• Home
  • »
  • News
  • »
  • trend
  • »
  • Viral Video: ರಾಣಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ 80ರ ಅಜ್ಜಿ!

Viral Video: ರಾಣಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ 80ರ ಅಜ್ಜಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Birthday celebration: ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆ ವಿಡಿಯೋ, ಫೋಟೋಗಳಿಗೇನು ಕೊರತೆ ಇಲ್ಲ ಬಿಡಿ. ದಿನಕ್ಕೊಂದು ವೈರಲ್​ ಫೋಟೋ ಅಥವಾ ವಿಡಿಯೋಗಳು ಬರುತ್ತಲೇ ಇರುತ್ತವೆ.

  • Share this:

ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುವುದು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅದು ಸಾಂಪ್ರದಾಯಿಕವಾಗಿಯೂ ಕೂಡ ಆಗಿರಬಹುದು ಅಥವಾ ಆಧುನಿಕ ಸ್ಟೈಲ್​ಗಳಲ್ಲಿ ಕೂಡ ಆಗಿರಬಹುದು. ಒಟ್ಟಿನಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುವುದೇ ಒಂದು ರೀತಿಯ ಖುಷಿಯ ವಿಚಾರ ಅಂತ ಹೇಳಬಹುದು. ಅಲ್ವಾ? ಅದ್ರಲ್ಲಿ ಈಗಂತೂ ಚಿತ್ರ ವಿಚಿತ್ರವಾಗಿ ಹುಟುಬ್ಬವನ್ನು ಆಚರಿಸಿಕೊಳ್ತಾರೆ. ಕೆಲ ಹುಡುಗರಂತೂ ಬತ್ರ್ಢೇ ಬಂಪ್ಸ್ ಅಂತ ಕೊಡ್ತಾರೆ. ಇದರಿಂದ ಮರಣ ಹೊಂದಿದ ಉದಾಹರಣೆಗಳೂ ಇದ್ದಾವೆ.  ಇವೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಚಲನವನ್ನೇ ಸೃಷ್ಠಿಮಾಡಿತ್ತು. ಹುಟ್ಟು ಹಬ್ಬದ ದಿನವೇ ಮರಣ ಹೊಂದಿದ ಬೇಸರದ ಸಂಗತಿ ಆಗಿತ್ತು. ಹಾಗಾಗಿ ಯಾವ ಹುಚ್ಚಾಟಗಳು  ಹೆಚ್ಚಾಗಬಾರದು.


ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆ ವಿಡಿಯೋ, ಫೋಟೋಗಳಿಗೇನು ಕೊರತೆ ಇಲ್ಲ ಬಿಡಿ. ದಿನಕ್ಕೊಂದು ವೈರಲ್​ ಫೋಟೋ ಅಥವಾ ವಿಡಿಯೋಗಳು ಬರುತ್ತಲೇ ಇರುತ್ತವೆ. ಇದೀಗ ಅದೇ ರೀತಿಯಾಗಿ ಮನಸ್ಸಿಗೆ ಮುದ ನೀಡುವ ವಿಡಿಯೋ ವೈರಲ್ ಆಗಿದೆ. ಅದುವೇ 80 ಇಳಿ ವಯಸ್ಸಿನ ಅಜ್ಜಿಯು ಸಖತ್​ ಆಗಿ ರೆಡಿ ಆಗಿ ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದು.


ಕೇಳೊಕೆ ಮಜವಾಗಿದೆ ಅಲ್ವಾ? ಯಾಕೆಂದ್ರೆ ಎಂಜಾಯ್​ಮೆಂಟ್ ಅನ್ನೋದು ಕೇವಲ ಯಂಗ್ ಜನರೇಷನ್​ ಅವರಿಗೆ ಮಾತ್ರ ಸೀಮಿತವಲ್ಲ. ವೃದ್ಧರ ಸಂಭ್ರಮಾಚರಣೆಗಳನ್ನು ನೋಡುವುದೇ ಚೆಂದ. ಕೆಲವೊಮ್ಮೆ ಇದು ಭಾವುಕವಾಗಿರುತ್ತದೆ. ಇನ್ನು ಕೆಲವೊಮ್ಮೆ ಇದು ಮನಸ್ಸಿಗೆ ಬಹಳ ಸಂತೋಷವನ್ನು ನೀಡುತ್ತದೆ. ಅದೇ ರೀತಿಯ ವಿಡಿಯೋ ಇದೀಗ ಈ ವಿಡಿಯೋ ವೈರಲ್ ಆಗಿದೆ.


ಇದನ್ನೂ ಓದಿ: ಯಕ್ಷಗಾನ ವೇಷಭೂಷಣ ಸೊಬಗು ನೋಡಿ!


ಈ ಹಿಂದೆ 99 ವಯಸ್ಸಿನ ಅಜ್ಜ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾ ಇರುವಾಗ ಕ್ಯಾಂಡಲ್ ಬ್ಲೋ ಮಾಡುವಾ ಸಂದರ್ಭದಲ್ಲಿ ಅಜ್ಜನ ಹಲ್ಲಿನ ಸೆಟ್ ಕೆಳಗೆ ಬೀಳುತ್ತದೆ, ಆಗ ಅಜ್ಜ ಜೋರಾಗಿ ನಗುತ್ತಾರೆ ಮತ್ತು ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಜೋರಾಗಿ ನಗುತ್ತಾರೆ ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದನ್ನು ನೋಡತ್ತಾ ಪ್ರತಿಯೊಬ್ಬರಿಗು ನಗು ಬಂದಿರುವುದು ಸಹಜ. ಯಾಕೆಂದ್ರೆ ಅಷ್ಟು ಕಾಮಿಡಿಯಾಗಿತ್ತು. ಇದೀಗ ಎಲ್ಲರೂ ಖುಷಿ ಪಡುವಂತಹ ಅಜ್ಜಿತ ಬರ್ತ್​ಡೇ ಸಲಬ್ರೇಷನ್ ವಿಡಿಯೋ ವೈರಲ್ ಆಗಿದೆ.


ಹೌದು, ತಮ್ಮ 89 ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವ ದೃಶ್ಯವಿದೆ. ರಾಣಿಯಂತೆ ಅಜ್ಜಿ ಈ ಸಡಗರದ ಸವಿಯುಂಡಿದ್ದಾರೆ. ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. ವಯಸ್ಸು ಬರೀ ಸಂಖ್ಯೆ ಎಂಬ ಮಾತಿದೆ.




ಅದಕ್ಕೆ ಈ ಅಜ್ಜಿ ಕೂಡಾ ಉದಾಹರಣೆ. ವಿಕ್ಟೋರಿಯನ್ ಶೈಲಿಯ ಬರ್ತ್‌ಡೇ ಆಚರಣೆ ಮೂಲಕ ಈ ಅಜ್ಜಿ ಗಮನ ಸೆಳೆದಿದ್ದಾರೆ. ಸ್ನೇಹಾ ದೇಸಾಯಿ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮನೆಯವರೆಲ್ಲಾ ಅತ್ಯಂತ ಸಂಭ್ರಮದಿಂದ ಅಜ್ಜಿಯ ಹುಟ್ಟುಹಬ್ಬವನ್ನು ಆಚರಿಸುವುದನ್ನು ಇಲ್ಲಿ ನೋಡಬಹುದು. ಅಜ್ಜಿಯ ಖುಷಿ, ಉಲ್ಲಾಸವನ್ನು ನೋಡುವಾಗಲೂ ಆನಂದವಾಗುತ್ತದೆ.


ಇದನ್ನೂ ಓದಿ: ಒಂಬತ್ತು ವರ್ಷಗಳ ಬಳಿಕ ಮಹಿಳೆಯನ್ನು ಅದೇ ಸ್ಥಳದಲ್ಲಿ ಸೆರೆಹಿಡಿದ ಗೂಗಲ್​ ಮ್ಯಾಪ್​


ಈ ವಿಡಿಯೋದಲ್ಲಿ ಅಜ್ಜಿ ಮೊದಲಿಗೆ ಮೇಕ್​ ಅಪ್​ ಮಾಡಿಕೊಳ್ಳುವುದರಿಂದ ಹಿಡಿದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದನ್ನೂ ಕಾಣಬಹುದಾಗಿದೆ. ವಿಡಿಯೋದಲ್ಲಿ ಕೆಲವೊಂದಷ್ಟು ಕ್ಯಾಪ್ಶನ್​ಗಳು ಬರುತ್ತವೆ. ಕ್ಯಾಪ್ಶನ್​ಗಳು ಅಜ್ಜಿಯ ಆ ವಯಸ್ಸಿನಲ್ಲಿ ಎಷ್ಟು ಉತ್ಸಾಹದಿಂದ ಇದ್ದಾರೆ, ಇವರ ಲೈಫ್ ಸ್ಟೈಲ್ ವಿಭಿನ್ನ ಅನ್ನುವ ಎಲ್ಲಾ ರೀತಿಯ ಲೈನ್ಸ್​ಗಳು ಬರುತ್ತವೆ. ಇನ್ಸ್ಟಾಗ್ರಾಮ್​ನಲ್ಲಿ ಬಾರಿ ಲೈಕ್ಸ್​ಗಳನ್ನoldಗಳಿಸಿ, ಸಖತ್ ಕಮೆಂಟ್​ಗಳನ್ನೂ ಕಾಣಬಹುದಾಗಿದೆ.

First published: