Vegetable Garden: ಪಿವಿಸಿ ಪೈಪ್‍ಗಳಲ್ಲಿ ತರಕಾರಿ ಬೆಳೆದ ಬಿಹಾರದ ಮಹಿಳೆ! ಎಷ್ಟು ಚೆಂದಾ ಉಂಟು ನೋಡಿ

Viral Video: ಮಹಿಳೆ ಸಮರ್ಪಕವಾದ ಸ್ಥಳಾವಕಾಶ ಇಲ್ಲದೆ ಹೋದರೂ ಹೇಗೆ ಒಂದು ಉತ್ತಮವಾದ ತೋಟವನ್ನು ಮಾಡಿಕೊಳ್ಳಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ನೋಡಿ. ಬಿಹಾರದ ಛಾಪ್ರಾ ನಿವಾಸಿ ಮತ್ತು ಉತ್ಸಾಹಿ ತೋಟಗಾರರಾದ ಸುನೀತಾ ಪ್ರಸಾದ್ ಅವರು ತಮ್ಮ ಮನೆಯ ಟೆರೇಸ್ ಮೇಲೆ ಪಿವಿಸಿ ಪೈಪ್ ಗಳಿಗೆ ಬಿದಿರನ್ನು ಹಚ್ಚುವ ಮೂಲಕ ಲಂಬವಾದ ತೋಟವನ್ನು ರಚಿಸಲು ಒಂದು ಮಾರ್ಗವನ್ನು ಕಂಡು ಕೊಂಡರು.

ಪಿವಿಸಿ ಪೈಪ್ ನಲ್ಲಿ ತರಕಾರಿ ಬೆಳೆಸಿದ ಮಹಿಳೆ

ಪಿವಿಸಿ ಪೈಪ್ ನಲ್ಲಿ ತರಕಾರಿ ಬೆಳೆಸಿದ ಮಹಿಳೆ

  • Share this:
ಬಹುತೇಕ ಜನರು ತಮ್ಮ ಮನೆಯಲ್ಲಿ ಒಂದು ಪುಟ್ಟ ತೋಟ (Garden) ಮಾಡಿಕೊಳ್ಳಬೇಕು, ಮನೆಗೆ ಬೇಕಾದಂತಹ ಎಲ್ಲಾ ರೀತಿಯ ತರಕಾರಿಗಳನ್ನು (Vegetable) ಬೆಳೆಯಬೇಕು ಎಂದು ಆಸೆ ಇಟ್ಟು ಕೊಂಡಿರುತ್ತಾರೆ. ಆದರೆ ಎಷ್ಟೋ ಜನರ ಮನೆಯಲ್ಲಿ (Home) ಈ ರೀತಿಯ ತೋಟ ಮಾಡಲು ಸಮರ್ಪಕವಾದ ಸ್ಥಳಾವಕಾಶ ಇರುವುದಿಲ್ಲ. ಇಲ್ಲೊಬ್ಬ ಮಹಿಳೆ ಸಮರ್ಪಕವಾದ ಸ್ಥಳಾವಕಾಶ ಇಲ್ಲದೆ ಹೋದರೂ ಹೇಗೆ ಒಂದು ಉತ್ತಮವಾದ ತೋಟವನ್ನು ಮಾಡಿಕೊಳ್ಳಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ನೋಡಿ. ಬಿಹಾರದ (Bihar) ಛಾಪ್ರಾ ನಿವಾಸಿ ಮತ್ತು ಉತ್ಸಾಹಿ ತೋಟಗಾರರಾದ ಸುನೀತಾ ಪ್ರಸಾದ್ (Sunitha Prasad) ಅವರು ತಮ್ಮ ಮನೆಯ ಟೆರೇಸ್ ಮೇಲೆ ಪಿವಿಸಿ ಪೈಪ್(PVC Pipe)ಗಳಿಗೆ ಬಿದಿರನ್ನು ಹಚ್ಚುವ ಮೂಲಕ ಲಂಬವಾದ ತೋಟವನ್ನು ರಚಿಸಲು ಒಂದು ಮಾರ್ಗವನ್ನು ಕಂಡು ಕೊಂಡರು.

ಪೈಪ್ ಗಳಲ್ಲಿ ತರಕಾರಿ ಬೆಳೆಯುವ ಆಲೋಚನೆ ಮಹಿಳೆಗೆ ಬಂದಿದ್ದು ಹೀಗೆ!
ಇಲ್ಲಿ ಅವರು ಪ್ರತಿ ವಾರ ಸುಮಾರು 5 ಕೆಜಿ ತರಕಾರಿಗಳನ್ನು ಬೆಳೆಯುತ್ತಾರೆ. ಈ ಸೃಜನಶೀಲ ಮಹಿಳೆಯು "ಒಂದು ದಿನ ಗುಜರಿ ವ್ಯಾಪಾರಿಯೊಬ್ಬರಿಗೆ ಸರಕುಗಳನ್ನು ಮಾರಾಟ ಮಾಡುವಾಗ, ನಾನು ಅವನ ಸೈಕಲ್ ನಲ್ಲಿ ಒಂದು ಪೈಪ್ ಅನ್ನು ಗಮನಿಸಿದೆ ಮತ್ತು ಅದರಿಂದ ಏನಾದರೊಂದು ನವೀನವಾದದ್ದನ್ನು ರಚಿಸುವ ಭರವಸೆಯಿಂದ ಅದನ್ನು ತಕ್ಷಣವೇ ಖರೀದಿಸಿದೆ. ಆದರೆ ಅಂತಿಮವಾಗಿ, ಅದರಲ್ಲಿ ಸ್ವಲ್ಪ ಮಣ್ಣು ತುಂಬಿಸಿ ಮನೆಯ ಛಾವಣಿಯ ಮೇಲೆ ಇರಿಸಿದೆ ಮತ್ತು ಅನೇಕ ವಾರಗಳ ನಂತರ ಅದರಿಂದ ಎಲೆಗಳು ಮೊಳಕೆಯೊಡೆಯುವುದನ್ನು ನಾನು ಗಮನಿಸಿದೆ" ಎಂದು ಹೇಳಿದರು.ಪೈಪ್ ಗಳಲ್ಲಿ ತರಕಾರಿಗಳನ್ನು ಬೆಳೆಯುವ ಆಲೋಚನೆಯನ್ನು ಇವರು ಪಡೆದುಕೊಂಡರು. ಇಂದು, ಅವರು ಪಿವಿಸಿ ಪೈಪ್ ಗಳು ಮತ್ತು ಬಿದಿರುಗಳಿಂದ ಮಾಡಿದ ಲಂಬವಾದ ಉದ್ಯಾನದ ರೂಪದಲ್ಲಿ ಬಹುತೇಕ ಎಲ್ಲಾ ಋತುಮಾನದ ತರಕಾರಿಗಳನ್ನು ಬೆಳೆಯುತ್ತಾರೆ. ಪೈಪ್ ಗಳಲ್ಲಿ ತನ್ನ ಮೊದಲ ಹಂತದ ಯಶಸ್ವಿ ತೋಟಗಾರಿಕೆಯ ನಂತರ ಅವರು ಬಿದಿರಿನ ಕಡೆಗೆ ಮುಖ ಮಾಡಿದರು. ಇದು ತುಂಬಾ ಒಳ್ಳೆಯ ಫಲಿತಾಂಶಗಳನ್ನು ನೀಡಿತು. "ಲಂಬವಾದ ತೋಟಗಾರಿಕೆ ದುಬಾರಿಯಾಗಿದೆ ಎಂಬ ತಪ್ಪು ಕಲ್ಪನೆಯನ್ನು ಜನರು ಹೊಂದಿದ್ದಾರೆ, ಆದರೆ ಇದನ್ನು ಬಿದಿರನ್ನು ಆಯ್ಕೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಮಾಡಬಹುದು" ಎಂದು ಅವರು ಹೇಳುತ್ತಾರೆ.ಇದನ್ನೂ ಓದಿ: Cheapest Cooking Oil: ದುಬಾರಿ ಬೆಲೆಯ ಅಡುಗೆ ಎಣ್ಣೆಗಳನ್ನು ಬಿಡಿ, ಕಡಿಮೆ ಬೆಲೆಯ ಈ ಎಣ್ಣೆಯತ್ತ ಮುಖ ಮಾಡಿ

ಎರಡು, ಐದು ಅಡಿಯ ಪಿವಿಸಿ ಪೈಪ್ ಗಳಲ್ಲಿ ತೋಟಗಾರಿಕೆಯನ್ನು ಶುರು ಮಾಡಲು 1,000 ರೂಪಾಯಿ ವೆಚ್ಚ ಮಾಡಬೇಕಾಯಿತು. ನಾಲ್ಕರಿಂದ ಐದು ವಿಧದ ತರಕಾರಿಗಳನ್ನು ಇಲ್ಲಿ ನೆಡಬಹುದು. 50 ರಿಂದ 60 ರೂಪಾಯಿಗಳ ಬೆಲೆಯ ಬಿದಿರಿನಿಂದ ಇದನ್ನು ಮಾಡಬಹುದು. "ನೀವು ಹೊಂದಿರುವ ಪ್ರದೇಶಕ್ಕೆ ಅನುಗುಣವಾಗಿ ಪೈಪ್ ನ ಗಾತ್ರವನ್ನು ನಿರ್ಧರಿಸಬಹುದು. ಎಲೆಗಳಿಂದ ಹಿಡಿದು ಗೆಡ್ಡೆ ಗೆಣಸುಗಳವರೆಗೆ ಎಲ್ಲಾ ತರಕಾರಿಗಳನ್ನು ಈ ರೀತಿ ನೆಡಬಹುದು. ನನ್ನ ತರಕಾರಿಗಳನ್ನು ಪೋಷಿಸಲು ನಾನು ಎರೆಹುಳು ಗೊಬ್ಬರ ವಿಧಾನವನ್ನು ಬಳಸುತ್ತೇನೆ. ಹೀಗಾಗಿ, ಇಡೀ ಉತ್ಪನ್ನವು ಸಾವಯವವಾಗಿದೆ" ಎಂದು ಇವರು ಹೇಳುತ್ತಾರೆ.

ಪಿವಿಸಿ ಪೈಪ್ ಗಳನ್ನು ಬಳಸಿ ತೋಟ ಮಾಡುವುದು ಹೇಗೆ?
 -ಮೊದಲಿಗೆ ಐದು ಅಡಿಯ ಪೈಪ್ ಅನ್ನು ತೆಗೆದುಕೊಳ್ಳಿ ಮತ್ತು ನಿಮ್ಮಲ್ಲಿರುವ ಸಸಿಗಳು ಅಥವಾ ಬೀಜಗಳ ಸಂಖ್ಯೆಗೆ ಅನುಗುಣವಾಗಿ ಅನೇಕ ಭಾಗಗಳನ್ನು ಕತ್ತರಿಸಿಕೊಳ್ಳಿರಿ.

- ಪೈಪ್ ನ 3/4 ಭಾಗವನ್ನು ಮಣ್ಣಿನಿಂದ ತುಂಬಿಸಿ ಮತ್ತು ಅದರಲ್ಲಿ ಬೀಜ/ಸಸಿಯನ್ನು ನೆಡಿ.

- ಎರೆಹುಳು ಗೊಬ್ಬರ ಅಥವಾ ಇತರ ಯಾವುದೇ ಸಾವಯವ ಗೊಬ್ಬರದ ಮಿಶ್ರಣವನ್ನು ಮಣ್ಣಿಗೆ ಸೇರಿಸಿ.

- ಮಣ್ಣಿನ ಮಧ್ಯದಲ್ಲಿ ಒಂದು ರಂಧ್ರವನ್ನು ಮಾಡಿ ಮತ್ತು ಮರಳನ್ನು ಸೇರಿಸಿ.

- ಮರಳಿಗೆ ನೀರುಣಿಸಿ ಇದರಿಂದ ಅದು ಒದ್ದೆಯಾಗಿ ಉಳಿಯುತ್ತದೆ ಮತ್ತು ತೇವಾಂಶವು ಸುಲಭವಾಗಿ ತಳವನ್ನು ತಲುಪುತ್ತದೆ.

ಇದನ್ನೂ ಓದಿ: NO Entry to Indians: ಭಾರತದಲ್ಲಿರುವ ಈ 7 ಸ್ಥಳಗಳಿಗೆ ವಿದೇಶಿಗರಿಗೆ ಮಾತ್ರ ಎಂಟ್ರಿ, ಏಕೆ? ಯಾವುದು ಆ ಸ್ಥಳಗಳು?

- ಮೂರು ವರ್ಷಗಳವರೆಗೆ ಈ ಮಣ್ಣನ್ನು ಬದಲಾಯಿಸುವ ಅಗತ್ಯವಿಲ್ಲ.

- ಮಣ್ಣಿನಲ್ಲಿ ರಂಧ್ರವನ್ನು ಮಾಡುವ ಮೂಲಕ ಹೊಸ ಸಸಿಗಳು / ಬೀಜಗಳನ್ನು ನೆಡಬಹುದು.

- ಸಸಿಗಳಿಗೆ ಮತ್ತು ತರಕಾರಿಗಳಿಗೆ ಕೀಟಗಳು ಆಗದಂತೆ ಮಾಡಲು ಬೇವಿನ ನೀರನ್ನು ಬಳಸಬಹುದು.

ಈ ಪೈಪ್ ಗಳಲ್ಲಿ ಏನೆಲ್ಲಾ ಬೆಳೆಯುತ್ತಾರೆ?
"ನಾನು ಈಗ ಈ ಪೈಪ್ ಗಳಲ್ಲಿ ಬದನೆಕಾಯಿ, ಬೆಂಡೆಕಾಯಿ, ಸ್ಟ್ರಾಬೆರಿ ಮತ್ತು ಎಲೆಕೋಸು ಸಹ ಬೆಳೆಯುತ್ತೇನೆ. ಇದನ್ನು ನೋಡಿದ ಕಿಸಾನ್ ವಿಜ್ಞಾನ ಕೇಂದ್ರದ ಅಧಿಕಾರಿಯೊಬ್ಬರು ಆಶ್ಚರ್ಯಚಕಿತರಾದರು. ಅವರ ಸಲಹೆಯ ಮೇರೆಗೆ, ನಾನು ಕಿಸಾನ್ ಅಭಿನವ್ ಸಮ್ಮಾನ್ ಗೆ ಅರ್ಜಿ ಸಲ್ಲಿಸಿದ್ದೆ ಮತ್ತು ನಂತರ ಅದನ್ನು ಸ್ವೀಕರಿಸಿದೆ" ಎಂದು ಸುನೀತಾ ಹೇಳುತ್ತಾರೆ.

ವಿಡಿಯೋ ಕೃಪೆ: ದಿ ಬೆಟರ್ ಇಂಡಿಯಾಇದನ್ನೂ ಓದಿ: Breakfast: ಮಕ್ಕಳ ವಿಷಯದಲ್ಲಿ ಈ ತಪ್ಪನ್ನು ಮಾಡಬೇಡಿ, ಮಕ್ಕಳಿಗೆ ಬೆಳಗಿನ ಉಪಹಾರ ಈ ರೀತಿ ಇರಲಿ

ಮಾಂಝಿಯಲ್ಲಿರುವ ಕಿಸಾನ್ ವಿಜ್ಞಾನ ಕೇಂದ್ರವು ಅವರಿಗೆ ಆವಿಷ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅವರನ್ನು ಡಿಡಿ ಕಿಸಾನ್ ಮಹಿಳಾ ಕಿಸಾನ್ ಪ್ರಶಸ್ತಿ ಪ್ರದರ್ಶನದಲ್ಲಿ ಸಹ ಸೇರಿಸಲಾಯಿತು. "ನಾವು ಪ್ರತಿದಿನ ಸೇವಿಸುವ ಆಹಾರವು ಅನೇಕ ರಾಸಾಯನಿಕಗಳನ್ನು ಹೊಂದಿರುತ್ತದೆ. ಲಂಬ ಸಾವಯವ ಕೃಷಿಯಿಂದ ಬೆಳೆದ ತರಕಾರಿಗಳು ಜನರ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಹಣವನ್ನು ಉಳಿಸುತ್ತವೆ" ಎಂದು ಸುನೀತಾ ಹೇಳುತ್ತಾರೆ.
Published by:Ashwini Prabhu
First published: