• Home
  • »
  • News
  • »
  • trend
  • »
  • Viral Video: ತನ್ನ ತಾಯಿಯನ್ನು ರಕ್ಷಿಸಿದ ಪುಟ್ಟ ಬಾಲಕ! ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

Viral Video: ತನ್ನ ತಾಯಿಯನ್ನು ರಕ್ಷಿಸಿದ ಪುಟ್ಟ ಬಾಲಕ! ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ತಾಯಿಯನ್ನು ರಕ್ಷಿಸುತ್ತಿರುವ ದೃಶ್ಯ

ತಾಯಿಯನ್ನು ರಕ್ಷಿಸುತ್ತಿರುವ ದೃಶ್ಯ

ತಾಯಿ ಮಗುವನ್ನು ರಕ್ಷಣೆ ಮಾಡುವುದನ್ನು ನೋಡುವುದು ಸಾಮಾನ್ಯ. ಆದರೆ, ಇಲ್ಲಿ ಮಗು ತಾಯಿಯನ್ನು ರಕ್ಷಣೆ ಮಾಡಿದೆ. ವಿಡಿಯೋ ಫುಲ್​ ವೈರಲ್​ ಆಗಿದೆ.

  • Share this:

ಅದೆಂತಹ ಅಪಾಯ ಸಂದರ್ಭದಲ್ಲಿಯೂ ಕೂಡ ನಮ್ಮನ್ನ ಕಾಪಾಡೋದು ದೇವರು (God)  ಅಂತ ಹೇಳಬಹುದು. ದೇವರ ಪ್ರತೀಕವಾಗಿರುವುದು ತಾಯಿ. ತಾಯಿಯೇ ಮೊದಲ ದೇವರು ಎಂಬ ಮಾತನ್ನು ಕೇಳಿರುತ್ತೇವೆ. ಹಾಗೇಯೇ ಇದು ನಿಜವಾದ ಮಾತು ಕೂಡ. ಏಕೆಂದರೆ, ತನ್ನ ಮಗುವನ್ನು 9 ತಿಂಗಳುಗಳ (9 Months) ಕಾಲ ಹೊತ್ತು ಹೆತ್ತು ಸಾಕಿ ಸಲಹುತ್ತಾರೆ. ಆ ಮಗು ಎಷ್ಟು ದೊಡ್ಡದಾದ ನಂತರವೂ ಅದನ್ನೂ ಇನ್ನೂ ಮಗುವಿನಂತೆಯೇ ನೋಡಿಕೊಳ್ಳುತ್ತಾರೆ ತಾಯಿ. ಅದುವೇ ಮಗು ದೊಡ್ಡ ಆಗ್ತಾ ಆಗ್ತಾ, ಕೆಲ ಮಕ್ಕಳು ಪೋಷಕರು (Parents) ಚೆನ್ನಾಗಿ ನೋಡಿಕೊಳ್ಳುತ್ತಾರೆ, ಇನ್ನೂ ಕೆಲವೊಬ್ಬರು ಎಲ್ರಿಗೂ ಗೊತ್ತಿರುವ ಹಾಗೆಯೇ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಇದಂತೂ ವಿಷಾಧನೀಯ ಸಂಗತಿ ಅಂತಾನೇ ಹೇಳಬಹುದು.


ಆದರೆ ಇಲ್ಲೊಂದು ಮಗು ತನ್ನ ತಾಯಿಯನ್ನು   ಅದೆಂತಹಾ ಅಪಾಯದಿಂದ ರಕ್ಷಿಸಿದೆ ಎಂದು ನೋಡಿದ್ರೇ ಪಕ್ಕಾ ನೀವು ಶಾಕ್​ ಆಗ್ತೀರಾ? ಯಾಕೆ ಗೊತ್ತಾ? ಮನುಷ್ಯ ದೊಡ್ಡವರಾದ ಮೇಲೆ ತಮ್ಮ ತಮ್ಮ ಪೋಷಕರನ್ನು ನೋಡಿಕೊಳ್ಳುವುದು ಇದ್ದೇ ಇರುತ್ತದೆ. ಆದರೆ, ಇಲ್ಲಿ ಒಂದು ಸಣ್ಣ ಬಾಲಕ ಅದೆಂತಾ ದೊಡ್ಡ ಅಪಾಯದಿಂದ ತನ್ನ ತಾಯಿಯನ್ನು ಬಚಾವ್​ ಮಾಡಿದೆ ಅಂತ ವಿಡಿಯೋ ವೈರಲ್​ ಆಗಿದೆ.


ಇದನ್ನೂ ಓದಿ: ಈ ಚಿತ್ರದಲ್ಲಿ 8 ಎಷ್ಟು ಬಾರಿ ಇದೆ? ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!


ತಾಯಿ ಒಂದು ಕಟ್ಟಡದಲ್ಲಿ ಏಣಿಯ ಮೇಲೆ ನಿಂತು ಏನನ್ನೋ ತೆಗಿಯುತ್ತಾ ಇರುತ್ತಾಳೆ, ತನ್ನ ಕಾಲು ಜಾರಿ, ಏಣಿಯು ಬೀಳುತ್ತದೆ.  ಅದಾಗ ತಾಯಿ ಅಲ್ಲೇ ಇದ್ದ ತನ್ನ ಮಗುವನ್ನು ರಕ್ಷಿಸು ಪಾಪು , ಹೆಲ್ಪ್​ ಮಾಡು ಅಂತ ಜೋರಾಗಿ ಕೂಗುತ್ತಾಳೆ. ಆಹಾ ಆ ಪುಟ್ಟ ಬಾಲಕನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಆದರೂ ಕೂಡ ಅಲ್ಲೇ ಪಕ್ಕದಲ್ಲಿ ಇದ್ದ ಏಣಿಯನ್ನು ಎಷ್ಟು ಬೇಗ ತಾಯಿಗೆ ಗ್ರಿಪ್​ ಸಿಗುವ ಹಾಗೆ ಇಡುತ್ತದೆ ಅಂದ್ರೆ, ಎಂಥವರಿಗಾದ್ರೂ ಆಶ್ಚರ್ಯವಾಗುತ್ತದೆ.


ಯಾಕೆಂದರೆ ಅಷ್ಟು ಪುಟ್ಟ ಬಾಲಕ ತನ್ನ ತಾಯಿಗೆ ಅದೆಂಥಾ ಸಹಾಯ ಮಾಡುತ್ತದೆ ಅಂದ್ರೆ, ಅದ್ರಲ್ಲೂ ಚಿಕ್ಕ ಸಮಯದಲ್ಲಿ ತಾಯಿಯ ಪ್ರಾಣವನ್ನು ರಕ್ಷಿಸಿದ್ದಾನೆ ಪುಟ್ಟ ಬಾಲಕ.  ಏಣಿ ಬಿದ್ದ ಕೂಡಲೆ ಓಡಿ ಹೋಗಿ ಆ ಏಣಿಯನ್ನು ಯಾವ ರೀತಿಯಾಗಿ ಅದನ್ನು ಎತ್ತಲು ಪ್ರಯತ್ನ ಮಾಡುತ್ತಾನೆ  ಅಂದ್ರೆ,  ಆ ಪುಟ್ಟ ಹುಡುಗನಿಗೆ ಏಣಿಯನ್ನು ಎತ್ತಲೂ ಆಗೋಲ್ಲ. ಯಾಕೆಂದರೆ, ಅಷ್ಟು ಭಾರವಿರುತ್ತದೆ.  ಆದ್ರೂ ಕೂಡ ಎಣಿಯು ತನ್ನು ತಾಯಿಯ ಕಾಲಿಗೆ ಎಟುಕುವ ತನಕ ಮೇಲಿತ್ತಿ, ಒಂದು ಬದಿಯಲ್ಲಿ ಹಿಡಿದುಕೊಂಡು ನಿತ್ತಿರುತ್ತಾನೆ ಆ ಪುಟ್ಟ ಬಾಲಕ.ದಿಪನ್ಶು ಕಬ್ರ ಎಂಬುವವರು  ​ತಮ್ಮ ಟ್ಟಿಟ್ಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್​ ಮಾಡಿದ್ದಾರೆ. 1 ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ಜೊತೆಗೆ ಮಗುವೇ ದೇವರಾಯಿತು, ಮುಂದೆನೂ ಹೀಗೆ ನಿನ್ನ ತಾಯಿಯನ್ನು ನೋಡಿಕೋ ಅಂತ ಹಲವಾರು ಮೆಚ್ಚುಗೆಯ ಕಮೆಂಟ್ಸ್​ಗಳು ಬಂದಿದೆ.

First published: