• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • McDonald’s: ಮೆಕ್‌ಡೊನಾಲ್ಡ್ ಚಿಕನ್​ನಿಂದಾಗಿ 4 ವರ್ಷದ ಮಗುವಿಗೆ ಸುಟ್ಟಗಾಯ, ಕೇಸ್ ದಾಖಲಿಸಿದ ಪೋಷಕರು

McDonald’s: ಮೆಕ್‌ಡೊನಾಲ್ಡ್ ಚಿಕನ್​ನಿಂದಾಗಿ 4 ವರ್ಷದ ಮಗುವಿಗೆ ಸುಟ್ಟಗಾಯ, ಕೇಸ್ ದಾಖಲಿಸಿದ ಪೋಷಕರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೋಟೆಲ್​ ಫುಡ್​ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಕೆಲವೊಮ್ಮೆ ಇದೇ ಸಮಸ್ಯೆಗೆ ಗುರಿಯಾಗುತ್ತೆ. ಅದೇ ರೀತಿ ಇಲ್ಲಿಯೂ ಸಹ ಹೀಗೆ ಬಿಸಿಯಾದ ಚಿಕನ್ ಐಟಂ ಅನ್ನು ತೆಗೆದುಕೊಂಡು ಹೋಗಿ ತಾಯಿ ತನ್ನ ಮಗಳಿಗೆ ನೀಡಿದ್ದಾಳೆ. ಅದು ವಿಪರೀತ ಬಿಸಿಯಾಗಿರುವುದರಿಂದ ಎಂತಹ ಎಡವಟ್ಟಾಗಿದೆ ನೋಡಿ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ನಾವು ಹೋಟೆಲ್ (Hotel) ಇಲ್ಲವೇ ರೆಸ್ಟೋರೆಂಟ್‌ಗಳಿಗೆ ಕರೆದುಕೊಂಡು ಹೋದಾಗ ಅವರು ಬಿಸಿಯಾದ ತಿಂಡಿಗಳನ್ನು ಒಮ್ಮೆಲೆ ಸ್ಪರ್ಶಿಸುತ್ತಾರೆ ಹಾಗಾಗಿ ಮಕ್ಕಳ (Childrens) ಕೈಗೆ ಬಿಸಿ ತಿಂಡಿಗಳನ್ನು ನೀಡುವಾಗ ‘ತುಂಬಾ ಬಿಸಿಯಾಗಿದೆ, ಸ್ವಲ್ಪ ತಣ್ಣಗೆ ಮಾಡಿಕೊಂಡು ತಿನ್ನು’ ಅಂತ ಸಾಮಾನ್ಯವಾಗಿ ಹೇಳುತ್ತೇವೆ. ಆದರೂ ಸಹಿತ ಮಕ್ಕಳು ಕೆಲವೊಮ್ಮೆ ಆಹಾರವನ್ನು ಬೇಗನೆ ಬಾಯಿಗೆ ಹಾಕಿಕೊಳ್ಳಬೇಕು ಎಂಬ ತರಾತುರಿಯಲ್ಲಿ ಬಾಯಿಯೊಳಗಿನ ಮೃದುವಾದ ಚರ್ಮವನ್ನು ಸುಟ್ಟು ಕೊಳ್ಳುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.


ರೆಸ್ಟೋರೆಂಟ್​​ಗಳು ಸಹ ಹೀಗೆ ಬಿಸಿ ಆಹಾರ ಕೊಡುವಾಗ, ಅದು ಎಷ್ಟರ ಮಟ್ಟಿಗೆ ಬಿಸಿಯಾಗಿದೆ ಅಂತ ಒಮ್ಮೆ ಗ್ರಾಹಕರಿಗೆ ತಿಳಿಸುವುದು ಒಳ್ಳೆಯದು. ಕೆಲವೊಮ್ಮೆ ಅವಸರದಲ್ಲಿ ತಿಂಡಿಯನ್ನು ತೆಗೆದುಕೊಂಡು ಗ್ರಾಹಕರು ತಿಂದು ಕೈ ಮತ್ತು ಬಾಯಿ ಸುಟ್ಟುಕೊಂಡು ಬಿಡುವ ಅವಕಾಶಗಳು ತುಂಬಾನೇ ಇರುತ್ತವೆ.


ಬಿಸಿಯಾದ ಚಿಕನ್ ನಿಂದ ಎಂತಹ ಎಡವಟ್ಟಾಗಿದೆ ಗೊತ್ತೇ?


ಇಲ್ಲಿಯೂ ಸಹ ಹೀಗೆ ಬಿಸಿಯಾದ ಚಿಕನ್ ಐಟಂ ಅನ್ನು ತೆಗೆದುಕೊಂಡು ಹೋಗಿ ತಾಯಿ ತನ್ನ ಮಗಳಿಗೆ ನೀಡಿದ್ದಾಳೆ. ಅದು ವಿಪರೀತ ಬಿಸಿಯಾಗಿರುವುದರಿಂದ ಎಂತಹ ಎಡವಟ್ಟಾಗಿದೆ ನೋಡಿ.


ಇದನ್ನೂ ಓದಿ: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

ಯುನೈಟೆಡ್ ಸ್ಟೇಟ್ಸ್ ನಲ್ಲಿ ನಾಲ್ಕು ವರ್ಷದ ಬಾಲಕಿಯ ಪೋಷಕರು ಮೆಕ್‌ಡೊನಾಲ್ಡ್ ವಿರುದ್ಧ 15,000 ಡಾಲರ್ ದಂಡ ವಿಧಿಸಿದ್ದಾರೆ. ಸನ್ ಸೆಂಟಿನೆಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫ್ಲೋರಿಡಾದ ಬ್ರೋವರ್ಡ್ ಕೌಂಟಿಗೆ ಸೇರಿದ ಫಿಲಾನಾ ಹೋಮ್ಸ್ ಮತ್ತು ಹಂಬರ್ಟೊ ಕಾರಬಾಲೊ ಎಸ್ಟೆವೆಜ್ ಎಂದು ಗುರುತಿಸಲಾದ ದಂಪತಿಗಳು ಕಳಪೆ ತರಬೇತಿ ಮತ್ತು ನಿರ್ಲಕ್ಷ್ಯಕ್ಕಾಗಿ ಮೆಕ್‌ಡೊನಾಲ್ಡ್ ಮತ್ತು ಅದರ ಆಪರೇಟರ್ ಅಪ್ಚರ್ಚ್ ಫುಡ್ಸ್ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.


ನ್ಯಾಯಾಲಯದ ದಾಖಲೆಗಳ ಪ್ರಕಾರ, ಹೋಮ್ಸ್ ತನ್ನ ಮಗಳಿಗಾಗಿ 2019 ರಲ್ಲಿ ತಮರಾಕ್ ಮೆಕ್‌ಡೊನಾಲ್ಡ್ ಡ್ರೈವ್-ಥ್ರೂನಲ್ಲಿ "ಚಿಕನ್ ಮೆಕ್ನಗೆಟ್ ಹ್ಯಾಪಿ ಮೀಲ್" ಖರೀದಿಸಿದ ನಂತರ ಮಗಳಿಗೆ ಈ ಸುಟ್ಟಗಾಯಗಳು ಆಗಿವೆ ಎಂದು ಬಹಿರಂಗಪಡಿಸಿದ್ದಾರೆ.


ಚಿಕನ್ ಮೆಕ್ನಗೆಟ್ ಹ್ಯಾಪಿ ಮೀಲ್ ತಂದಿಟ್ಟ ಆಪತ್ತು ಏನು ನೋಡಿ


ಕಾರಿನಲ್ಲಿ ಕುಳಿತ ಮಗಳಿಗೆ ಈ ಚಿಕನ್ ಮೀಲ್ ಅನ್ನು ಕೊಟ್ಟು ಬಂದಿದ್ದಾರೆ. ಆಗಲೇ ಆ ಹುಡುಗಿಯು ಕಾರಿನೊಳಗಿಂದ ಜೋರಾಗಿ ಕಿರುಚಿದ್ದಾಳೆ ಎಂದು ಹೋಮ್ಸ್ ಹೇಳಿದರು.


ಆ ಪುಟ್ಟ ಬಾಲಕಿ "ಚಿಕನ್ ಮೆಕ್ನಗೆಟ್" ತಿನ್ನುತ್ತಿದ್ದಾಗ ಅದು ಆಕೆಯ ತೊಡೆಯ ಮೇಲೆ ಬಿದ್ದಿದೆ ಮತ್ತು ಅದು ಸೀಟ್ ಬೆಲ್ಟ್ ನಡುವೆ ಸುಮಾರು ಎರಡು ನಿಮಿಷಗಳ ಕಾಲ ಹಾಗೆಯೇ ಸಿಲುಕಿಕೊಂಡಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.



ಸಾಂಕೇತಿಕ ಚಿತ್ರ

"ಆ ಹ್ಯಾಪಿ ಮೀಲ್ ನ ಒಳಗಿದ್ದ ಚಿಕನ್ ಮೆಗ್ನೆಟ್‌ಗಳು ತುಂಬಾನೇ ಬಿಸಿಯಾಗಿದ್ದವು ಮತ್ತು ಪುಟ್ಟ ಮಗಳ ಚರ್ಮ ಮತ್ತು ತೊಡೆಗಳ ಸುತ್ತಲೂ ಒಂದು ರೀತಿಯ ಉರಿ ಶುರುವಾಯಿತು" ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ ಎಂದು ಸನ್ ಸೆಂಟಿನೆಲ್ ವರದಿ ಮಾಡಿದೆ.


ಚಿಕನ್ ಮೆಕ್ನಗೆಟ್ 200 ಡಿಗ್ರಿ ಫ್ಯಾರನ್ಹೀಟ್ ಎಂದರೆ 93.3 ಸೆಲ್ಸಿಯಸ್ ಆಗಿತ್ತು ಮತ್ತು ಸುಟ್ಟಗಾಯಗಳು ಹುಡುಗಿಯನ್ನು ತುಂಬಾನೇ ವಿರೂಪಗೊಳಿಸಿವೆ ಮತ್ತು ಗಾಯಗೊಳಿಸಿದೆ ಎಂದು ವಕೀಲರು ಸೋಮವಾರ ನ್ಯಾಯಾಲಯದಲ್ಲಿ ಹೇಳಿದರು.


 


ಈ ಇಡೀ ಘಟನೆಯ ಬಗ್ಗೆ ಮೆಕ್ಡೊನಾಲ್ಡ್ಸ್ ಏನು ಹೇಳಿದೆ ನೋಡಿ


ಮೆಕ್‌ಡೊನಾಲ್ಡ್ ಕಾನೂನು ತಂಡವು ಸೋಮವಾರ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಎಂದು ಹೇಳಿದೆ.


"ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕಾಗಿ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಎಂದರೆ ನಾವು ಅಡುಗೆ ಮಾಡುವ ಮತ್ತು ಬಡಿಸುವ ಪ್ರತಿಯೊಂದು ಉತ್ಪನ್ನಕ್ಕೆ ಕಟ್ಟುನಿಟ್ಟಾದ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸುವುದು ಎಂದರ್ಥ. ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಈ ಪ್ರಕರಣದಲ್ಲಿ ಅನುಸರಿಸಲಾಗಿದೆ ಮತ್ತು ಆದ್ದರಿಂದ ನಾವು ವಾದಿಯ ಹಕ್ಕುಗಳನ್ನು ಗೌರವಯುತವಾಗಿ ಒಪ್ಪುವುದಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಡೈಲಿಮೇಲ್ ಪ್ರಕಾರ, ಬಾಲಕಿಯ ಕಾಲಿನ ಮೇಲೆ ಇನ್ನೂ ಸುಟ್ಟುಗಾಯದ ಗುರುತು ಇದೆ ಮತ್ತು ಅವಳು ಕೆಲವೊಮ್ಮೆ ಅದನ್ನು "ಅವಳ ಚಿಕನ್ ಮೆಗ್ನೇಟ್" ಎಂದು ಹೇಳುತ್ತಾಳೆ ಎಂದು ಎಸ್ಟೆವೆಜ್ ಮಂಗಳವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

top videos
    First published: