• Home
  • »
  • News
  • »
  • trend
  • »
  • ವಿಶ್ವದ Youngest Yoga Instructor ಎಂಬ ಕೀರ್ತಿಗೆ ಪಾತ್ರನಾದ ಭಾರತದ 9 ವರ್ಷದ ಬಾಲಕ!

ವಿಶ್ವದ Youngest Yoga Instructor ಎಂಬ ಕೀರ್ತಿಗೆ ಪಾತ್ರನಾದ ಭಾರತದ 9 ವರ್ಷದ ಬಾಲಕ!

ರೇಯಾನ್ಶ್ ಸುರಾನಿ

ರೇಯಾನ್ಶ್ ಸುರಾನಿ

200 ಗಂಟೆಗಳ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸುವ ಮೂಲಕ ಪುಟ್ಟ ಯೋಗ ತರಬೇತುದಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

  • Share this:

    ಸಾಧನೆಗೆ (Achievement) ವಯಸ್ಸಿನ (Age) ಯಾವುದೇ ಮಿತಿ ಇಲ್ಲ. ಆದರೆ ಪಟ್ಟು ಬಿಡದೇ ಸಾಧಿಸುವ ಛಲ ಇರಬೇಕು. ನಮ್ಮ ಕನಸು, ಧ್ಯೇಯ, ಗುರಿ ಸ್ಪಷ್ಟವಾಗಿದ್ದರೆ ಸಾಕು ಸಾಧನೆ ಶಿಖರವನ್ನು ಅವು ತಲುಪಿಸುತ್ತವೆ. ಹೌದು ಸಾಧನೆ ಮಾಡಲು ಏಜ್ ಈಸ್ ಜಸ್ಟ್ ನಂಬರ್ ಎಂಬುವುದನ್ನು ಈ ಪುಟ್ಟ ಬಾಲಕ (Boy) ತೋರಿಸಿ ಕೊಟ್ಟಿದ್ದಾನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬುವಂತೆ ಈ 9 ವರ್ಷದ ಪೋರನ ಸಾಧನೆ ಈಗ ಎಲ್ಲೆಡೆ ಮಾತನಾಡುತ್ತಿದೆ. ತನ್ನ 9ನೇ ವಯಸ್ಸಿಗೆ ಯೋಗಾ ಟೀಚರ್ ಆಗುವುದರ ಜೊತೆಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ಬುಕ್ನಲ್ಲಿ ದಾಖಲೆ ಬರೆದಿದ್ದಾನೆ. ರೇಯಾನ್ಶ್ ಸುರಾನಿ ಎಂಬ ಬಾಲಕ 9ನೇ ವರ್ಷದಲ್ಲಿ ಈ ಸಾಧನೆ ಮಾಡಿದ್ದಾನೆ. ರೆಯಾನ್ಶ್, ಆನಂದ ಶೇಖರ್ ಯೋಗ ಶಾಲೆಯಲ್ಲಿ 200 ಗಂಟೆಗಳ ಯೋಗ ತರಬೇತಿಯನ್ನು ಪಡೆದು ನಂತರ ಪ್ರಮಾಣಪತ್ರವನ್ನು ಪಡೆದಿದ್ದಾನೆ. ವರ್ಲ್ಡ್ ರೆಕಾರ್ಡ್ ವರದಿಯ ಪ್ರಕಾರ ರೆಯಾಶ್ ತನ್ನ 4ನೇ ವಯಸ್ಸಿಗೇ ಯೋಗದ ತರಬೇತಿ ಪಡೆಯಲು ಆರಂಭಿಸಿದ್ದನು. ಸದ್ಯ ಅತೀ ಕಿರಿಯ ಯೋಗ ಟೀಚರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕುರಿತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ವೆಬ್ ಸೈಟ್ನಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.


    ಕಿರಿಯ ಯೋಗ ತರಬೇತುದಾರ 


    9 ವರ್ಷ 220 ದಿನಗಳ ವಯಸ್ಸಿನ ಭಾರತದ ಬಾಲಕನೊಬ್ಬ ವಿಶ್ವದ ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರನಾಗುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ತನ್ನ ಕುಟುಂಬದೊಂದಿಗೆ ದುಬೈನಲ್ಲಿ ನೆಲೆಸಿರುವ ರೆಯಾನ್ಶ್ ಸುರಾನಿ ಅವರು ಕೇವಲ ನಾಲ್ಕು ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ಪೋಷಕರೊಂದಿಗೆ ಯೋಗವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ್ದ. 200 ಗಂಟೆಗಳ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ, ರೆಯಾನ್ಶ್ ಜುಲೈ 27, 2021 ರಂದು ಆನಂದ್ ಶೇಖರ್ ಯೋಗ ಶಾಲೆಯಿಂದ ತನ್ನ ಸರ್ಟಿಫಿಕೇಟನ್ನು ಪಡೆಯುವ ಮೂಲಕ ಪುಟ್ಟ ಯೋಗ ತರಬೇತುದಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.


    ಇದನ್ನೂ ಓದಿ: Urine Smell: ನೀವು ಮೂತ್ರ ವಿಸರ್ಜನೆ ಮಾಡಿದಾಗ ವಾಸನೆ ಬರುತ್ತಿದೆಯೇ..? ಕೂಡಲೇ ಎಚ್ಚೆತ್ತುಕೊಳ್ಳಿ..


    ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ನಲ್ಲಿನ ವರದಿಯ ಪ್ರಕಾರ, ರೆಯಾನ್ಶ್ ತನ್ನ ಪೋಷಕರು ರಿಷಿಕೇಶದಲ್ಲಿ ಯೋಗ ಶಿಕ್ಷಕರ ತರಬೇತಿ ಕೋರ್ಸ್‌ಗೆ ಹಾಜರಾಗುತ್ತಿದ್ದಾರೆ ಎಂದು ತಿಳಿದಾಗ, ಆತನು ಸಹ ಅರ್ಹ ಬೋಧಕರಾಗುವ ಕನಸನ್ನು ಕಂಡಿದ್ದನಂತೆ. ಅಲ್ಲಿಂದ ಈತನ ಯೋಗ ಪ್ರಯಾಣ ಪ್ರಾರಂಭವಾಯಿತು.


    10-15 ಮಕ್ಕಳಿಗೆ ಯೋಗ ಕಲಿಸುತ್ತಿರುವ ರೇಯಾನ್ಶ್​​


    ಕೋರ್ಸ್ ಸಮಯದಲ್ಲಿ, ರೇಯಾನ್ಶ್ ಯೋಗದ ಅನೇಕ ಅಂಶಗಳನ್ನು ಕಲಿತಿದ್ದಾನೆ. ಉದಾಹರಣೆಗೆ "ಜೋಡಣೆ, ಅಂಗರಚನಾ ತತ್ವಶಾಸ್ತ್ರ ಮತ್ತು ಆಯುರ್ವೇದದ ಪೌಷ್ಟಿಕಾಂಶದ ಸಂಗತಿಗಳು" ಸೇರಿ ಹಲವು ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಾನೆ. ಈ ಕೋರ್ಸ್ ನನ್ನ ಯೋಗದ ಗ್ರಹಿಕೆಯನ್ನು ಬದಲಾಯಿಸಿತು. "ಮೊದಲು, ದೈಹಿಕ ಭಂಗಿ ಮತ್ತು ಉಸಿರಾಟದ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ, ಆದರೆ ಯೋಗವು ಅದಕ್ಕಿಂತ ಹೆಚ್ಚು" ಎಂದು ರೇಯಾನ್ಶ್ ಹೇಳುತ್ತಾನೆ. 9 ವರ್ಷ ವಯಸ್ಸಿನ ರೆಯಾನ್ಶ್, ಭವಿಷ್ಯಕ್ಕಾಗಿ ಯಾವುದೇ ಯೋಜನೆಗಳನ್ನು ಹೊಂದಿಲ್ಲ, ಆದಾಗ್ಯೂ ವರ್ಚುವಲ್ ರಿಯಾಲಿಟಿ ಯೋಗ ತರಗತಿಗಳನ್ನು ಆಯೋಜಿಸುವುದು ಆತನ ಮಹತ್ವಾಕಾಂಕ್ಷೆಗಳಲ್ಲಿ ಒಂದಾಗಿದೆ. ಸದ್ಯಕ್ಕೆ, COVID-19 ನಿರ್ಬಂಧಗಳ ಕಾರಣ, ಆತ ಸಣ್ಣ ಖಾಸಗಿ ತರಗತಿಗಳಲ್ಲಿ ಜನರಿಗೆ ಯೋಗವನ್ನು ಕಲಿಸುತ್ತಿದ್ದಾನೆ. ಅಲ್ಲದೇ ಶಾಲೆಯಲ್ಲಿ, ಅವನು ತನ್ನ ಗೆಳೆಯರಿಗೆ ಪ್ರತಿ ಅವಧಿಯಲ್ಲಿ 10-15 ಮಕ್ಕಳಿಗೆ ಯೋಗ ಹೇಳಿ ಕೊಡುತ್ತಿದ್ದಾನೆ.


    ಇದನ್ನೂ ಓದಿ: Pregnancy Tips: ಗರ್ಭಧರಿಸುವ ಆಲೋಚನೆಯಲ್ಲಿದ್ರೆ ಈ ಅಂಶಗಳನ್ನು ಮರೆಯಬೇಡಿ


    "ನನ್ನ ಅನುಭವ ಮತ್ತು ಜ್ಞಾನವನ್ನು ಪ್ರಪಂಚದಾದ್ಯಂತದ ವ್ಯಕ್ತಿಗಳಿಗೆ ಅವರ ಯೋಗಕ್ಷೇಮಕ್ಕಾಗಿ ಹೇಳಿಕೊಡಲು ನನಗೆ ಸಂತೋಷವಾಗುತ್ತದೆ’’ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾನ್ಯತೆಯ ನಂತರ ನನ್ನನ್ನು ಸೆಲೆಬ್ರಿಟಿಯಂತೆ ನೋಡುತ್ತಿದ್ದರೆ ಎನ್ನುತ್ತಾನೆ ಈ ಪುಟ್ಟ ಪೋರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಯೂಟ್ಯೂಬ್ ನಲ್ಲಿ ಹಂಚಿಕೊಂಡಿರುವ ವೀಡಿಯೋ ರೆಯಾನ್ಶ್ ಯೋಗಾಭ್ಯಾಸವನ್ನು ತೋರಿಸುತ್ತಿದೆ ಮತ್ತು ಆರನ ಯೋಗದ ಜರ್ನಿಯನ್ನು ಹಂಚಿಕೊಂಡಿದೆ.

    Published by:Kavya V
    First published: