ಸ್ನೇಹ ಎಂಬ ಎರಡಕ್ಷರದ ಪದವನ್ನು ಬಣ್ಣಿಸಲು ಅಸಾಧ್ಯ. ಯಾಕೆಂದ್ರೆ ಸ್ನೇಹ (Friendship) ಎಂಬುದು ಅತ್ಯದ್ಭುತ ಅನುಭವ. ಕೆಲವರು ಆಪತ್ತಿಗಾದವನೇ ನಿಜವಾದ ಸ್ನೇಹಿತ ಎಂದರೆ ಇನ್ನು ಕೆಲವರು ಆಪತ್ತಿನ ಸಮಯದಲ್ಲಿ ಸಹಾಯ (Help) ಮಾಡುವವನೇ ನಿಜವಾದ ಸ್ನೇಹಿತ ಎನ್ನುತ್ತಾರೆ. ಆದ್ರೆ ಇಲ್ಲೊಂದು ಗೆಳತನದ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ( Social Media) ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡುತ್ತಿದೆ. ಈ ವಿಡಿಯೋ ನೋಡಿದ್ರೆ ಅಪರೂಪದ ಸ್ನೇಹ ಎಂದರೆ ತಪ್ಪಾಗಲಾರದು.
ಮದುವೆಯ ನಂತರ ಬಾಲ್ಯದ ಸ್ನೇಹವನ್ನು ಉಳಿಸಿಕೊಳ್ಳುವುದು ಮಹಿಳೆಯರಿಗೆ ಸ್ವಲ್ಪ ಕಷ್ಟದ ಸಂಗತಿ. ಯಾಕೆಂದರೆ ಅವರು ಇಡೀ ಕುಟುಂಬವನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಇದಲ್ಲದೆ, ಅವರು ತಮ್ಮ ಸ್ನೇಹಿತರನ್ನು ಭೇಟಿಯಾಗಲು ಸಮಯ ಸಿಗುವುದೇ ಕಷ್ಟ. ಎಂಟು ದಶಕಗಳಿಂದ ಸ್ನೇಹಿತರಾಗಿರುವ ಇಬ್ಬರು ವೃದ್ಧೆಯರು ಭೇಟಿಯಾಗಿದ್ದಾರೆ.
ಹೌದು.. ಅವರಿಬ್ಬರೂ ಕುಚಿಕು ಸ್ನೇಹಿತರು. ಆದರೆ ಈಗ ಇಬ್ಬರ ಬಾಯಲ್ಲೂ ಹಲ್ಲುಗಳು ಉದುರಿದ್ದು ಕೈ ನಡುಗುತ್ತಿದೆ, ಮಾತು ತೊದಲುತ್ತಿದೆ. ಇಬ್ಬರು ಹಣ್ಣು ಹಣ್ಣು ಮುದುಕಿಯರಾಗಿದ್ದಾರೆ. ಆದರೂ ಈ ಸ್ನೇಹಿತರು ಒಬ್ಬರನೊಬ್ಬರು ಮರೆತಿಲ್ಲ. ಈ ಇಬ್ಬರು ಭೇಟಿಯಾಗಿ ದಶಕಗಳೇ ಕಳೆದರು ಅವರ ಭೇಟಿ ನಿನ್ನೆ ಮೊನ್ನೆಯ ಹಾಗಿದೆ. ಹೀಗಾಗಿ ದಶಕಗಳ ಭೇಟಿಯ ಕ್ಷಣ ಹೇಗಿದೆ ಎಂಬುದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಲ್ಯದ ಸ್ನೇಹಿತೆಯರು 80 ವರ್ಷಗಳ ನಂತರ ಭೇಟಿಯಾದ ಕ್ಷಣ
ಇವರಿಬ್ಬರ ಸ್ನೇಹ 80 ವರ್ಷ ದಾಟಿದ್ದರು ಇವರು ತಮ್ಮ ಬಾಲ್ಯದ ಸ್ನೇಹವನ್ನು ಮಾತ್ರ ಮರೆತಿಲ್ಲ. ಇಬ್ಬರು ಪರಸ್ಪರರನ್ನು ನೋಡಿ ಬಹಳ ಖುಷಿಯಾಗಿದ್ದು, ಕಷ್ಟಸುಖಗಳನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋ ನೋಡಿದಾಗ ನಿಜವಾದ ಸ್ನೇಹಕ್ಕೆ ಅನುರೂಪವೆನಿಸುತ್ತಿದ್ದು, ಅನೇಕರು ಹಿರಿಜೀವಗಳ ಈ ಸ್ನೇಹವನ್ನು ನೊಡಿ ಭಾವುಕರಾಗಿದ್ದಾರೆ. ಅನೇಕ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : Viral News: ತಾಳಿ ಕಟ್ಟಿದ ಜೋಶ್ನಲ್ಲಿ ಕಿಸ್ ಕೊಟ್ಟ ವರ, ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
ಈ ವಿಡಿಯೋವನ್ನು ಮುಕಿಲ್ ಮೆನನ್ ಎಂಬುವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು. ಇದೊಂದು 80 ವರ್ಷಗಳಿಗಿಂತಲೂ ಹಳೆಯ ಸ್ನೇಹ. ನನ್ನ ಅಜ್ಜಿ ಯಾವಾಗಲೂ ನನಗೆ ಹೇಳುತ್ತಿದ್ದರು ನನ್ನ ಸ್ನೇಹಿತೆಯನ್ನು ಭೇಟಿಯಾಗಬೇಕು ಎಂದು ಹೇಳುತ್ತಿದ್ದರು. ಹೀಗಾಗಿ ಇವರಿಬ್ಬರು ಪರಸ್ಪರ ಭೇಟಿಯಾಗುವಂತೆ ನಾನು ಮಾಡಿದೆ. ಅವರಿಬ್ಬರು ಮೊದಲ ಬಾರಿ ಭೇಟಿಯಾದ ಕ್ಷಣ ಹೇಗಿತ್ತು ಎಂಬುದು ಈ ವಿಡಿಯೋದಲ್ಲಿದೆ ಎಂದು ಮುಕಿಲ್ ಮೆನನ್ ಬರೆದುಕೊಂಡಿದ್ದಾರೆ.
View this post on Instagram
ನೆಟ್ಟಿಗರಿಂದ ಈ ವಿಡಿಯೋಗೆ ಮೆಚ್ಚುಗೆಯ ಕಾಮೆಂಟ್
ನೆಟ್ಟಿಗರಿಂದ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆಯ ಕಾಮೆಂಟ್ ಬಂದಿದೆ. ಇವರಿಬ್ಬರ ಸ್ನೇಹ ಹಾಗೂ ಇವರಿಬ್ಬರ ಒಡನಾಟ ಬಹಳ ಚೆನ್ನಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರನ್ನು ನೋಡಿದಾಗ ನಮ್ಮ ಅಜ್ಜಿಯ ನೆನಪಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Road Missing: ಎಲ್ಲಾ ಮಾಯ ಈಗ ರಸ್ತೆಯೇ ಮಾಯ! 2 ಕಿಮೀ ಉದ್ದದ ರೋಡ್ ಹುಡುಕುತ್ತಿದ್ದಾರೆ ಈ ಹಳ್ಳಿ ಜನ!
ಈ ವಿಡಿಯೋ 9,000 ಕ್ಕೂ ಹೆಚ್ಚು ಲೈಕ್ಗಳು ಮತ್ತು ನೂರಾರು ಕಾಮೆಂಟ್ ಗಳು ಬಂದಿದೆ. ವಿಡಿಯೋ ಕುರಿತು ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದು, “ಇದು ಅಮೂಲ್ಯವಾಗಿದೆ! ಅವರು ಹೇಗೆ ಭಾವಿಸುತ್ತಾರೆ ಎಂದು ಮಾತ್ರ ಊಹಿಸಬಹುದು" ಎಂದು ಬರೆದಿದ್ದಾರೆ. ಇನ್ನೊಬ್ಬರು, “ಇವರಿಬ್ಬರು ಮುದ್ದಾದ ಜೀವಂತ ದೇವತೆಗಳು" ಎಂದಿದ್ದಾರೆ.
ಒಟ್ಟಿನಲ್ಲಿ ಈ ಮುದ್ದಾದ ಹಿರಿಜೀವಗಳ ದಶಕಗಳ ಅದ್ಬುತ ಸ್ನೇಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ