• Home
  • »
  • News
  • »
  • trend
  • »
  • Contact Lenses: ಅಬ್ಬಬ್ಬಾ, ಈ ಮಹಿಳೆಯ ಕಣ್ಣಲ್ಲಿತ್ತಂತೆ 23 ಕಾಂಟ್ಯಾಕ್ಟ್‌ ಲೆನ್ಸ್! ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ

Contact Lenses: ಅಬ್ಬಬ್ಬಾ, ಈ ಮಹಿಳೆಯ ಕಣ್ಣಲ್ಲಿತ್ತಂತೆ 23 ಕಾಂಟ್ಯಾಕ್ಟ್‌ ಲೆನ್ಸ್! ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜನರು ಕನ್ನಡಕದ ಬದಲಿಗೆ ಸುಲಭವಾಗಿ ಧರಿಸಬಹುದಾದ ಲೆನ್ಸ್‌ ಅನ್ನೇ ಉಪಯೋಗಿಸ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಅದೇ ಕಾಂಟ್ಯಾಕ್ಟ್‌ ಲೆನ್ಸ್ ವಿಚಾರದಲ್ಲಿ ಬಹಳ ದೊಡ್ಡ ಯಡವಟ್ಟನ್ನೇ ಮಾಡಿಕೊಂಡಿದ್ದಾಳೆ. ಆದ್ರೆ ಆಕೆಯ ಪುಣ್ಯ… ಅದನ್ನು ಸರಿಮಾಡುವಲ್ಲಿ ವೈದ್ಯರು ಯಶಸ್ವಿ ಆಗಿದ್ದಾರೆ.

  • Share this:

ದೃಷ್ಟಿ ಸಮಸ್ಯೆಯ (Vision Problem) ಕಾರಣದಿಂದ ಹಾಕಿಕೊಳ್ಳುವ ಕಾಂಟ್ಯಾಕ್ಟ್‌ ಲೆನ್ಸ್ ಈಗ ಬಹಳಷ್ಟು ಜನಪ್ರಿಯ. ಜನರು ಕನ್ನಡಕದ ಬದಲಿಗೆ ಸುಲಭವಾಗಿ ಧರಿಸಬಹುದಾದ ಲೆನ್ಸ್‌ (Lens) ಅನ್ನೇ ಉಪಯೋಗಿಸ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಅದೇ ಕಾಂಟ್ಯಾಕ್ಟ್‌ ಲೆನ್ಸ್ ವಿಚಾರದಲ್ಲಿ ಬಹಳ ದೊಡ್ಡ ಯಡವಟ್ಟನ್ನೇ ಮಾಡಿಕೊಂಡಿದ್ದಾಳೆ. ಆದ್ರೆ ಆಕೆಯ ಪುಣ್ಯ… ಅದನ್ನು ಸರಿಮಾಡುವಲ್ಲಿ ವೈದ್ಯರು (Doctors) ಯಶಸ್ವಿ ಆಗಿದ್ದಾರೆ. ಅಮೆರಿಕದಲ್ಲಿ (America) ಮಹಿಳೆಯೊಬ್ಬಳು ಈ ಯಡವಟ್ಟು ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಹಾಕಿಕೊಂಡಿದ್ದ ಲೆನ್ಸ್‌ ಅನ್ನು ರಾತ್ರಿ ತೆಗೆದಿಡಲು ಮರೆತು ಹೊಸ ಹೊಸ ಲೆನ್ಸ್‌ ಅನ್ನೇ ಹಾಕಿಕೊಂಡಿದ್ದಾರೆ. ಒಂದು ತಿಂಗಳ ಕಾಲ ಕಣ್ಣಿನಲ್ಲಿರುವ (Eyes) ಲೆನ್ಸ್‌ ಅನ್ನು ತೆಗೆಯದೇ ಹೊಸ ಲೆನ್ಸ್‌ ಗಳನ್ನು ಉಪಯೋಗಿಸ್ತಾ ಬಂದಿದ್ದಾಳೆ.


ಮಹಿಳೆಯ ಕಣ್ಣಿನಲ್ಲಿತ್ತು 23 ಕಾಂಟ್ಯಾಕ್ಟ್‌ ಲೆನ್ಸ್ ಗಳು
ಆಕೆಯ ಕಣ್ಣಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 23 ಲೆನ್ಸ್‌ ಗಳು ಸೇರಿಕೊಂಡಿದ್ದವು. ಇನ್ನು ಈ ಮಹಿಳೆಯ ಲೆನ್ಸ್‌ ತೆಗೆದ ನೇತ್ರಶಾಸ್ತ್ರಜ್ಞ ಡಾ. ಕ್ಯಾಟೆರಿನಾ ಕುರ್ತೀವಾ ಅವರು, ಲೆನ್ಸ್‌ ತೆಗೆಯುವ ಪ್ರಕ್ರಿಯೆಯನ್ನು ವಿವರಿಸುವಂಥ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಖತ್‌ ವೈರಲ್‌ ಆಗಿದ್ದು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
ಇದನ್ನೂ ಓದಿ: Kerala: ಅದೃಷ್ಟ ಅಂದ್ರೆ ಇದೇ: ಇತ್ತ ಸಾಲ ವಸೂಲಾತಿಗೆ ನೋಟಿಸ್ ಬಂದ್ರೆ ಅತ್ತ ಲಾಟರಿ ಕೈ ಹಿಡಿಯಿತು!


ವಿಡಿಯೋದಲ್ಲಿ ಕಣ್ಣಿನ ರೆಪ್ಪೆಯನ್ನು ಮೇಲಕ್ಕೆತ್ತಿ ಹತ್ತಿ ಉಣ್ಣೆಯನ್ನು ಬಳಸಿ ಅದರ ಕೆಳಗಿನಿಂದ ಹಸಿರು ಬಣ್ಣದ ಲೆನ್ಸ್‌ ಗಳನ್ನು ತೆಗೆಯುವುದನ್ನು ತೋರಿಸಲಾಗಿದೆ. ನಂತರ ಅವರು ಮಸೂರಗಳನ್ನು ಎಚ್ಚರಿಕೆಯಿಂದ ಬೇರ್ಪಡಿಸಲು ಶಸ್ತ್ರಚಿಕಿತ್ಸಾ ಉಪಕರಣವನ್ನು ಬಳಸುತ್ತಾರೆ.


ಈ ಬಗ್ಗೆ ವೈದ್ಯರು ಏನು ಹೇಳಿದ್ದಾರೆ?
ಅಷ್ಟಕ್ಕೂ ಈ ಬಗ್ಗೆ ವಿವರಿಸಿದ ಡಾ ಕ್ಯಾಟೆರಿನಾ , ರೋಗಿಯು ತನ್ನ ಕಣ್ಣಿನಲ್ಲಿ ನೋವಿದೆ ಎಂದು ಹೇಳುತ್ತಾ ತನ್ನ ಬಳಿಗೆ ಬಂದರು. ಕಣ್ಣಿನಲ್ಲಿ ಬೇರೆನಾದರೂ ವಸ್ತುಗಳು ಸೇರಿಕೊಂಡಿವೆಯೇ ಅಥವಾ ಗೀರುಗಳಾಗಿವೆಯೇ ಎಂದು ಹುಡುಕುವುದು ತನ್ನ ಆಲೋಚನೆಯಾಗಿತ್ತು. ಹಾಗೆ ನೋಡಿದರೂ ಏನೂ ಸಿಗದಿದ್ದಾಗ ಕಣ್ಣುಗಳನ್ನು ಇನ್ನಷ್ಟು ಆಳವಾಗಿ ಪರೀಕ್ಷಿಸಲಾಯ್ತು. ಅದಕ್ಕಾಗಿ ತಾವು ರೋಗಿಯ ಮೇಲಿನ ಮತ್ತು ಕೆಳಗಿನ ಕಣ್ಣುರೆಪ್ಪೆಗಳನ್ನು ತೆರೆಯಲು ಕಣ್ಣಿನ ರೆಪ್ಪೆಯ ಸ್ಪೆಕ್ಯುಲಮ್ ಅನ್ನು ಬಳಸಿದ್ದಾಗಿ ವೈದ್ಯರು ಹೇಳಿದ್ದಾರೆ.ನಂತರ ಆಕೆಗೆ ಕೆಳಗೆ ನೋಡಲು ಹೇಳಿ ಅವಳ ಕಾಂಟಾಕ್ಟ್‌ ಲೆನ್ಸ್‌ ಗಳನ್ನು ತೆಗೆದುಹಾಕಲಾಗುತ್ತದೆ. ಈ ಮಧ್ಯೆ ವೈದ್ಯರಾದ ಕ್ಯಾಟಿರಿನಾ ತನ್ನ ಪೇಶೆಂಟ್‌ ಅದೃಷ್ಟಶಾಲಿ. ಅವಳ ಕಣ್ಣಿಗೆ ಯಾವುದೇ ಅಪಾಯವಾಗಿಲ್ಲ. ಕಣ್ಣಿನ ಕಾರ್ನಿಯಾ ಸ್ಕ್ರಾಚ್ ಆಗಲಿಲ್ಲ. ಹಾಗೆಯೇ ಕಣ್ಣಿನಲ್ಲಿ ಸೋಂಕು ಕೂಡ ಇರಲಿಲ್ಲ. ಲೆನ್ಸ್‌ ಗಳನ್ನು ತೆಗೆದಾದ ಮೇಲೆ ಅವಳ ಕಣ್ಣನ್ನು ಬಟ್ಟಿ ಇಳಿಸಿದ ನೀರಿನಿಂದ ತೊಳೆದು ಡ್ರಾಪ್ಸ್‌ ಹಾಕಲಾಯ್ತು ಎಂದರು.


ಇದನ್ನೂ ಓದಿ:  Viral Video: ಪುಟ್ಟ ಮಗು ಶವವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ! ಸರ್ಕಾರಿ ಆಸ್ಪತ್ರೆಯಲ್ಲೂ ಬಡಜನರಿಗಿಲ್ಲ ಸವಲತ್ತು!


ರೋಗಿಯು ಮಸೂರಗಳನ್ನು ತೆಗೆದುಹಾಕಲು ಹೇಗೆ ಮರೆತಿದ್ದಾನೆ ಎಂಬುದರ ಕುರಿತು ಖಚಿತವಾಗಿ ಹೇಳಲಾಗುವುದಿಲ್ಲ ಎನ್ನುವ ವೈದ್ಯರು, ಆಕೆ ದೀರ್ಘಕಾಲದವರೆಗೆ ಮಸೂರಗಳನ್ನು ಧರಿಸುವ ಅಭ್ಯಾಸವನ್ನು ಹೊಂದಿದ್ದರಿಂದ 23 ಮಸೂರಗಳೊಂದಿಗೆ ಅವಳು ತುಂಬಾ ಕಿರಿಕಿರಿಯನ್ನೇನು ಅನುಭವಿಸಲಿಲ್ಲ ಎಂದರು. ಇನ್ನು, ವಯಸ್ಸಾದವರ ಕಣ್ಣಿನ ರೆಪ್ಪೆಯ ಫೋರ್ನಿಕ್ಸ್, ಕಡಿಮೆ ಸೂಕ್ಷ್ಮ ಸ್ಥಳವು ಹೆಚ್ಚು ಆಳವಾಗಿರುತ್ತದೆ. ಹೀಗಾಗಿ ಕಾಂಟ್ಯಾಕ್ಟ್ ಲೆನ್ಸ್‌ಗಳು ಸ್ವಲ್ಪ ಸಮಯದವರೆಗೆ ಅವಳಿಗೆ ತೊಂದರೆಯಾಗದಂತೆ ಕುಳಿತುಕೊಂಡಿದ್ದವು ಎನ್ನುವ ವೈದ್ಯ ಕುರ್ತೀವಾ, ಈ ರೋಗಿಯ ಕಥೆಯು ಕಾಂಟ್ಯಾಕ್ಟ್ ಲೆನ್ಸ್ ನೈರ್ಮಲ್ಯದ ಬಗ್ಗೆ ಇತರರಿಗೆ ತಿಳಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ.


ಲೆನ್ಸ್‌ ಗಳನ್ನು ಬಳಸುವಾಗ ಎಚ್ಚರದಿಂದಿರಿ 
ಒಟ್ಟಿನಲ್ಲಿ ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿರೋದ್ರಿಂದ ಲೆನ್ಸ್‌ ಗಳನ್ನು ಬಳಸುವಾಗ ಸಾಕಷ್ಟು ಜಾಗೃತೆ ವಹಿಸಬೇಕು. ಅಲ್ಲದೇ ಅವರ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ನಿಗಾ ವಹಿಸಬೇಕು. ಅಲ್ಲದೇ ಹೋದರೆ ಕಣ್ಣಿನ ಸೂಕ್ಷ್ಮ ಭಾಗಗಳಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಈ ಮಹಿಳೆಯ ಕಥೆ ಲೆನ್ಸ್‌ ಧರಿಸುವವರಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಮಾಡುವತ್ತದೆ ಅನ್ನೋದ್ರಲ್ಲಿ ಡೌಟಿಲ್ಲ!

Published by:Ashwini Prabhu
First published: