• Home
 • »
 • News
 • »
 • trend
 • »
 • Business Trend: FMCG ಉದ್ಯಮದಲ್ಲಿ 20 ರ ಯುವಕನ ಸಾಧನೆ; ಚಿಲ್ಲರೆ ವ್ಯಾಪಾರಿಗಳ ಅಭಿವೃದ್ಧಿಯೇ ಈತನ ಗುರಿ!

Business Trend: FMCG ಉದ್ಯಮದಲ್ಲಿ 20 ರ ಯುವಕನ ಸಾಧನೆ; ಚಿಲ್ಲರೆ ವ್ಯಾಪಾರಿಗಳ ಅಭಿವೃದ್ಧಿಯೇ ಈತನ ಗುರಿ!

ಸೋಪ್ಟ್ಲೇ ಕಂಪನಿ ಸ್ಥಾಪಿಸಿದ 
ಪ್ರವಾಸ್ ಚಂದ್ರಗಿರಿ

ಸೋಪ್ಟ್ಲೇ ಕಂಪನಿ ಸ್ಥಾಪಿಸಿದ ಪ್ರವಾಸ್ ಚಂದ್ರಗಿರಿ

ಚಂದ್ರಗಿರಿ ಪ್ರವಾಸ್ ಅವರು ಈ ಪ್ರಾಯದಲ್ಲಿ ಈ ತಂತ್ರಜ್ಞಾನವನ್ನು ರೂಪಿಸಿದ್ದು ವಿಶೇಷ ಎಂದು ಹೇಳಬಹುದು. ಇದೀಗ 60 ಲಕ್ಷದಷ್ಟು  ಆದಾಯವನ್ನು ಗಳಿಸುವಂತೆ ತಂತ್ರಜ್ಞಾನ ರೂಪಿಸಿದ 19 ವರ್ಷದ ಯುವಕ.

 • Share this:

  ಗುರುಗ್ರಾಮ್‌ನಲ್ಲಿರುವ ತಂತ್ರಜ್ಞಾನ (Technology) ಸಂಸ್ಥೆ ಸೋಪ್ಟ್ಲೇಯನ್ನು (Stople) ಹುಟ್ಟುಹಾಕಿದ ಹತ್ತೊಂಭತ್ತರ ಹರೆಯದ ಪ್ರವಾಸ್ ಚಂದ್ರಗಿರಿ ಮಾಡಿದ ಕ್ರಾಂತಿಕಾರಿ ಪ್ರಗತಿ ಎಷ್ಟೋ ಯುವಜನರಿಗೆ ಪ್ರೇರಣೆಯಾಗಿದೆ. ಸೋಪ್ಟ್ಲೇ ಸಂಸ್ಥೆಯು ಹೊಸ ಉತ್ಪನ್ನಗಳು ಮತ್ತು ವ್ಯಾಪಾರ ಸೇವೆಗಳೊಂದಿಗೆ ತಯಾರಕರು, ವಿತರಕರು/ಸಗಟು ಮಾರಾಟಗಾರರು, ಚಿಲ್ಲರೆ ವ್ಯಾಪಾರಿಗಳಿಗೆ ಉದ್ಯೋಗವನ್ನೊದಗಿಸುವ ತಂತ್ರಜ್ಞಾನ ವೇದಿಕೆ ಎಂದೆನಿಸಿದೆ.


  ಚಂದ್ರಗಿರಿ ಪ್ರವಾಸ್ ಅವರು ಈ ಪ್ರಾಯದಲ್ಲಿ ಈ ತಂತ್ರಜ್ಞಾನವನ್ನು ರೂಪಿಸಿದ್ದು ವಿಶೇಷ ಎಂದು ಹೇಳಬಹುದು. ಇದೀಗ 60 ಲಕ್ಷದಷ್ಟು  ಆದಾಯವನ್ನು ಗಳಿಸುವಂತೆ ತಂತ್ರಜ್ಞಾನ ರೂಪಿಸಿದ 19 ವರ್ಷದ ಯುವಕ.


  ಯಶಸ್ವಿ ಉದ್ಯಮಿ ಎಂದೆನಿಸಿರುವ ಪ್ರವಾಸ್ ಚಂದ್ರಗಿರಿ


  12 ರ ಹರೆಯದಲ್ಲೇ ಪ್ರವಾಸ್ ಚಂದ್ರಗಿರಿ ತಮ್ಮ ಚಿಕ್ಕಪ್ಪನ ಕಿರಾನಾ ಅಂಗಡಿಯಲ್ಲಿ ವ್ಯವಹಾರದ ಐಡಿಯಾವನ್ನು ಅರಿತುಕೊಂಡರು. ಈ ಉದ್ಯಮದಲ್ಲಿ ತೊಡಗಿಸಿಕೊಂಡ ಚಂದ್ರಗಿರಿ ಕಷ್ಟ ಹಾಗೂ ಅಸಮರ್ಥತೆಗಳನ್ನು ಅನುಭವಿಸಿಕೊಂಡೇ ಉದ್ಯಮದಲ್ಲಿ ಪ್ರಗತಿ ಸಾಧಿಸಿದ್ದಾರೆ.


  ಇದನ್ನೂ ಓದಿ: ತಮ್ಮದೇ ಮರಿಗಳನ್ನು ಸೇವಿಸುವ ತಾಯಿಮೀನುಗಳು, ವಿಜ್ಞಾನಿಗಳು ಬಿಚ್ಚಿಟ್ಟ ರಹಸ್ಯ?


  ಅವರು  ಗ್ರಾಮೀಣ ಭವಿಷ್ಯದ ತಂತ್ರಜ್ಞಾನ (RFT) ಎಂದು ಕರೆಯಲಾದ ನೆಟ್‌ವರ್ಕಿಂಗ್ ಪ್ಲ್ಯಾಟ್‌ಫಾರ್ಮ್‌ನ ಅತ್ಯಂತ ಕಿರಿಯ ಸಿಇಒ ಕೂಡ ಹೌದು. ಒಡಿಸ್ಸಾದ 9 ಜಿಲ್ಲೆಗಳಲ್ಲಿ 1200 ಕಿರಾನಾ ಮಳಿಗೆಗಳನ್ನು ಸಂಪರ್ಕಿಸುವ ಮೂಲಕ ಭಾರತದ 20 ಕ್ಕೂ ಹೆಚ್ಚಿನ ಪ್ರಾದೇಶಿಕ ಬ್ರ್ಯಾಂಡ್‌ಗಳನ್ನು ಪರಿಚಯಿಸಿ ವ್ಯಾಪಾರ ವಿಸ್ತರಣೆಗೆ ನೆರವಾದರು.


  ಚಂದ್ರಗಿರಿಯ ಪ್ರಯತ್ನ ವಾರ್ಷಿಕ 60 ಲಕ್ಷ ವಹಿವಾಟು ನಡೆಸುವ ಉದ್ಯಮವಾಗಿ ರೂಪುಗೊಂಡಿತು ಹಾಗೂ ಸೋಪ್ಟ್ಲೇಯ ಹುಟ್ಟಿಗೆ ಕಾರಣವಾಯಿತು. 12 ಹರೆಯದಲ್ಲಿ ಕಿರಾನಾ ಅಂಗಡಿಯನ್ನು ನಿರ್ವಹಿಸಿರುವ ಚಂದ್ರಗಿರಿ ಪ್ರವಾಸ್ ತಮ್ಮ 20 ರ ಹರೆಯದಲ್ಲಿ 50,000 ಚಿಲ್ಲರೆ ವ್ಯಾಪಾರಿಗಳನ್ನು ಪ್ರಾದೇಶಿಕ ಬ್ರ್ಯಾಂಡ್‌ಗಳೊಂದಿಗೆ ಸಕ್ರಿಯಗೊಳಿಸಿರುವ ಯಶಸ್ವಿ ಉದ್ಯಮಿ ಎನಿಸಿದ್ದಾರೆ.


  ಚಿಲ್ಲರೆ ವ್ಯಾಪಾರಿ ಹಾಗೂ ಉತ್ಪಾದಕರ ಜೀವನ ಸುಧಾರಣೆ


  ವಿತರಕರು ಹಾಗೂ ಸಗಟು ವ್ಯಾಪಾರಿಗಳು ಯಾವುದೇ ಉದ್ಯಮದಲ್ಲಿ ಅಗತ್ಯ ಘಟಕಗಳಾಗಿದ್ದು ಇವರುಗಳು ಮಧ್ಯಸ್ಥಗಾರರಾಗಿ ವ್ಯಾಪಾರ ವಹಿವಾಟುಗಳ ಪ್ರಗತಿಗೆ ಕಾರಣೀಕರ್ತರು ಎಂದು ಚಂದ್ರಗಿರಿ ತಿಳಿಸಿದ್ದಾರೆ.


  ಹಾಗಾಗಿಯೇ ಇವರುಗಳನ್ನು ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು (FMCG) ಪೂರೈಕೆ ಸರಪಳಿಯಲ್ಲಿ ಬಳಸಿದ್ದೇವೆ ಹಾಗೂ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.


  ಇನ್ನಷ್ಟು ಉದ್ದೇಶಗಳನ್ನು ಹೊಂದಿರುವ ಚಂದ್ರಗಿರಿ ಭಾರತದ 8,000,000 ಸಾಮಾನ್ಯ ವ್ಯಾಪಾರದ ಚಿಲ್ಲರೆ ವ್ಯಾಪಾರಿಗಳು ಮತ್ತು ಸರಿಸುಮಾರು 5,000 ಉತ್ಪಾದಕರ ಜೀವನವನ್ನು ಉನ್ನತಗೊಳಿಸುವ ಇರಾದೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.


  ಸರಕು ತಯಾರಕರಿಗೆ ಸಹಾಯ ಮಾಡುವ ಸಂಸ್ಥೆ


  ಗ್ರಾಹಕ ಸರಕು ತಯಾರಕರಿಗೆ ಆದಾಯ ಹೆಚ್ಚಿಸುವ ಸಲುವಾಗಿ ಶೂನ್ಯ ವೆಚ್ಚದಲ್ಲಿ ದೇಶಾದ್ಯಂತ ವಿತರಣೆಗಳಿಗೆ ಪ್ರವೇಶ ಒದಗಿಸುತ್ತೇವೆ ಎಂದು ತಿಳಿಸಿರುವ ಚಂದ್ರಗಿರಿ, ಸಂಸ್ಥೆಯ ತಂತ್ರಜ್ಞಾನ - ಸಕ್ರಿಯಗೊಳಿಸಿದ ಮಾರಾಟ ಮತ್ತು ವಿತರಣೆಗಳ ಮಾರುಕಟ್ಟೆ ಸಂಪರ್ಕಗಳ ಮೂಲಕ ಈ ತಯಾರಕರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.


  ಮಾರಾಟಗಾರರ ಮಾರಾಟವನ್ನು ವಿಸ್ತರಿಸುವುದು, ಬಳಕೆ ಹೆಚ್ಚಿಸುವ ಸಾಮರ್ಥ್ಯ ಹಾಗೂ ವ್ಯವಹಾರವನ್ನು ಅಭಿವೃದ್ಧಿಪಡಿಸುವ ಹಾಗೂ ಲಾಭವನ್ನು 3-4 ಪಟ್ಟು ಸುಧಾರಿಸುವ ಕೆಲಸವನ್ನು ಸಂಸ್ಥೆ ಮಾಡುತ್ತದೆ ಎಂಬುದು ಚಂದ್ರಗಿರಿ ಹೇಳಿಕೆಯಾಗಿದೆ.


  ಅಭಿವೃದ್ಧಿಯ ಹರಿಕಾರನಾಗಿ ಬೆಳೆಯುತ್ತಿರುವ ಸಂಸ್ಥೆ


  ಪ್ರಸ್ತುತ ಕಂಪನಿಯ ವಿತರಣಾ ಜಾಲವು 50,000 ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರನ್ನು ಒಳಗೊಂಡಿದೆ ಮತ್ತು ತಿಂಗಳಿನಿಂದ ತಿಂಗಳಿಗೆ ಸ್ಥಿರವಾಗಿ 2-3 ಪಟ್ಟು ಬೆಳೆಯುತ್ತಿದೆ ಎಂದು ಚಂದ್ರಗಿರಿ ತಿಳಿಸಿದ್ದಾರೆ.


  ಮಾರುಕಟ್ಟೆಯ ಅಂದಾಜಿನ ಪ್ರಕಾರ, ಒಟ್ಟು ಜಾಗತಿಕ FMCG ವಿತರಣೆಯಲ್ಲಿ ಭಾರತವು 11.69% ಪಾಲನ್ನು ಹೊಂದಿದೆ ಹಾಗೂ ಭಾರತದ GDP ಗೆ 18% ಕೊಡುಗೆ ನೀಡಿದೆ.


  ಭಾರತದಲ್ಲಿರುವ ಸರಿಸುಮಾರು 12 ಮಿಲಿಯನ್ ಕಿರಾನಾ ಸ್ಟೋರ್ ಮಾಲೀಕರಲ್ಲಿ ಸರಾಸರಿ ಮಾರಾಟವು ತಿಂಗಳಿಗೆ ಕೇವಲ $700 ಆಗಿದೆ ಎಂದು ಅಂದಾಜಿಸಲಾಗಿದೆ.


  ಇನ್ನಷ್ಟು ಸಾಧನೆಗೈಯ್ಯುವ ನಿರ್ಧಾರ


  ಕಂಪನಿಯ ಯೋಜನೆಗಳ ಬಗ್ಗೆ ಹೇಳುವಾಗ ಪ್ರವಾಸ್‌ ಚಂದ್ರಗಿರಿ ತುಂಬಾ ಹರ್ಷಗೊಂಡಿದ್ದು, ಮುಂದಿನ ವರ್ಷ ಇನ್ನಷ್ಟು ಸಾಧನೆಗೈಯ್ಯುವ ಉದ್ದೇಶವನ್ನಿಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ನಮ್ಮದೇ ಆದ ತಂತ್ರಜ್ಞಾನ ತಂಡಗಳನ್ನು ನಿರ್ಮಿಸುವ ಹಾಗೂ ವಿತರಣಾ ಜಾಲವನ್ನು 15-20 ಪಟ್ಟು ಹೆಚ್ಚಿಸುವ ಇರಾದೆ ಪ್ರವಾಸ್ ಅವರದ್ದಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು