ಈಗಂತೂ ಆನ್‌ಲೈನ್ ಶಾಂಪಿಂಗ್ (Online Shopping) ಭಾರಿ ಟ್ರೆಂಡ್. ಕೂತಲ್ಲೇ ನಮಗೆ ಬೇಕಾದ ವಸ್ತುವನ್ನು ಚಿಟಿಕೆ ಹೊಡೆಯುವುದರಲ್ಲಿ ಆರ್ಡರ್‌ಮಾಡಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು.ಆನ್‌ಲೈನ್‌ನಲ್ಲಿ ಶಾಪಿಂಗ್‌ಮಾಡುವ ವೇಳೆ ನಾವು ಆರ್ಡರ್‌ಮಾಡಿದ ವಸ್ತುವೇ ಸರಿಯಾಗಿ ಬಂದರೆ ಖುಷಿ. ಅದೇ ಬೇರೆಯದ್ದು ಬಂದರೆ ಅದೊಂದು ರೀತಿಯ ಫಜೀತಿ ನೋಡಿ. ಒಮ್ಮೊಮ್ಮೆ ಆರ್ಡರ್‌ಮಾಡಿದ ವಸ್ತುವಿನ ಬದಲಿಗೆ ಮತ್ತೊಂದು ವಸ್ತುವನ್ನು ಪಡೆದ ನೂರಾರು ಘಟನೆಗಳು ನಡೆದಿವೆ. ಅದರಲ್ಲೂ ಇ-ಕಾಮರ್ಸ್ ದೈತ್ಯ ಅಮೆಜಾನ್‌ನಲ್ಲಿ ಈ ಘಟನೆಗಳು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ಅಮೆಜಾನ್‌ನಲ್ಲಿ ಎಲೆಕ್ಟ್ರಿಕ್ ಟೂತ್ ಬ್ರಷ್ (Tooth Brush) ಅನ್ನು ಆರ್ಡರ್‌ಮಾಡಿದ ಮಹಿಳೆಗೆ ಇನ್ಯಾವುದೋ ವಸ್ತುವನ್ನು ಅಮೆಜಾನ್ ಕಳುಹಿಸಿಕೊಟ್ಟಿದೆ ನೋಡಿ. ಅಮೆಜಾನ್ ಅವ್ಯವಸ್ಥೆ ಬಗ್ಗೆ ಮಹಿಳೆಯ ಮಗಳು ಟ್ವಿಟರ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು ಆನ್‌ಲೈನ್ ಶಾಪಿಂಗ್ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾಳೆ.
ಎಲೆಕ್ಟ್ರಿಕ್ ಟೂತ್ ಬ್ರಷ್ ಆರ್ಡರ್ ಮಾಡಿದ ಮಹಿಳೆಗೆ ಸಿಕ್ತು ಚಾಟ್ ಮಸಾಲಾ ಪ್ಯಾಕ್
ಮಹಿಳೆಯೊಬ್ಬರು ಅಮೆಜಾನ್‌ನಲ್ಲಿ 12,000 ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಆರ್ಡರ್ ಮಾಡಿದ್ದರು. ನಂತರ ಆಕೆ ಮಾಡಿದ ಆರ್ಡರ್ ಕೂಡ ಮಹಿಳೆಯ ಕೈ ಸೇರಿತ್ತು. ಹೇಗಿದೆ ಅಂತಾ ಬಾಕ್ಸ್‌ಅನ್ನು ಓಪನ್ ಮಾಡಿದ್ರೆ ಮಹಿಳೆಗೆ ಶಾಕ್ ಕಾದಿತ್ತು.
ಏಕೆಂದರೆ ಎಲೆಕ್ಟ್ರಿಕ್ ಟೂತ್ ಬ್ರಷ್ ಬದಲಿಗೆ ಅಮೆಜಾನ್ ಚಾಟ್ ಮಸಾಲಾ ಪ್ಯಾಕ್‌ಗಳನ್ನು ಕಳುಹಿಸಿಕೊಟ್ಟಿತ್ತು. 12,000 ರೂಪಾಯಿ ಮೌಲ್ಯದ ವಸ್ತುವನ್ನು ಆರ್ಡರ್ ಮಾಡಿದ ಮಹಿಳೆಗೆ ಅಮೆಜಾನ್ ಹತ್ತಿಪ್ಪತ್ತು ರೂಪಾಯಿಯ ಚಾಟ್‌ಮಸಾಲಾ ಪ್ಯಾಕ್‌ಗಳನ್ನು ಕಳುಹಿಸಿದೆ.
ಟ್ವಿಟರ್‌ನಲ್ಲಿ ಈ ಬಗ್ಗೆ ಹಂಚಿಕೊಂಡ ಮಹಿಳೆಯ ಪುತ್ರಿ
ಅಮೆಜಾನ್ ಅವಸ್ಥೆ ಬಗ್ಗೆ ಟ್ವೀಟ್ ಮಾಡಿದ ಮಹಿಳೆ ಈ ಬಗ್ಗೆ ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಹಿಳೆಯ ಮಗಳು ಹೀಗೆ ಬರೆದಿದ್ದಾರೆ, “ಆತ್ಮೀಯ ಅಮೆಜಾನ್, ಒಂದು ವರ್ಷದಿಂದ ಖರೀದಿದಾರರನ್ನು ವಂಚಿಸುತ್ತಿರುವ ಮಾರಾಟಗಾರರನ್ನು ನೀವು ಏಕೆ ತೆಗೆದುಹಾಕಲಿಲ್ಲ?
ಇದನ್ನೂ ಓದಿ: ಮನೆಯಲ್ಲಿಯೇ ಈಸಿಯಾಗಿ ವೈನ್ ತಯಾರಿಸಿ, ಆರೋಗ್ಯಕ್ಕೂ ಒಳ್ಳೆಯದು!
ನನ್ನ ತಾಯಿ 12 ಸಾವಿರ ಮೌಲ್ಯದ ಓರಲ್-ಬಿ ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಆರ್ಡರ್ ಮಾಡಿದ್ದಾರೆ, ಆದರೆ ಅವರು 4 ಬಾಕ್ಸ್ ಚಾಟ್ ಮಸಾಲಾವನ್ನು ಪಡೆದಿದ್ದಾರೆ.ಈ ಚಾಟ್ ಮಸಾಲಾ ಮಾರಾಟಗಾರರು ಜನವರಿ 2022 ರಿಂದ ಡಜನ್ಗಟ್ಟಲೆ ಗ್ರಾಹಕರಿಗೆ ತಮ್ಮ ಉತ್ಪನ್ನವನ್ನು ಹೀಗೆ ಮಾರಾಟ ಮಾಡಿದ್ದಾರೆ” ಎಂದು ಅಮೆಜಾನ್‌ಗೆ ತಿಳಿಸಿದ್ದಾರೆ.
ಯುವತಿ ಅಮೆಜಾನ್ ಕಂಪನಿಯನ್ನು ಟ್ಯಾಗ್ ಮಾಡಿ ಈ ವಿಷಯ ಹಂಚಿಕೊಂಡಿದ್ದು, ತಮಗೆ ಬಂದಿರುವ ಚಾಟ್ ಮಸಾಲಾ ಪ್ಯಾಕ್‌ಗಳ ಫೋಟೋ ಸಹ ಹಂಚಿಕೊಂಡಿದ್ದಾರೆ.
ಅದೃಷ್ಟವಶಾತ್, ಮಹಿಳೆ ಬೆಲೆಬಾಳುವ ಟೂತ್ ಬ್ರಷ್‌ಗೆ ‘ಕ್ಯಾಶ್ ಆನ್ ಡೆಲಿವರಿ’ ಆಯ್ಕೆ ಮಾಡಿಕೊಂಡಿದ್ದರಿಂದ ಹಣ ಪಾವತಿಸಲಿಲ್ಲ. ಬಾಕ್ಸ್ ಯಾಕೋ ಅನುಮಾನ ಹುಟ್ಟಿಸುವಂತೆ ಕಂಡು ಬಂದಿದ್ದರಿಂದ ಅಲ್ಲಿಯೇ ತೆರೆದು ನೋಡಿದ್ದಾಳೆ. ಆಗ ಬ್ರಷ್ ಬದಲಿಗೆ ಚಾಟ್ ಮಸಾಲಾ ಬಾಕ್ಸ್ ಇರುವುದು ಗೊತ್ತಾಗಿದೆ.
ಕಾಮೆಂಟ್ ವಿಭಾಗದಲ್ಲಿ ಇಂತದ್ದೇ ಅನುಭವ ಹಂಚಿಕೊಂಡ ಗ್ರಾಹಕರು
ಯುವತಿ ಟ್ವೀಟ್‌ನಲ್ಲಿ ಈ ವಿಷಯ ಹಂಚಿಕೊಳ್ಳುತ್ತಿದ್ದಂತೆ ಹಲವಾರು ನೊಂದ ಗ್ರಾಹಕರು ತಮಗಾದ ವಂಚನೆಯನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
ಒಬ್ಬ ಬಳಕೆದಾರ ಕಾಮೆಂಟ್ ಮಾಡಿ “ನಾನು ಅಡೀಡಾಸ್ ಶೂಗೆ ಆರ್ಡರ್ ಮಾಡಿದೆ, ಆದರೆ ಖಾಲಿ ಬಾಕ್ಸ್ ಅನ್ನು ನನಗೆ ಕಳುಹಿಸಲಾಗಿತ್ತು. ಮತ್ತೆ ರಿಟರ್ನ್ ಮಾಡಿದರೂ ಅಮೆಜಾನ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದಿದ್ದಾರೆ.
ಅಮೆಜಾನ್ ಇಂತಹವರ ಜೊತೆ ಪಾಲುದಾರಿಕೆ ಹೊಂದಿದ್ದು, ಹಣ ಗಳಿಸುತ್ತಿದೆ. ಹೀಗಾಗಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ. ನಾನೂ ಕೂಡ ಇಂದಹ ವಂಚನೆಯಿಂದ ಮೋಸ ಹೋಗಿದ್ದೇನೆ ಎಂದು ಮತ್ತೊರ್ವ ಗ್ರಾಹಕ ಬರೆದುಕೊಂಡಿದ್ದಾನೆ. ಹೀಗೆ ಏನನ್ನೋ ಆರ್ಡರ್ ಮಾಡಿ, ಇನ್ನೇನನ್ನೋ ಪಡೆದು ಕೈಸುಟ್ಟುಕೊಂಡ ಹಲವಾರು ಗ್ರಾಹಕರು ಇದ್ದಾರೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ