Pregnancy Exercise: ಗರ್ಭಿಣಿಯರು ವ್ಯಾಯಾಮ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ..?

Pregnancy Exercise :ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ಸುರಕ್ಷಿತ. ಈ ಸಮಯದಲ್ಲಿ ವ್ಯಾಯಾಮ ಮಾಡುವುದು ಅತ್ಯವಶ್ಯಕ ಎಂದು ಪ್ರಪಂಚದಾದ್ಯಂತ ವೈದ್ಯರು ಹೆಚ್ಚು ಶಿಫಾರಸು ಮಾಡಿದ್ದಾರೆ.

ಗರ್ಭಿಣಿಯರು

ಗರ್ಭಿಣಿಯರು

 • Share this:
  ಮಗು ಪಡೆಯುವುದು ಎಂದರೆ ಅದು ತಾಯಿಯೊಬ್ಬಳ (Mother)ಪುನರ್ಜನ್ಮವೇ ಸರಿ.. ನವಮಾಸಗಳ (9 months)ಕಾಲ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಅದನ್ನು ಜೋಪಾನವಾಗಿ ರಕ್ಷಣೆ ಮಾಡುವ ಜವಾಬ್ದಾರಿ(Responsibility) ತಾಯಿಯದ್ದು ಆಗಿರುತ್ತೆ.. ಹೀಗಾಗಿ ತಾಯಿ ತನ್ನ ಮಗುವಿನ ಆರೋಗ್ಯಕ್ಕೆ(Health)ಯಾವುದೇ ತೊಂದರೆ ಬರದಂತೆ ಸಾಕಷ್ಟು ಎಚ್ಚರಿಕೆಯಿಂದ ಇರುತ್ತಾಳೆ. ನಿಯಮಿತವಾಗಿ ವೈದ್ಯರ ಬಳಿ ಹೋಗುವುದು ಅವರು ಹೇಳಿದ ಔಷಧಿಗಳನ್ನು (Tablets)ತೆಗೆದುಕೊಳ್ಳುವುದು, ಸೂಕ್ತ ಆಹಾರ ಸೇವನೆ ಎಲ್ಲವನ್ನ ಮಾಡಿದರೂ ಸಹ ಕೆಲವೊಮ್ಮೆ ಪ್ರಸವದ ವೇಳೆ ಅಥವಾ ಅದಕ್ಕೂ ಮುಂಚೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಹೀಗಾಗಿ ಗರ್ಭಿಣಿಯಾದ ಮಹಿಳೆ ಹೆಚ್ಚು ವಿಶ್ರಾಂತಿ ಪಡೆದು ಕೊಳ್ಳುವುದು ಅಗತ್ಯ ಎಂದು ಹೇಳಲಾಗುತ್ತೆ.. ಆದರೆ ಗರ್ಭಿಣಿಯಾದ ಮಹಿಳೆ ನಿಯಮಿತವಾಗಿ ಕೆಲವೊಂದು ಸಣ್ಣಪುಟ್ಟ ವ್ಯಾಯಾಮ ಮಾಡುವುದರಿಂದ ಆಕೆಯ ಆರೋಗ್ಯ ಉತ್ತಮಗೊಳ್ಳಲಿದೆ.. ಹಾಗಿದ್ರೆ ಗರ್ಭಿಣಿಯಾದ ಮಹಿಳೆಯ ವ್ಯಾಯಾಮ ಮಾಡುವುದರಿಂದ ಆಕೆಗೆ ಆಗುವ ಪ್ರಯೋಜನಗಳು ಏನು ಎನ್ನುವ ಮಾಹಿತಿ ಇಲ್ಲಿದೆ..

  ಗರ್ಭಿಣಿ ಮಹಿಳೆಯರು ವ್ಯಾಯಾಮ ಮಾಡುವುದು ಸೂಕ್ತವೇ..?

  ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ಸುರಕ್ಷಿತ. ಈ ಸಮಯದಲ್ಲಿ ವ್ಯಾಯಾಮ ಮಾಡುವುದು ಅತ್ಯವಶ್ಯಕ ಎಂದು ಪ್ರಪಂಚದಾದ್ಯಂತ ವೈದ್ಯರು ಹೆಚ್ಚು ಶಿಫಾರಸು ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಮೂರನೆಯ ತ್ರೈಮಾಸಿಕದಲ್ಲಿ ತುಂಬಾ ಅನಾನುಕೂಲವಾದಾಗ ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳಿದ್ದು, ಇದರಿಂದ ನಿಮ್ಮ ಮಗುವಿಗೆ ತೊಂದರೆಯಾಗುವಂತಹ ಸಂದರ್ಭ ಬಂದರೆ ವೈದ್ಯರು ವ್ಯಾಯಾಮ ಮಾಡಲು ಸೂಚಿಸುವುದಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದರಿಂದ ತಾಯಿ ಮತ್ತು ಮಗುವಿಗೆ ದೀರ್ಘ ಕಾಲದವರೆಗೆ ಪ್ರಯೋಜನವಾಗುತ್ತದೆ.

  ಇದನ್ನೂ ಓದಿ : ಮೊದಲ ಮಗುವಿನ ನೀರಿಕ್ಷೆಯಲ್ಲಿ ಇದ್ದೀರಾ? ಹಾಗಿದ್ರೆ ಈ ಹಣ್ಣುಗಳ ಸೇವನೆ ಬೇಡ

  1) ವ್ಯಾಯಾಮದಿಂದ ಸೊಂಟದ ಬಲದಲ್ಲಿ ಹೆಚ್ಚಳ:ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಸೊಂಟದ ನೋವು ಅಧಿಕವಾಗಿ ಬಾಧಿಸುತ್ತಿರುತ್ತದೆ.. ಆದರೆ ದಿನನಿತ್ಯ 20 ನಿಮಿಷಗಳ ಕಾಲ ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡುವುದರಿಂದ ಸೊಂಟದ ನೋವಿನಿಂದ ಗರ್ಭಿಣಿಯರು ಮುಕ್ತಿ ಪಡೆಯಬಹುದು.. ಅಲ್ಲದೆ ಪದೇಪದೇ ಭಾಧಿಸುವ ಮೂತ್ರ ವಿಸರ್ಜನೆ ಸಮಸ್ಯೆ, ಶೀತ ದಿಂದಲೂ ಮುಕ್ತಿ ಪಡೆಯಬಹುದು..

  2) ಬೆನ್ನು ನೋವಿನ ನಿವಾರಣೆ: ಪ್ರತಿ ವಾರ ಮಗು ದೊಡ್ಡದಾಗುವುದರೊಂದಿಗೆ, ಹಿಂಭಾಗದಲ್ಲಿ ಮಹಿಳೆಯ ಸೊಂಟದ ಹಿಂಭಾಗದಲ್ಲಿ ಟೊಳ್ಳು ಉಂಟಾಗುತ್ತದೆ., ಇದರಿಂದಾಗಿ ಬೆನ್ನುನೋವು ಉಂಟಾಗುತ್ತದೆ. ಬೆನ್ನು ನೋವನ್ನು ನಿವಾರಿಸಲು ನಿಮ್ಮ ವೈದ್ಯರಿಂದ ಹೊಟ್ಟೆಯನ್ನು ಬಲಪಡಿಸುವ ಅತ್ಯುತ್ತಮ ವ್ಯಾಯಾಮಗಳನ್ನು ತಿಳಿದುಕೊಂಡು ಮಾಡಿದರೆ ಬೆನ್ನುನೋವು ನಿವಾರಣೆಯಾಗಲಿದೆ.

  3) ಶಕ್ತಿ ಹೆಚ್ಚಳ :ನೀವು ಒಂಬತ್ತು ತಿಂಗಳವರೆಗೆ ದೀರ್ಘ ಕಾಲ ಮಗುವಿನ ತೂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಆದ್ದರಿಂದ ನಿಮಗೆ ಈ ಸಂದರ್ಭದಲ್ಲಿ ಸ್ನಾಯು ಬಲ, ಶಕ್ತಿ ಮತ್ತು ಸಹನೆ, ತಾಳ್ಮೆ ಬೇಕು. ಆದರೆ ನೀವು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಗುವಿನ ಭಾರ ಹೊರಲು ಸಹಾಯ ಮಾಡುತ್ತದೆ.

  4)ಆತಂಕವನ್ನು ಕಡಿಮೆ ಮಾಡುತ್ತದೆ : ನಿಮ್ಮ ದೇಹ ಮತ್ತು ಚಿತ್ತವನ್ನು ಚೈತನ್ಯಗೊಳಿಸಲು ಪ್ರತಿದಿನ ವ್ಯಾಯಾಮ ಮಾಡುವುದು ಉತ್ತಮ. ಗರ್ಭಾವಸ್ಥೆಯಲ್ಲಿ ಆತಂಕ ಮತ್ತು ಖಿನ್ನತೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೀಗಾಗಿ ವ್ಯಾಯಾಮ ಮಾಡುವುದು ಗರ್ಭಿಣಿ ಮಹಿಳೆಯರಲ್ಲಿ ಖಿನ್ನತೆ ಕಡಿಮೆ ಮಾಡಲಿದೆ..

  5) ತೂಕ ಇಳಿಕೆಗೆ ಸಹಕಾರಿ: ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ತೂಕ ಏರಿಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.. ಹೀಗಾಗಿ ನಿಯಮಿತವಾಗಿ ವಾಕಿಂಗ್ ಹಾಗೂ ಸರಳ ವ್ಯಾಯಾಮ ಮಾಡಿಕೊಳ್ಳುವುದರಿಂದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು

  6)ಭಂಗಿ ಸುಧಾರಿಸಲು ಸಹಾಯ ಮಾಡುತ್ತದೆ: ಹೊಟ್ಟೆ ಹೆಚ್ಚಾದಂತೆ, ಕುಳಿತುಕೊಳ್ಳುವ ನಡೆಯುವ ಭಂಗಿಯು ಬದಲಾಗುತ್ತದೆ ಮತ್ತು ಬಹಳಷ್ಟು ನೋವುಗಳನ್ನು ಉಂಟುಮಾಡುತ್ತದೆ. ಆದರೆ ವಿಶೇಷವಾದ ವ್ಯಾಯಾಮಗಳೊಂದಿಗೆ, ನಿಮ್ಮ ಭಂಗಿಗಳನ್ನು ನೀವು ಸುಧಾರಿಸಬಹುದು

  ಇದನ್ನೂ ಓದಿ : ಬೇಗ ಗರ್ಭಧರಿಸಲು ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ

  7)ಮೂಡ್ ಸ್ವಿಂಗ್’ಗೆ ಪರಿಹಾರ ಸಿಗುತ್ತದೆ: ಹಾರ್ಮೋನುಗಳ ಏರುಪೇರು ಮತ್ತು ದೇಹದಲ್ಲಿರುವ ರಕ್ತದ ಪ್ರಮಾಣ ಹೆಚ್ಚಳದಿಂದಾಗಿ ಮೂಡ್ ಸ್ವಿಂಗ್ ಆಗುವುದು ಗರ್ಭಧಾರಣೆಯಲ್ಲಿ ಸಾಮಾನ್ಯವಾಗಿದೆ. ಆದರೆ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್’ಗಳು, ಸಿರೊಟೋನಿನ್ ಮತ್ತು ಡೋಪಮೈನ್ ಬಿಡುಗಡೆಯಾಗುತ್ತದೆ. ಇದು ಆ ಮೂಡ್ ಸ್ವಿಂಗ್ ನಿಯಂತ್ರಿಸಲು ಮತ್ತು ಉತ್ತಮವಾಗಲು ಸಹಾಯ ಮಾಡುತ್ತದೆ.

  8)ಉತ್ತಮ ನಿದ್ರೆ :ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಮಗು ಗರ್ಭದಲ್ಲಿ ಬೆಳೆಯುತ್ತಿರುವಾಗ ಉತ್ತಮ ನಿದ್ರೆ ಬರುವುದು ಕಷ್ಟ. ಉತ್ತಮ ನಿದ್ರೆ ಮಾಡಲು ವ್ಯಾಯಾಮವು ನಿಮಗೆ ಸಹಾಯ ಮಾಡುತ್ತದೆ.
  Published by:ranjumbkgowda1 ranjumbkgowda1
  First published: