Love Story: 84 ವರ್ಷದ ಪ್ರಿಯತಮೆ ಜೊತೆ ಓಡಿಹೋದ 80 ವರ್ಷದ ಪ್ರಿಯಕರ! ಇದೆಂಥಾ ಲವ್​ ಮಾರಾಯ್ರೆ..

Viral Story: ಆಸ್ಟ್ರೇಲಿಯಾದ 84 ವರ್ಷದ ಗೆಳತಿಯೊಂದಿಗೆ ಓಡಿಹೋದ ಹಿರಿಯ ವ್ಯಕ್ತಿಯ ಪ್ರೇಮಕಥೆಯನ್ನು ಇದು. ಪ್ರೀತಿಗೆ ವಯಸ್ಸು ಮುಖ್ಯವಲ್ಲ ಎಂಬು ಸಾಬೀತುಪಡಿಸುವ ಮೂಲಕ ಈ ಜೋಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನೀವು ವಿವಿಧ ರೀತಿಯ ಪ್ರೇಮಕಥೆಗಳನ್ನು (Love story) ನೋಡಿರಬಹುದು ಮತ್ತು ಕೇಳಿರಬಹುದು. ಸಾಮಾನ್ಯವಾಗಿ ಈ ಪ್ರೇಮಕಥೆಗಳು ಚಿಕ್ಕ ವಯಸ್ಸಿನಲ್ಲಿಯೇ (Small Age) ಪ್ರಾರಂಭವಾಗುತ್ತವೆ. ಕೆಲವು ಅಂತ್ಯವನ್ನು (End) ತಲುಪುತ್ತವೆ ಮತ್ತು ಕೆಲವು ಅಪೂರ್ಣವಾಗಿತ್ತದೆ (Uncompleted). ಬಹುತೇಕರು ಯೌವನದಲ್ಲಿ ಪ್ರೀತಿಸಿ ನಂತರ ಪ್ರೇಮಿಗಳಾಗಿ (Lovers) ಜೊತೆಯಾಗಿ ಬಾಳಲು ಪ್ರಯುತ್ನಿಸುತ್ತಾರೆ. ಆದರೆ ಇಲ್ಲೊಂದು ಪ್ರೇಮಕಥೆ ಮಾತ್ರ ಮುದಿ ವಯಸ್ಸಿನಲ್ಲಿ ಶುರುವಾಗಿದೆ. ಸಾಲದಕ್ಕೆ ಈ ಜೋಡಿಗಳು ಓಡಿ ಹೋಗಿದ್ದಾರೆ. ಅಂದಹಾಗೆಯೇ ಈ ಘಟನೆ ನಡೆದಿದ್ದೆಲ್ಲಿ ಗೊತ್ತಾ?

  ಆಸ್ಟ್ರೇಲಿಯಾದ 84 ವರ್ಷದ ಗೆಳತಿಯೊಂದಿಗೆ ಓಡಿಹೋದ ಹಿರಿಯ ವ್ಯಕ್ತಿಯ ಪ್ರೇಮಕಥೆಯನ್ನು ಇದು. ಪ್ರೀತಿಗೆ ವಯಸ್ಸು ಮುಖ್ಯವಲ್ಲ ಎಂಬು ಸಾಬೀತುಪಡಿಸುವ ಮೂಲಕ ಈ ಜೋಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

  ಆಸ್ಟ್ರೇಲಿಯಾದ ನಿವಾಸಿ ರಾಲ್ಫ್ ಗಿಬ್ಸ್ ಎಂಬ 80 ವರ್ಷದ ವ್ಯಕ್ತಿಗೆ ತನ್ನ 84 ವರ್ಷದ ಸಂಗಾತಿ ಕರೋಲ್​ ಲಿಸ್ಲೆಯ ನೆನಪು ಕಾಡುತ್ತಿತ್ತು. ಆದರೆ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಳು ಮತ್ತು ಆಕೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.

  ಕರೋಲ್​ ಲಿಸ್ಲೆ ಜ್ಞಾಪಕ ಶಕ್ತಿಯು ದುರ್ಬಲವಾಗಿತ್ತು ಮತ್ತು ಅಕೆಯನ್ನು ನೋಡಿಕೊಳ್ಳಲು ಯಾವಾಗಲೂ ಯಾರಾದರೂ ಬೇಕಾಗಿದ್ದರು.  ರಾಲ್ಫ್ ಗಿಬ್ಸ್​ಗೆ ನ್ಯೂನತೆಗಳಿದ್ದರೂ ಅವರಿಗೆ ಪಾಲುದಾರರ ಬೆಂಬಲ ಮಾತ್ರ ಬೇಕಾಗಿತ್ತು. ಇದಕ್ಕಾಗಿ ಅವರು ನಿಯಮಗಳು ಮತ್ತು ನಿಬಂಧನೆಗಳನ್ನು ಮುರಿಯಲು ಸಿದ್ಧರಾಗಿದ್ದರು.

  ನರ್ಸಿಂಗ್ ಸೆಂಟರ್‌ನಲ್ಲಿ 84 ವರ್ಷದ ಗೆಳತಿಯ ಕಷ್ಟವನ್ನು ಅರಿತು ಆಕೆಗೆ ಮನಸೋತು ರಾಲ್ಫ್​ ಕೊನೆಗೆ ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಕರೋಲ್ ಲಿಸ್ಲೆ ಕೊಂಚ  ಬುದ್ಧಿಮಾಂದ್ಯತೆ ಮತ್ತು ಪಾರ್ಕಿನ್ಸನ್ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರು. ಈ ಕಾಯಿಲೆಯಲ್ಲಿ, ರೋಗಿಯ ಸ್ಮರಣೆಯು ತುಂಬಾ ಮಸುಕಾಗುತ್ತದೆ ಮತ್ತು ಆಕೆ ಹಿಂದಿನ ವಿಷಯಗಳನ್ನು ಮರೆತುಬಿಡುತ್ತಾಳೆ.

  ಕರೋಲ್​ ಲಿಸ್ಲೆಗೆ ಪರ್ತ್ ನಗರದ ಸಮೀಪವಿರುವ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಮತ್ತು ಅಲ್ಲಿಯೇ ಇರಿಸಲಾಗಿತ್ತು. 4 ಜನವರಿ 2022 ರಂದು ಕರೋಲ್‌ನನ್ನು ಭೇಟಿಯಾಗಲು ರಾಲ್ಫ್ ಗಿಬ್ಸ್ ಅಲ್ಲಿಗೆ ಹೋಗಿದ್ದರು. ನಂತರ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗವ ಪ್ಲಾನ್​ ಮಾಡಿದರು.

  ಕರೋಲ್ ಅವರನ್ನು ಸಂತೋಷವಾಗಿಡಲು ರಾಲ್ಫ್ ಗಿಬ್ಸ್ ಪ್ರಯತ್ನಿಸುತ್ತಿದ್ದಾರೆ. ಸದಾ ಜೊತೆಯಲ್ಲಿರಲು ಬಯಸಿದ ಅವರು ಗೆಳತಿಯನ್ನು ಆಸ್ಟ್ರೇಲಿಯಾದ ವಿವಿಧ ನಗರಗಳಿಗೆ ಕರೆದೊದ್ದಾರೆ. ಮಾತ್ರವಲ್ಲದೆ ಕ್ವೀನ್​ಲ್ಯಾಂಡ್ ಕಡೆಗೆ ತೆರಳಲು ಪ್ರಾರಂಭಿಸಿದರು. ಪರ್ತ್‌ನಿಂದ ಕ್ವೀನ್ಸ್‌ಲ್ಯಾಂಡ್‌ಗೆ ಸುಮಾರು 4800 ಕಿಲೋಮೀಟರ್ ದೂರವಿದೆ.

  ಇದನ್ನೂ ಓದಿ- ಲೈಂಗಿಕ ಆನಂದ ಪಡೆಯಲು ಹೋಗಿ ಯಡವಟ್ಟು ಮಾಡಿಕೊಂಡ ವ್ಯಕ್ತಿ! ಖಾಸಗಿ ಭಾಗದಲ್ಲಿತ್ತು 2 ಮೀ ಉದ್ದದ ನೈಲಾನ್ ದಾರ! 

  ರಾಲ್ಫ್​ ಹೇಳಿದ- ‘ಏನೇ ಮಾಡಿದರೂ ಪ್ರೀತಿ ಮಾಡಿದ್ದೇನೆ ’

  ರಾಲ್ಫ್ ಮತ್ತು ಕರೋಲ್ ಅವರನ್ನು ದಟ್ಟವಾದ ಮರುಭೂಮಿಯಲ್ಲಿ ಪೊಲೀಸರು ವಶಪಡಿಸಿಕೊಂಡರು. ಅವರು ಚಾಲನೆ ಮಾಡುತ್ತಿರುವುದನ್ನು ಕಂಡು ಅಲ್ಲಿ ತಾಪಮಾನವು 43 ಡಿಗ್ರಿ ಸೆಲ್ಸಿಯಸ್ ಆಗಿತ್ತು ಮತ್ತು ಕರೋಲ್ ತುಂಬಾ ಹೆದರುತ್ತಿದ್ದರು. ಅವರನ್ನು ಅಲ್ಲಿಂದ ಪರ್ತ್‌ಗೆ ವಿಮಾನದ ಮೂಲಕ ಕರೆದೊಯ್ಯಲಾಯಿತು ಮತ್ತು ಕ್ಯಾರೊಲ್‌ನ ಜೀವಕ್ಕೆ ಅಪಾಯವನ್ನುಂಟುಮಾಡುವುದು ಸೇರಿದಂತೆ ಹಲವಾರು ಆರೋಪಗಳನ್ನು ರಾಲ್ಫ್ ಗಿಬ್ಸ್‌ಗೆ ಹೊರಿಸಲಾಯಿತು. ನ್ಯಾಯಾಲಯದ ಹಾಜರಾತಿ ಸಮಯದಲ್ಲಿ, ಗಿಬ್ಸ್ ತಾನು ಏನು ಮಾಡಿದರೂ ಅದನ್ನು ಪ್ರೀತಿಯಲ್ಲಿ ಮಾಡಿದ್ದೇನೆ ಎಂದು ಹೇಳಿದರು.

  ಇದನ್ನೂ ಓದಿ- Breast milk: ಎದೆ ಹಾಲು ಮಾರಿ ಲಕ್ಷಾಂತರ ಹಣ ಗಳಿಸುತ್ತಿದ್ದಾಳೆ ಈ ತಾಯಿ! 30 ml ಹಾಲಿನ ಬೆಲೆ ಎಷ್ಟು ಗೊತ್ತಾ?

  ರಾಲ್ಫ್ ಗಿಬ್ಸ್ ತನ್ನ ಜೀವನದ ಕೊನೆಯ ವರ್ಷಗಳನ್ನು ತನ್ನ ಸಂಗಾತಿಯಾದ ಕರೋಲ್ ಜೊತೆ ಕಳೆಯಲು ಬಯಸಿದ್ದಾರೆ. ಅವರ ವಾದವನ್ನು ಒಪ್ಪಿಕೊಂಡ ನ್ಯಾಯಾಲಯ 7 ತಿಂಗಳ ಜೈಲು ಮತ್ತು 2 ವರ್ಷಗಳ ತಡೆಯಾಜ್ಞೆಯನ್ನೂ ನೀಡಿದೆ.
  Published by:Harshith AS
  First published: