• Home
  • »
  • News
  • »
  • trend
  • »
  • Life Advice: ಉತ್ತಮ ಜೀವನ ನಡೆಸುವುದು ಹೇಗೆ ಗೊತ್ತಾ? 95 ವರ್ಷದ ವೃದ್ದೆ ಏನ್ ಹೇಳಿದ್ದಾರೆ ನೋಡಿ

Life Advice: ಉತ್ತಮ ಜೀವನ ನಡೆಸುವುದು ಹೇಗೆ ಗೊತ್ತಾ? 95 ವರ್ಷದ ವೃದ್ದೆ ಏನ್ ಹೇಳಿದ್ದಾರೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಒಂದು ವಿಡಿಯೋ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ ನೋಡಿ. 95 ವರ್ಷದ ಮಹಿಳೆಯ ಈ ವಿಡಿಯೋವನ್ನು ತುಂಬಾ ಜನರು ಈಗಾಗಲೇ ಲೈಕ್ ಮಾಡಿದ್ದಾರೆ. ವಯಸ್ಸಾದ ಮಹಿಳೆ ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂದು ಸಲಹೆ ನೀಡಿದ್ದಾರೆ ಮತ್ತು ಅದು ಅನೇಕರಿಗೆ ಸಾಕಷ್ಟು ಉಪಯುಕ್ತ ಸಹ ಆಗಿದೆ ಎಂದು ಹೇಳಬಹುದು.

ಮುಂದೆ ಓದಿ ...
  • Share this:

‘ಅನುಭವದಲ್ಲಿ ಅಮೃತವಿರುತ್ತದೆ, ಅನುಭವಸ್ಥರು ಹೇಳಿದರೆ ಕೇಳಬೇಕು’ ಅಂತ ಮನೆಯಲ್ಲಿ (Home) ಇರುವಂತಹ ಹಿರಿಯರು (Elders) ನಾವು ಕಿರಿಯರು ಏನಾದರೂ ಅವರ ಮಾತನ್ನು ಕೇಳದೆ ಹೋದರೆ ಈ ಮಾತನ್ನು ಹೇಳುತ್ತಾ ಇರುತ್ತಾರೆ. ಇದನ್ನು ನಾವೆಲ್ಲಾ ಸುಮಾರು ಸಾರಿ ಕೇಳಿರುತ್ತೇವೆ. ವಯಸ್ಸಾದವರು ಜೀವನವನ್ನು (Life) ತುಂಬಾನೇ ನೋಡಿರುತ್ತಾರೆ ಮತ್ತು ಅವರಿಗಾದ ಅನುಭವಗಳು ಜೀವನದಲ್ಲಿ ತುಂಬಾನೇ ಪಾಠಗಳನ್ನು ಸಹ ಕಲಿಸಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲಿ ಅವರು ಕಲಿತಿರುವ ಅಮೂಲ್ಯವಾದ ಪಾಠಗಳನ್ನು ಯಾವಾಗಲೂ ಮನೆಯಲ್ಲಿರುವ ಕಿರಿಯರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದನ್ನು ನಾವೆಲ್ಲಾರೂ ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ.


ಉತ್ತಮ ಜೀವನ ನಡೆಸಲು ಹಿರಿಯರ ಸಲಹೆ ಪಡೆಯುವುದು ಉತ್ತಮ
ಜೀವನವನ್ನು ಹೇಗೆ ಸಾಗಿಸಬೇಕು, ಅದರಲ್ಲಿಯೂ ಉತ್ತಮವಾಗಿ ಹೇಗೆ ಸಾಗಿಸಬೇಕು ಮತ್ತು ಜೀವನದಲ್ಲಿ ಬರುವ ಕಷ್ಟವಾದ ಸನ್ನಿವೇಶಗಳನ್ನು ನಾವು ಹೇಗೆ ಎದುರಿಸಬೇಕು ಅಂತ ನಮಗೆ ಅನೇಕ ಗೊಂದಲಗಳಿರುತ್ತವೆ. ಯಾವುದು ಸರಿ, ಯಾವುದು ತಪ್ಪು, ಹೇಗೆ ನಡೆದುಕೊಳ್ಳುವುದು, ದೊಡ್ಡವರ ಹತ್ತಿರ ಯಾವ ಸಂದರ್ಭದಲ್ಲಿ ಹೇಗೆ ವರ್ತಿಸುವುದು. ಎಲ್ಲವೂ ಒಂದು ಉತ್ತಮ ಜೀವನ ನಡೆಸುವಲ್ಲಿ ತುಂಬಾನೇ ಮುಖ್ಯವಾದ ಪಾತ್ರ ವಹಿಸುತ್ತವೆ ಎಂದು ಹೇಳಬಹುದು.


ಇದನ್ನೂ ಓದಿ: Van life: ವ್ಯಾನ್ ಅನ್ನು ಮನೆಯನ್ನಾಗಿಸಿ ಜೀವನ ಸಾಗಿಸುತ್ತಿದ್ದಾಳೆ 35 ವರ್ಷದ ಈ ಮಹಿಳೆ!


ಇಷ್ಟೇ ಅಲ್ಲದೆ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಯಾವ ಯಾವ ವಸ್ತುಗಳಿಂದ ಮತ್ತು ಅಭ್ಯಾಸಗಳಿಂದ ದೂರವಿದ್ದರೆ ಒಳ್ಳೆಯದು ಅಂತ ನಮಗೆ ಹಿರಿಯರಿಂದಲೇ ತಿಳಿಯುತ್ತದೆ ಎಂದು ಹೇಳಿದರೆ ಸುಳ್ಳಲ್ಲ. ಮನೆಯಲ್ಲಿ ಯಾರಾದರೊಬ್ಬರು ವಯಸ್ಸಾದವರು ನಮ್ಮೊಡನೆ ಇದ್ದರೆ, ಅನೇಕ ಒಳ್ಳೆಯ ವಿಷಯಗಳನ್ನು ಕೇಳಿಸಿಕೊಳ್ಳುವ ಅವಕಾಶ ನಮಗೆ ದೊರೆಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


95 ವರ್ಷದ ಮಹಿಳೆಯ ವಿಡಿಯೋ ಫುಲ್ ವೈರಲ್
ಈಗೇಕೆ ಇದರ ಬಗ್ಗೆ ಮಾತನಾಡುತ್ತಾ ಇದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಮೂಡಬಹುದು ಅಲ್ಲವೇ? ಇತ್ತೀಚೆಗೆ ಒಂದು ವಿಡಿಯೋ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ ನೋಡಿ. 95 ವರ್ಷದ ಮಹಿಳೆಯ ಈ ವಿಡಿಯೋವನ್ನು ತುಂಬಾ ಜನರು ಈಗಾಗಲೇ ಲೈಕ್ ಮಾಡಿದ್ದಾರೆ. ವಯಸ್ಸಾದ ಮಹಿಳೆ ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂದು ಸಲಹೆ ನೀಡಿದ್ದಾರೆ ಮತ್ತು ಅದು ಅನೇಕರಿಗೆ ಸಾಕಷ್ಟು ಉಪಯುಕ್ತ ಸಹ ಆಗಿದೆ ಎಂದು ಹೇಳಬಹುದು.


ವಿಡಿಯೋದಲ್ಲಿ ಈ ವೃದ್ದೆ ಹೇಳಿದ್ದೇನು?
ಈ ವಿಡಿಯೋವನ್ನು 21 ಗಂಟೆಗಳ ಹಿಂದೆ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಇಲ್ಲಿಯವರೆಗೆ 26,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಪಡೆದಿದೆ. "ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ 95 ವರ್ಷದ ವೃದ್ಧರೊಬ್ಬರು ನೀಡಿದ ಸಲಹೆ" ಎಂದು ವಿಡಿಯೋದಲ್ಲಿ ಪಠ್ಯವನ್ನು ಸೇರಿಸಲಾಗಿದೆ. ವೃದ್ಧ ಮಹಿಳೆ ತನ್ನ ಅಮೂಲ್ಯ ಸಲಹೆಯನ್ನು ಹಂಚಿಕೊಂಡಾಗ ಒಂದು ಸಲೂನ್ ನಲ್ಲಿದ್ದರು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.



"ಮದ್ಯವನ್ನು ಕುಡಿಯಬಾರದು, ಸಿಗರೇಟ್ ಸೇದಬಾರದು, ನಾನು ಅದರಲ್ಲಿ ಯಾವುದನ್ನೂ ಮಾಡಿಲ್ಲ. ಇವುಗಳನ್ನು ನೀವು ಮಾಡದೆ ಇದ್ದರೆ, ಅದು ನಿಮ್ಮನ್ನು ಬಹಳಷ್ಟು ವಿಷಯಗಳಿಂದ ರಕ್ಷಿಸುತ್ತದೆ ಮತ್ತು ನಿಮಗೆ ಸಂಗಾತಿ ಇದ್ದರೆ, ನಿಮ್ಮ ಸಂಗಾತಿಯೊಂದಿಗೆ ನಿಷ್ಠೆಯಿಂದ ಇರಿ" ಎಂದು ಸಲಹೆ ನೀಡಿದ್ದಾರೆ.


ಈ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
"ಹಿರಿಯರ ಅನುಭವದ ಮಾತುಗಳನ್ನು ನಿಮ್ಮ ಸಲೂನ್ ನಿಂದ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ವಿಡಿಯೋದ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ. ಈ ವಿಡಿಯೋಗೆ 1,000ಕ್ಕೂ ಹೆಚ್ಚು ಲೈಕ್ ಗಳು ಮತ್ತು ಹಲವಾರು ಕಾಮೆಂಟ್ ಗಳು ಬಂದಿವೆ.


ಇದನ್ನೂ ಓದಿ: Swimming: 70 ರ ವಯಸ್ಸಿನಲ್ಲೂ ಎರಡು ಕೈಗಳನ್ನು ಕಟ್ಟಿಕೊಂಡು ನದಿಯಲ್ಲಿ ಹೇಗೆ ಈಜಾಡಿದ್ದಾರೆ ನೋಡಿ ಈ ವೃದ್ಧೆ


"ಹಿರಿಯ ಜನರ ಬಾಯಿಯಿಂದ ಜೀವನದ ಸಲಹೆಗಳನ್ನು ಹಂಚಿಕೊಳ್ಳಲು ಇದಕ್ಕಿಂತ ಒಳ್ಳೆಯ ವೇದಿಕೆ ಇನ್ನೊಂದಿಲ್ಲ ಬಿಡಿ, ಈ ವಿಡಿಯೋವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈ ಒಳ್ಳೆಯ ಮಾತುಗಳನ್ನು ಹೇಳಿದ್ದಕ್ಕೆ ಅವರಿಗೆ ಒಂದು ಪಾಯಿಂಟ್ ಸಿಕ್ಕಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ.

Published by:Ashwini Prabhu
First published: