• Home
  • »
  • News
  • »
  • trend
  • »
  • Weird Wedding: 18ವರ್ಷದ ಹುಡುಗಿಯನ್ನು ಮದುವೆಯಾದ ಮುದುಕ! ವೈರಲ್ ಆಯ್ತು ಫೋಟೋ

Weird Wedding: 18ವರ್ಷದ ಹುಡುಗಿಯನ್ನು ಮದುವೆಯಾದ ಮುದುಕ! ವೈರಲ್ ಆಯ್ತು ಫೋಟೋ

ಸಣ್ಣ ಪ್ರಾಯದ ಹುಡುಗಿಯನ್ನು ಮದುವೆ ಆದ ಮುದುಕ

ಸಣ್ಣ ಪ್ರಾಯದ ಹುಡುಗಿಯನ್ನು ಮದುವೆ ಆದ ಮುದುಕ

Trending: ಚಿತ್ರ ವಿಚಿತ್ರವಾಗಿರುವುದಕ್ಕೆ ಇಂತಹುದ್ದೇ ವಿಷಯಗಳು ಆಗಬೇಕಂತ ಏನಿಲ್ಲ. ಈ ರೀತಿಯ ಹಲವಾರು ಉದಾಹರಣೆಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಂಡಿರುತ್ತೇವೆ.

  • Share this:

ಸಾಮಾಜಿಕ ಜಾಲತಾಣಗಳಲ್ಲಿ (Social Media) ಮನರಂಜನೆಗೆ ಏನೂ ಕೊರತೆಗಳಿಲ್ಲ ಬಿಡಿ. ಇದರ ಜೊತೆಗೆ ಹ್ಯೂಮನ್ ಇಂಟ್ರೆಸ್ಟಿಂಗ್  (Human Intresting) ಆಗಿರುವಂತಹ ನೂರಾರು ವಿಷಯಗಳು ಹರಿದಾಡುತ್ತಲೇ ಇರುತ್ತವೆ. ಇದನ್ನು ನೋಡುತ್ತಾ ನೋಡುತ್ತಾ ಜನರು ಮೂಕವಿಸ್ಮಿತರಾಗುತ್ತಾರೆ. ಚಿತ್ರ ವಿಚಿತ್ರವಾಗಿರುವುದಕ್ಕೆ ಇಂತಹುದ್ದೇ ವಿಷಯಗಳು ಆಗಬೇಕಂತ ಏನಿಲ್ಲ. ಈ ರೀತಿಯ ಹಲವಾರು ಉದಾಹರಣೆಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಂಡಿರುತ್ತೇವೆ. 80ರ ಅಜ್ಜ ಮಣ್ಣು ತಿನ್ನುವುದು, ಮಗು ಗಾಡಿ ಓಡಿಸುವುದು ಹೀಗೆ ನಾನಾರೀತಿಯ ವಿಷಯಗಳ ಅನುಗುಣವಾಗಿರುವ ವಿಷಯಗಳು ವೈರಲ್​ ಆಗ್ತಾನೆ ಇರುತ್ತೆ ಬಿಡಿ. ಇದೀಗ ಅಂತದ್ದೇ ಒಂದು ಗುಂಪಿಗೆ ಸೇರಲು ಹೊರಟಿದೆ ಇಲ್ಲೊಂದು ಸ್ಟೋರಿ (Story). ಕೇಳಿದ್ರೇ ಪಕ್ಕಾ ಶಾಕ್ (Shock) ಆಗ್ತೀರ!


ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ ವಿವಾಹಕ್ಕೆ ಸಂಬಂಧಿಸಿದ ಹಲವು ಸುದ್ದಿಗಳನ್ನು ನೀವು ಓದಿರಬಹುದು. ಆದರೆ ನಾವೀಗ ನಿಮಗೆ ಹೇಳಲು ಹೊರಟಿರುವ ಸುದ್ದಿಯನ್ನು ಓದಿದ ನಂತರ ನೀವು ಕೂಡ ಶಾಕ್ ಆಗಬಹುದು ಮತ್ತು ಪ್ರೀತಿ ನಿಜವಾಗಿಯೂ ಕುರುಡಾಗಿದೆಯೇ ಎಂದು ಯೋಚಿಸಬಹುದು.


ಹದಿಹರೆಯದ ವಯಸ್ಸಿನಲ್ಲಿರುವ ಹುಡುಗ ಅಥವಾ ಹುಡುಗಿಯರಿಗೆ ತನ್ನ ಡ್ರೀಮ್ ಬಾಯ್/ ಡ್ರೀಮ್ ಗರ್ಲ್​ ಹೀಗಿರಬೇಕು ಅಂತ ಕನಸು ಇರುತ್ತೆ. ಆದರೆ ಇಲ್ಲೊಬ್ಬಳು ಏನು ಮಾಡಿದ್ದಾಳೆ ಗೊತ್ತಾ?


ಇದನ್ನೂ ಓದಿ: ರಾಜಮನೆತನದಿಂದ ಹೊರಗುಳಿಯಲಿದ್ದಾರಾ ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್?


ಫಿಲಿಪೈನ್ಸ್‌ನಲ್ಲಿ 78 ವರ್ಷದ ವ್ಯಕ್ತಿ ತನಗಿಂತ ಸುಮಾರು 60 ವರ್ಷ ಚಿಕ್ಕವಳಾದ ಹುಡುಗಿಯನ್ನು ಮದುವೆಯಾಗಿದ್ದಾನೆ. ಬಾಲಕಿಯ ವಯಸ್ಸು 18 ವರ್ಷ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಮದುವೆಗೆ ಮೊದಲು ವಯಸ್ಸಾದ ಪುರುಷ ಮತ್ತು ಹುಡುಗಿ ಸುಮಾರು ಮೂರು ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ಇದಾದ ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ವಿವಾಹವಾದರು. 78 ವರ್ಷದ ರಶೀದ್ ಮಂಗ್‌ಕೋಪ್ ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ.


ಮೂರು ವರ್ಷಗಳ ಹಿಂದೆ ಕಗಾಯಾನ್ ಪ್ರಾಂತ್ಯದಲ್ಲಿ ಔತಣಕೂಟವೊಂದರಲ್ಲಿ ರಶೀದ್ 15 ವರ್ಷದ ಹಲೀಮಾ ಅಬ್ದುಲ್ಲಾಳನ್ನು ಭೇಟಿಯಾಗಿದ್ದ. ಮೊದಲ ಭೇಟಿಯಲ್ಲಿಯೇ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದರು. ಇದಾದ ನಂತರ ಇಬ್ಬರೂ ಲಿವ್ ಇನ್ ಟುಗೆದರ್ ಆಗಿರಲು ನಿರ್ಧರಿಸಿದ್ದರು.


ಸುಮಾರು ಮೂರು ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಇಬ್ಬರೂ ತಮ್ಮ ಮನೆಯವರ ಮುಂದೆ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಬಳಿಕ ಇಬ್ಬರ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿದರು. ಇದೀಗ ಮನೆಯವರ ಸಮ್ಮುಖದಲ್ಲಿ ಇಬ್ಬರೂ ಮದುವೆಯಾದರು.


ಇದನ್ನೂ ಓದಿ: ನೀವು ಪ್ರಾಣಿ ಪ್ರಿಯರೇ? ಹಾಗಾದರೆ ಈ ಕ್ಷೇತ್ರ ನಿಮಗೆ ಸೂಕ್ತ


78 ವರ್ಷದ ವರನಾಗಿರುವ ರಶೀದ್ ಅವರ ಸೋದರಳಿಯ "ಇಬ್ಬರ ಮದುವೆಯೂ ನಿಶ್ಚಯವಾಗಿಲ್ಲ ಆದರೆ ಪ್ರೇಮ ವಿವಾಹವಾಗಿದೆ" ಎಂದು ಹೇಳಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತನ್ನ ಚಿಕ್ಕಪ್ಪನಿಗೆ ಮೊದಲು ಮದುವೆಯಾಗಿರಲಿಲ್ಲ ಹಾಗೂ ಅವನು ಇನ್ನೂ ಬ್ರಹ್ಮಚಾರಿ ಎಂದು ರಶೀದ್ ಹೇಳಿದರು.


ವಧುವಿನ ತಂದೆ ನನ್ನ ಚಿಕ್ಕಪ್ಪನ ಬಳಿ ಕೆಲಸ ಮಾಡುತ್ತಾರೆ ಎಂದು ರಶೀದ್ ಅವರ ಸೋದರಳಿಯ ಹೇಳಿದರು. ಈ ಕಾರಣದಿಂದಾಗಿ, ನನ್ನ ಚಿಕ್ಕಪ್ಪ ಹಲೀಮಾಳನ್ನು ಔತಣಕೂಟದಲ್ಲಿ ಭೇಟಿಯಾದರು. ಸುಮಾರು ಮೂರು ವರ್ಷಗಳ ಕಾಲ ಕಾಯುವ ನಂತರ ಅವರ ಸಂಬಂಧಕ್ಕೆ ಕುಟುಂಬದಿಂದ ಒಪ್ಪಿಗೆ ಸಿಕ್ಕಿತು ಎಂದು ಸೋದರಳಿಯ ಹೇಳಿದರು.


ಅಬ್ಬಬ್ಬಾ! ಇವರಂತೂ ಆ ಹುಡುಗಿಗೆ 18ವರ್ಷ ಆಗುವುದನ್ನೇ ಕಾಯ್ತಾ ಇದ್ರು ಅಂತ ಕಾಣುತ್ತೆ. 18 ಆಗಿದ  ಕೂಡಲೇ ಮದುವೆ ಮಾಡಿದ್ಧಾರೆ. ಆದರೂ ಕೂಡ ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯನೇ ಬಿಡಿ.

First published: