• Home
 • »
 • News
 • »
 • trend
 • »
 • Viral Story: ಪ್ರೇಮಿಗಾಗಿ ಗಡಿ ದಾಟಿ ಬಂದ 83ರ ಅಜ್ಜಿ! ಆಕೆಯನ್ನು ಮದ್ವೆಯಾದ ಹುಡುಗನ ವಯಸ್ಸು 28!

Viral Story: ಪ್ರೇಮಿಗಾಗಿ ಗಡಿ ದಾಟಿ ಬಂದ 83ರ ಅಜ್ಜಿ! ಆಕೆಯನ್ನು ಮದ್ವೆಯಾದ ಹುಡುಗನ ವಯಸ್ಸು 28!

83ರ ಬ್ರೋಮಾ ಮತ್ತು ಪಾಕಿಸ್ತಾನಿ ಯುವಕ ಹಫೀಜ್ ನದೀಮ್

83ರ ಬ್ರೋಮಾ ಮತ್ತು ಪಾಕಿಸ್ತಾನಿ ಯುವಕ ಹಫೀಜ್ ನದೀಮ್

ಪ್ರೀತಿಗೆ ರಾಜ್ಯ, ದೇಶಗಳ ಗಡಿ ಯಾವುದೇ ಲೆಕ್ಕಕ್ಕಿಲ್ಲ. ಅದರಲ್ಲೂ ಈಗ ಸ್ಮಾರ್ಟ್ ಯುಗ. ಇಂತಹ ದಿನಗಳಲ್ಲಿ ಅತ್ಯಂತ ಆಶ್ಚರ್ಯ ಉಂಟು ಮಾಡುವ ಪ್ರೇಮ ಸಂಬಂಧ ಇದು. ಯಾಕೆಂದರೆ ಇಲ್ಲಿ 83 ವರ್ಷ ವಯಸ್ಸಿನ ವೃದ್ಧೆ ಒಬ್ಬರು 28 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಪ್ರೇಮದಿಂದಾಗಿ ತನ್ನ ದೇಶ ಬಿಟ್ಟು, ಬೇರೆ ದೇಶಕ್ಕೆ ಬಂದಿದ್ದಾರೆ!

ಮುಂದೆ ಓದಿ ...
 • Share this:

  ಜಗತ್ತಿನಲ್ಲಿ (World) ಪ್ರೇಮಕಥೆಗಳು (Love Stories) ಬೇಕಾದಷ್ಟು ಸಿಗುತ್ತವೆ. ಪ್ರೀತಿ, ಪ್ರೇಮಕ್ಕೆ ವಯಸ್ಸಿನ (Age) ಅಂತರವಿಲ್ಲ ಅಂತಾ ಹೇಳ್ತಾರೆ. ಹಾಗೆಯೇ ಪ್ರೀತಿಗೆ ಕಣ್ಣಿಲ್ಲ, ಕುರುಡು ಅಂತಾರೆ. ಈ ಮಾತು ಕೆಲವೊಂದು ಪ್ರೇಮಪ್ರಕರಣಗಳಲ್ಲಿ (Love Cases) ನಿಜವೆಂದು ಸಾಬೀತು ಪಡಿಸುತ್ತದೆ. ಜಗತ್ತಿನಲ್ಲಿ ಸಾವಿರಾರು ಪ್ರೇಮಕಥೆಗಳನ್ನು ನೀವು ನೋಡಿರಬಹುದು. ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನ ಹುಡುಗನನ್ನು ಆತನಿಗಿಂತ ಹೆಚ್ಚು ವಯಸ್ಸಿನ ಮಹಿಳೆ ಮದುವೆ ಆಗೋದು, ಅತೀಹೆಚ್ಚು ವಯಸ್ಸಿನ ಪುರುಷನನ್ನು ಯುವತಿ ಮದುವೆಯಾಗುವುದು, ವಿಶೇಷ ವ್ಯಕ್ತಿಗಳನ್ನು ಮದುವೆಯಾಗುವುದು ಹೀಗೆ ಒಂದಾ ಎರಡಾ ಸಾಕಷ್ಟು ವೆರೈಟಿಯ ಪ್ರೇಮಕಥೆಗಳು ಸಿಗುತ್ತವೆ. ಆದರೆ ಈ ಎಲ್ಲಾ ಪ್ರೇಮಕಥೆಗಳು ಯಶಸ್ವಿ ಆಗಿದ್ಯಾ ಅಂತಾ ಮಾತ್ರ ಕೇಳ್ಬೇಡಿ.


  ತನಗಿಂತ ಚಿಕ್ಕ ವಯಸ್ಸಿನವನನ್ನು ಮದುವೆಯಾದ ವೃದ್ಧೆ


  ಈಗ್ಯಾಕೆ ನಾವು ಹೀಗೆ ಹೇಳ್ತಿದಿವಿ ಅಂದ್ರೆ ವೃದ್ಧೆಯೊಬ್ಬರು ತನ್ನ ದೇಶದ ಗಡಿ ದಾಟಿ ಬೇರೊಂದು ದೇಶಕ್ಕೆ ಬಂದು ತನಗಿಂತ ಚಿಕ್ಕ ಯುವಕನನ್ನು ವರಿಸಿದ್ದಾರೆ. ಹೌದು.. ಎಲ್ಲ ಗಡಿ, ಭಾಷೆ, ವಿಚಾರಗಳ ಆಚೆ ಗಟ್ಟಿಯಾಗಿ ನಿಂತು ಬೆಳೆಯುವ ಶಕ್ತಿ ಪ್ರೀತಿಗೆ ಇದೆ ಅಂದ್ರೆ ಅದನ್ನ ನೀವು ಈ ಸ್ಟೋರಿ ನೋಡಿ ನಂಬಲೇಬೇಕಾಗುತ್ತದೆ.


  ಪ್ರೀತಿಗೆ ರಾಜ್ಯ, ದೇಶಗಳ ಗಡಿ ಯಾವುದೇ ಲೆಕ್ಕಕ್ಕಿಲ್ಲ. ಅದರಲ್ಲೂ ಈಗ ಸ್ಮಾರ್ಟ್ ಯುಗ. ಇಂತಹ ದಿನಗಳಲ್ಲಿ ಅತ್ಯಂತ ಆಶ್ಚರ್ಯ ಉಂಟು ಮಾಡುವ ಪ್ರೇಮ ಸಂಬಂಧ ಇದು. ಯಾಕಂದರೆ ಇಲ್ಲಿ 83 ವರ್ಷ ವಯಸ್ಸಿನ ವೃದ್ಧೆ ಒಬ್ಬರು 28 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ, ಪ್ರೇಮದಿಂದಾಗಿ ತನ್ನ ದೇಶ ಬಿಟ್ಟು, ಬೇರೆ ದೇಶಕ್ಕೆ ಬಂದಿದ್ದಾರೆ.


  ಇದನ್ನೂ ಓದಿ: ಅಬ್ಬಾ, ವಿಶ್ವದ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ; ಆಕೆಗಾಗಿ 6 ಸೀಟ್‌ಗಳ ಬದಲಾವಣೆ!


  ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿ


  83 ವರ್ಷದ ಪೋಲಿಷ್‌ ಮಹಿಳೆ ತನ್ನ 28 ವರ್ಷದ ಗೆಳೆಯನನ್ನು ಮದುವೆಯಾಗಲು ತನ್ನ ದೇಶದಿಂದ ಪಾಕಿಸ್ತಾನಕ್ಕೆ ಬಂದಿದ್ದಳು. ಪೋಲಿಷ್‌ ನಿವಾಸಿ 83 ವರ್ಷ ವಯಸ್ಸಿನ ವೃದ್ಧೆ ಬ್ರೋಮಾ, ತನ್ನ 28 ವರ್ಷದ ಗೆಳೆಯ ಹಫೀಜ್ ನದೀಮ್ ನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಬಂದಿದ್ದಳು.


  ಅಂದ ಹಾಗೇ, ಕಳೆದ ವರ್ಷ ನವೆಂಬರ್ 1 ರಂದು ಹಫ್ಜಾಬಾದ್‌ ನ ಕಾಜಿಪುರದಲ್ಲಿ ಪೋಲಿಷ್‌ ನಿವಾಸಿ 83 ವರ್ಷ ವಯಸ್ಸಿನ ವೃದ್ಧೆ ಬ್ರೋಮಾ ಮತ್ತು 28 ವರ್ಷದ ಗೆಳೆಯ ಹಫೀಜ್ ನದೀಮ್ ಇಬ್ಬರೂ ವಿವಾಹವಾಗಿದ್ದರು. ಈ ವರ್ಷ ದಂಪತಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿದ್ದಾರೆ.


  ಫೇಸ್ ಬುಕ್ ಪರಿಚಯ ಮತ್ತು ಪ್ರೀತಿ, ಮದುವೆ


  ಅಂದ ಹಾಗೇ, ಪೋಲಿಷ್ ಮಹಿಳೆ ಬೋಮ್ರಾ ಮತ್ತು ಪಾಕಿಸ್ತಾನಿ ಯುವಕ ಹಫೀಜ್ ನದೀಮ್ ಇಬ್ಬರ ಮೊದಲ ಭೇಟಿ ಫೇಸ್ ಬುಕ್‌ನಲ್ಲಿ ಆಗಿತ್ತು. ಕ್ರಮೇಣ ಇವರಿಬ್ಬರ ಸ್ನೇಹ, ಪ್ರೇಮಕ್ಕೆ ತಿರುಗಿದೆ. ನಂತರ ಇಬ್ಬರೂ ಪರಸ್ಪರ ಮದುವೆ ಆಗುವ ಭರವಸೆ ಮತ್ತು ಸಮ್ಮತಿ ಸೂಚಿಸಿದ್ದಾರೆ. ನಂತರ ತಮ್ಮ ಮನಸ್ಸಿನ ಇಚ್ಛೆ ಮತ್ತು ಪ್ರೇಮದ ಹೊಸ ಅಧ್ಯಾಯ ಶುರು ಮಾಡಲು ಮಹಿಳೆ ಬೋಮ್ರಾ, ಪಾಕಿಸ್ತಾನಕ್ಕೆ ಬಂದು ಅಲ್ಲೇ ಹಫೀಜ್ ನದೀಮ್ ನನ್ನು ವರಿಸಿದ್ದಾರೆ.


  ಇನ್ನು ಬೋಮ್ರಾ ಮತ್ತು ಹಫೀಜ್ ಮಧ್ಯೆ ವಯಸ್ಸಿನ ಅಂತರ ಸಾಕಷ್ಟಿದೆ. ಆದರೆ ಅವರಿಬ್ಬರೂ ತಮ್ಮ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಲೆಕ್ಕಿಸಿಲ್ಲ. ತಮ್ಮ ಜೀವನದುದ್ದಕ್ಕೂ ಇಬ್ಬರೂ ಪರಸ್ಪರ ಪ್ರೀತಿಯಿಂದ ಜೀವನ ನಡೆಸಲು ನಿರ್ಧಾರ ಮಾಡಿದ್ದಾರೆ.


  ಸಾಮಾಜಿಕ ಜಾಲತಾಣದಲ್ಲಿ ಈ ಲವ್ ಸ್ಟೋರಿ ವೈರಲ್


  ಮಹಿಳೆ ಬೋಮ್ರಾ ಪತಿ ಹಫೀಜ್ ನದೀಮ್ ಪಾಕಿಸ್ತಾನದ ಕಾಜಿಪುರ ನಿವಾಸಿ. ಆಟೋ ಮೆಕ್ಯಾನಿಕ್ ಆಗಿ ಹಫೀಜ್ ನದೀಮ್ ಕೆಲಸ ಮಾಡ್ತಾರೆ. ಇಬ್ಬರ ಮಧ್ಯೆ 60 ವರ್ಷಗಳ ವಯಸ್ಸಿನ ಅಂತರ ಇದೆ. ಈಗ ಇವರಿಬ್ಬರ ಮೊದಲ ವಿವಾಹ ವಾರ್ಷಿಕೋತ್ಸವ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರನ್ನು ಸೆಳೆದಿದೆ.


  ತಮ್ಮ ಪ್ರೇಮ ಕಥೆಯ ಬಗ್ಗೆ ಮಾತನಾಡಿರುವ ಹಫೀಜ್ ನದೀಮ್, ಆರು ವರ್ಷಗಳ ಹಿಂದೆ ಬೋಮ್ರಾ ಜೊತೆ ಮೊದಲ ಬಾರಿಗೆ ಮಾತನಾಡಿದ್ದೆ. ನಮ್ಮಿಬ್ಬರ ನಡುವಿನ ಮಾತು ಮತ್ತು ಮುಕ್ತ ಸ್ನೇಹ ನಮ್ಮಿಬ್ಬರನ್ನು ಹತ್ತಿರ ತಂದಿತು. ಅದು ಅಂತಿಮವಾಗಿ ಪ್ರೀತಿಗೆ ತಿರುಗಿತು. ಸಾಂಪ್ರದಾಯಿಕ ಸಮಾರಂಭದಲ್ಲಿ ಮದುವೆಯಾಗುವ ಮೊದಲು ನಾವಿಬ್ಬರೂ ಪರಸ್ಪರ ಭೇಟಿ ಆಗಿರಲಿಲ್ಲ. ಮದುವೆ ಸಮಾರಂಭದಲ್ಲೇ ಮೊದಲ ಪರಸ್ಪರ ಭೇಟಿ ಆಗಿತ್ತು ಎಂದು ಹೇಳಿದ್ದಾರೆ.


  ಬ್ರೋಮಾ ಕೆಂಪು ಬಣ್ಣದ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದರು. ಸಮಾರಂಭಕ್ಕಾಗಿ ತನ್ನ ಕೈಯಲ್ಲಿ ಗೋರಂಟಿ ಹಾಕಿದ್ದರು. ಇಸ್ಲಾಮಿಕ್ ಕಾನೂನು ಮತ್ತು ಕಸ್ಟಮ್ಸ್ ಅಡಿ ನಿಯಮ ಪಾಲನೆ ಮಾಡಿದ್ದಾರೆ ಬ್ರೋಮಾ.


  ಇದನ್ನೂ ಓದಿ: ಎಲಾನ್ ಮಸ್ಕ್ ಅವರ ‘ಬ್ಲ್ಯೂ ಟಿಕ್’ ಪೋಸ್ಟ್​ ಬಗ್ಗೆ ತಮಾಷೆ ಟ್ವೀಟ್ ಹಂಚಿಕೊಂಡ ಜೊಮ್ಯಾಟೊ!


  ವಿಭಿನ್ನ ಸಂಸ್ಕೃತಿಗಳ ಅಥವಾ ದೊಡ್ಡ ವಯಸ್ಸಿನ ವ್ಯತ್ಯಾಸದ ಇಬ್ಬರು ವ್ಯಕ್ತಿಗಳ ಕಥೆಗಳು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಕಾಲಿಕವಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.

  Published by:renukadariyannavar
  First published: