Viral Grandma: 85 ವರ್ಷದ ಅಜ್ಜಿ ಈಜೋದ್ರಲ್ಲಿ ಮೀನಿಗಿಂತ ಎಕ್ಸ್​ಪರ್ಟ್, ಊರಿನ ಹುಡುಗರಿಗೆಲ್ಲಾ ಇವ್ರೇ ಸ್ವಿಮ್ಮಿಂಗ್ ಕೋಚ್!

Swimming Expert: ತಮಿಳುನಾಡಿನ ನಾಮಕ್ಕಲ್​ ಜಿಲ್ಲೆಯ ರಾಶಿಪುರಂನ ವೃದ್ದೆ ಪಾಪಾ ಎಂಬುವುವರು, ಇಳಿ ವಯಸ್ಸಿನಲ್ಲಿ ಚಿಕ್ಕ ವಯಸ್ಸಿನ ಯುವಕರೂ ನಾಚುವಂತೆ ಊರಿನ ಜನರಿಗೆ ಈಜು ಕಲಿಸುವ ಶಿಕ್ಷಕಿಯಾಗಿದ್ದಾರೆ..

ಈಜು ಶಿಕ್ಷಕಿ

ಈಜು ಶಿಕ್ಷಕಿ

 • Share this:
  ಸಾಧಿಸಬೇಕೆಂಬ ಛಲ, ಹಂಬಲವಿದ್ದರೆ ವಯಸ್ಸು(Age) ಯಾವುದೇ ಕಾರಣಕ್ಕೂ ಅಡ್ಡಿಯಾಗದು ಎಂಬುದು ಅನೇಕ ಘಟನೆಗಳಲ್ಲಿ(Incident) ಸಾಬೀತಾದ ಸತ್ಯ. 10ನೇ ವಯಸ್ಸಿರಲಿ, 60ನೇ ವಯಸ್ಸಿನಲ್ಲಿ ಸಾಧನೆ ಮಾಡಲು ಛಲ ಒಂದು ಮುಖ್ಯ.. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವಾರು ಘಟನೆಗಳು ನಮ್ಮ ಮುಂದೆ ಇದೆ.. ನಿಮ್ಮನೆ ಅಮೆರಿಕಾದಲ್ಲಿ(America) 85 ವರ್ಷ ದಾಟಿದ ವಯೋವೃದ್ಧರು ಅರ್ಥಶಾಸ್ತ್ರದಲ್ಲಿ(Economic) ಪದವಿ ಪಡೆದುಕೊಂಡು ಎಲ್ಲರ ಗಮನಸೆಳೆದಿದ್ದರು.. ನಮ್ಮ ಭಾರತದಲ್ಲಿ 80 ವರ್ಷ ದಾಟಿರುವ ಮಾಜಿ ಪ್ರಧಾನಿ ದೇವೇಗೌಡರು(H.D.Deve Gowda) ಯುವಕರೇ ನಾಚುವಂತೆ ಈಗಲೂ ಯೋಗ(Yoga) ಮಾಡಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುತ್ತಿದ್ದಾರೆ. 70ರ ವಯಸ್ಸಿನಲ್ಲೂ ಕೇರಳದ ಯೋಗಗುರು ಪೆರುಮಾಳ್ ಎಂಬ ವೃದ್ದೆ ಯೋಗ ಶಿಕ್ಷಕಿಯಾಗಿ ಎಲ್ಲರ ಗಮನಸೆಳೆದಿದ್ದರು. 103 ವರ್ಷ ವಯಸ್ಸಾದರೂ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರು ಎಂದೇ ಖ್ಯಾತರಾಗಿ ಈಗಲೂ ಜನರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.. ಇವರೆಲ್ಲರೂ ಸಾಧನೆಗೆ ವಯಸ್ಸು ಎಂಬುದು ಲೆಕ್ಕವೇ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಅದೇ ರೀತಿ ಈಗ ವೃದ್ಧೆಯೊಬ್ಬರು 85 ಇಳಿವಯಸ್ಸಿನಲ್ಲೂ ತರಬೇತಿ ನೀಡಿ ಸೈ ಎನಿಸಿಕೊಂಡಿದ್ದಾರೆ.

  85ರ ವಯಸ್ಸಿನಲ್ಲಿಯೂ ಮೀನಿನಂತೆ ಈಜುವ ವೃದ್ದೆ

  ನನಗೆ ವಯಸ್ಸಾಯ್ತು ನಾನು ಇನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹಲವರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವೃದ್ಧೆ 85ರ ವಷಯಸ್ಸಿನಲ್ಲಿಯೂ ನೀರಿಗೆ ಜಿಗಿದು ಮೀನಿನಂತೆ ಈಜುತ್ತಾ, ಯುವ ಜನತೆಗೆ ಈಜು ಕಲಿಸುತ್ತಾ ಸೈ ಎನಿಸಿಕೊಂಡಿದ್ದಾರೆ. ಹೌದು ತಮಿಳುನಾಡಿನ ನಾಮಕ್ಕಲ್​ ಜಿಲ್ಲೆಯ ರಾಶಿಪುರಂನ ವೃದ್ದೆ ಪಾಪಾ ಎಂಬುವುವರು, ಇಳಿ ವಯಸ್ಸಿನಲ್ಲಿ ಚಿಕ್ಕ ವಯಸ್ಸಿನ ಯುವಕರೂ ನಾಚುವಂತೆ ಊರಿನ ಜನರಿಗೆ ಈಜು ಕಲಿಸುವ ಶಿಕ್ಷಕಿಯಾಗಿದ್ದಾರೆ.. ಉತ್ಸಾಹ ಹಾಗೂ ಶಕ್ತಿ ಮತ್ತು ಇಚ್ಛಾಶಕ್ತಿ ಇದ್ದರೆ ವಯಸ್ಸನ್ನು ಮೀರಿ ನಿಲ್ಲಬಹುದು ಎಂಬುದಕ್ಕೆ ಪಾಪ ಅವರು ಎಲ್ಲರಿಗೂ ಉದಾಹರಣೆಯಾಗಿದ್ದಾರೆ.

  ಇದನ್ನೂ ಓದಿ: ಇಲಿಗಳ ಕಾಟದಿಂದ ಬಚಾವ್​ ಆಗಲು ಓರಿಯೋ ಬಿಸ್ಕೆಟ್​ ಮೊರೆ ಹೋದ ಅಮೆರಿಕಾದ ಜನ.. ಏಕೆ?

  85 ವರ್ಷ ವಯಸ್ಸಿನ ಪಾಪ ನದಿ, ಕೆರೆ, ಬಾವಿಗಳಲ್ಲಿ ಯುವಕರು ಕೂಡ ನಾಚುವಂತೆ ಸಲೀಸಾಗಿ ಈಜಬಲ್ಲರು. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಜನ ಕಲಿಸುವವರು ತಮಿಳುನಾಡಿನಾದ್ಯಂತ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ತಮ್ಮ 5ನೇ ವಯಸ್ಸಿನಲ್ಲಿ ತಮ್ಮ ತಂದೆಯವರಿಂದ ಈಜುವುದನ್ನು ಕಲಿತುಕೊಂಡ ಪಾಪ ಅವರು ನನ್ನ ಜೀವನದಲ್ಲಿ ಹವ್ಯಾಸವಾಗಿ ಮುಂದುವರೆಸಿಕೊಂಡರು. ಅಲ್ಲದೇ ಈಗ ಪ್ರತಿನಿತ್ಯ ನೂರಾರು ಸಂಖ್ಯೆಯ ಜನರಿಗೆ ಈಜುವುದನ್ನು ಹೇಳಿಕೊಡುತ್ತಾ ಕಲಿಯಲು ಕಲಿಸಲು ವಯಸ್ಸಿನ ಅಂಗು ಇಲ್ಲ ಎಂಬುದನ್ನ ಸಾಬೀತು ಮಾಡುತ್ತಾ ಬಂದಿದ್ದಾರೆ.

  ತನ್ನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವ ಪಾಪ

  ಫ್ರಿಸ್ಟೈಲ್, ಸೈಡ್‍ಸ್ಟ್ರೋಕ್, ಬ್ಯಾಕ್ ಸ್ಟ್ರೋಕ್ ಸೇರಿದಂತೆ ಹಲವು ವಿಧದ ಈಜು ಪಾಪಾ ಅವರಿಗೆ ಕರಗತವಾಗಿದೆ. ಅಲ್ಲದೆ ತನ್ನ ಸಾಧನೆ ಕುರಿತಾಗಿ ಮಾತನಾಡಿದ ಪಾಪ, ನಾನು 5 ವರ್ಷದವಳಿದ್ದಾಗ ತಂದೆಯಿಂದ ಈಜನ್ನು ಕಲಿತಿದ್ದೇನೆ. ಈಗ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಈಜನ್ನು ನಾನೇ ಕಲಿಸಿದ್ದೇನೆ. ನನ್ನ ಬಳಿ ಐದರಿಂದ 40 ವರ್ಷ ವಯಸ್ಸಿನವರೂ ಈಜು ಕಲಿಯಲು ಬರುತ್ತಾರೆ. ವಯಸ್ಸು 80 ದಾಟಿದರೂ ಇತರರಿಗೆ ಕಲಿಸಬೇಕೆಂಬ ಹಂಬಲ ನನ್ನಲ್ಲಿ ಹಾಗೆಯೇ ಇದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: ಮಗಳಿಗಾಗಿ ಮೊಬೈಲ್ ಖರೀದಿಸಿ ಮೆರವಣಿಗೆಯಲ್ಲಿ ಗ್ರಾಮಕ್ಕೆ ತಂದ ಚಾಯ್‌ವಾಲಾ

  ಇನ್ನು ಪಾಪಾ ಬಗ್ಗೆ ಅವರ ಮಗ ಮಾತನಾಡುತ್ತಾ, ಹವಾಮಾನ ಹೇಗೇ ಇರಲಿ ಬಾವಿ, ಕೆರೆಗಳಿಗೆ ಇಳಿದು ಈಜು ತನ್ನ ತಾಯಿ ಉತ್ಸುಕಳಾಗಿರುತ್ತಾಳೆ. ಫ್ರಿಸ್ಟೈಲ್​, ಸೈಡ್​ಸ್ಟ್ರೋಕ್​, ಬ್ಯಾಕ್​ ಸ್ಟ್ರೋಕ್​ ಸೇರಿದಂತೆ ಹಲವು ವಿಧದ ಈಜು ಆಕೆಗೆ ಕರತಲಾಮಲಕವಾಗಿದೆ. ನಿಜವಾಗಿಯೂ ಇಂದಿನ ಜನತೆಗೆ ನಮ್ಮ ಹಳ್ಳಿಯ ಜನರಿಗೆ ಸ್ಪೂರ್ತಿಯಾಗಿದ್ದಾಳೆ ಎಂದು ಹೇಳಿದ್ದಾರೆ
  Published by:ranjumbkgowda1 ranjumbkgowda1
  First published: