Food: ಈ 8 ಆಹಾರಗಳು ಇನ್ಮುಂದೆ ಬ್ಯಾನ್​! ಫುಲ್​ ಡೀಟೇಲ್ಸ್​ ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವ್ಯಾವ ದೇಶಗಳಲ್ಲಿ ಯಾವ್ಯಾವ ಫುಡ್‌ಗಳನ್ನ ಬ್ಯಾನ್ ಮಾಡಿದ್ದಾರೆ. ಯಾವ್ಯಾವ ದೇಶದಲ್ಲಿ ಯಾವುದಕ್ಕೆಲ್ಲಾ ನಿಷೇಧ ಅಂತ ನೋಡೋಣ ಬನ್ನಿ.

  • Share this:

ಕೆಲವೊಬ್ರು ಇರ್ತಾರೆ  ಯಾವ ಊರಿಗೇ ಹೋಗಲಿ, ಯಾವ ಜಾಗಕ್ಕೆ ಹೋಗಲಿ, ತಮಗೆ ಇಷ್ಟ ಆಗುವಂತ ಆಹಾರವನ್ನೇ ಕೇಳ್ತಾರೆ. ಬೇಕಾದಂತಹ ಫುಡ್‌ಗಳನ್ನ (Food) ಸುತ್ತಾಡಿಕೊಂಡು ತಿಂದು ಬರ್ತಾರೆ. ಆದರೆ, ಇಲ್ಲೊಂದಷ್ಟು ದೇಶಗಳಲ್ಲಿ ಕೆಲ ಆಹಾರ ತಿನಿಸುಗಳನ್ನ ನೀವು ಎಷ್ಟೇ ಹುಡುಕಿದ್ರೂ ಸಿಗಲ್ಲ. ಕಬಾಬ್‌ನಿಂದ ಹಿಡಿದು ಮಿಡಿಯಂ ರೇಂಜ್‌ನ ಬರ್ಗರ್ ಮೇಲೂ ಕೆಲವೊಂದು ದೇಶಗಳು ನಿರ್ಬಂಧವನ್ನ ವಿಧಿಸಿವೆ. ಇವಾಗಲೇ ಫಾಸ್ಟ್ ದುನಿಯಾ ಫಟಾಪಟ್ ಅಂತ ಕೆಲಸ ಮುಗೀಬೇಕು.. ಫಟಾಪಟ್ ಅಂತ ಹೋಗ್ತಾ ಇರಬೇಕು. ಊಟ, ತಿಂಡಿ ಕೂಡ ಫಟಾಫಟ್ ಅಂತ ತಿಂದು ಮುಗಿಬೇಕು. ಐದು ನಿಮಿಷದಲ್ಲಿ ಅಡುಗೆ (Cook) ಮಾಡಿ, ಎರಡು ನಿಮಿಷದಲ್ಲಿ ತಿನ್ನಬೇಕು ಅಂತಾರೆ.  ಆದರೆ, ಇಲ್ಲೊಂದಷ್ಟು ದೇಶಗಳಲ್ಲಿ ಆಹಾರಗಳನ್ನ ಐದು ನಿಮಿಷದಲ್ಲಿ (5 minuts) ತಿನ್ನೋದಿರಲಿ, ನೀವು ನೋಡೋದು ಕೂಡ ಕಷ್ಟ. ಯಾಕಂದ್ರೆ, ಆರೋಗ್ಯ, ಸ್ವಚ್ಚತೆ, ಸಂಸ್ಕೃತಿ ಸೇರಿದಂತೆ ಅನೇಕ ದೃಷ್ಟಿಯಿಂದ ಕೆಲವೊಂದು ಆಹಾರಗಳಿಗೆ ಶಾಶ್ವತವಾಗಿ ನಿರ್ಬಂಧ ವಿಧಿಸಲಾಗಿದೆ. ಯಾವ್ಯಾವ ದೇಶಗಳಲ್ಲಿ ಯಾವ್ಯಾವ ಫುಡ್‌ಗಳನ್ನ ಬ್ಯಾನ್ ಮಾಡಿದ್ದಾರೆ. ಯಾವ್ಯಾವ ದೇಶದಲ್ಲಿ ಯಾವುದಕ್ಕೆಲ್ಲಾ ನಿಷೇಧ ಅಂತ ನೋಡೋಣ ಬನ್ನಿ.


ಸಿಂಗಾಪುರದಲ್ಲಿ ಚ್ಯುಯಿಂಗ್ ಗಮ್‌ಗೆ ನಿಷೇಧ:


ಕೆಲ ಯುವಕರು ಟೈಮ್ ಪಾಸ್‌ಗೆ, ಕೆಲವರು ಸ್ಟಲ್ಗೆ, ಕಲವರು ಬಾಯಿಯಲ್ಲಿರುವ ದುರ್ವಾಸನೆ ತೊಲಗಿಸೋದಕ್ಕೆ ಚ್ಯುಯಿಂಗ್ ಗಮ್ ಮೊರೆ ಹೋಗ್ತಾರೆ. ನಮ್ಮ ದೇಶದಲ್ಲಂತೂ ಪುಟಾಣಿ ಮಕ್ಕಳಿಗೆ ಚ್ಯುಯಿಂಗ್ ಮಾದರಿಯ ಆಹಾರಗಳು ಸಿಕ್ಕಾಪಟ್ಟೆ ಫೇವರಿಟ್.


ಆದರೆ, ಸಿಂಗಾಪುರದಲ್ಲಿ ಚ್ಯುಯಿಂಗ್‌ಗಮ್‌ಗೆ 1992ರಲ್ಲೇ ಶಾಶ್ವತ ನಿರ್ಬಂಧ ಹೇರಲಾಗಿದೆ. ಕಾರಣ ಇಷ್ಟೇ. ಬಾಯಿಯಿಂದ ಜಿಗಿದು ಉಗಿದ, ಅಲ್ಲಲ್ಲಿ ಅಂಟಿಸಿ ಪರಾರಿಯಾದ ಚ್ಯುಯಿಂಗ್‌ ಗಮ್‌ನಿಂದ ಸಿಂಗಾಪುರದಲ್ಲಿ ದೊಡ್ಡ ದೊಡ್ಡ ದುರಂತಗಳೇ ನಡೆದು ಹೋಗಿವೆ.


ಒಮ್ಮೆ ಟ್ರೈನ್ವೊಂದರ ಬಾಗಿಲಿಗೆ ಚ್ಯುಯಿಂಗ್ ಗಮ್ ಅಂಟಿಕೊಂಡಿತ್ತು. ಇದ್ರಿಂದಾಗಿ ಬಾಗಿಲಿನ ಸೆನ್ಸರ್ ವರ್ಕ್ಆಗದೆ ರೈಲು ಸಂಚಾರವೇ ಬಂದ್ ಆಗಿತ್ತು.. ರೈಲು ಸಂಚಾರ ವ್ಯವಸ್ಥೆಯನ್ನೇ ಚ್ಯುಯಿಂಗ್ ಗಮ್ ಹಾಳು ಮಾಡಿತ್ತು. ಇಷ್ಟೇ ಅಲ್ಲ, ಸಿಂಗಾಪುರದ ಗೃಹ ಅಭಿವೃದ್ಧಿ ಬೋರ್ಡ್ನವರು, ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿರುವ ಚ್ಯುಯಿಂಗ್ ಗಮ್ ಸ್ವಚ್ಛಗೊಳಿಸೋದಕ್ಕಾಗಿ ಅಂತಾನೇ ಸಿಕ್ಕಾಪಟ್ಟೆ ಖರ್ಚು ಮಾಡ್ತಿದ್ರು.


ಇದ್ರಿಂದಾಗಿ ಕೊನೆಗೆ ಚ್ಯುಯಿಂಗ್ ಗಮ್‌ಗೆ ನಿಷೇಧ ವಿಧಿಸಲಾಗಿದೆ. ಸದ್ಯ ಸಿಂಗಾಪುರದಲ್ಲಿ ಚ್ಯುಯಿಂಗ್ ಕಾನೂನು ಬಾಹಿರ. ಇದರ ಮೇಲೂ ಏನಾದ್ರೂ ಚ್ಯುಯಿಂಗ್ ಗಮ್ ಜಿಗಿದು ಉಗಿದ್ರೆ, ಒಂದು ಲಕ್ಷದ 23 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತೆ. ಇದರ ಜತೆಗೆ ಶಿಕ್ಷೆಯೂ ಇರುತ್ತದೆ. ಮಾರಾಟ ಮಾಡೋರಿಗಂತೂ ಉಗ್ರ ಶಿಕ್ಷೆಯೇ ಕಾದಿದೆ.


ಇಟಲಿಯ ವೆನ್ನಿಸ್‌ನಲ್ಲಿ ಕಬಾಬ್ ಬ್ಯಾನ್:


ನಾನ್ ವೆಜ್ ಪ್ರಿಯರಿಗೆ ಎಲ್ಲಿ ಬೇಕಾದ್ರೂ ಕಬಾಬ್ ಸಿಗುತ್ತೆ ಅಂದ್ಕೊಂಡ್ರೆ ತಪ್ಪು. ಯಾಕಂದ್ರೆ, ಇಟಲಿಯ ವೆನ್ನಿಸ್‌ನಲ್ಲಿ 2017ರಿಂದ ಎಲ್ಲ ರೀತಿಯ ಕಬಾಬ್‌ಗೆ ನಿಷೇಧ ವಿಧಿಸಲಾಗಿದೆ. ನಗರದ ಸಂಸ್ಕೃತಿಯ ಕಾರಣಕ್ಕಾಗಿ ಕಬಾಬ್‌ಗೆ ನಿರ್ಬಂಧವನ್ನ ಮೇಯರ್ ವಿಧಿಸಿದ್ದಾರೆ. ಸ್ಥಳೀಯ ವಸ್ತುಗಳನ್ನ ಪ್ರವಾಸಿಗರು ಖರೀದಿಸಬೇಕು. ಸ್ಥಳೀಯ ರುಚಿಯನ್ನೇ ಆಹ್ಲಾದಿಸಬೇಕು.


ಇದು ಹೇರಿಕೆ ಅಂತ ಅನಿಸಿದ್ರೂ, ನಮ್ಮ ದೇಶಿಯತನ ಉಳಿಸಿಕೊಳ್ಳಲು ಅವಶ್ಯಕತೆ ಇದೆ ಅಂತ ಈ ಅದೇಶ ಹೊರಡಿಸಿದ್ದಾರೆ. ಹೀಗಾಗಿ, ಇಟಲಿಯ ವೆನ್ನಿಸ್‌ನಲ್ಲಿ ನೀವೇನಾದ್ರೂ ಟೂರ್ ಹೋದ್ರೆ, ಅಲ್ಲಿ ಕಬಾಬ್ ಅಂತ ಹುಡುಕೋದಕ್ಕೆ ಹೋಗ್ಬೇಡಿ.


ಹೆಬ್ಬಸಿಗೆ ಸಿಂಗಾಪುರ, ಜಪಾನ್, ಥೈಲ್ಯಾಂಡ್‌ನಲ್ಲಿ ಜಾಗವಿಲ್ಲ;


ಹಲಸಿನಂತೆ ಕಾಣುವ ಹಣ್ಣು ಇದು.. ಹೆಬ್ಬಲಸು ಅಂತ ಕರೆಯುವ ಈ ಹಣ್ಣಿಗೆ ದ್ಯುರೆನ್ ಅನ್ನೋ ಹೆಸರಿದೆ. ಹಲಸು ಅಂತ ಅಪ್ಪಿತಪ್ಪಿ ಇದನ್ನ ನೀವು ಬಾಯಿಗೆ ಇಟ್ರೆ, ಮೂರು ದಿನ ಬಾಯಿ ತೊಳೆದರೂ ಅದರ ವಾಸನೆ ಹೋಗಲ್ಲ. ಯಾಕಂದ್ರೆ, ಅಷ್ಟರ ಮಟ್ಟಿಗೆ ದುರ್ಗಂಧ ಬೀರುವ ಹಣ್ಣಿದು. ಅತ್ಯಂತ ಪೌಷ್ಟಿಕಾಂಶ ಹೊಂದಿದ್ರೂ ದ್ಯುರೆನ್ ಹಣ್ಣು, ತನ್ನ ದುರ್ಗಂಧದಿಂದ ಕುಖ್ಯಾತಿ ಪಡೆದಿದೆ.


ಇದನ್ನೂ ಓದಿ: ವೀಕೆಂಡ್‌ ಮಸ್ತಿಗೆ ಬೆಂಗಳೂರಿಗೆ ಹತ್ತಿರವಿರುವ 5 ಫೇಮಸ್‌ ಹಿಲ್‌ ಸ್ಟೇಷನ್‌ಗಳಿವು


ಹೀಗಾಗಿ, ಸಿಂಗಾಪುರ, ಥೈಲ್ಯಾಂಡ್, ಜಪಾನ್, ಹಾಂಗ್‌ಕಾಂಗ್ ದೇಶಗಳಲ್ಲಿ ಈ ಹಣ್ಣಿಗೆ ನಿರ್ಬಂಧ ವಿಧಿಸಲಾಗಿದೆ. ಇಲ್ಲಿ ವ್ಯಾಪಾರ ವಹಿವಾಟು ಮಾತ್ರವಲ್ಲ, ಸಾರ್ವಜನಿಕ ಸಾರಿಗೆಯಿಂದಲ್ಲೂ ಇದನ್ನ ತೆಗೆದು ಹಾಕಲಾಗಿದೆ.


ಗಸಗಸೆ ಬೀಜಕ್ಕೂ ಈ ದೇಶಗಳಲ್ಲಿ ಪ್ರವೇಶವಿಲ್ಲ:


ನಮ್ಮ ದೇಶದಲ್ಲಿ ಸಿಹಿ ಪದಾರ್ಥಗಳಿಗೆ, ಪಾಯಸ, ಕೀರಿಗೆ ಗಸಗಸೆ ಬೀಜವನ್ನ ಹಾಕೇ ಹಾಕ್ತೀವಿ. ಆದರೆ, ಯುಎಇ, ತೈವಾನ್, ಸಿಂಗಾಪುರ ಸೇರಿದಂತೆ ಕೆಲ ದೇಶಗಳಲ್ಲಿ ಗಸಗಸೆ ಬೀಜಕ್ಕೆ ನಿರ್ಬಂಧ ವಿಧಿಸಲಾಗಿದೆ. ಯಾಕಂದ್ರೆ, ಈ ಗಸಗಸೆ ಬೀಜವನ್ನ ಮಾದಕವಸ್ತುಗಳ ಪಟ್ಟಿಗೆ ಸೇರಿಸಿದ್ದಾರೆ. ಇದ್ರಲ್ಲಿ ಮಾದಕದ ಅಂಶವಿದೆ. ಹೀಗಾಗಿ ಗಸಗಸೆ ಬೀಜಕ್ಕೆ ನಿಷೇಧ ಹೇರಲಾಗಿದೆ.


ಸೌದಿ ಅರೆಬೀಯಾದಲ್ಲಿ ಸಂಸ್ಕೃತಿ ಮತ್ತು ಮಾದಕ ಸೇವನೆ ತಡೆಯುವ ನಿಟ್ಟಿನಲ್ಲಿ ಗಸಗಸೆ ಬೀಜಕ್ಕೆ ನಿಷೇಧ ಹೇರಲಾಗಿದೆ. ಇನ್ನು ರಷ್ಯಾದಲ್ಲಿ ಗಸಗಸೆ ಮೇಲೆ ಕೆಲವೊಂದು ಕಟ್ಟುಪಾಡುಗಳನ್ನ ವಿಧಿಸಲಾಗಿದೆ.


ಅಮೆರಿಕದಲ್ಲಿ ಕುದುರೆ ಮಾಂಸ ನಿಷೇಧ:


ಭಾರತದಲ್ಲಿ ಹಸುಗಳನ್ನು ಹೇಗೆ ನೋಡ್ತಾರೋ, ಹಾಗೇ, ಅಮೆರಿಕದಲ್ಲಿ ಕುದುರೆಗಳ ಮೇಲೆ ಜನರಿಗೆ ಪ್ರೀತಿ ಜಾಸ್ತಿ. ಹೀಗಾಗಿ ಅಲ್ಲಿ ಕುದುರೆಗಳ ವಧೆಗೆ ನಿಷೇಧ ಹೇರಲಾಗಿದೆ.


2007 ರಿಂದಲೂ ಕುದುರೆ ಮಾಂಸಕ್ಕೆ ಅಮೆರಿಕದಲ್ಲಿ ನಿರ್ಬಂಧವಿದೆ. ನ್ಯೂಯಾರ್ಕ್, ನ್ಯೂ ಜೆರ್ಸಿ, ಪ್ಲೋರಿಡಾ, ಒಕ್ಲಾಮಾ ಸೇರಿದಂತೆ ಅನೇಕ ರಾಜ್ಯಗಳು ಕುದುರೆಗಳ ಮಾಂಸದ ಮಾರಾಟ ಮತ್ತು ಖರೀದಿಯ ಮೇಲೆ ನಿರ್ಬಂಧ ವಿಧಿಸಿವೆ.. ಶಿಕ್ಷೆ ಪ್ರಮಾಣ ಒಂದು ರಾಜ್ಯಕ್ಕೆ ಒಂದೊಂದು ರೀತಿ ಇದೆ.


ಕುದುರೆಗಳ ರಕ್ಷಣೆಗಾಗಿಯೇ ಅಮೆರಿಕದಲ್ಲಿ ಅನೇಕ ಕ್ರಮಗಳನ್ನ ಕೈಗೊಳ್ಳಲಾಗಿದೆ. ಕುದುರೆಗಳನ್ನ ಅಲ್ಲಿನ ಜನರು ನಮ್ಮ ದೇಶದಲ್ಲಿ ಪುಣ್ಯಕೋಟಿಗಳನ್ನ ನೋಡುವ ರೀತಿಯಲ್ಲಿ ನೋಡುತ್ತಾರೆ.


ಪ್ರತಿ ಕುಟುಂಬಸ್ಥರು ಕೂಡ ಕುದುರೆಗಳ ಜೊತೆ ಒಂದಿಲ್ಲೊಂದು ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಹೀಗಾಗಿ, ಕುದುರೆಗಳ ಮಾಂಸ ಸೇವನೆಯಲ್ಲಿ ಅಲ್ಲಿನ ಜನರ ಮೌಲ್ಯ, ನಂಬಿಕೆ, ಪ್ರೀತಿಯ ಮೇಲೆ ಪೆಟ್ಟು ಬೀಳುವಂತದ್ದು. ಹೀಗಾಗಿ ಕುದುರೆ ಮಾಂಸಕ್ಕೆ ಅಮೆರಿಕದಲ್ಲಿ ನಿರ್ಬಂಧ ವಿಧಿಸಲಾಗಿದೆ.


ಭಾರತದಲ್ಲಿ ಫ್ರೆಂಜ್‌ನ ಫ್ರೂಯ್ ಗ್ರಾಸ್ ಬ್ಯಾನ್:


ಫ್ರೆಂಚ್‌ನಲ್ಲಿ ಅತ್ಯಂತ ಸುಪ್ರಸಿದ್ಧ ಮತ್ತು ದುಬಾರಿಯಾದ ಫುಡ್ ಅಂದ್ರೆ ಪ್ರೂಯ್ ಗ್ರಾಸ್. ಈ ಆಹಾರದ ತಯಾರಿಕೆಯಲ್ಲಿ ಬಾತುಕೋಳಿಯ ಲಿವರ್ ಬಳಸಲಾಗುತ್ತೆ. ಹೀಗಾಗಿ ಈ ಫುಡ್‌ಗೆ ಭಾರತವೂ ಸೇರಿದಂತೆ ಅನೇಕ ದೇಶಗಳು ಬ್ಯಾನ್ ಮಾಡಿವೆ.


ಇದನ್ನೂ ಓದಿ: ಪುಟ್ಟ ಅಕ್ಕ-ತಮ್ಮ ಮ್ಯಾಜಿಕ್​ ಮಾಡಲು ಹೋಗಿ ಏನಾಯ್ತು ಗೊತ್ತಾ? ಸಖತ್​ ಕ್ಯೂಟ್​ ಆಗಿದೆ ವಿಡಿಯೋ!


ಅರ್ಜೆಂಟೀನಾ, ಆಸ್ಟ್ರೇಲಿಯಾ ಸೇರಿದಂತೆ ಅನೇಕ ಯುರೋಪ್ ರಾಷ್ಟ್ರಗಳು ಪ್ರೊಯ್ ಗ್ರಾಸ್ ಆಹಾರದ ತಯಾರಿಕೆಯನ್ನ ನಿರ್ಬಂಧಿಸಿವೆ. ಪ್ರಾಣಿ ಹಕ್ಕು ಹೋರಾಟಗಾರರ ಆಗ್ರಹದಿಂದಾಗಿ ಈ ಆಹಾರಕ್ಕೆ ನಿಷೇಧ ಹೇರಲಾಗಿದೆ.


ಮೀಡಿಯಂ ಬರ್ಗರ್‌ಗೆ ನ್ಯೂಜಿಲೆಂಡ್‌ನಲ್ಲಿ ನಿಷೇಧ:


2017ರಲ್ಲಿ ನ್ಯೂಜಿಲೆಂಡ್‌ನಲ್ಲಿ ಮಧ್ಯಮ ಗಾತ್ರದ ಬರ್ಗರ್‌ಗೆ ನಿಷೇಧ ಹೇರಲಾಯ್ತು. ಇದಕ್ಕೆ ಕಾರಣ ಏನಂದ್ರೆ, ಯಾವುದೇ ರೀತಿಯ ಮಾಂಸವನ್ನ ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಬೇಕು.


ಇಲ್ಲದಿದ್ರೆ, ಅದು ದೇಹಕ್ಕೆ ಮಾರಕವಾಗುತ್ತದೆ. ಹೀಗಾಗೆ, ಅರೆಬೆಂದ ಮಾಂಸ ದೇಹಕ್ಕೆ ಆರೋಗ್ಯಕರವಲ್ಲ ಅಂತ ಸರ್ಕಾರ ಈ ಕ್ರಮವನ್ನ ತೆಗೆದುಕೊಳ್ತು.ಆದರೆ ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ರು. ರೆಸ್ಟೋರೆಂಟ್ ಮತ್ತು ಹೋಟೆಲ್ ಉದ್ಯಮದವರು ಬೇಸರ ವ್ಯಕ್ತಪಡಿಸಿದ್ರು.


ಹಸುವಿನ ಹಾಲಿಗೂ ನಿರ್ಬಂಧ!!!


ನಮ್ಮ ದೇಶದಲ್ಲಿ ದಿನ ಶುರುವಾಗೋದೇ ಹಾಲಿನಿಂದ2. ಹಾಲಿಲ್ಲದೇ ಏನೊಂದು ನಡೆಯೋದಿಲ್ಲ. ಆದ್ರೆ, ಹಾಲನ್ನ ಕಾಯಿಸಿ ಕುಡಿಯಬೇಕು. ಹಸುವಿನಿಂದ ನೇರವಾಗಿ ಪಡೆದ ಹಸಿ ಹಾಲು ಸೇವನೆ ಒಳ್ಳೆಯದಲ್ಲ ಅಂತ ಇಲ್ಲಿ ಕೆಲವೊಂದು ದೇಶಗಳು ಹೇಳ್ತಿವೆ.


ಕಚ್ಚಾ ಹಾಲಿಗೆ ನಿಷೇಧವನ್ನೇ ವಿಧಿಸಿವೆ. ಕೆನಡಾ, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ಕೆಲ ರಾಜ್ಯಗಳಲ್ಲಿ ಹಸಿಹಾಲಿಗೆ ನಿರ್ಬಂಧ ವಿಧಿಸಲಾಗಿದೆ. ಕಾರಣ ಏನಂದ್ರೆ, ಹಸುವಿನಿಂದ ಪಡೆದ ಹಾಲನ್ನು ನೇರವಾಗಿ ಜನರು ಸೇವಿಸೋದ್ರಿಂದ, ರೋಗಗ್ರಸ್ಥ ಹಸುವಿನಿಂದ ಇರುವ ಅನೇಕ ಕೀಟಾಣುಗಳು ಮನುಷ್ಯರನ್ನ ಸೇರುತ್ತವೆ. ಬ್ರುಸೆಲ್ಲಾಸ್, ಸಾಲ್ಮೊನೆಲೊಸಿಸ್ ಸೇರಿದಂತೆ ಫುಡ್‌ಪಾಯಿಸನ್ ಆಗುತ್ತದೆ. ಹೀಗಾಗಿ ಹಸುವಿನಿಂದ ನೇರವಾಗಿ ಹಸಿಹಾಲು ಸೇವಿಸಬಾರದು ಅಂತ ನಿಷೇಧ ಹೇರಲಾಗಿದೆ.


top videos



    ಏನೇ ಹೇಳಿ, ಎಲ್ಲಿ ಏನ್ ಬೇಕಾದ್ರೂ ತಿನ್ನುವ ಸ್ವಾತಂತ್ರ್ಯವಿದೆ ಅಂತ ನೀವೇನಾದ್ರೂ ಅಂದ್ಕೊಂಡ್ರೆ ಅದು ತಪ್ಪು ಯಾಕಂದ್ರೆ, ಪ್ರತಿಯೊಂದು ದೇಶಗಳು ಕೂಡ ತಮ್ಮದೇ ಆದಂತಹ ಕಟ್ಟುಪಾಡು ಹೊಂದಿವೆ. ಆಯಾ ಭಾಗದ ಸಂಸ್ಕೃತಿಗೆ, ಆಚರಣೆಗೆ, ಹವಾಮಾನಕ್ಕೆ ತಕ್ಕಂತ ಆಹಾರ ಪದ್ಧತಿಗಳನ್ನ ಅನುಸರಿಸುತ್ತಿರುತ್ತಾರೆ. ಹೀಗಾಗಿ, ಎಲ್ಲಿ ಹೋದ್ರೂ ನಾವು ಮೊದಲು ಆಯಾ ಆಹಾರ ಪದ್ಧತಿಗೆ ಗೌರವ ನೀಡಬೇಕು.. ಸಾಧ್ಯವಾದಷ್ಟು ಅಲ್ಲಿನ ರುಚಿಗಳನ್ನ ನೋಡಬೇಕು.

    First published: