ಇವರು ವಿಶ್ವದ ಹಿರಿಯ ಬ್ಯೂಟಿಷಿಯನ್: 100ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯುತ್ತಾರಂತೆ!

news18
Updated:September 29, 2018, 6:35 PM IST
ಇವರು ವಿಶ್ವದ ಹಿರಿಯ ಬ್ಯೂಟಿಷಿಯನ್: 100ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯುತ್ತಾರಂತೆ!
@St. Louis Post-Dispatch
  • Advertorial
  • Last Updated: September 29, 2018, 6:35 PM IST
  • Share this:
-ನ್ಯೂಸ್ 18 ಕನ್ನಡ

ಸಾಧಿಸಬೇಕೆಂಬ ಛಲ ಹಾಗೂ ಆತ್ಮ ವಿಶ್ವಾಸವಿದ್ದರೆ ವಯಸ್ಸು ಯಾವತ್ತೂ ಅಡ್ಡಿಯಾಗುವುದಿಲ್ಲ. ಇದಕ್ಕೆ ಅತ್ಯುತ್ತಮ ನಿದರ್ಶನ ಕ್ಯಾಲಿ ಟೆರೆಲ್. ಇವರು ಮೆಮ್ಪಿಸ್ ನಗರದಲ್ಲಿ ಬ್ಯೂಟಿಷಿಯನ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಲ್ಲಿ ಪ್ರೀತಿಯಿಂದ ಆರಂಭಿಸಿರುವ ವೃತ್ತಿಯನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ. ಅಂದಹಾಗೆ ಇವರ ವಯಸ್ಸು ಈಗ 99 ವರ್ಷ.

ತನ್ನ ಬಾಲ್ಯದಲ್ಲಿ ಸಹೋದರಿಗೆ ಕೇಶ ವಿನ್ಯಾಸ ಮಾಡುವ ಮೂಲಕ ಈ ವೃತ್ತಿಯನ್ನು ಆನಂದಿಸಲು ಪ್ರಾರಂಭಿಸಿದೆ. ಸಹೋದರಿಯ ಸುಂದರ ಕೂದಲನ್ನು ಅತ್ಯುತ್ತಮ ರೀತಿಯಲ್ಲಿ ನಾನು ವಿನ್ಯಾಸಗೊಳಿಸುತ್ತಿದೆ. ಈ ಕೆಲಸವನ್ನು ಅಂದಿನಿಂದ ಪ್ರೀತಿಸಲು ಪ್ರಾರಂಭಿಸಿದೆ, ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಈ ಕೆಲಸವನ್ನು ನಾ ಅಷ್ಟೊಂದು ಇಷ್ಟಪಡುತ್ತೇನೆ ಎನ್ನುತ್ತಾರೆ ಕ್ಯಾಲಿ ಟೆರೆಲ್.

1945ರ ಜನವರಿ 30ರಂದು ಕ್ಯಾಲಿ ಮೊದಲ ಬಾರಿ ಬ್ಯೂಟಿ ಪಾರ್ಲರ್​ನ ಪರವಾನಗಿ ಪಡೆದಿದ್ದರು. ಅಂದಿನಿಂದ ಪ್ರಾರಂಭವಾದ ಕೆಲಸ ಇಲ್ಲಿವರೆಗೂ ಮುಂದುವರೆಸಿದ್ದಾರೆ. ತನ್ನ ಗ್ರಾಹಕರಿಗೆ ಕೇಶ ವಿನ್ಯಾಸದ ಜೊತೆ ಬ್ಯೂಟಿ ಟಿಪ್ಸ್​ಗಳನ್ನು ನೀಡಿ ಒಂದೇ ವೃತ್ತಿಯನ್ನು ಇಷ್ಟೊಂದು ದೀರ್ಘಕಾಲ ಮುನ್ನೆಡೆಸಿದ್ದಾರೆ.


ನವೆಂಬರ್ 26ರಂದು 100 ವಸಂತಕ್ಕೆ ಕಾಲಿಡಲಿದ್ದಾರೆ ಕ್ಯಾಲಿ ಟೆರೆಲ್. ಇವರಿ​ಗೆ ಸಹಾಯಕಿಯಾಗಿ ಕೆಲ ಕಾಲ ಮಗಳು ಇನೆಜ್ ಕೂಡ ಕಾರ್ಯ ನಿರ್ವಹಿಸಿದ್ದಳು. ಆದರೆ ತಾನು ಮಾತ್ರ ಈ ವೃತ್ತಿಯನ್ನು ನಿಲ್ಲಿಸಲು ಬಯಸಿರಲಿಲ್ಲ. ನೂರನೇ ಹುಟ್ಟುಹಬ್ಬದ ನಂತರ ವೃತ್ತಿಗೆ ಗುಡ್​ ಬೈ ಹೇಳಲು ಕ್ಯಾಲಿ ತೀರ್ಮಾನಿಸಿದ್ದು, ಆದರೆ ಯಾವುದೇ ಕೆಲಸ ಮಾಡದೇ ಮನೆಯಲ್ಲಿ ಇರುವುದಿಲ್ಲವಂತೆ. ಸದಾ ಜನರೊಂದಿಗೆ ಬೆರೆತಿರುವ ನಾನು ನಿವೃತ್ತಿಯ ಬಳಿಕ ಕೂಡ ಏನಾದರೂ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ 99ರ ಹಿರಿಯಜ್ಜಿ.

99 ವಯಸ್ಸಿನಲ್ಲೂ ಕ್ಯಾಲಿ ತೋರಿಸುವ ತಮ್ಮ ಕೆಲಸ ಮೇಲಿನ ಪ್ರೀತಿಯೇ ಮೆಮ್ಪಿಸ್ ನಗರದ ಹಲವರಿಗೆ ಸ್ಪೂರ್ತಿಯಾಗಿದೆ. ಪ್ರತಿಯೊಂದು ಕೆಲಸಕ್ಕೂ ಅವರ ಉತ್ಸಾಹ ಎಲ್ಲರನ್ನು ಆರ್ಶ್ಚರ್ಯಚಕಿತರನ್ನಾಗಿಸುತ್ತದೆ. ಅಲ್ಲದೆ ಈ ಇಳಿ ವಯಸ್ಸಿನಲ್ಲೂ ಯಾರ ಸಹಾಯವಿಲ್ಲದೆ ಕ್ಯಾಲಿ ಜೀವನ ನಡೆಸುವುದನ್ನು ನೋಡಿದರೆ ಗ್ರೇಟ್ ಅನಿಸುತ್ತದೆ ಎನ್ನುತ್ತಾರೆ ಮೆಮ್ಪಿಸ್ ನಗರದ ವ್ಯಾಪಾರಿಯೊಬ್ಬರು.
Loading...

ನಿರ್ದಿಷ್ಟ ವಯಸ್ಸಿಗೆ ನಿವೃತ್ತಿ ಹೊಂದುವ ಸಮಾಜದಲ್ಲಿ ತನ್ನ ನೆಚ್ಚಿನ ಕೆಲಸಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟುಕೊಂಡಿರುವ ಕ್ಯಾಲಿ ಟೆರೆನ್ ಎಲ್ಲರ ನಡುವೆ ವಿಶೇಷ ಎನಿಸುವುದು ಇದೇ ಕಾರಣಕ್ಕಲ್ಲವೇ.
First published:September 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...