ರಾಜಸ್ಥಾನ: ಭಗವಾನ್ ಶ್ರೀ ಮಹಾವಿಷ್ಣು (Lord Shri Mahavishnu) ಹಿಂದೂ ಧರ್ಮದ (Hinduism) ಪ್ರಮುಖ ದೇವರು. ತ್ರಿಮೂರ್ತಿಗಳಲ್ಲಿ (Tri Murthy) ಒಬ್ಬನಾದ ಮಹಾವಿಷ್ಣು ನಂಬಿದ ಭಕ್ತರನ್ನು (Devotees) ಸಲಹುತ್ತಾನೆ ಎನ್ನುವುದು ಹಿಂದೂಗಳ (Hindu) ನಂಬಿಕೆ. ವಿಷ್ಣು ಪತ್ನಿ (Wife) ಯಾರು ಅಂತ ಕೇಳಿದರೆ ಶ್ರೀ ಮಹಾಲಕ್ಷ್ಮೀ (Sri Mahalakshmi) ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವಿಷ್ಣು ಪತ್ನಿ ಯಾರು ಅಂತ ಕೇಳಿದರೆ ನಾನೇ ಅಂತ ಹೇಳುತ್ತಿದ್ದಾಳೆ ರಾಜಸ್ಥಾನದ ಈ ಯುವತಿ (Rajasthani Girl). ಯಾಕೆಂದ್ರೆ ಈಕೆ ಶ್ರೀ ವಿಷ್ಣುವನ್ನೇ ಮದ್ವೆಯಾಗಿದ್ದಾಳಂತೆ! ಹೌದು, ರಾಜಸ್ಥಾನದಲ್ಲೊಂದು ವಿಚಿತ್ರ ಮದುವೆ (Marriage) ನಡೆದಿದೆ. ಪೂಜಾ ಸಿಂಗ್ (Pooja Singh) ಎಂಬ 30 ವರ್ಷದ ಯುವತಿ ತನ್ನ ಗ್ರಾಮದ ವಿಷ್ಣು ದೇಗುಲದಲ್ಲಿ (Vishnu Temple) ದೇವರನ್ನೇ ಮದುವೆಯಾಗಿದ್ದಾಳಂತೆ! ದೇವಾಲಯದ ಪುರೋಹಿತರು, ಯುವತಿಯ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರೆಲ್ಲ ಈ ವಿಚಿತ್ರ, ವಿಶೇಷ ಹಾಗೂ ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದಾರಂತೆ!
ಭಗವಾನ್ ವಿಷ್ಣುವನ್ನೇ ಮದುವೆಯಾದ ಯುವತಿ!
ರಾಜಸ್ಥಾನ ರಾಜ್ಯದ ಜೈಪುರ್ ಜಿಲ್ಲೆಯ ಗೋವಿಂದಗಢ ಹೋಬಳಿ ಸಮೀಪದ ನರಸಿಂಘಪುರ ಎಂಬ ಗ್ರಾಮದ 30 ವರ್ಷದ ಯುವತಿ ಪೂಜಾ ಸಿಂಗ್ ಎಂಬಾಕೆ ಭಗವಾನ್ ಮಹಾವಿಷ್ಣುವನ್ನೇ ಮದುವೆಯಾಗಿದ್ದು, ಶ್ರೀಹರಿಯೇ ನನ್ನ ಗಂಡ ಅಂತ ಹೇಳುತ್ದಿದ್ದಾಳೆ. ಗ್ರಾಮದ ವಿಷ್ಣು ದೇಗುಲದಲ್ಲಿ ಆಕೆ ವಿಷ್ಣು ಜೊತೆ ಮದುವೆಯಾಗಿದ್ದು, ಆಕೆಯ ಮದುವೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿದ್ದ ಯುವತಿ
ಪೂಜಾ ಸಿಂಗ್ ಅವರ ತಂದೆ ಪ್ರೇಮ್ ಸಿಂಗ್ ಬಿಎಸ್ಎಫ್ನಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ ಭದ್ರತಾ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಮತ್ತೊಂದೆಡೆ, ಪೂಜಾ ಅವರ ತಾಯಿ ರತನ್ ಕನ್ವರ್ ಸಿಂಗ್ ಗೃಹಿಣಿ. ಇನ್ನು ಪೂಜಾ ಮೂವರು ಕಿರಿಯ ಸಹೋದರರನ್ನು ಹೊಂದಿದ್ದಾರೆ.
ಪೂಜಾ ಸಿಂಗ್ ಎಲ್ಲರಂತೆ ನಾರ್ಮಲ್ ಆಗಿಯೇ ಬೆಳೆದ ಯುವತಿ. ನೋಡೋದಕ್ಕೆ ಸುಂದರಿಯಾಗಿಯೂ ಇದ್ದಳು. ಇನ್ನು ಬಾಲ್ಯದಿಂದಲೂ ದೇವರು, ಧರ್ಮ ಎಂದರೆ ಈಕೆಗೆ ಅಪಾರ ಭಕ್ತಿ, ಅಪಾರ ಶ್ರದ್ಧೆ ಇತ್ತಂತೆ. ಮೊದಲಿನಿಂದಲೂ ದೇವರೊಬ್ಬನೇ ಶಾಶ್ವತ, ಈ ಸಂಸಾರವೇ ನಶ್ವರ ಅಂತ ವಿರಕ್ತೆಯಂತೆ ಮಾತನಾಡುತ್ತಿದ್ದಳಂತೆ.
ಇದನ್ನೂ ಓದಿ: Hindu-Muslim Love: ಹಿಂದೂ ಪ್ರೇಯಸಿಗಾಗಿ ಸತಾನತ ಧರ್ಮ ಸ್ವೀಕರಿಸಿದ ಮುಸ್ಲಿಂ ಪ್ರೇಮಿ! ರಾಧೆಗಾಗಿ ಕೃಷ್ಣನಾದ ಮನ್ಸೂರಿ!
ಮದುವೆ ಮಾಡಿಕೊಳ್ಳುವಂತೆ ಮನೆಯಲ್ಲಿ ಒತ್ತಡ
ಇನ್ನು ಪ್ರಾಪ್ತ ವಯಸ್ಸಿಗೆ ಬರುತ್ತಿದ್ದಂತೆ ಮನೆಯಲ್ಲಿ ಮದುವೆ ಮಾಡಿಕೊಳ್ಳುವಂತೆ ಒತ್ತಡ ಜಾಸ್ತಿಯಾಗಿತ್ತಂತೆ. ಗಂಡಿನ ಕಡೆಯವರೂ ಪೂಜಾಳನ್ನು ಮದುವೆ ಮಾಡಿಕೊಡುವಂತೆ ಆಕೆಯ ತಂದೆ, ತಾಯಿ ಬಳಿ ಕೇಳುತ್ತಿದ್ದರಂತೆ. ಆದರೆ 30 ವರ್ಷ ಆಗುವವರೆಗೂ ಮದುವೆಯಾಗದೇ, ಏನೋ ಹೇಳಿ ತಂದೆ ತಾಯಿಯ ಬಾಯಿ ಮುಚ್ಚಿಸುತ್ತಾ ಇದ್ದಳು.
ವಿಷ್ಣು ಜೊತೆ ಮದುವೆಯಾಗಲು ಯುವತಿ ನಿರ್ಧಾರ
ಇತ್ತೀಚಿಗೆ ಮದುವೆಯಾಗುವಂತೆ ತಂದೆ, ತಾಯಿ ಪೂಜಾ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದ ನೊಂದ ಪೂಜಾ, ಮನೆ ಬಿಟ್ಟು ಹೋಗಿದ್ದಳು. ಬಳಿಕ ಗ್ರಾಮದ ದೇವಸ್ಥಾನಕ್ಕೆ ತೆರಳಿ ವಿಷ್ಣುವನ್ನೇ ಮದುವೆಯಾಗಲು ನಿರ್ಧಾರ ಮಾಡಿದ್ದಾಳೆ.
ಮನೆಯವರು, ಗ್ರಾಮಸ್ಥರ ಮುಂದೆ ದೇವರೊಂದಿಗೆ ವಿವಾಹ
ಇನ್ನು ಗ್ರಾಮದ ವಿಷ್ಣು ದೇಗುಲದಲ್ಲಿ ವಿಷ್ಣುವನ್ನೇ ಪೂಜಾ ಸಿಂಗ್ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾಳೆ. ದೇವಾಲಯದ ಪುರೋಹಿತರು, ಯುವತಿಯ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರೆಲ್ಲ ಈ ವಿಚಿತ್ರ, ವಿಶೇಷ ಹಾಗೂ ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದಾರಂತೆ!
ಇದನ್ನೂ ಓದಿ: Marriage Cancel: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!
ಸಂಸಾರದ ಜಂಜಾಟದಿಂದ ಮುಕ್ತಿ ಹೊಂದಲು ದೇವರೊಂದಿಗೆ ಮದುವೆ
ಪೂಜಾ ಬಾಲ್ಯದಿಂದಲೂ ತಂದೆ-ತಾಯಿಯ ನಡುವೆ ಜಗಳ, ಹೊಡೆತಗಳನ್ನು ನೋಡುತ್ತಾ ಬೆಳೆದಳು. ಹಾಗಾಗಿ ನನ್ನ ಜೀವನದಲ್ಲಿ ಮದುವೆಯಾಗುವುದಿಲ್ಲ ಎಂದು ಮೊದಲೇ ನಿರ್ಧರಿಸಿದ್ದೆ. ಮದುವೆಯ ಕಾರಣಕ್ಕೆ ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ ಎಂದೂ ಪೂಜಾ ಹೇಳುತ್ತಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ