ಕಲಿಕೆ ಎಂಬುವುದು ನಿಂತ ನೀರಲ್ಲ ಬದಲಿಗೆ ನಿರಂತರವಾದ ಚಟುವಟಿಕೆ ಎಂಬುವುದನ್ನು 80ರ ಹರೆಯದ ಈ ವ್ಯಕ್ತಿ (Person) ತೋರಿಸಿ ಕೊಟ್ಟಿದ್ದಾರೆ. ವಯಸ್ಸಾಯಿತು (Age) ಇನ್ನೇನು ಎಂದು ಕೈಕಟ್ಟಿ ಕುಳಿತಿರದ ಈ ವ್ಯಕ್ತಿ ಅತ್ಯಂತ ಕಠಿಣ ಪರೀಕ್ಷೆ (Exam) ಎಂದು ಹೇಳಲಾಗುವ ಐಐಟಿ ಪ್ರವೇಶ ಪರೀಕ್ಷೆಯನ್ನು (IIT entrance exam) ಲೀಲಾಜಾಲವಾಗಿ ಎದುರಿಸಿದ್ದಾರೆ. ಎಂಬತ್ತರ ಪ್ರಾಯದ ಕೇರಳ (Kerala) ಮೂಲದ ಎಂಜಿನಿಯರ್ (Engineer), ನಂದಕುಮಾರ್ ಕೆ.ಮೆನನ್ (Nandakumar K Menon) ಅವರು ಕಠಿಣ ಅರ್ಹತಾ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಬಿಎಸ್ಸಿ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. ಐಐಟಿ-ಮದ್ರಾಸ್ (IIT- Madras) ನೀಡುವ ಪ್ರೋಗ್ರಾಮಿಂಗ್ ಮತ್ತು ಡೇಟಾ ಸೈನ್ಸ್‌ನಲ್ಲಿ ಆನ್‌ಲೈನ್ ಕೋರ್ಸ್ ಇದಾಗಿದ್ದು, ಪರೀಕ್ಷೆಯು ಇತ್ತೀಚೆಗೆ ಆಲುವಾದ ಐಟಿ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಪರೀಕ್ಷೆ ಹಾಜರಾಗಲು ವಿಘ್ನವನ್ನು ಎದುರಿಸಿದ ಮೆನನ್
ಈ ಪರೀಕ್ಷೆಗೆ ಹಾಜರಾಗಬೇಕಿದ್ದ ಮೆನನ್ ಬಾಗಿಲ ಬಳಿಯೇ ವಿಘ್ನವನ್ನು ಎದುರಿಸಿದರು. ಸಾಮಾನ್ಯವಾಗಿ ಪರೀಕ್ಷೆಗೆ ಯುವಕರೇ ಹಾಜರಾಗುತ್ತಿದ್ದರಿಂದ 80 ವರ್ಷದ ಇವರನ್ನು ಸೆಕ್ಯುರಿಟಿ ಗಾರ್ಡ್‌ಗಳು ಒಳಕ್ಕೆ ಪ್ರವೇಶಿಸಲು ನಿರಾಕರಿಸಿದರು. "ಸೆಕ್ಯುರಿಟಿ ಗಾರ್ಡ್‌ಗಳು ನನ್ನನ್ನು ಗೇಟ್‌ನಲ್ಲಿ ನಿಲ್ಲಿಸಿದರು ಮತ್ತು ನಾನು ಪ್ರವೇಶ ಪರೀಕ್ಷೆ ಬಂದಿರುವ ಅಭ್ಯರ್ಥಿ ಎಂದು ಅವರಿಗೆ ಮನವರಿಕೆ ಮಾಡಬೇಕಾಯಿತು" ಎಂದು ಅವರು ಸಂತೋಷದಿಂದಲೇ ತಮಗಾದ ಅನುಭವವನ್ನು ಹೇಳಿ ಕೊಂಡರು.
ಯುವಕರ ಮಧ್ಯದಲ್ಲಿ ಯುವಕರಾಗಿ ಕುಳಿತು ಪರೀಕ್ಷೆ ಬರೆದ ವ್ಯಕ್ತಿ
ಸಂಜೆ ಮುಕ್ತಾಯಗೊಂಡ ನಾಲ್ಕು ಗಂಟೆಗಳ ದೀರ್ಘಾವಧಿಯ ಆನ್‌ಲೈನ್ ಪರೀಕ್ಷೆಗೆ ಹಾಜರಾದ ನಂದಕುಮಾರ್ ಮೆನನ್ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದರು. ಪ್ರವೇಶ ಪರೀಕ್ಷಾ ಕೇಂದ್ರದಲ್ಲಿದ್ದ ಸುಮಾರು 120 ಅಭ್ಯರ್ಥಿಗಳಲ್ಲಿ 90% ಕ್ಕಿಂತ ಹೆಚ್ಚು ಯುವಕರು ಹಾಜರಾಗಿದ್ದು, ಯುವಕರ ಮಧ್ಯದಲ್ಲಿ ಯುವಕರಾಗಿ ಕುಳಿತು ಪರೀಕ್ಷೆ ಎದುರಿಸಿ ಬಂದಿದ್ದಾರೆ.
ಇದನ್ನೂ ಓದಿ: E-Hundis in Karnataka: ಕರ್ನಾಟಕದ ದೇವಸ್ಥಾನಗಳಲ್ಲಿ ಇನ್ಮುಂದೆ QR ಕೋಡ್ ಬಳಸಿ ಹುಂಡಿಗೆ ಹಣ ಹಾಕಬಹುದು!
ಈ ಬಗ್ಗೆ ಮಾತನಾಡಿದ ನಂದಕುಮಾರ್ ಮೆನನ್. “ನಾನು 50 ವರ್ಷಗಳ ಹಿಂದೆ ಕಲಿತದ್ದನ್ನು ಈಗ ಉಪಯೋಗಿಸಿಕೊಂಡೆ. ಮುಖ್ಯವಾಗಿ ಗಣಿತ, ಅಂಕಿಅಂಶಗಳು, ಡೇಟಾ ಸಂಸ್ಕರಣೆ ಮತ್ತು ಇಂಗ್ಲಿಷ್‌ನ ಪ್ರಶ್ನೆಗಳಿಗೆ ಉತ್ತರಿಸಿದೆ. ಇದು ಒಂದು ಉತ್ತಮ ಅನುಭವಕ್ಕೆ ಯೋಗ್ಯವಾಗಿತ್ತು, ” ಎಂದು ಅವರು ಹೇಳಿದರು.
ಪರೀಕ್ಷೆಯ ತಯಾರಿ ಹೇಗಿತ್ತು?
ಪ್ರವೇಶದ ತಯಾರಿಯಲ್ಲಿ ಅವರು ಮತ್ತು ಅವರ ಮಗ ಸೇತು ನಂದಕುಮಾರ್, ಯುಎಇ ಮೂಲದ ವಕೀಲರು ನಾಲ್ಕು ವಿಷಯಗಳಲ್ಲಿ ನಾಲ್ಕು ವಾರಗಳ ಅವಧಿಯ ತರಗತಿಗಳಿಗೆ ಹಾಜರಾಗಿದ್ದರು. ಬಾಹ್ಯಾಕಾಶ ಕಾನೂನುಗಳಲ್ಲಿ ಡಾಕ್ಟರೇಟ್ ಪಡೆದಿದ್ದ ಸೇತುಗೆ ಗಣಿತದ ಪ್ರಶ್ನೆಗಳು ತುಂಬಾ ಕಠಿಣವಾಗಿದ್ದವು. ಹೀಗಾಗಿ ನಂದಕುಮಾರ್ ಪುತ್ರ ಸೇತು ಐಐಟಿಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಎಲ್ಲಾ ನಾಲ್ಕು ವಿಷಯಗಳ (ಒಟ್ಟು 16 ಪರೀಕ್ಷೆಗಳು) ಸಾಪ್ತಾಹಿಕ ಪರೀಕ್ಷೆಗಳು ಇದ್ದವು ಮತ್ತು ಪ್ರವೇಶ ಪರೀಕ್ಷೆಗೆ ಅರ್ಹತೆ ಪಡೆಯಲು ಒಬ್ಬರು ಎಲ್ಲಾ ವಿಷಯಗಳಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಬೇಕಾಗಿತ್ತು.
ಆಗಸ್ಟ್‌ನಲ್ಲಿ 81 ವರ್ಷಕ್ಕೆ ಕಾಲಿಡಲಿರುವ ತಮ್ಮ ತಂದೆ ಪ್ರತಿದಿನ ಬೆಳಿಗ್ಗೆ 5.30ಕ್ಕೆ ಎಚ್ಚರಗೊಂಡು ರಾತ್ರಿ 10 ಗಂಟೆಯವರೆಗೆ ಹೇಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದರು ಎಂಬುದನ್ನು ನಂದಕುಮಾರ್ ಮಗನಾದ ಸೇತು ನೆನಪಿಸಿಕೊಂಡರು.
ಬಾಲ್ಯದಲ್ಲಿಯೇ ಎಂಜಿನಿಯರ್ ಆಗುವ ಕನಸು ಕಂಡಿದ್ದ ಮೆನನ್
ಹಿಂದಿನ ವಿದ್ಯಾಭ್ಯಾಸದ ದಿನಗಳ ಬಗ್ಗೆ ಮಾತನಾಡಿದ ಮೆನನ್ ಅವರು ನಾಲ್ಕನೇ ತರಗತಿಯಲ್ಲಿದ್ದಾಗಲೇ ಎಂಜಿನಿಯರ್ ಆಗಬೇಕೆಂಬ ಹಂಬಲವನ್ನು ಹೊಂದಿದ್ದರಂತೆ ಮತ್ತು ಹಿಂದಿನ ಪ್ರಸಿದ್ಧ ಎಂಜಿನಿಯರ್ ಎಂ.ವಿಶ್ವೇಶ್ವರಯ್ಯ ಅವರು ನನಗೆ ಎಂಜಿನಿಯರ್ ಆಗಲು ಸ್ಫೂರ್ತಿ ಅಂತಾ ಹೇಳುತ್ತಾರೆ.
ಇದನ್ನೂ ಓದಿ: Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ
ಆರ್ಥಿಕ ತೊಂದರೆಗಳನ್ನು ಎದುರಿಸಿದ ಮೆನನ್ ವಿದ್ಯಾಭ್ಯಾಸವನ್ನು ಉತ್ತಮವಾಗಿ ಪೂರ್ಣಗೊಳಿಸಿ ಬಾಲ್ಯದ ಕನಸಿನಂತೆ ಎಂಜಿನಿಯರ್ ಹುದ್ದೆ ಪಡೆದುಕೊಂಡರು. ನಂದಕುಮಾರ್ ಮೆನನ್ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ಎಂಎಸ್ಸಿ ಸ್ಟ್ಯಾಟಿಕಕ್ಸ್ ನಲ್ಲಿ ಒಂದು ವರ್ಷ ಮುಗಿಸಿದರು. ನಂತರ ಅವರು NASA ಪ್ರಾಯೋಜಿತ ವಿದ್ಯಾರ್ಥಿವೇತನದೊಂದಿಗೆ ಯುಸ್ ನ ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಕ್ರಯೋಜೆನಿಕ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ತಾಯ್ನಾಡಿಗೆ ಮರಳುವ ಉತ್ಸುಕತೆಯಿಂದ ಗ್ರೀನ್ ಕಾರ್ಡ್ ತ್ಯಜಿಸಿ ಇಲ್ಲಿ ಎಂಜಿನಿಯರ್ ಆಗಿ ಕೆಲಸ ಮುಂದುವರೆಸಿದ್ದಾರೆ ನಂದಕುಮಾರ್ ಮೆನನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ