• Home
  • »
  • News
  • »
  • trend
  • »
  • Viral News: 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಲ್ಲಿದ್ದವು 8 ಭ್ರೂಣಗಳು! ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಸುದ್ದಿ

Viral News: 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಲ್ಲಿದ್ದವು 8 ಭ್ರೂಣಗಳು! ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದು ಆಗ ತಾನೇ ಹುಟ್ಟಿ 21 ದಿನ ಆಗಿರುವ ನವಜಾತ ಶಿಶು (newborn baby). ಆದರೆ ಅದರ ಹೊಟ್ಟೆಯಲ್ಲಿ ಈಗ ಭ್ರೂಣಗಳು ಪತ್ತೆಯಾಗಿವೆ. ಅದೂ ಒಂದಲ್ಲ, ಬರೋಬ್ಬರಿ 8 ಭ್ರೂಣಗಳು (Fetuses) ಪತ್ತೆಯಾಗಿವೆ!

  • News18 Kannada
  • Last Updated :
  • Ranchi, India
  • Share this:

ರಾಂಚಿ, ಜಾರ್ಖಂಡ್: ಇದು ನಿಜಕ್ಕೂ ಅಚ್ಚರಿ ಹಾಗೂ ಆಘಾತವಾಗುವ ಸುದ್ದಿ (surprising and shocking news). ಜಗತ್ತಿನಲ್ಲಿ ಹೀಗೂ ನಡೆಯುತ್ತದೆಯಾ ಎಂದು ನೀವು ಪ್ರಶ್ನಿಸಬಹುದು. ಆದರೆ ವೈದ್ಯಕೀಯ ಲೋಕದಲ್ಲಿ (medical world) ಇದಕ್ಕೆ ಉತ್ತರ ಇದೆ. ಇದು ಆಗ ತಾನೇ ಹುಟ್ಟಿ 21 ದಿನ ಆಗಿರುವ ನವಜಾತ ಶಿಶು (newborn baby). ಆದರೆ ಅದರ ಹೊಟ್ಟೆಯಲ್ಲಿ (Stomach) ಈಗ ಭ್ರೂಣಗಳು ಪತ್ತೆಯಾಗಿವೆ. ಅದೂ ಒಂದಲ್ಲ, ಬರೋಬ್ಬರಿ 8 ಭ್ರೂಣಗಳು (Fetuses) ಪತ್ತೆಯಾಗಿವೆ! ಜಗತ್ತಿನ ಅತೀ ವಿರಳ ಪ್ರಕರಣ ಇದು ಅಂತ ವೈದ್ಯರು (Doctors) ವಿಶ್ಲೇಷಿಸಿದ್ದು, ಇದೀಗ ಆ ಎಂಟೂ ಭ್ರೂಣಗಳನ್ನು ಪುಟ್ಟ ಕಂದಮ್ಮನ ಹೊಟ್ಟೆಯಿಂದ ಹೊರಕ್ಕೆ ತೆಗೆದಿದ್ದಾರೆ. ಇದೀಗ ಪುಟ್ಟ ಮಗು ಎಂದಿನಂತೆ ಆರೋಗ್ಯವಾಗಿದೆ.  


21 ದಿನಗಳ ಶಿಶುವಿನ ಹೊಟ್ಟೆಯಲ್ಲಿ 8 ಭ್ರೂಣಗಳು!
ಅಪರೂಪದ ಪ್ರಕರಣವೊಂದರಲ್ಲಿ ಜಾರ್ಖಂಡ್‌ ರಾಜ್ಯದ ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ 21 ದಿನದ ಮಗುವಿನ ಹೊಟ್ಟೆಯಲ್ಲಿ ಎಂಟು ಭ್ರೂಣಗಳು ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಭ್ರೂಣಗಳ ಗಾತ್ರವು ಮೂರು ಸೆಂಟಿಮೀಟರ್‌ಗಳಿಂದ ಐದು ಸೆಂಟಿಮೀಟರ್‌ಗಳವರೆಗೆ ಇತ್ತು. ಅವುಗಳು ಶಿಶುವಿನ ಹೊಟ್ಟೆಯಲ್ಲಿನ ಚೀಲದೊಳಗೆ ನೆಲೆಗೊಂಡಿತ್ತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ ಎಂ.ಡಿ. ಇಮ್ರಾನ್ ಪಿಟಿಐಗೆ ತಿಳಿಸಿದ್ದಾರೆ.


ಮಗುವಿನ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದುಕೊಂಡ ವೈದ್ಯರು


ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ಟೋಬರ್ 10 ರಂದು ಮಗು ಜನಿಸಿತ್ತು. ಮಗು ಹೊಟ್ಟೆ ನೋವಿನ ಲಕ್ಷಣಗಳನ್ನು ತೋರಿಸುತ್ತಿತ್ತು. ಆಸ್ಪತ್ರೆಯ ವೈದ್ಯರು ಹೊಟ್ಟೆಯಲ್ಲಿ ಗಡ್ಡೆಯನ್ನು ಕಂಡುಹಿಡಿದಿದ್ದಾರೆ ಮತ್ತು ಹೊಟ್ಟೆಯಲ್ಲಿ ತೊಂದರೆ ಉಂಟಾಗಬಹುದು ಎಂದು ತಕ್ಷಣ ಆಪರೇಷನ್ ಮಾಡಲು ಪೋಷಕರಿಗೆ ಸೂಚಿಸಿದ್ದಾರೆ.


ಇದನ್ನೂ ಓದಿ: Viral News: ತನಗೆ ಕಚ್ಚಿದ ಹಾವನ್ನೇ ಹಿಡಿದು ಕಚ್ಚಿದ ಬಾಲಕ! ಹುಡುಗ ಸೇಫ್, ಉರಗ ಖಲಾಸ್!


ಆಪರೇಷನ್‌ ವೇಳೆ ಪತ್ತೆಯಾಯ್ತು 8 ಭ್ರೂಣಗಳು!


"ಮಗುವಿಗೆ 21 ದಿನ ತುಂಬಿದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಆರಂಭಿಕ ರೋಗನಿರ್ಣಯದಲ್ಲಿ, ಚೀಲ ಅಥವಾ ಗೆಡ್ಡೆಯಂತಹ ವಸ್ತು ಕಂಡುಬಂದಿದೆ. ಇದು ಡಯಾಫ್ರಾಮ್ನ ಕೆಳಗೆ ಇದೆ. ನಾವು ಅದನ್ನು ಆಪರೇಷನ್ ಮೂಲಕ ತೆಗೆದುಹಾಕಲು ನಿರ್ಧರಿಸಿದ್ದೇವು. ನವೆಂಬರ್ 1 ರಂದು ಪುಟ್ಟ ಮಗುವಿಗೆ ಆಪರೇಷನ್ ನಡೆಸಲಾಯಿತು. ನಂತರ, ನಾವು ಭಾಗದೊಳಗೆ ಒಂದರ ನಂತರ ಒಂದರಂತೆ ಎಂಟು ಭ್ರೂಣಗಳನ್ನು ಪತ್ತೆಹಚ್ಚಿದ್ದೇವೆ” ಎಂದು ವೈದ್ಯರು ಹೇಳಿದ್ದಾರೆ.


ಏನಿದು ಮಗುವಿನ ಹೊಟ್ಟೆಯಲ್ಲಿನ ಭ್ರೂಣಗಳು?


ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಫೆಟಸ್-ಇನ್-ಫೀಟು (ಎಫ್‌ಐಎಫ್) ಎಂದು ಕರೆಯಲಾಗುತ್ತದೆ, ಇದು ಅಪರೂಪದ ಘಟಕವಾಗಿದ್ದು, ಅದರಲ್ಲಿ ಒಂದು ದೋಷಪೂರಿತ ಕಶೇರುಕ ಭ್ರೂಣವು ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಿದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ಜರ್ನಲ್ ಹೇಳಿದೆ.


ಇದು ಅಪರೂಪದಲ್ಲೇ ಅಪರೂಪದ ಪ್ರಕರಣ


"ಇದುವರೆಗೆ ಲಭ್ಯವಿರುವ ಪೇಪರ್‌ಗಳು ಮತ್ತು ಜರ್ನಲ್‌ಗಳ ಪ್ರಕಾರ, ಹೆಚ್ಚಿನ ಎಫ್‌ಐಎಫ್ ಪ್ರಕರಣಗಳಲ್ಲಿ ಒಂದು ಭ್ರೂಣವು ವರದಿಯಾಗಿದೆ. ಎಂಟು ಭ್ರೂಣಗಳ ಪ್ರಕರಣವು ಎಲ್ಲಿಯೂ ವರದಿಯಾಗಿಲ್ಲ" ಎಂದು ಡಾ ಇಮ್ರಾನ್ ಹೇಳಿದ್ದಾರೆ. ಎಫ್ಐಎಫ್ ಬಹಳ ಅಪರೂಪ ಮತ್ತು ಇದು ಐದು ಲಕ್ಷ ಜೀವಂತ ಜನನಗಳಲ್ಲಿ ಒಂದರಲ್ಲಿ ಸಂಭವಿಸುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Viral Video: ಪುಟ್ಟ ಮಗು ಶವವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ! ಸರ್ಕಾರಿ ಆಸ್ಪತ್ರೆಯಲ್ಲೂ ಬಡಜನರಿಗಿಲ್ಲ ಸವಲತ್ತು!


ಸದ್ಯ ಆರೋಗ್ಯದಿಂದ ಇರುವ ಕಂದಮ್ಮ


ಆಪರೇಷನ್ ಯಶಸ್ವಿಯಾಗಿದ್ದು, ಸದ್ಯ ಮಗುವಿನ ಸ್ಥಿತಿ ಸಹಜವಾಗಿದೆ. ಮಗುವನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಒಂದು ವಾರದಲ್ಲಿ ಮಗುವನ್ನು ಬಿಡುಗಡೆ ಮಾಡಲಾಗುವುದು ಎಂದು ರಾಂಚಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Published by:Annappa Achari
First published: