Viral Video: ಬಡವನಾದರೆ ಏನು ಪ್ರಿಯೆ 90 ಸಾವಿರದ ಬೈಕ್ ಕೊಡಿಸುವೆ! ಹೆಂಡತಿಗೆ ಮೊಪೆಡ್ ಗಿಫ್ಟ್ ಕೊಟ್ಟ ಭಿಕ್ಷುಕ
"ನಾನು ದುಡ್ಡಿನಲ್ಲಿ ಬಡವ ಇರಬಹುದು, ಆದರೆ ಹೃದಯದಲ್ಲಿ ಶ್ರೀಮಂತ, ನನ್ನ ಪ್ರೀತಿಯ ರಥದಲ್ಲಿ ನೀನೇ ರಾಣಿ, ನಾನೇ ನಿನ್ನ ಸಾರಥಿ" ಅಂತ ಹೊಸ ಮೊಪೆಡ್ನಲ್ಲಿ ಹೆಂಡತಿಯನ್ನು ಕೂರಿಸಿಕೊಂಡು ಊರೆಲ್ಲಾ ಸುತ್ತಿದ್ದಾನೆ ಈ ಭಿಕ್ಷುಕ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮಧ್ಯ ಪ್ರದೇಶ: “ನಾನು ಬಡವ, ಆಕೆ ಬಡವಿ, ಒಲವೇ ನಮ್ಮ ಬದುಕು” ಅಂತಾರೆ ಕವಿ ದ.ರಾ. ಬೇಂದ್ರೆ (Dara Bendre). “ಬಡವನಾದರೆ ಏನು ಪ್ರಿಯೆ ಕೈತುತ್ತು ತಿನಿಸುವೆ” ಅಂತ ಹಾಡು (Song) ಬರೆಯುತ್ತಾರೆ ಹಿಂದಿನ ಕವಿವರ್ಯರು. ಮಧ್ಯ ಪ್ರದೇಶದ (Madhya Pradesh) ಈ ಭಿಕ್ಷುಕನಿಗೆ (Beggar) ಈ ಮಾತು ನಿಜಕ್ಕೂ ಒಪ್ಪುತ್ತದೆ. ಬಡತನವಿರಲಿ (Poverty), ಸಿರಿತನವಿರಲಿ (Rich) ಗಂಡ ಹೆಂಡತಿ (Husband, Wife) ನಡುವಿನ ಪ್ರೇಮಕ್ಕೆ (Love) ಮಾತ್ರ ಬಡತನ ಇರುವುದಿಲ್ಲ. ಇಳ್ಳಿ ಭಿಕ್ಷುಕನೊಬ್ಬ ತನ್ನ ಹೆಂಡತಿಗೆ ದುಬಾರಿ ಗಿಫ್ಟ್ (Costly Gift) ಕೊಟ್ಟಿದ್ದಾನೆ. ಅದು 90 ಸಾವಿರ ರೂಪಾಯಿಗಳ ಮೊಪೆಡ್ ಬೈಕ್ (Moped Bike) ಗಿಫ್ಟ್. “ನಾನು ದುಡ್ಡಿನಲ್ಲಿ ಬಡವ ಇರಬಹುದು, ಆದರೆ ಹೃದಯದಲ್ಲಿ (Heartly) ಶ್ರೀಮಂತ, ನನ್ನ ಪ್ರೀತಿಯ ರಥದಲ್ಲಿ ನೀನೇ ರಾಣಿ (Queen), ನಾನೇ ನಿನ್ನ ಸಾರಥಿ” ಅಂತ ಹೊಸ ಮೊಪೆಡ್ನಲ್ಲಿ ಆಕೆಯನ್ನು ಕೂರಿಸಿಕೊಂಡು ಊರೆಲ್ಲಾ ಸುತ್ತಿದ್ದಾನೆ. ಇದೀಗ ಈ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ವೈರಲ್ (Viral) ಆಗಿದೆ. ಹಾಗಿದ್ರೆ ಆ ಹೃದಯ ಶ್ರೀಮಂತ ಯಾರು? ಏನು ಈ ಗಂಡ, ಹೆಂಡತಿ ಪ್ರೀತಿಯ ಕಥೆ ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ…
ಹೆಂಡತಿಗೆ ಮೊಪೈಡ್ ಗಿಫ್ಟ್ ಕೊಟ್ಟ ಭಿಕ್ಷುಕ
ಮಧ್ಯ ಪ್ರದೇಶದಲ್ಲಿ ಒಬ್ಬ ಭಿಕ್ಷುಕ ತನ್ನ ಪತ್ನಿಗೆ ಉಡುಗೊರೆಯಾಗಿ 90 ಸಾವಿರ ಮೌಲ್ಯದ ಮೊಪೆಡ್ ಖರೀದಿಸಿ, ಅದನ್ನು ಗಿಫ್ಟ್ ಆಗಿ ಕೊಟ್ಟಿದ್ದಾನೆ. ಛಿಂದ್ವಾರದ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬಾತ ತನ್ನ ಪತ್ನಿ ಮುನ್ನಿಗೆ ಮೊಪೆಡ್ ಖರೀದಿಸಿದ್ದಾನೆ. ಈತ ಪತ್ನಿಗೆ ವಾಹನ ಖರೀದಿಸಲು ಕಳೆದ ನಾಲ್ಕು ವರ್ಷಗಳಿಂದ ಹಣ ಸಂಗ್ರಹಿಸಿದ್ದ ಎನ್ನಲಾಗಿದೆ.
#WATCH A beggar, Santosh Kumar Sahu buys a moped motorcycle worth Rs 90,000 for his wife Munni in Chhindwara, MP
Earlier, we had a tricycle. After my wife complained of backache, I got this vehicle for Rs 90,000. We can now go to Seoni, Itarsi, Bhopal, Indore, he says. pic.twitter.com/a72vKheSAB
— ANI MP/CG/Rajasthan (@ANI_MP_CG_RJ) May 24, 2022
ಊರು ಊರು ಸುತ್ತಾಡಿ ಭಿಕ್ಷೆ ಬೇಡುತ್ತಿದ್ದ ದಂಪತಿ
ಈ ದಂಪತಿ ಊರಿನ ಬಸ್ ನಿಲ್ದಾಣ, ದೇವಸ್ಥಾನ, ಮಸೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಹೀಗೆ ಭಿಕ್ಷೆ ಬೇಡಿ ಪ್ರತಿ ದಿನ 300ರಿಂದ 400 ರೂ ಸಂಗ್ರಹಿಸುತ್ತಿದ್ದರು. ಇನ್ನು ದೇಗುಲಗಳಲ್ಲಿ ಊಟ ಸಿಗುವುದರಿಂದ ಅದಕ್ಕಾಗಿ ಖರ್ಚು ಮಾಡಬೇಕಿದ್ದ ಹಣವನ್ನು ಕೂಡಿಡುತ್ತಿದ್ದರು.
ಕೈಕಾಲು ಸರಿ ಇಲ್ಲದ ವಿಕಲಚೇತನರಾಗಿರುವ ಸಾಹು, ತನ್ನ ಪತ್ನಿ ಮುನ್ನಿ ಜೊತೆಗೆ ಭಿಕ್ಷೆ ಬೇಡುತ್ತಾನೆ. ಮುನ್ನಿ ಮುಂದಕ್ಕೆ ತಳ್ಳುವ ತ್ರಿಚಕ್ರ ವಾಹನದಲ್ಲಿ ಕೂರುತ್ತಿದ್ದರು. ಅಲ್ಲಿನ ಕೆಟ್ಟ ರಸ್ತೆಗಳು ಮತ್ತು ಅನಿರೀಕ್ಷಿತ ಹವಾಮಾನದಿಂದಾಗಿ ದಂಪತಿಗಳು ತಿರುಗಾಡಲು ತೊಂದರೆ ಆಗುತ್ತಿತ್ತು.
ಹೆಂಡತಿ ಕಷ್ಟಪಡುವುದನ್ನು ನೋಡಲಾಗದೇ ಮೊಪೆಡ್ ಖರೀದಿ
ತ್ರಿಚಕ್ರ ವಾಹನವನ್ನು ಬಹಳ ಗಂಟೆಗಳ ಕಾಲ ಮುನ್ನಿಯೇ ತಳ್ಳಬೇಕಿತ್ತು. ಹೀಗಾಗಿ ಮುನ್ನಿ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಹೀಗಾಗಿ ಆಕೆಗಾಗಿ ಮೊಪೆಡ್ ಖರೀದಿಸಲು ಸಾಹು ನಿರ್ಧರಿಸಿದ್ದ. ಇದೀಗ ದಂಪತಿಗಳು ತಮ್ಮ ಮೊಪೆಡ್ ಬೈಕ್ನಲ್ಲಿ ಭಿಕ್ಷೆ ಬೇಡಲು ತಿರುಗುತ್ತಾರೆ.
ಹೀಗೆ ಕಷ್ಟ ಪಟ್ಟು, ಮಳೆ ಬಿಸಿಲು ಚಳಿ ಎನ್ನದೇ, ದೇಗುಲ, ಮನೆ, ಬಸ್ ನಿಲ್ದಾಣ ಎನ್ನದೇ ಬೇಡಿದ ಹಣದಲ್ಲಿ 90 ಸಾವಿರ ಉಳಿಸಿ, ಅದರಲ್ಲಿ ಹೊಸ ಮೊಪೆಡ್ ಖರೀದಿಸಿದ್ದಾರೆ. ಸಾಹು ಹಾರ ಹಾಕಿದ ಮೋಟಾರ್ಸೈಕಲ್ನಲ್ಲಿ ಕುಳಿತಿರುವುದನ್ನು ಮತ್ತು ಮುನ್ನಿ ಅವನ ಪಕ್ಕದಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮುನ್ನಿ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಾಳೆ ಮತ್ತು ಸಾಹು ಮೋಟಾರು ಸೈಕಲ್ ಅನ್ನು ತನ್ನದೇ ಶೈಲಿಯಲ್ಲಿ ಓಡಿಸುತ್ತಾನೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ