• Home
  • »
  • News
  • »
  • trend
  • »
  • Beard Boys: ಗಡ್ಡ ಬಿಟ್ಟ ಗಂಡಸಿಗೆ ಡಿಮ್ಯಾಂಡಿಲ್ಲ ಡಿಮ್ಯಾಂಡು! ಇಲ್ಲಿ ಗಡ್ಡಪ್ಪಂದಿರ ಮದ್ವೆಗೆ ಹೆಣ್ಣೇ ಕೊಡೋದಿಲ್ಲ!

Beard Boys: ಗಡ್ಡ ಬಿಟ್ಟ ಗಂಡಸಿಗೆ ಡಿಮ್ಯಾಂಡಿಲ್ಲ ಡಿಮ್ಯಾಂಡು! ಇಲ್ಲಿ ಗಡ್ಡಪ್ಪಂದಿರ ಮದ್ವೆಗೆ ಹೆಣ್ಣೇ ಕೊಡೋದಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಟ್ಟವಾಗಿ ಗಡ್ಡ ಬಿಟ್ಕೊಂಡು, 'ರಾಕಿ ಭಾಯ್' ತರ ಪೋಸ್ ಕೊಟ್ಕೊಂಡು ಓಡಾಡೋ 'ಗಡ್ಡಪ್ಪಂದಿರಿಗೆ' ಈ ಊರಿನಲ್ಲಿ ಮದುವೆಗೆ ಹೆಣ್ಣೇ ಕೊಡಲ್ವಂತೆ! ಇಲ್ಲೇನಿದ್ದರೂ ಗಡ್ಡ ತೆಗೆದ 'ಕ್ಲೀನ್ ಕೃಷ್ಣಪ್ಪಂದಿರಿಗೆ' ಮಾತ್ರ ಮದುವೆ ಆಗೋಕೆ ವಧು ಕೊಡ್ತಾರಂತೆ!

  • Share this:

ರಾಜಸ್ಥಾನ: ಗಡ್ಡ (Beard), ಮೀಸೆ (Mustache) ಎನ್ನುವುದು ಪುರುಷತ್ವದ ಸಂಕೇತ ಅಂತ ಹಿರಿಯರು ಹೇಳುತ್ತಿದ್ದರು. “ನಾನು ಮೀಸೆ ಬಿಟ್ಟ ಗಂಡಸು (Men) ಕಣೋ” ಅಂತ ತಮ್ಮ ಪೌರುಷದ ಬಗ್ಗೆ ಸಾರಿ ಹೇಳುತ್ತಿದ್ದರು. “ಈ ಪಂದ್ಯದಲ್ಲಿ ನಾನು ಸೋತರೆ ನಾನು ಗಡ್ಡ, ಮೀಸೆ ತೆಗೆತೀನಿ” ಅಂತ ಸವಾಲು ಹಾಕುತ್ತಿದ್ದರು. “ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು (Demand)” ಅಂತ ಹಿಂದೊಮ್ಮೆ ಸ್ಯಾಂಡಲ್‌ವುಡ್ ನಟ, ನಿರ್ದೇಶಕ, ನಿರ್ಮಾಪಕ (Sandalwood Actor, Director, Producer) ಕಾಶಿನಾಥ್ (Kashinath) ಅವರೇ ಸಾರಿ ಸಾರಿ ಹೇಳಿದ್ರು. ‘ಕೆಜಿಎಫ್‌’ ಸಿನಿಮಾ (KGF Cinema) ಬಂದಮೇಲಂತೂ ರಾಕಿಂಗ್ ಸ್ಟಾರ್ ಯಶ್‌ (Rocking Star Yash) ತರ ಗಡ್ಡ ಬಿಡಬೇಕು ಅಂತ ಎಲ್ಲಾ ಹುಡುಗರ ಆಸೆ. ಆದ್ರೆ ಹೀಗೆ ರಾಕಿ ಭಾಯ್ ತರ ಗಡ್ಡ ಬಿಡ್ಕೊಂಡು ಓಡಾಡೋ ಕನಸು ಕಾಣುತ್ತಿರೋ ಹುಡುಗರಿಗೆ ಒಂದು ಶಾಕಿಂಗ್ ನ್ಯೂಸ್ (Shocking News) ಇದೆ. ಅದೇನಪ್ಪಾ ಅಂದ್ರೆ ಹೀಗೆ ದಟ್ಟವಾಗಿ ಗಡ್ಡ ಬಿಟ್ಕೊಂಡು, ರಾಕಿ ಭಾಯ್ ತರ ಪೋಸ್ ಕೊಟ್ಕೊಂಡು ಓಡಾಡೋ ‘ಗಡ್ಡಪ್ಪಂದಿರಿಗೆ’ ಈ ಊರಿನಲ್ಲಿ ಮದುವೆಗೆ (Marriage) ಹೆಣ್ಣೇ ಕೊಡಲ್ವಂತೆ! ಇಲ್ಲೇನಿದ್ದರೂ ಗಡ್ಡ ತೆಗೆದ ‘ಕ್ಲೀನ್ ಕೃಷ್ಣಪ್ಪಂದಿರಿಗೆ’ ಮಾತ್ರ ಮದುವೆ ಆಗೋಕೆ ವಧು (Bride) ಕೊಡ್ತಾರಂತೆ! ಅರೇ ಇದ್ಯಾವುದಪ್ಪಾ ಊರು? ಗಡ್ಡದ ಮೇಲೆ ಇವರಿಗ್ಯಾಕಪ್ಪ ದ್ವೇಷ? ಈ ರೀತಿಯ ಆಚರಣೆಗೆ ಕಾರಣ ಏನು ಅಂತೀರಾ? ಹಾಗಿದ್ರೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…


ಈ ಸಮುದಾಯದಲ್ಲಿ ಗಡ್ಡ ಬಿಟ್ಟವರಿಗೆ ಹೆಣ್ಣು ಕೊಡುವುದಿಲ್ಲ!


ರಾಜಸ್ಥಾನದ ಸಮುದಾಯವೊಂದು ಗಡ್ಡ ಬಿಟ್ಟ ಯುವಕರನ್ನು ಮದುವೆಯಾಗಲು ಬಿಡುವುದಿಲ್ಲ ಎಂದು ನಿರ್ಧರಿಸಿದೆ. ರಾಜ್ಯದ ಪಾಲಿ ಜಿಲ್ಲೆಯ 19 ಗ್ರಾಮಗಳ ಕುಮಾವತ್ ಸಮುದಾಯವು ಅಂಗೀಕರಿಸಿದ ನಿರ್ಣಯದಲ್ಲಿ ಕ್ಲೀನ್ ಶೇವ್ ಹೊಂದಿರುವ ಯುವಕರಿಗೆ ಮಾತ್ರ ಮದುವೆಯಾಗಲು ಅವಕಾಶವಿದೆ ಎಂದು ಹೇಳಿದೆ.


ಈ ಕಠಿಣ ನಿರ್ಧಾರಕ್ಕೆ ಕಾರಣವೇನು?


ಮದುವೆ ಸಂಸ್ಕಾರ ಮತ್ತು ಕೆಲವು ಧಾರ್ಮಿಕ ಆಚರಣೆಗಳಲ್ಲಿ ವರನನ್ನು ರಾಜನಂತೆ ಕಾಣಲಾಗುತ್ತದೆ. ಹಾಗಾಗಿ ಪುರುಷರು ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಇದರೊಂದಿಗೆ 19 ಗ್ರಾಮಗಳ ಪಂಚಾಯಿತಿಯು ಮದುವೆಯ ವೆಚ್ಚವನ್ನು ಕಡಿತಗೊಳಿಸಲು ಮತ್ತು ಅವುಗಳನ್ನು ಸರಳಗೊಳಿಸಲು ಹಲವು ನಿಯಮಗಳನ್ನು ಮಾಡಿವೆ.


ಇದನ್ನೂ ಓದಿ: Beard Care: ನಿಮಗೆ Rocking Star ತರ ದಟ್ಟವಾದ ಗಡ್ಡ ಬೇಕಾ? ಹಾಗಿದ್ರೆ ಈ ಟಿಪ್ಸ್‌ಗಳನ್ನು ಫಾಲೋ ಮಾಡಿ


ಫ್ಯಾಷನ್‌ಗೆ ಅಂತ ಹುಡುಗರು ಗಡ್ಡ ಬಿಡಬಹುದು


ರಾಜಸ್ಥಾನದ ಕುಮಾವತ್ ಸಮುದಾಯವು ಯುವಕರಿಗೆ ಕೆಲವೊಂದು ವಿನಾಯಿತಿಗಳನ್ನು ನೀಡಿದೆ. ಅದೇನಂದರೆ ಯುವಕರು ಫ್ಯಾಷನ್ ಅಂತ ಗಡ್ಡ ಬಿಡಬಹುದು. ಆದರೆ ಮದುವೆಗೆ ಅಂತ ಹೆಣ್ಣು ನೋಡುವಾಗ, ಮದುವೆ ಆಗುವಾಗ ಯಾವುದೇ ಕಾರಣಕ್ಕೂ ಗಡ್ಡ ಬಿಡುವಂತಿಲ್ಲ ಅಂತ ಕಟ್ಟು ನಿಟ್ಟಿನ ನಿಯಮ ಮಾಡಿದೆ.


ಈ ಗ್ರಾಮಗಳ ಮದುವೆಗಳಲ್ಲಿ ಹಲವು ಕಠಿಣ ನಿಯಮ


ಇನ್ನು ಬಂಡೋಲಿ ಗ್ರಾಮ ಪಂಚಾಯತ್ ಮದುವೆಗಳಲ್ಲಿ ನಡೆಯುವ ಡಿಜೆ ಡ್ಯಾನ್ಸ್‌ಗೆ ಆಕ್ಷೇಪ ವ್ಯಕ್ತಪಡಿಸಿ, ಅಧನ್ನು ನಿಷೇಧಿಸಿದೆ. ಮಾತ್ರವಲ್ಲ ಮದುವೆ ಸಮಾರಂಭಗಳಲ್ಲಿ ಗಾಂಜಾ, ಅಫೀಮು ಇತ್ಯಾದಿ ಮಾದಕ ವಸ್ತುಗಳನ್ನು ನಿಷೇಧಿಸಲಾಗಿದೆ.


ಈ ಸಮುದಾಯದನರು ಬೇರೆ ಊರಿನಲ್ಲಿದ್ದರೂ ಈ ನಿಯಮ ಕಡ್ಡಾಯ


ಕುಮಾವತ್ ಸಮುದಾಯದ 19 ಹಳ್ಳಿಗಳಿಂದ ಸುಮಾರು 20,000 ಜನರು ಗುಜರಾತ್, ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳ ವಿವಿಧ ನಗರಗಳಿಗೆ ವಲಸೆ ಹೋಗಿದ್ದಾರೆ. ಅವರು ವಾಸಿಸುವ ನಗರಗಳಲ್ಲಿ ಆಚರಣೆಗಳನ್ನು ಮಾಡಿದರೂ ಅವರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.


ಇದನ್ನೂ ಓದಿ: Goat Marriage: ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ


ನಿಯಮ ಮೀರಿ ಮದುವೆ ಮಾಡಿದ್ರೆ ಭಾರೀ ದಂಡ


ಫ್ಯಾಷನ್ ಹೆಸರಿನಲ್ಲಿ ಥೀಮ್ ಆಧಾರಿತ ಹಳದಿ ಸಮಾರಂಭಗಳನ್ನು ಆಯೋಜಿಸಲು ಜನರು ಬಟ್ಟೆ ಮತ್ತು ಅಲಂಕಾರಕ್ಕಾಗಿ ದುಡ್ಡು ಖರ್ಚು ಮಾಡಿದರೆ, ಅವರಿಗೆ ದಂಡ ವಿಧಿಸಲಾಗುತ್ತದೆ. ಪಾಲಿನಲ್ಲಿ ವಾಸಿಸುವ ಜನರು ಮಾತ್ರವಲ್ಲದೆ ಜಿಲ್ಲೆಯಿಂದ ಬಂದವರು ಸಹ ನಿಯಮಗಳನ್ನು ಅನುಸರಿಸಬೇಕು.

Published by:Annappa Achari
First published: