Viral Video: ಈ 80 ವರ್ಷದ ಅಜ್ಜಿಯ ಸಾಹಸ ನೋಡಿ ನೀವೇ ಬೆರಗಾಗಿ ಬಿಡ್ತೀರಾ! ಅಂತಿಂಥಾ ಅಜ್ಜಿ ಇವರಲ್ಲಾ

ಇಲ್ಲೊಬ್ಬರು ಅಜ್ಜಿ ಮೊಮ್ಮಗನ ಫಿಟ್ನೆಸ್ ಚಾಲೆಂಜನ್ನು ಸ್ವೀಕರಿಸಿ ಭಾರ ಎತ್ತುವ ದೃಶ್ಯ ಎಲ್ಲರನ್ನೂ ಬಹುವಾಗಿ ಸೆಳೆದಿದೆ.ಮೊಮ್ಮಗನ ಸವಾಲಿಗೆ 80ರ ವರ್ಷದಲ್ಲೂ ಅಜ್ಜಿ ಇಂಥ ಸಾಹಸ ಮಾಡಿರುವುದು ಮೆಚ್ಚಲೇಬೇಕು.

 80 ವರ್ಷದ ಮಹಿಳೆ ಬಾರ್ಬೆಲ್ ಎತ್ತುವ ದೃಶ್ಯ

80 ವರ್ಷದ ಮಹಿಳೆ ಬಾರ್ಬೆಲ್ ಎತ್ತುವ ದೃಶ್ಯ

  • Share this:
    ಸಾಮಾಜಿಕ ಮಾಧ್ಯಮದ (Social Media) ಪ್ರಪಂಚವು ಲಕ್ಷಾಂತರ ತಮಾಷೆಯ ವೀಡಿಯೊಗಳಿಂದ ತುಂಬಿದೆ. ಪ್ರತಿದಿನ ಇಲ್ಲಿ ಹೆಚ್ಚಿನ ಸಂಖ್ಯೆಯ ವೀಡಿಯೊಗಳನ್ನು ವೀಕ್ಷಿಸಲಾಗುತ್ತದೆ ಮತ್ತು ಅಪ್‌ಲೋಡ್ (Upload) ಮಾಡಲಾಗುತ್ತದೆ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸುವ ವಿಡಿಯೋಗಳು ಕೆಲವು ಮಾತ್ರ. ಪ್ರಸ್ತುತ ವೀಡಿಯೊವೊಂದು ವಿವಿಧ ಸಾಮಾಜಿಕ ವೇದಿಕೆಗಳಲ್ಲಿ (Google Trend Today) ಸಾಕಷ್ಟು ವಿಕ್ಷೀಸಲಾಗುತ್ತಿದೆ. ಒಮ್ಮೊಮ್ಮೆ ಉತ್ಸಾಹಿ ಅಜ್ಜ ಅಜ್ಜಿ ತಮ್ಮ ಅದ್ಭುತ ಜೀವನೋಲ್ಲಾಸದಿಂದಲೇ ಚಕಿತಗೊಳಿಸುತ್ತಾರೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಇಲ್ಲೊಬ್ಬರು ಅಜ್ಜಿ ಮೊಮ್ಮಗನ ಫಿಟ್ನೆಸ್ (Fitness) ಚಾಲೆಂಜನ್ನು (Challenge) ಸ್ವೀಕರಿಸಿ ಭಾರ ಎತ್ತುವ ದೃಶ್ಯ ಎಲ್ಲರನ್ನೂ ಬಹುವಾಗಿ ಸೆಳೆದಿದೆ. ಎಲ್ಲರಲ್ಲೂ ಮುಗುಳ್ನಗೆ ಮೂಡಿಸುವಲ್ಲಿ ಈ ವಿಡಿಯೋ (Video) ಯಶಸ್ವಿಯಾಗಿದೆ.

    ನಮ್ಮನ್ನು ಸೆಳೆಯುವಂತಹ ಒಂದಲ್ಲ ಒಂದು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಇಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಬಹುತೇಕ ದೃಶ್ಯಗಳು ನಮ್ಮನ್ನು ಹುಬ್ಬೇರಿಸುವಂತೆಯೂ ಮಾಡುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡುವಾಗ ಅಚ್ಚರಿಯೂ ಆಗುತ್ತದೆ, ಖುಷಿಯೂ ಆಗುತ್ತದೆ.

    ಇದನ್ನೂ ಓದಿ: Octopus Facts: ಸಂಭೋಗದ ನಂತ್ರ ಚಿತ್ರಹಿಂಸೆ ಕೊಟ್ಟು ಅಕ್ಟೋಪಸ್​ಗಳು ತಮ್ಮನ್ನು ತಾವೇ ತಿನ್ನುವುದೇಕೆ?

    ಅಜ್ಜ ಅಜ್ಜಿಯೊಂದಿಗೆ ಕಳೆಯುವ ಕ್ಷಣಗಳು ಸುಂದರ. ಪ್ರೀತಿಯ ಪರ್ವತದಂತಿರುವ ಅಜ್ಜ ಅಜ್ಜಿಯ ಮಮತೆ ಸದಾ ಅಪೂರ್ವ.

    ಒಮ್ಮೊಮ್ಮೆ ಉತ್ಸಾಹಿ ಅಜ್ಜ ಅಜ್ಜಿ ತಮ್ಮ ಅದ್ಭುತ ಜೀವನೋಲ್ಲಾಸದಿಂದಲೇ ಚಕಿತಗೊಳಿಸುತ್ತಾರೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ

    .ಅಜ್ಜಿ ವೇಟ್‌ ಲಿಫ್ಟಿಂಗ್‌ ಮಾಡುವ ವಿಡಿಯೋ ವೈರಲ್

    ಮೊಮ್ಮಗನ ಸವಾಲು ಸ್ವೀಕರಿಸಿದ ಅಜ್ಜಿ ವೇಟ್‌ ಲಿಫ್ಟಿಂಗ್‌ ಮಾಡುವ ದೃಶ್ಯ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಈ ವಿಡಿಯೋವನ್ನು punjabi_industry__ ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.




    ವೀಡಿಯೊ ಇದುವರೆಗೆ 7,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 491 ಕ್ಕೂ ಹೆಚ್ಚು ಇಷ್ಟಗಳನ್ನು ಪಡೆದುಕೊಂಡಿದೆ.

    ಟರೇಸ್‌ ಮೇಲೆ 80 ವರ್ಷದ ಮಹಿಳೆ ಬಾರ್ಬೆಲ್ ಎತ್ತುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ದೃಶ್ಯವನ್ನು ಅಲ್ಲಿದ್ದ ಯುವಕರೊಬ್ಬರು ಸೆರೆ ಹಿಡಿಯುತ್ತಿರುತ್ತಾರೆ. ಅತ್ಯಂತ ಸಲೀಸಾಗಿ ಅಜ್ಜಿ ಈ ಭಾರವನ್ನು ಎತ್ತುತ್ತಾರೆ. ಈ ಬಾರ್ಬೆಲ್ ಕಡಿಮೆ ತೂಕ ಇದ್ದಂತೆ ಕಂಡರೂ ತಾನು ನೀಡಿದ ಚಾಲೆಂಜನ್ನು ಈ ವಯಸ್ಸಿನಲ್ಲಿ ಅಜ್ಜಿ ಸಲೀಸಾಗಿ ಪೂರ್ಣಗೊಳಿಸುತ್ತಾರೆ ಎಂದು ಬಹುಶಃ ಈ ಯುವಕ ಅಂದುಕೊಂಡಿರಲಿಕ್ಕಿಲ್ಲ. ಆದರೆ, ಅಜ್ಜಿಯ ಉತ್ಸಾಹ ಕಂಡು ಈ ಯುವಕನೂ ದಂಗಾಗಿದ್ದ. ಅಜ್ಜಿಯ ಸುಲಭವಾಗಿ ಬಾರ್ಬೆಲ್ ಎತ್ತುವ ಜತೆಗೆ ಒಂದಷ್ಟು ಸೆಕೆಂಡುಗಳ ಕಾಲ ಅದನ್ನು ಆರಾಮವಾಗಿ ಹಿಡಿದಿಟ್ಟುಕೊಳ್ಳುವುದನ್ನೂ ಇಲ್ಲಿ ನೋಡಬಹುದು. ನಂತರ ಮೊಮ್ಮಗನೇ ಈ ಬಾರ್ಬೆಲನ್ನು ಕೆಳಗಿಡಲು ಸಹಾಯ ಮಾಡುತ್ತಾನೆ.

    ಇದನ್ನೂ ಓದಿ: Pet Dog: ನಂದಿ ವಿಗ್ರಹ ಮುಟ್ಟಿ ನಮಸ್ಕರಿಸಿದ ನಾಯಿ! ಕ್ಯೂಟ್ ವಿಡಿಯೋ ಹುಟ್ಟಿಹಾಕಿತು ಹೊಸ ವಿವಾದ

    ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ

    ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಖುಷಿಯಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಈ ದೃಶ್ಯವನ್ನು ಕಂಡ ಕೆಲವರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನಿಮಗೆ ಕೂಡಾ ಈ ದೃಶ್ಯ ಖುಷಿ ಕೊಟ್ಟಿರಬಹುದು. ಮೊಮ್ಮಗನ ಸವಾಲಿಗೆ 80ರ ವರ್ಷದಲ್ಲೂ ಅಜ್ಜಿ ಇಂಥ ಸಾಹಸ ಮಾಡಿರುವುದು ಮೆಚ್ಚಲೇಬೇಕು.
    Published by:Swathi Nayak
    First published: