• Home
  • »
  • News
  • »
  • trend
  • »
  • Men Will Be Men: ಹಾಡು ಹೇಳಿಯೇ 19ರ ಹುಡುಗಿಯ ಮನಗೆದ್ದ 70ರ ಅಜ್ಜ! ಮನೆಯವರ ವಿರೋಧದ ನಡುವೆ ಪ್ರೇಮವಿವಾಹ!

Men Will Be Men: ಹಾಡು ಹೇಳಿಯೇ 19ರ ಹುಡುಗಿಯ ಮನಗೆದ್ದ 70ರ ಅಜ್ಜ! ಮನೆಯವರ ವಿರೋಧದ ನಡುವೆ ಪ್ರೇಮವಿವಾಹ!

70ರ ಅಜ್ಜ-19ರ ಯುವತಿ ವಿವಾಹ!

70ರ ಅಜ್ಜ-19ರ ಯುವತಿ ವಿವಾಹ!

ಪಾಕಿಸ್ತಾನದಲ್ಲಿ ಅಜ್ಜನೊಬ್ಬ ಪುರುಷನಿಗೆ ವಯಸ್ಸಿನ ಹಂಗಿಲ್ಲ ಅಂತ ತೋರಿಸಿದ್ದಾನೆ. ಎಂಥೆಂತಾ ಯುವಕರೇ ಬಂದು ಪ್ರಪೋಸ್ ಮಾಡಿದರೂ ಮನಸ್ಸು ನೀಡದ ಹುಡುಗಿಯೊಬ್ಬಳನ್ನು, ಅಜ್ಜನೊಬ್ಬ ಬರೀ ಹಾಡು ಹೇಳೇ ಪ್ರೀತಿಯ ಬೆಲೆಗೆ ಬೀಳಿಸಿಕೊಂಡಿದ್ದಾನೆ!

  • Share this:

ಪಾಕಿಸ್ತಾನ: ಇಂದು ಅಂತರಾಷ್ಟ್ರೀಯ ಪುರುಷರ ದಿನಾಚರಣೆ (International Men's Day) ಆಚರಿಸಲಾಗಿದೆ. ಪುರುಷರು ಎಂದಿಗೂ ಪುರುಷರೇ (Men will be men) ಎನ್ನುವುದು ಇಂದು ಸಾಮಾನ್ಯವಾಗಿ ಕೇಳಿ ಬರುವ ಮಾತು. ಇದಕ್ಕೆ ಉದಾಹರಣೆ (Example) ಎನ್ನುವಂತೆ ಪಾಕಿಸ್ತಾನದಲ್ಲಿ (Pakistan) ಅಜ್ಜನೊಬ್ಬ (Old men) ಪುರುಷನಿಗೆ ವಯಸ್ಸಿನ ಹಂಗಿಲ್ಲ ಅಂತ ತೋರಿಸಿದ್ದಾನೆ. ಎಂಥೆಂತಾ ಯುವಕರೇ (Young boys) ಬಂದು ಪ್ರಪೋಸ್ (propose) ಮಾಡಿದರೂ ಮನಸ್ಸು ನೀಡದ ಹುಡುಗಿಯೊಬ್ಬಳನ್ನು (Girl), ಅಜ್ಜನೊಬ್ಬ ಬರೀ ಹಾಡು ಹೇಳೇ ಪ್ರೀತಿಯ (Love) ಬೆಲೆಗೆ ಬೀಳಿಸಿಕೊಂಡಿದ್ದಾನೆ! ಇದೀಗ 70ರ ಅಜ್ಜನ ಪ್ರೀತಿಯ ಬಲೆಗೆ ಬಿದ್ದ 19ರ ಹರೆಯದ ಯುವತಿ, ಮನೆಯವರ ವಿರೋಧ ಲೆಕ್ಕಿಸದೇ ಆತನನ್ನು ವಿವಾಹವಾಗಿದ್ದಾಳೆ!


70 ವರ್ಷದ ವೃದ್ಧನನ್ನು ವಿವಾಹವಾದ 19ರ ಹುಡುಗಿ!


ಪಾಕಿಸ್ತಾನದ ಲಾಹೋರ್‌ ನಗರದಲ್ಲಿ ಇಂಥದ್ದೊಂದು ವಿಶೇಷ, ವಿಚಿತ್ರ ಮದುವೆಯೊಂದು ನಡೆದಿದೆ. ಇಲ್ಲಿ 70 ವರ್ಷದ ವೃದ್ಧ ಲಿಯಾಖತ್ ಅಲಿ ಎನ್ನುವವರು 19 ವರ್ಷದ ಶುಮೈಲಾ ಅಲಿ ಅವರನ್ನು ಇತ್ತೀಚಿಗಷ್ಟೇ ವಿವಾಹವಾಗಿದ್ದಾರೆ. ಅಂದಹಾಗೆ ಇದೇನು ಬಲವಂತದ ಮದುವೆ ಅಥವಾ ಮೋಸದ ಮದುವೆಯಲ್ಲ. ಬದಲಾಗಿ ಯುವತಿ ಶುಮೈಲಾಳೇ ತನ್ನ ಅಜ್ಜನ ವಯಸ್ಸಿನ ಲಿಯಾಖತ್ ಅಲಿಯನ್ನು ಪ್ರೀತಿಸಿ, ಇಷ್ಟಪಟ್ಟೇ ಮದುವೆಯಾಗಿದ್ದಾಳೆ! ಅಂದಹಾಗೆ ಇವರಿಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಸುಮಾರು 51 ವರ್ಷಗಳು!


ಪಾರ್ಕ್‌ನಲ್ಲೇ ಮೊದಲ ಭೇಟಿಯಾದ ಅಜ್ಜ, ಯುವತಿ!


ಅಂದಹಾಗೆ ವೃದ್ಧ ಲಿಯಾಖತ್ ಅಲಿ ಹಾಗೂ ಯುವತಿ ಶುಮೈಲಾ ಅಲಿ ಇಬ್ಬರು ಬೆಳಗ್ಗಿನ ವಾಕಿಂಗ್ ಮಾಡುವ ವೇಳೆಯಲ್ಲಿ ಹತ್ತಿರದ ಪಾರ್ಕ್ ಒಂದರಲ್ಲಿ ಮೊದಲು ಭೇಟಿಯಾದರಂತೆ. ಇದಾದ ಮೇಲೆ ನಿತ್ಯವೂ ಮುಂಜಾನೆಯ ವಾಕಿಂಗ್ ವೇಳೆ ಭೇಟಿಯಾಗುತ್ತಲೇ ಇದ್ದರಂತೆ. ಅಲ್ಲೇ ಒಬ್ಬರಿಗೊಬ್ಬರ ಪರಿಚಯವಾಗಿ, ಸಲುಗೆಯಾಗಿ, ಬಳಿಕ ಸ್ನೇಹವಾಗಿ, ಕೊನೆಗೆ ಆ ಸ್ನೇಹ ಪ್ರೇಮಕ್ಕೆ ತಿರುಗಿದೆಯಂತೆ!


ಹಾಡು ಹೇಳಿ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ ಅಜ್ಜ!


ಅಂದಹಾಗೆ ಈ ವೃದ್ಧ ಲಿಯಾಕತ್ ಅಲಿ, ಹಾಡು ಹೇಳಿ ಹೇಳಿಯೇ ಯುವತಿ ಶುಮೈಲಾಳನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನಂತೆ. ಲಿಯಾಖತ್ ಶುಮೈಲಾಳ ಹಿಂದೆ ಜಾಗಿಂಗ್ ಮಾಡುವಾಗ ಹಾಡುತ್ತಿದ್ದ ಹಾಡುಗಳು ಅವಳನ್ನು ಅವನ ಮೇಲೆ ಪ್ರೀತಿ ಮೂಡುವಂತೆ ಮಾಡಿತ್ತಂತೆ! ಇದು ಅವರ ಪ್ರೇಮಕಥೆಯ ಪ್ರಾರಂಭದ ಹಂತವಾಗಿತ್ತು. ಕೊನೆಗೆ ಇಬ್ಬರೂ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರಂತೆ.


ವೃದ್ಧ, ಯುವತಿ ಪ್ರೀತಿಗೆ ಮನೆಯವರ ವಿರೋಧ


ಇನ್ನು ಲಿಯಾಕತ್ ಹಾಗೂ ಶಮೈಕಾ ಪ್ರೀತಿ ಆಕೆ ಮನೆಯವರಿಗೆ ಗೊತ್ತಾಗಿದೆಯಂತೆ. ಈ ವೇಳೆ ಮನೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತಂತೆ. ಆರಂಭದಲ್ಲಿ ಆಕ್ಷೇಪಿಸಿದರೂ ನಂತರ ಆಕೆಯ ಮನವಿಗೆ ಮಣಿದಿದ್ದಾಳೆ ಎಂದು ಆಕೆಯ ಪೋಷಕರು ತಿಳಿಸಿದ್ದರು. ಮದುವೆಯ ಬಗ್ಗೆ ಶುಮೈಲಾ ಅವರನ್ನು ಕೇಳಿದಾಗ ಪ್ರೀತಿಯಲ್ಲಿ ಬೀಳುವಾಗ ವಯಸ್ಸು ನೋಡುವುದಿಲ್ಲ ಅಂತಾಳೆ.


“ನಾನು ವಯಸ್ಸಲ್ಲಿ ದೊಡ್ಡವ, ಹೃದಯದಲ್ಲಿ ತರುಣ!”


ಲಿಯಾಕತ್ ಕೂಡ ವಯಸ್ಸಿನ ಬಗ್ಗೆ ಅದೇ ನಂಬಿಕೆಯನ್ನು ಹೊಂದಿದ್ದಾರೆ. ನಾನು 70 ವರ್ಷ ವಯಸ್ಸಿನವನಾಗಿದ್ದರೂ ಇನ್ನೂ 'ಹೃದಯದಿಂದ ತರುಣ' ಎಂದು ಹೇಳಿ ಕೊಂಡಿದ್ದಾರೆ. "ಪ್ರಣಯಕ್ಕೆ ಬಂದಾಗ ವಯಸ್ಸು ಒಂದು ಅಂಶವಲ್ಲ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ:  Shocking News: ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ತಂದೆ! ಅಜ್ಜ, ಚಿಕ್ಕಪ್ಪನಿಂದಲೂ ಮಾನಗೇಡಿ ಕೃತ್ಯ!


ಹೆಂಡತಿ ಕೈ ರುಚಿಯ ಬಗ್ಗೆ ವೃದ್ಧನ ಹೊಗಳಿಕೆ


ಇನ್ನು "ಯಾರಾದರೂ ವಯಸ್ಸಾದವರು ಅಥವಾ ಚಿಕ್ಕವರು ಎಂಬುದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಕಾನೂನುಬದ್ಧವಾಗಿ ಮದುವೆಯಾಗಲು ಅನುಮತಿಸುವ ಯಾರಾದರೂ ಮದುವೆಯಾಗಬಹುದು” ಎಂದು ಲಿಯಾಕತ್ ಹೇಳಿದ್ದಾರೆ. ಲಿಯಾಕತ್ ಅವರು ತಮ್ಮ ಹೆಂಡತಿ ಮಾಡುವ ಅಡುಗೆಯನ್ನು ಇಷ್ಟಪಡುತ್ತಾರಂತೆ. ಈಕೆ ಮನೆಗೆ ಬಂದ ಮೇಲೆ ಅವರು ರೆಸ್ಟೋರೆಂಟ್‌ಗಳಿಗೆ ಹೋಗುವುದನ್ನು ಬಿಟ್ಟಿದ್ದಾರಂತೆ!

Published by:Annappa Achari
First published: