರೀ ಕೋತಿಗಳಿಗೆ ಮಜಾ ನೀಡುತ್ತದೆ ಅಂತ ನೀವು ತಿಳಿದುಕೊಂಡರೆ ಅದು ತಪ್ಪು. ಈ ಚಟ ಬರೀ ಪ್ರಾಣಿಗಳಿಗಿಲ್ಲ, ಪಕ್ಷಿಗಳಿಗೂ ಸಹ ಇದೆ ನೋಡಿ.


    ಕಳೆದ ಬಾರಿಯ ವೈರಲ್ ವಿಡಿಯೋ:


    ಈ ಹಿಂದೆ ಸಹ ನಾವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಒಂದು ವೀಡಿಯೋದಲ್ಲಿ ಹೇಗೆ ಒಬ್ಬ ಹುಡುಗ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ತನ್ನ ಮೊಬೈಲ್ ಅನ್ನು ನೋಡುತ್ತಿರುವಾಗ ಹಾಗೆ ಹಿಂದಿನಿಂದ ಬಂದ ಒಂದು ಪಕ್ಷಿ ಆ ಮೊಬೈಲ್ ಅನ್ನು ಕಸಿದುಕೊಂಡು ಹಾರಿ ಹೋಯಿತು. ಆ ಮೊಬೈಲ್ ನಲ್ಲಿ ಕ್ಯಾಮೆರಾ ಆನ್ ಆಗಿರುವುದರಿಂದ ಆ ಪಕ್ಷಿ ಎಲ್ಲಿ ಎಲ್ಲಿ ಹಾರಿ ಹೋಗಿದೆ ಅಲ್ಲಿನ ಕೆಳಗಿನ ಗಿಡ ಮರಗಳ ಮತ್ತು ಮನೆಗಳ ಏರಿಯಲ್ ಶಾಟ್ ಮೊಬೈಲ್ ನಲ್ಲಿ ರೆಕಾರ್ಡ್ ಆಗಿತ್ತು. ಈಗ ಮತ್ತೊಂದು ಪಕ್ಷಿ ಅಂತಹದೇ ಒಂದು ಕೆಲಸ ಮಾಡಿದೆ ನೋಡಿ.


    ಇದನ್ನೂ ಓದಿ: ಭಾರತೀಯರು ಈ ಸುಂದರವಾದ ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಂತೆ!


    ಮಹಿಳೆಯ ಏರ್ಪಾಡ್ ತೆಗೆದುಕೊಂಡು ಹಾರಿ ಹೋದ ಪಕ್ಷಿ


    ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿರುವ ಹೊಸ ವೀಡಿಯೋದಲ್ಲಿ ಪಕ್ಷಿಯೊಂದು ತನ್ನಷ್ಟಕ್ಕೆ ಹಾಡು ಕೇಳುತ್ತಾ ಹಾಗೆ ವಿರಮಿಸುತ್ತಿದ್ದ ಮಹಿಳೆಯ ಕಿವಿಯಲ್ಲಿದ್ದ ಏರ್‌ಪಾಡ್ ಅನ್ನು ಮೆಲ್ಲಗೆ ಬಂದು ತೆಗೆದುಕೊಂಡು ಅದರೊಂದಿಗೆ ಅಲ್ಲಿಂದ ಹಾರಿ ಹೋಯಿತು ಮತ್ತು ನಂತರ ಆ ಪಕ್ಷಿ ಮಹಿಳೆಯ ಏರ್‌ಪಾಡ್ ಅನ್ನು ಹಿಂತಿರುಗಿಸಲು ನಿರಾಕರಿಸಿತು.


    ಸಾಂಧರ್ಭಿಕ ಚಿತ್ರ


    ಸೋಷಿಯಲ್ ಮೀಡಿಯಾದಲ್ಲಿ ವೈರಲ್:


    ವೈರಲ್ ವೀಡಿಯೋವನ್ನು ಅನಿಮಲ್ ಬೀಯಿಂಗ್ ಜರ್ಕ್ಸ್ ಎಂಬ ಪುಟವು ರೆಡ್ಡಿಟ್ ನಲ್ಲಿ ಹಂಚಿಕೊಂಡಿದೆ. ಈ ಕ್ಲಿಪ್ ನಲ್ಲಿ ಮಹಿಳೆಯೊಬ್ಬಳು ತನ್ನ ಏರ್‌ಪಾಡ್ ಗಳಲ್ಲಿ ಸಂಗೀತ ಕೇಳುತ್ತಿರುವುದನ್ನು ನೋಡಬಹುದು. ಕೆಲವೇ ಸೆಕೆಂಡುಗಳಲ್ಲಿ, ಅವಳ ಸಾಕು ಹಕ್ಕಿ ಹಾರಿ ಅವಳ ಏರ್‌ಪಾಡ್ ಗಳಲ್ಲಿ ಒಂದನ್ನು ಕದ್ದುಕೊಂಡಿತು.


    ಅದು ಹಾರಿಹೋಗಿ ತಂತಿಯ ಮೇಲೆ ಮತ್ತು ನಂತರ ಒಂದು ಕೊಂಬೆಯ ಮೇಲೆ ಕುಳಿತುಕೊಂಡಿತು. ಎಲ್ಲಾ ಸಮಯದಲ್ಲೂ ಏರ್‌ಪಾಡ್ ನಲ್ಲಿ ಏನೋ ಮಾಡುತ್ತಲೇ ಇತ್ತು. ಕೊನೆಗೆ ಹಕ್ಕಿ ಹಾರಿ ತನ್ನ ಪಂಜರದ ಮೇಲೆ ಬಂದು ಕುಳಿತುಕೊಂಡಿತು. ಅದನ್ನು ನೋಡಿ ಮಹಿಳೆ ಹತ್ತಿರ ಹೋಗಿ ಏರ್‌ಪಾಡ್ ಅನ್ನು ಅದರ ಬಾಯಿಂದ ಕಸಿದುಕೊಳ್ಳಲು ಪ್ರಯತ್ನಿಸಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.


    ಪಕ್ಷಿ ವೀಡಿಯೋಗೆ ಕಮೆಂಟ್ ಗಳು ಹೇಗೆ ಬಂದಿವೆ ನೋಡಿ?


    "ಸೌಂಡ್ ಪೊಲೀಸ್" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದ್ದು, ಈ ವೀಡಿಯೋ ವೇಗವಾಗಿ ನೆಟ್ಟಿಗರ ಗಮನ ಸೆಳೆಯಿತು ಮತ್ತು ನೆಟ್ಟಿಗರಿಂದ ಒಂದಷ್ಟು ಪ್ರತಿಕ್ರಿಯೆಗಳನ್ನು ಸಹ ಪಡೆಯಿತು. "ಇದೆಲ್ಲಾ ನಡೆದಿದ್ದು ಬಹುಶಃ ಆಕೆ ಒಂದು ಭಯಂಕರವಾದ ಹಾಡನ್ನು ಕೇಳುತ್ತಿದ್ದಳು ಅಂತ ಅನ್ನಿಸುತ್ತದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.


    ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿ "ಏರ್‌ಪಾಡ್ ನ ಬದಲಿಗೆ ಬಾಳೆಹಣ್ಣೆ? ಇಲ್ಲ.. ಹಕ್ಕಿಗಳು ಬಾಳೆಹಣ್ಣನ್ನು ಇಷ್ಟಪಡುತ್ತವೆಯೇ" ಎಂದು ಬರೆದಿದ್ದಾರೆ.

    Published by:Prajwal B
    First published: