• Home
  • »
  • News
  • »
  • trend
  • »
  • Mummies in Peru: ಪೆರುವಿನಲ್ಲಿ 8 ಶತಮಾನಗಳ ಹಿಂದಿನ ಮಮ್ಮಿಗಳು ಪತ್ತೆ! ಈ ಬಗ್ಗೆ ತಜ್ಞರು ಹೇಳುವುದೇನು?

Mummies in Peru: ಪೆರುವಿನಲ್ಲಿ 8 ಶತಮಾನಗಳ ಹಿಂದಿನ ಮಮ್ಮಿಗಳು ಪತ್ತೆ! ಈ ಬಗ್ಗೆ ತಜ್ಞರು ಹೇಳುವುದೇನು?

ಪೆರುವಿನಲ್ಲಿ ಮಮ್ಮಿಗಳು ಪತ್ತೆ

ಪೆರುವಿನಲ್ಲಿ ಮಮ್ಮಿಗಳು ಪತ್ತೆ

ಪೆರುವಿನ ರಾಜಧಾನಿ ಲಿಮಾದಲ್ಲಿ ಪುರಾತತ್ವಶಾಸ್ತ್ರಜ್ಞರು ದೇಶದ ಎಂಟು ಶತಮಾನಗಳಷ್ಟು ಹಳೆಯದಾದ ಮಮ್ಮಿಗಳನ್ನು ಪತ್ತೆಹಚ್ಚಿದ್ದಾರೆ. ಈ ಮಮ್ಮಿಗಳು ವಸಾಹತುಶಾಹಿ ಯುಗದ ಸ್ಮಶಾನವನ್ನು ಸೂಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

  • Share this:

ಮಮ್ಮಿಗಳ (Mummies) ನಾಡು ಈಜಿಪ್ಟ್‌ (Egypt) ಬಗ್ಗೆ ನಮಗೆಲ್ಲಾ ಗೊತ್ತೇ ಇದೆ, ಅಲ್ಲಿ ನಮಗೆ ಬಗೆದಷ್ಟೂ ಪುರಾತನ ಮಮ್ಮಿಗಳು ಸಿಗುತ್ತವೆ. ಸದ್ಯ ಇತ್ತೀಚಿನ ಸಂಶೋಧನೆಯಲ್ಲಿ ಪೆರುವಿನಲ್ಲಿ (Peru) ಈ ಮಮ್ಮಿಗಳು ಪತ್ತೆಯಾಗಿವೆ. ಪೆರುವಿನಲ್ಲಿ ಮಮ್ಮಿಗಳು ಪತ್ತೆಯಾಗಿದ್ದು ಇದೇ ಮೊದಲಲ್ಲ ಹಲವು ಬಾರಿ ಪುರಾತತ್ವಶಾಸ್ತ್ರಜ್ಞರು (Archaeologists) ಇವುಗಳನ್ನು ಪತ್ತೆ ಹಚ್ಚಿದ್ದಾರೆ. ಪೆರುವಿನಲ್ಲಿನ ಪುರಾತತ್ವಶಾಸ್ತ್ರಜ್ಞರು ದೇಶದ ರಾಜಧಾನಿ ಲಿಮಾದಲ್ಲಿ(Lima) ಎಂಟು ಶತಮಾನಗಳಷ್ಟು ಹಳೆಯದಾದ ಮಮ್ಮಿಗಳನ್ನು ಪತ್ತೆಹಚ್ಚಿದ್ದಾರೆ. ಈ ಮಮ್ಮಿಗಳು ವಸಾಹತುಶಾಹಿ ಯುಗದ ಸ್ಮಶಾನವನ್ನು ಸೂಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಪುರಾತತ್ವಶಾಸ್ತ್ರಜ್ಞರು ಮಧ್ಯ ಪೆರುವಿನ ಕರಾವಳಿಯಲ್ಲಿರುವ ಲಿಮಾ ಪಾರ್ಕ್ ಆಫ್ ಲೆಜೆಂಡ್ಸ್‌ನಲ್ಲಿ ಉತ್ಖನನ ಮಾಡುವಾಗ ಮಕ್ಕಳ (Children) ಅವಶೇಷಗಳನ್ನು ಒಳಗೊಂಡಂತೆ ಮಮ್ಮಿಗಳು ಪತ್ತೆಯಾಗಿದ್ದವು. ಪ್ರಸ್ತುತ ಹೆಚ್ಚಿನ ಅಧ್ಯಯನಕ್ಕಾಗಿ ಸ್ಥಳದಲ್ಲಿ ಪತ್ತೆಯಾದ ಎಲ್ಲಾ ಮಮ್ಮಿಗಳನ್ನು ಸ್ವಚ್ಛಗೊಳಿಸಿ ಇರಿಸಲಾಗಿದೆ.


ಲಿಮಾ ಪಾರ್ಕ್ ಆಫ್ ಲೆಜೆಂಡ್ಸ್‌ನಲ್ಲಿ ಈ ಹಿಂದೆಯೂ ಮಮ್ಮಿಗಳು ಪತ್ತೆ
ಲಿಮಾ ಪಾರ್ಕ್ ಆಫ್ ಲೆಜೆಂಡ್ಸ್‌ನಲ್ಲಿ ಮಮ್ಮಿಗಳು ಪತ್ತೆಯಾಗಿರುವುದು ಇದೇ ಮೊದಲಲ್ಲ, ಆಗಸ್ಟ್‌ನಲ್ಲೂ ಸಹ ಮಮ್ಮಿಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಬಗ್ಗೆ ಮಾತನಾಡಿದ ಪಾರ್ಕ್ ಅಧಿಕಾರಿ ಲುಸೆನಿಡಾ ಕ್ಯಾರಿಯನ್, ಇತ್ತೀಚಿನ ಸಂಶೋಧನೆಯಲ್ಲೂ ಸಹ ಮೂರು ಮಮ್ಮಿಗಳು ಪತ್ತೆಯಾಗಿದ್ದವು. ಪತ್ತೆಯಾದ ಮಮ್ಮಿಗಳಲ್ಲಿ ಒಂದು ಮರದ ಶಿಲುಬೆಯನ್ನು ಹಿಡಿದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ತಿಳಿಸಿದರು.


"ಈ ಸಂಶೋಧನೆಯು ವಸಾಹತುಶಾಹಿ ಕಾಲದಲ್ಲಿ, ಕ್ರಿಶ್ಚಿಯನ್ ಧರ್ಮ ಅಥವಾ ಕ್ಯಾಥೊಲಿಕ್ ಧರ್ಮಕ್ಕೆ ಪರಿವರ್ತನೆಯ ಸಮಯದಲ್ಲಿ ಸ್ಮಶಾನವಾಗಿರಬಹುದು ಎಂಬ ನಮ್ಮ ಊಹೆಯನ್ನು ಬೆಂಬಲಿಸುತ್ತದೆ" ಎಂದು ಅವರು ಹೇಳಿದರು.


ಮ್ಯಾನುಯೆಲ್ ಮೊರೊನ್ ಎಂಬುವವರು ಪತ್ತೆಯಾದ ಮಮ್ಮಿಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದರು."ಮಮ್ಮಿಗಳು ಅಸಾಮಾನ್ಯ ಸ್ಥಾನಗಳಲ್ಲಿ ಕಂಡುಬಂದಿವೆ ಮತ್ತು ಸ್ಪ್ಯಾನಿಷ್ ವಸಾಹತುಶಾಹಿಗಳ ಪ್ರಭಾವವನ್ನು ಸೂಚಿಸುತ್ತವೆ" ಎಂದರು.


ಈ ಹಿಂದೆ ಪತ್ತೆಯಾದ ಮಮ್ಮಿಗಳು
ಪೆರು ದೇಶದ ಪುರಾತತ್ತ್ವಶಾಸ್ತ್ರಜ್ಞರು ಈ ವರ್ಷದ ಪೆಬ್ರುವರಿಯಲ್ಲೂ 800-1,200 ವರ್ಷಗಳಷ್ಟು ಹಳೆಯದಾದ ಒಟ್ಟು 20 ಮಮ್ಮಿಗಳನ್ನು ಪತ್ತೆ ಮಾಡಿದ್ದು, ಈ ಪೈಕಿ 12 ವಯಸ್ಕರು ಮತ್ತು 8 ಮಕ್ಕಳ ಮಮ್ಮಿಗಳಿವೆ ಎಂದು ಹೇಳಲಾಗಿತ್ತು. ಲಿಮಾದ ಪೂರ್ವ-ಇಂಕಾನ್ ಕಾಜಮಾರ್ಕ್ವಿಲ್ಲಾ ಸಂಕೀರ್ಣ ಪ್ರದೇಶದಲ್ಲಿ ಈ ಮಮ್ಮಿಗಳು ದೊರೆತಿದ್ದು, ಮೌಢ್ಯ ಆಚರಣೆಯ ಭಾಗವಾಗಿ 12 ವಯಸ್ಕರು ಮತ್ತು 8 ಮಕ್ಕಳನ್ನು ಬಲಿ ನೀಡಿರಬಹುದು ಎಂದು ಪುರಾತತ್ವಶಾಸ್ತ್ರಜ್ಞರು ಶಂಕಿಸಿದ್ದಾರೆ.


ಇದನ್ನೂ ಓದಿ:  Moon: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?


ಕಳೆದ ನವೆಂಬರ್‌ನಲ್ಲಿ ಪೆರುವಿನ ಸ್ಯಾನ್ ಮಾರ್ಕೋಸ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ನಡೆಸುತ್ತಿದ್ದ ಉತ್ಖನನ ಕಾರ್ಯದಲ್ಲಿ, ಹುದುಗಿ ಹೋಗಿದ್ದ ಈ 20 ಮಮ್ಮಿಗಳು ಪತ್ತೆಯಾಗಿದ್ದವು. ಈ ಬಗ್ಗೆ ಪುರಾತತ್ತ್ವಶಾಸ್ತ್ರಜ್ಞ ಪೀಟರ್ ವ್ಯಾನ್ ಡೇಲೆನ್, ಪ್ರಾಚೀನ ಕಾಲದ ಹಿಸ್ಪಾನಿಕ್ ಆಚರಣೆಯ ಭಾಗವಾಗಿ ಈ 12 ವಯಸ್ಕರು ಮತ್ತು 8 ಮಕ್ಕಳನ್ನು ಬಲಿ ಕೊಡಲಾಗಿತ್ತು ಎಂದು ಹೇಳಿದ್ದರು. ಅಲ್ಲದೇ ಈ ಮಮ್ಮಿಗಳು 800-1,200 ವರ್ಷಗಳಷ್ಟು ಹಳೆಯವು ಎಂದು ಡೇಲೆನ್ ಸ್ಪಷ್ಟಪಡಿಸಿದ್ದರು.


ಪೆರುವಿನ ಇಂಕಾ ಸಾಮ್ರಾಜ್ಯದ ಸ್ಪೇನ್‌ನ ರಕ್ತಸಿಕ್ತ ವಿಜಯವು 1532 ರಲ್ಲಿ ಪ್ರಾರಂಭವಾಯಿತು ಮತ್ತು ನಾಲ್ಕು ದಶಕಗಳ ಕಾಲ ಯುದ್ಧ ನಡೆಯಿತು. ಈ ಸ್ಥಳವನ್ನು ಇಂಕಾಗಳಿಗಿಂತ ಮೊದಲು ಲಿಮಾ ಮತ್ತು ಯ್ಚ್ಸ್ಮಾ (Ychsma) ಜನರು ಆಕ್ರಮಿಸಿಕೊಂಡಿದ್ದರು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇಂಕಾ ಸಾಮ್ರಾಜ್ಯದ ಮೊದಲು ಮತ್ತು ನಂತರ ಅಭಿವೃದ್ಧಿ ಹೊಂದಿದ ಸಂಸ್ಕೃತಿಗಳಿಂದ ನೂರಾರು ಪುರಾತತ್ತ್ವ ಶಾಸ್ತ್ರದ ತಾಣಗಳಿಗೆ ಪೆರು ಹೆಸರುವಾಸಿಯಾಗಿದೆ. ದಕ್ಷಿಣ ಈಕ್ವೆಡಾರ್ ಮತ್ತು ಕೊಲಂಬಿಯಾದಿಂದ ಮಧ್ಯ ಚಿಲಿಯವರೆಗೆ ದಕ್ಷಿಣ ಅಮೆರಿಕಾದ ದಕ್ಷಿಣ ಭಾಗದಲ್ಲಿ ಸಾಮ್ರಾಜ್ಯವು ಪ್ರಾಬಲ್ಯ ಸಾಧಿಸಿತ್ತು.


ಮಮ್ಮಿಗಳು ಅಂದರೆ ಏನು?
ಮಮ್ಮಿಗಳು, ಹಲವಾರು ವರ್ಷಗಳ ಕಾಲ ಕ್ಷಯಿಸದಂತೆ ಸಂರಕ್ಷಿಸಿಡಲ್ಪಟ್ಟ ಮನುಷ್ಯ ಅಥವಾ ಪ್ರಾಣಿಯ ದೇಹಗಳು. ಸಾಮಾನ್ಯವಾಗಿ ಯಾವುದೇ ಮನುಷ್ಯ ಅಥವಾ ಪ್ರಾಣಿಯು ಸಾವನ್ನಪ್ಪಿದ ನಂತರ ದೇಹವು ಕೊಳೆತು ಮಣ್ಣು ಸೇರುತ್ತದೆ. ಆದರೆ, ಮೃತ ದೇಹಗಳನ್ನು ಈ ರೀತಿಯಾಗಿ ನಶಿಸಿಹೋಗಲು ಬಿಡದೆ, ಹಲವು ವರ್ಷಗಳ ಕಾಲ ಅವು ಕ್ಷಯಿಸಿ ಹೋಗದಂತೆ ಸಂರಕ್ಷಿಸಿಡುವ ವಿಶಿಷ್ಟ ಪದ್ಧತಿಯನ್ನು ಪ್ರಾಚೀನ ಈಜಿಪ್ಟ್ ಹಾಗೂ ಇತರ ಕೆಲವು ದೇಶಗಳ ಜನರು ಹಿಂದೆ ರೂಢಿಸಿ ಕೊಂಡಿದ್ದರು. ಇದನ್ನೇ ಮಮ್ಮಿ ಎನ್ನಲಾಗುತ್ತದೆ.


ಇದನ್ನೂ ಓದಿ:  Explained: ಇರಾನ್‌ನ ಪ್ರಬಲ ಸಫಾವಿದ್ ರಾಜವಂಶದ ಸ್ಥಾಪಕ ಶಾ ಇಸ್ಮಾಯಿಲ್ಗೂ ಬಾಬರ್‌ಗೂ ಸಂಬಂಧವಿದೆ, ಈ ಸಬಂಧಕ್ಕೆ ಕಾರಣ ಇಲ್ಲಿದೆ


ಸಾವಿರಾರು ವರ್ಷಗಳಷ್ಟು ಹಳೆಯದಾದ ಮೃತ ವ್ಯಕ್ತಿಗಳ ದೇಹಗಳು ಮಮ್ಮಿಗಳ ರೂಪದಲ್ಲಿ ಇಂದಿಗೂ ಕಾಣಸಿಗುತ್ತವೆ. ಬಹುಪಾಲು ಮಮ್ಮಿಗಳು ಈಜಿಪ್ಟ್ ದೇಶದ 'ಪಿರಮಿಡ್ಡುಗಳಲ್ಲಿ ಕಂಡುಬಂದಿವೆ.

Published by:Ashwini Prabhu
First published: