HOME » NEWS » Trend » 9 YEAR OLD DELHI BOY SETS RECORD BY RECITING FIFTEEN SHIV TANDAV STOTRAM UNDER A MINUTE STG LG

1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಶಿವತಾಂಡವ ಸ್ತೋತ್ರ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ದೆಹಲಿ ಬಾಲಕ

ಶಿವ ತಾಂಡವ್ ಸ್ತೋತ್ರಂ ಎಂಬುದು ಭಗವಾನ್ ಶಿವನ ಮಹಾನ್ ಭಕ್ತನಾದ ಲಂಕಾ ರಾಜ ರಾವಣನು ಸ್ತುತಿಸಿದ ಸ್ತೋತ್ರವಾಗಿದೆ. ಇದರಲ್ಲಿ ಶಿವನ ಶಕ್ತಿ ಮತ್ತು ಸೌಂದರ್ಯವನ್ನು ಹಾಡಿ ಹೊಗಳಲಾಗಿದೆ. ಈ ಸ್ತೋತ್ರ ಪಠಣದಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಅಲ್ಲದೇ ಅಗಾಧವಾದ ಮಾನಸಿಕ ಶಕ್ತಿಯನ್ನು ಈ ಸ್ತೋತ್ರ ನೀಡುತ್ತದೆ ಎನ್ನುವ ನಂಬಿಕೆ ಇದೆ.

news18-kannada
Updated:April 24, 2021, 12:49 PM IST
1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಶಿವತಾಂಡವ ಸ್ತೋತ್ರ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ದೆಹಲಿ ಬಾಲಕ
ಬಾಲಕ
  • Share this:
ನವದೆಹಲಿ(ಏ.24): ಮನೆಯಲ್ಲಿ ವಯಸ್ಸಾದ ಅಜ್ಜ ಮತ್ತು ಅಜ್ಜಿ ಇದ್ದರೆ ಮುಂದಿನ ಪೀಳಿಗೆ ಸರಿಯಾದ ಹಾದಿಯಲ್ಲಿ ನಡೆಯುವುದಲ್ಲದೇ ಅವರ ಅನುಭದಿಂದ ದೊಡ್ಡ ಸಾಧನೆಯನ್ನು ಮಾಡಬಹುದು ಎನ್ನುವುದನ್ನು ದೆಹಲಿಯ ಬಾಲಕನೊಬ್ಬ ಸಾಧಿಸಿ ತೋರಿಸಿದ್ದಾನೆ. 9 ವರ್ಷದ ವಿವಾವ್ ಗುಪ್ತ ಕಠಿಣವಾದ ಶಿವತಾಂಡವ ಸ್ತೋತ್ರವನ್ನು ಕಡಿಮೆ ಅವಧಿಯಲ್ಲಿ ಪಠಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾನೆ.

15 ಶ್ಲೋಕಗಳುಳ್ಳ ಶಿವತಾಂಡವ ಸಂಸ್ಕೃತ ಸ್ತೊತ್ರವನ್ನು 55 ಸೆಕೆಂಡ್ಸ್ 29 ಮಿಲಿ ಸೆಕೆಂಡ್ಸ್‌ಗಳಲ್ಲಿ ಉಚ್ಚರಿಸಿ ದಾಖಲೆ ಬರೆದಿದ್ದಾನೆ. ಶಿವ ತಾಂಡವ ಸ್ತೋತ್ರ ಶಿವನ ಸ್ತುತಿಗಳಲ್ಲೇ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು, ಲಂಕಾಧಿಪತಿ ರಾವಣ ಶಿವತಾಂಡವ ಸ್ತೋತ್ರವನ್ನು ರಚಿಸಿದ್ದಾನೆ.

ಎಎನ್‌ಐ ವರದಿಯ ಪ್ರಕಾರ, ವಾಯುವ್ಯ ದೆಹಲಿಯ ಪಿತಾಂಪುರ ಪ್ರದೇಶದ ಬಾಲ ಭಾರತಿ ಸಾರ್ವಜನಿಕ ಶಾಲೆಯ ವಿದ್ಯಾರ್ಥಿಯಾಗಿರುವ ವಿವಾನ್‌ಗೆ ತನ್ನ ಅಜ್ಜಿಯೇ ಸ್ಫೂರ್ತಿ. ವಿವಾನ್ ಅಜ್ಜಿ ಮನೆಯಲ್ಲಿ ನಿತ್ಯ ಶ್ಲೋಕಗಳನ್ನು ಪಠಿಸುತ್ತಾರೆ. ಇದರ ಉಚ್ಚಾರಣೆ, ರಾಗ ಎಲ್ಲವೂ ಸಹ ವಿವಾನ್ ಮನಸ್ಸು ಸೆಳೆದಿದೆ. ಸ್ತೋತ್ರಗಳನ್ನು ಕಲಿಯುವುದಕ್ಕೆ ಮನಸ್ಸು ಮಾಡಿದ ವಿವಾನ್ ಅಜ್ಜಿಯಿಂದ ಪ್ರತಿನಿತ್ಯ ಶ್ಲೋಕಗಳನ್ನು ಹೇಳಿಸಿಕೊಳ್ಳಲು ಆರಂಭಿಸಿದ. ಅಲ್ಲದೇ ದಿನನಿತ್ಯ ತಪ್ಪದೇ ಅದನ್ನು ಹೇಳುವ ಅಭ್ಯಾಸ ಮಾಡಿಕೊಂಡನು. ಇಷ್ಟೇ ಆಗಿದ್ರೆ ವಿವಾನ್ ಸ್ತೋತ್ರ ಪಠಣದ ಸಂತೋಷವನ್ನು ಮಾತ್ರ ತಮ್ಮದಾಗಿಸಿಕೊಳ್ಳುತ್ತಿದ್ದನು. ಆದರೆ ವಿವಾನ್‌ನಲ್ಲಿ ವಿಶೇಷವಾದ ಪ್ರತಿಭೆ ಇತ್ತು. ಅದನ್ನು ಕಂಡು ಹಿಡಿದಿದ್ದೇ ಅವನ ಅಜ್ಜ ಅನಿಲ್ ಗುಪ್ತಾ.

ವಿವಾನ್ ಶ್ಲೋಕ ಕಲಿಯುತ್ತಿರುವುದು ಮನೆಯಲ್ಲಿ ಎಲ್ಲರಿಗೂ ಖುಷಿ ನೀಡಿತ್ತು. ಆದರೆ ಆ ಶ್ಲೋಕ ಪಠಿಸುವಾಗ ವಿವಾನ್ ಎಲ್ಲರಂತೆ ಸಾಮಾನ್ಯವಾಗಿ ಪಠಿಸುತ್ತಿರಲಿಲ್ಲ. ಪ್ರತಿಯೊಂದು ಶಬ್ಧ , ಉಚ್ಚಾರವನ್ನು ಸ್ಪಷ್ಟವಾಗಿ ಕಲಿತಿದ್ದರೂ, ಅತ್ಯಂತ ಕಠಿಣ ಪದವನ್ನೂ ಯಾವುದೇ ತೊಡಕಿಲ್ಲದೇ ಉಚ್ಚರಿಸುತ್ತಿದ್ದರು. ಇಷ್ಟು ಕಷ್ಟದ ಪದಗಳನ್ನು , ಅತಿ ವೇಗವಾಗಿ ಈ ಸಣ್ಣ ವಯಸ್ಸಿನಲ್ಲಿ ವಿವಾನ್ ಸುಲಭದಲ್ಲಿ ಹೇಳುತ್ತಿರುವುದು ಅನಿಲ್ ಗುಪ್ತಾ ಅವರಿಗೆ ಆಶ್ಚರ್ಯ ಉಂಟು ಮಾಡಿತ್ತು. ಆ ಕೂಡಲೇ ವಿವಾನ್ ಸಾಮರ್ಥ್ಯವನ್ನು ಗುರುತಿಸಿ ಇನ್ನಷ್ಟು ಪ್ರೋತ್ಸಾಹಿಸಿದರು.

Coronavirus: ದೇಶದಲ್ಲಿ ಮುಂದಿನ‌ ತಿಂಗಳು ಪ್ರತಿದಿನ 8 ಲಕ್ಷ ಕೊರೋನಾ ಕೇಸ್ ದಾಖಲಾಗುವ ಸಾಧ್ಯತೆ: ಅಧ್ಯಯನ

ಶಿವ ತಾಂಡವ್ ಸ್ತೋತ್ರಂ ಎಂಬುದು ಭಗವಾನ್ ಶಿವನ ಮಹಾನ್ ಭಕ್ತನಾದ ಲಂಕಾ ರಾಜ ರಾವಣನು ಸ್ತುತಿಸಿದ ಸ್ತೋತ್ರವಾಗಿದೆ. ಇದರಲ್ಲಿ ಶಿವನ ಶಕ್ತಿ ಮತ್ತು ಸೌಂದರ್ಯವನ್ನು ಹಾಡಿ ಹೊಗಳಲಾಗಿದೆ. ಈ ಸ್ತೋತ್ರ ಪಠಣದಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಅಲ್ಲದೇ ಅಗಾಧವಾದ ಮಾನಸಿಕ ಶಕ್ತಿಯನ್ನು ಈ ಸ್ತೋತ್ರ ನೀಡುತ್ತದೆ ಎನ್ನುವ ನಂಬಿಕೆ ಇದೆ.

'ಈ ಎಲ್ಲಾ ಸಂಕೀರ್ಣ ಶ್ಲೋಕಗಳನ್ನ ನೆನಪಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ನೆನಪಿಟ್ಟುಕೊಂಡು ರೆಕಾರ್ಡ್ ಟೈಂನಲ್ಲಿ ಹೇಳುವುದು ಕೂಡ ಬಹಳ ಸವಾಲಿನ ಕೆಲಸ. ಆದರೆ ವಿವಾನ್ ಇದನ್ನು ಸಾಧಿಸಿದ್ದು ಬಹಳ ಖುಷಿ ನೀಡಿತ್ತು' ಎಂದಿದ್ದಾರೆ ವಿವಾನ್ ಅಜ್ಜ ಅನಿಲ್ ಗುಪ್ತಾ.ಜೂನ್ 6, 2011 ರಂದು ಹುಟ್ಟಿದ ವಿವಾನ್ ಕಳೆದ ವರ್ಷವೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರವೇಶಿಸಿದ್ದನು. ಎಂಟು ವರ್ಷ ವಯಸ್ಸಿನಲ್ಲೇ 7 ಖಂಡಗಳನ್ನು ಪ್ರಯಾಣಿಸಿ ಬಂದ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ವಿವಾನ್ ಪಾತ್ರರಾಗಿದ್ದಾನೆ. ಅಲ್ಲದೇ ದಾಖಲೆ ನಿರ್ಮಿಸಿದ ಕೊನೆಯ ಖಂಡವಾಗಿ 2019 ರ ಜೂನ್ 6 ರಂದು ಆಸ್ಟ್ರೇಲಿಯಕ್ಕೆ ಭೇಟಿ ನೀಡಿದ್ದೇನೆ ಎಂದು ವಿವಾನ್ ಹೇಳಿದ್ದಾನೆ.
Youtube Video

ವಿವಾನ್ 2015 ರಲ್ಲಿ ಉತ್ತರ ಕೆನಡಾ (ಉತ್ತರ ಅಮೆರಿಕಾ) ದೊಂದಿಗೆ ಪ್ರಯಾಣವನ್ನು ಆರಂಭಿಸಿ ಕೇವಲ 4 ವರ್ಷಗಳಲ್ಲಿ ಎಲ್ಲಾ 7 ಖಂಡಗಳನ್ನು ಸುತ್ತಿದ್ದನು. ಈ ಪ್ರಯಾಣದಲ್ಲಿ ಆಸ್ಟ್ರೇಲಿಯಕ್ಕೆ ಭೇಟಿ ನೀಡುವ ಸಮಯಕ್ಕೆ ವಿಶ್ವದ 32 ದೇಶಗಳಿಗೆ ಪ್ರಯಾಣಿಸಿದ್ದನು. ಇನ್ನೂ 'ಆಸ್ಟ್ರೇಲಿಯದ ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿ ಡೈವಿಂಗ್ ಮಾಡುವುದರ ಜೊತೆಗೆ ಫಿನ್‌ಲ್ಯಾಂಡ್‌ನಲ್ಲಿ ಸ್ಯಾಂಟಾ ಕ್ಲಾಸ್ ಅವರನ್ನು ಭೇಟಿಯಾಗಿದ್ದು ಅತ್ಯಂತ ಖುಷಿಯ ಕ್ಷಣಗಳು ಮತ್ತು ಟಾಂಜೇನಿಯಾದ ವನ್ಯಜೀವಿ ಸಫಾರಿ ನನಗೆ ಇಷ್ಟವಾಯ್ತು' ಎಂದು ವಿವಾನ್ ತಮ್ಮ ಪ್ರವಾಸದ ನೆನಪನ್ನು ಹಂಚಿಕೊಂಡಿದ್ದಾನೆ.
Published by: Latha CG
First published: April 24, 2021, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories