ಕೋಡಿಂಗ್ ಕಲಿಯುವ ಆಸಕ್ತಿ ನಿಮ್ಮಲ್ಲಿದೆ ಎಂದರೆ ನಿಮ್ಮ ಆಸಕ್ತಿಗೆ ಸಹಕಾರಿಯಾ ಗಿರುವ ಹಲವಾರು ಆನ್ಲೈನ್ ಸಂಪನ್ಮೂಲಗಳಿವೆ. ಹೆಚ್ಚಿನ ಕೋಡಿಂಗ್ ಕೋರ್ಸ್ಗ ಳನ್ನು ಕಲಿಯಲು ಈ ಆನ್ಲೈನ್ ತಾಣಗಳು ಸಹಕಾರಿಯಾಗಿದೆ. ಹಾಗಾದರೆ ಇಂದಿನ ಲೇಖನದಲ್ಲಿ ಕೋಡಿಂಗ್ ಕಲಿಯಲು ಅತ್ಯುತ್ತಮ ಎಂದೆನ್ನಿಸಿರುವ ಕೆಲವೊಂದು ವೆಬ್ಸೈಟ್ಗಳ ಪರಿಚಯ ಮಾಡಿಕೊಳ್ಳೋಣ. ಈ ಕೋಡಿಂಗ್ ಕಲಿಕೆಯನ್ನು ಈ ವೆಬ್ಸೈಟ್ಗಳು ಉಚಿತವಾಗಿ ಒದಗಿಸುತ್ತಿದ್ದು ನೀವು ಮನೆಯಲ್ಲಿದ್ದುಕೊಂಡೇ ಕೋಡಿಂಗ್ ಕಲಿಯಬಹುದಾಗಿದೆ.
1.ಕೋಡ್ಅಕಾಡೆಮಿ:
ಬೇರೆ ಬೇರೆ ಪ್ರೊಗ್ರಾಮಿಂಗ್ ಲಾಂಗ್ವೇಜ್ ಹಾಗೂ ಫ್ರೇಮ್ ವರ್ಕ್ಗಳನ್ನು ಇಲ್ಲಿ ಕಲಿಯಬಹುದು. ಇದು ಅತ್ಯುತ್ತಮ ಕೋರ್ಸ್ಗಳನ್ನು ಒಳಗೊಂಡಿದೆ. ಇದರ ರಚನೆ ಸಂಘಟಿತವಾಗಿದ್ದು ಕೋಡಿಂಗ್ ಬೇಸಿಕ್ಸ್ ಅನ್ನು ನಿಮಗೆ ತಿಳಿಸಿಕೊಡುತ್ತದೆ.
2.ಯುಡೆಮಿ:
ಇದು ಹೆಚ್ಚಿನ ಉಚಿತ ಕೋರ್ಸ್ಗಳನ್ನು ಒದಗಿಸುತ್ತಿದ್ದು ಕೆಲವೊಂದು ಪ್ರೊಡಕ್ಟೀವ್ ಕಂಟೆಂಟ್ಗಳು ಶುಲ್ಕವನ್ನು ಒಳಗೊಂಡಿದೆ. ವೆಬ್ ಡೆವಲಪ್ಮೆಂಟ್ ಹಾಗೂ ವೆಬ್ ಡಿಸೈನ್ಗೆ ಬಳಸಲಾದ ತಂತ್ರಜ್ಞಾನವನ್ನು ಈ ವೆಬ್ಸೈಟ್ ಹೊಂದಿದೆ.
3.ಯುಡಾಸಿಟಿ:
ತಂತ್ರಜ್ಞಾನದಲ್ಲಿ ವಿಶೇಷ ಕೌಶಲ್ಯಗಳನ್ನು ಈ ವೆಬ್ಸೈಟ್ ಒದಗಿಸುತ್ತದೆ. ಗೂಗಲ್, ಫೇಸ್ಬುಕ್ ಮೊದಲಾದ ದೈತ್ಯ ಕಂಪೆನಿಗಳ ಮೂಲಕ ಕೋರ್ಸ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಿದ್ಧಹಸ್ತ ಎಂದೆನಿಸಿದೆ. ಉದ್ಯೋಗವನ್ನು ಪಡೆಯುವಲ್ಲಿ ಯುಡಾಸಿಟಿ ಸಹಕಾರಿಯಾಗಿದೆ.
4.ಫ್ರಿಕೋಡ್ಕ್ಯಾಂಪ್:
ಕೋಡಿಂಗ್ ಕುರಿತು ಯಾವುದೇ ಮೂಲ ಜ್ಞಾನ ನಿಮಗೆ ಇಲ್ಲ ಎಂದಾದಲ್ಲಿ ಫ್ರಿಕೋಡ್ ಕ್ಯಾಂಪ್ ಅತ್ಯುತ್ತಮವಾದುದು. ಇದು ತರಬೇತಿ ವಿಡಿಯೋಗಳನ್ನು ಒಳಗೊಂಡಿದ್ದು ಕೋರ್ಸ್ ಕಲಿಕೆಯನ್ನು ಪರಿಣಾಮಕಾರಿಯಾಗಿಸಲಿದೆ.
5.ಟೀಮ್ ಟ್ರಿಹೌಸ್:
ಕೋಡಿಂಗ್ ಕಲಿಯಲು ಇದು ಅತ್ಯುತ್ತಮ ವೆಬ್ಸೈಟ್ ತಾಣವಾಗಿದೆ. ಪ್ರತಿ ಕೋರ್ಸ್ನ ಲೈಬ್ರರಿ ಇಲ್ಲಿದ್ದು ಸಂಕ್ಷಿಪ್ತವಾಗಿ ಕೋರ್ಸ್ ವಿವರವನ್ನು ಒದಗಿಸುತ್ತದೆ.
6.ಪ್ಲೂರಲ್ಸೈಟ್ (ಕೋಡ್ ಸ್ಕೂಲ್):
ಈ ವೆಬ್ಸೈಟ್ ಕೋಡಿಂಗ್ ಕೋರ್ಸ್ಗಳನ್ನು ಒದಗಿಸುವುದು ಮಾತ್ರವಲ್ಲದೆ ನಿರ್ದಿಷ್ಟ ವಿಷಯವನ್ನು ಆಳವಾಗಿ ಅಧ್ಯಯನ ನಡೆಸಲು ಸಹಕಾರಿಯಾಗಿದೆ. ಉದಾಹರಣೆಗೆ ಜಾವಾಸ್ಕ್ರಿಪ್ಟ್ ಅಥವಾ ರೂಬಿ ಇತ್ಯಾದಿ. 10 ದಿನದ ಟ್ರಯಲ್ ಕೋರ್ಸ್ ಕೂಡ ಇಲ್ಲಿ ಲಭ್ಯವಿದೆ.
7.EDX.ORG (ಇಡಿಎಕ್ಸ್.ಓಆರ್ಜಿ):
ಕೋರ್ಸ್ಗಳಿಗೆ ತರಬೇತಿ ನೀಡುವವರು ಅತ್ಯುತ್ತಮ ವೃತ್ತಿಪರರಾಗಿದ್ದು ಕಂಪ್ಯೂಟರ್ಗಳ ಕಾರ್ಯನಿರ್ವಹಣೆ ಹಾಗೂ ಅವುಗಳ ಕಲಿಕೆಯಿಂದ ನಿಮ್ಮ ಇಚ್ಛೆಗಳನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ತಿಳಿಸಿಕೊಡುತ್ತಾರೆ. ಕೆಲವೊಂದು ಕಂಪ್ಯೂಟರ್ ಸೈನ್ಸ್ ಬೇಸಿಕ್ ಕಲಿಯಲು ಈ ತಾಣ ಉತ್ತಮವಾಗಿದೆ. ಇದು ನಿಮ್ಮ ಸಮಯದ ಉಳಿತಾಯವನ್ನು ಮಾಡುತ್ತದೆ.
8.ಲರ್ನ್ ಪೈಥಾನ್ ದ ಹಾರ್ಡ್ ವೇ:
ಪೈಥಾನ್ ಕಲಿಯುವವರಿಗೆ ಈ ವೆಬ್ಸೈಟ್ ಹೇಳಿಮಾಡಿಸಿದ್ದು. ಇದೊಂದು ಪುಸ್ತಕ ರೂಪದ ಜಾಲತಾಣವಾಗಿದೆ. ಪೈಥಾನ್ ಕುರಿತ ಕೆಲವೊಂದು ಟಾಪಿಕ್ಗಳು ಹಾಗೂ ಡೈನಾಮಿಕ್ಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಹಲವಾರು ಅಭ್ಯಾಸ ಕ್ರಮಗಳನ್ನು ಪುಸ್ತಕವು ಹೊಂದಿದ್ದು ಪೈಥಾನ್ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಅಮೆಜಾನ್ನಲ್ಲಿ ಈ ಪುಸ್ತಕ ಲಭ್ಯವಿದ್ದು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಆನ್ಲೈನ್ನಲ್ಲಿ ಪುಸ್ತಕ ಉಚಿತವಾಗಿ ಲಭ್ಯವಿದ್ದು ಅಲ್ಲಿ ಕೂಡ ಅಭ್ಯಾಸ ನಡೆಸಬಹುದಾಗಿದೆ. ನಿಮ್ಮಷ್ಟಕ್ಕೆ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕೋರ್ಸ್ ಬಗ್ಗೆ ಸಂಪೂರ್ಣವಾಗಿ ಕಲಿತುಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ