HOME » NEWS » Trend » 8 YEAR OLD US BOY IS WORLDS YOUNGEST PRO FORNITE GAMER MAKES RS 23 LAKH AS SIGNING BONUS STG LG

8 ವರ್ಷದ ಅಮೆರಿಕ ಬಾಲಕ ಈಗ ವಿಶ್ವದ ಕಿರಿಯ ಪ್ರೊ ಫೋರ್ಟ್​​ನೈಟ್​​​​ ಗೇಮರ್; ಆರಂಭದಲ್ಲೇ ಸಿಕ್ತು 23 ಲಕ್ಷ ರೂ. ಬೋನಸ್..!

ಈ ಬಗ್ಗೆ ಬಿಬಿಸಿ ಜತೆಗೆ ಮಾತನಾಡಿರುವ ಜೋಸೆಫ್, ಈ ಅವಕಾಶ ದೊರೆತಿದ್ದಕ್ಕೆ ಆಶ್ಚರ್ಯವಾಯಿತು ಎಂದಿದ್ದಾನೆ. ನಾನು ವೃತ್ತಿಪರ ಗೇಮರ್ ಆಗುವ ಬಗ್ಗೆ ಸಾಕಷ್ಟು ಯೋಚಿಸಿದ್ದೆ. ಆದರೆ, ತಂಡ 33 ಕ್ಕೆ ಸೇರುವವರೆಗೂ ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದನು.

news18-kannada
Updated:March 4, 2021, 8:19 AM IST
8 ವರ್ಷದ ಅಮೆರಿಕ ಬಾಲಕ ಈಗ ವಿಶ್ವದ ಕಿರಿಯ ಪ್ರೊ ಫೋರ್ಟ್​​ನೈಟ್​​​​ ಗೇಮರ್; ಆರಂಭದಲ್ಲೇ ಸಿಕ್ತು 23 ಲಕ್ಷ ರೂ. ಬೋನಸ್..!
ಜೋಸೆಫ್
  • Share this:
ನೀವು ಎಂಟು ವರ್ಷದವರಿದ್ದಾಗ ಏನು ಮಾಡುತ್ತಿದ್ದೀರಿ ಎಂದು ನಿಮಗೆ ನೆನಪಿದೆಯೇ? ಬಹುಶಃ ಶಾಲೆಗೆ ರೆಡಿ ಆಗಿ ಹೋಗೋದು ಅಥವಾ ರಜಾದಿನಗಳಿದ್ದಲ್ಲಿ ಟಿವಿ ನೋಡುತ್ತಾ ಮನೆಯಲ್ಲೇ ಇರೋದು. ಇಲ್ಲಾಂದ್ರೆ ಸ್ನೇಹಿತರೊಂದಿಗೆ ಆಟ ಆಡೋದು, ಅಥವಾ ಮನೆಯೊಳಗೆ ಇತ್ತೀಚಿನ ವಿಡಿಯೋ ಗೇಮ್ ಆಡಿರುತ್ತೀರಾ..

ಆದರೆ, ನಾವು ಹೇಳಲು ಹೊರಟಿರುವ ಈ ಎಂಟು ವರ್ಷದ ಬಾಲಕ ಕೊನೆಯದ್ದನ್ನು ಬಿಟ್ಟು ಉಳಿದ ಎಲ್ಲದ್ದನ್ನೂ ಮಾಡುತ್ತಾನೆ. ಅವನೂ ಕೂಡ ವಿಡಿಯೋ ಗೇಮ್ ಆಡ್ತಾನೆ, ಆದ್ರೆ, ವೃತ್ತಿಪರನಾಗಿ ಆಡ್ತಾನೆ. ವೃತ್ತಿಪರ ಫೋರ್ಟ್ ನೈ​​​​​​​​ಟ್ ಆಟಗಾರನಾಗಲು ಸೈನಪ್ ಆಗಿದ್ದಕ್ಕೆ ಅಮೆರಿಕದ ಬಾಲಕ 33,000 ಡಾಲರ್ ಅಂದ್ರೆ ಬರೋಬ್ಬರಿ 23,26,833 ರೂ. ಹಣ ಗಳಿಸಿದ್ದಾನೆ.

ಕ್ಯಾಲಿಫೋರ್ನಿಯಾದ ಜೋಸೆಫ್ ಡೀನ್ ಎಂಬ ಶಾಲೆಗೆ ಹೋಗುವ ಬಾಲಕ ನಾಲ್ಕು ವರ್ಷದವನಾಗಿದ್ದಾಗಿನಿಂದಲೇ ಈ ಆಟವನ್ನು ಪ್ರೀತಿಸುತ್ತಿದ್ದ. ಈ ಯುದ್ಧತಂತ್ರದ, ಶೂಟಿಂಗ್-ಬದುಕುಳಿಯುವ ಆಟದಲ್ಲಿ ಅವನು ಅಕ್ಷರಶಃ ತನ್ನ ಜೀವನದ ಅರ್ಧದಷ್ಟು ಸಮಯವನ್ನು ಆಡಿದ್ದು, ಉತ್ತಮವಾಗಿದ್ದಾನೆ. ಫ್ಲೆಡ್ಜೆಲಿಂಗ್ ಇ-ಸ್ಪೋರ್ಟ್ಸ್ ತಂಡವು ಒಂದೂವರೆ ವರ್ಷಗಳ ಹಿಂದೆ ಬಾಲಕನ ಪ್ರತಿಭೆ ಗಮನಿಸಿ ಕಳೆದ ಡಿಸೆಂಬರ್​​ನಲ್ಲಿ ತಂಡ 33 ಕ್ಕೆ ಆಟಗಾರನಾಗಿ ಸೈನ್ ಅಪ್ ಮಾಡಿತು. ಈ ಹಿನ್ನೆಲೆ ಈ ಪೋರ ಅಧಿಕೃತವಾಗಿ ಇದುವರೆಗಿನ ವಿಶ್ವದ ಅತ್ಯಂತ ಕಿರಿಯ ಪೇಯ್ಡ್-ಫೋರ್ಟ್ನೈಟ್ ಆಟಗಾರ ಎನಿಸಿಕೊಂಡಿದ್ದಾನೆ.

Hair Fall: ಕೂದಲು ಉದುರುವಿಕೆ ತಡೆಯಲು ಕೆಫೀನ್ ಸಹಕಾರಿ!

ಈ ಬಗ್ಗೆ ಬಿಬಿಸಿ ಜತೆಗೆ ಮಾತನಾಡಿರುವ ಜೋಸೆಫ್, ಈ ಅವಕಾಶ ದೊರೆತಿದ್ದಕ್ಕೆ ಆಶ್ಚರ್ಯವಾಯಿತು ಎಂದಿದ್ದಾನೆ. "ನಾನು ವೃತ್ತಿಪರ ಗೇಮರ್ ಆಗುವ ಬಗ್ಗೆ ಸಾಕಷ್ಟು ಯೋಚಿಸಿದ್ದೆ. ಆದರೆ, ತಂಡ 33 ಕ್ಕೆ ಸೇರುವವರೆಗೂ ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ'' ಎಂದು ಹೇಳಿದನು. ವೃತ್ತಿಪರ ವಿಡಿಯೋ ಗೇಮರ್ ಅಥವಾ ಗಗನಯಾತ್ರಿಗಳಾಗುವ ಕನಸು ಕಾಣುವ 6 ವರ್ಷ ವಯಸ್ಸಿನ ಮಕ್ಕಳಿಗೆ ಜನರು ಪ್ರತಿಕ್ರಿಯೆ ಕೊಡೋದು ಎಷ್ಟರ ಮಟ್ಟಿಗೆ ಅನ್ನೋದು ನಿಮ್ಮ ಅರಿವಿನಲ್ಲೂ ಇರುತ್ತೆ.

ಇನ್ನು, ಈಗ ಅಧಿಕೃತವಾಗಿ ಅತಿ ಕಿರಿಯ ವೃತ್ತಿಪರನಾಗಿದ್ದಾನೆ. ಅಲ್ಲದೆ, ಮೊದಲಿಗೆ ಈ ಆಟ ಆಡಲು ಸಹ ಆತ ಚಿಕ್ಕವ. ಯಾಕೆಂದರೆ, ದರ ಹಿಂಸಾತ್ಮಕ ವಿಷಯದಿಂದಾಗಿ, ಈ ಆಟವನ್ನು “ಹದಿಹರೆಯದವರು ಮತ್ತು ಅದಕ್ಕಿಂತ ಹೆಚ್ಚಿನವರಿಗೆ” ಎಂದು ಪ್ರಮಾಣಿಕರಿಸಲಾಗಿದೆ.

ಜೋಸೆಫ್ ತಾಯಿ ಗಿಗಿ ದೀನ್, ಇತರ ಅಮ್ಮಂದಿರಂತೆ ಅಲ್ಲ. "ನಾನು ಆಟವನ್ನು ನೋಡಿದ್ದೇನೆ ಮತ್ತು ನಾವು ಯಾವುದೇ ತಪ್ಪು ಮಾಡುತ್ತಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಅವನು ಸಮತೋಲಿತ ಮಗು ಮತ್ತು ಉತ್ತಮ ಕುಟುಂಬದಿಂದ ಬಂದವನು ಮತ್ತು ಅವನು ಅದರಿಂದ ಪ್ರಭಾವಿತನಾಗಿಲ್ಲ” ಎಂದು ಅವರು ಬಿಬಿಸಿಗೆ ತಿಳಿಸಿದರು.ತಂಡದ 33 ರ ಮುಖ್ಯ ಕಾರ್ಯನಿರ್ವಾಹಕ ಮತ್ತು ಸಹ-ಸಂಸ್ಥಾಪಕ ಟೈಲರ್ ಗಲ್ಲಾಘರ್ ಅವರು ''ನೀವು ಈ ಮಗುವನ್ನು ಸೇರಿಸಿಕೊಳ್ಳಿ. ನಾವು ಮಾಡದಿದ್ದರೆ, ಬೇರೊಬ್ಬರು ಹಾಗೆ ಮಾಡುತ್ತಾರೆ. ” ಎಂದು ನನಗೆ ತಂಡದ ಸದಸ್ಯರು ಹೇಳಿದ್ದರು ಎಂದು ಹೇಳಿದ್ದಾರೆ.

ಈ ಆಟ ಗಂಭೀರ (ಮತ್ತು ಹಿಂಸಾತ್ಮಕ) ಆಟವಾಗಿದ್ದರೂ, ಹೆಚ್ಚಿನ ಫೋರ್ಟ್ನೈಟ್ ಆಟಗಾರರು ಹದಿಹರೆಯದವರು. ಫೋರ್ಟ್ನೈಟ್ನ ಅತಿ ಹೆಚ್ಚು ಆದಾಯ ಗಳಿಸುವ ಟಾಪ್ 10 ಆಟಗಾರರಲ್ಲಿ ಎಂಟು ಮಂದಿ 18 ವರ್ಷದೊಳಗಿನವರು ಎಂದು ವೆಬ್ಸೈಟ್ esportsearnings.com ವರದಿ ಮಾಡಿದೆ. 2019 ರಲ್ಲಿ 16 ವರ್ಷದ ಕೈಲ್ ‘ಬುಘಾ’ ಗಿಯರ್ಸ್ಡಾರ್ಫ್ ಫೋರ್ಟ್ನೈಟ್ ವಿಶ್ವಕಪ್ ಗೆದ್ದಿದ್ದ. ಆತ ಬಹುಮಾನವಾಗಿ 3 ಮಿಲಿಯನ್ ಡಾಲರ್ ಅಂದರೆ 22,01,82,000 ರೂ. ಪಡೆದಿದ್ದ. ಇದೇ ರೀತಿ, ಜೋಸೆಫ್ ಸಹ ಈ ಬುಘಾನಿಂದ ಪ್ರಭಾವಿತನಾಗಿದ್ದು, ವಿಶ್ವಕಪ್ ವಿಜೇತನಂತೆ ಆಡಲು ಬಯಸುತ್ತಾನೆ.

ಕಂಪ್ಯೂಟರ್​​​ನ ಕೀ ಬೋರ್ಡ್ ಹಾಗೂ ಮೌಸ್ ಜತೆಗಿನ ಕೌಶಲ್ಯಕ್ಕಾಗಿ ಜೋಸೆಫ್ ತನ್ನ ತಾಯಿಗೆ ಧನ್ಯವಾದ ಹೇಳಿದ್ದಾನೆ. ಗಿಗಿ ದೀನ್, ಪಿಯಾನೋ ವಾದಕಿಯಾಗಿದ್ದು, ಜೋಸೆಫ್​ಗೆ ಬಹಳ ಸಮಯದಿಂದ ಕಲಿಸುತ್ತಿದ್ದಾಳೆ.
Published by: Latha CG
First published: March 4, 2021, 8:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories