ಅಳಿಯನನ್ನೇ ಮದುವೆಯಾದ ಅತ್ತೆಯ ಜೀವನದಲ್ಲಿ ಈಗ ಹೊಸ ಟ್ವಿಸ್ಟ್​; ಏನದು?; ಈ ಸ್ಟೋರಿ ಓದಿ

ಅತ್ತೆ ಗಲಿನಾರೊಂದಿಗೆ ಆಶ್ರಯ ಪಡೆಯುತ್ತಿದ್ದ ವ್ಯಾಚೆಸ್ಲಾವ್​ಗೆ ಆಕೆಯ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ನಂತರ ಇವರಿಬ್ಬರು ಮದುವೆಯಾಗಲು ಮುಂದಾಗುತ್ತಾರೆ. 2010ರಲ್ಲಿ ಅತ್ತೆ ಗಲಿನಾರನ್ನು ವ್ಯಾಚೆಸ್ಲಾವ್​ ವಿವಾಹವಾಗುತ್ತಾರೆ. ಆದರೀಗ ಈ ಸಂಬಂಧಕ್ಕೆ ಹೊಸ ಟ್ವಿಸ್ಟ್​ ಎದುರಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಇತ್ತೀಚೆಗೆ ತಾಯಿ ಮಲಮಗನನ್ನು ವರಿಸಿರುವ ಘಟನೆ, ತಂದೆ ತನ್ನ ದತ್ತುಪುತ್ರಿಯನ್ನು ವಿವಾಹವಾದ ಸಂಗತಿ ಬೆಳಕಿಗೆ ಬಂದಿತ್ತು. ಆದರೀಗ ಅತ್ತೆ ತನ್ನ ಅಳಿಯನನ್ನು ವಿವಾಹವಾಗಿರುವ ಘಟನೆಯೊಂದು ನಡೆದಿದೆ. ಆಷ್ಟಕ್ಕೂ ಈ ಘಟನೆ ಬಹಳ ವಿಚಿತ್ರವಾಗಿದೆ. ಅಳಿಯ ಅತ್ತೆಯನ್ನು ವಿವಾಹವಾಗಲೂ ಕಾರಣವೂ ಒಂದಿದೆ. ಅಷ್ಟಕ್ಕೂ ಆ ಕಾರಣವೇನು? ಈ ಘಟನೆ ನಡೆದಿರುವುದು ಎಲ್ಲಿ? ಈ ಸ್ಟೋರಿ ಓದಿ.

  ರಷ್ಯಾದ ಸೈಂಟ್​ ಪೀಟರ್​ಬರ್ಗ್​​​​ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 75 ವರ್ಷದ ಗಲಿನಾ ಝೂಕೋವಸ್ಕಯ ಎಂಬಾಕೆ 52 ವರ್ಷದ ವ್ಯಾಚೆಸ್ಲಾವ್​ ಝುಕೋವ್​​ಸ್ಕಿ ಯನ್ನು ವಿವಾಹವಾಗಿದ್ದಾರೆ. ಅಷ್ಟಕ್ಕೂ ವ್ಯಾಚೆಸ್ಲಾವ್​ ಯಾರು ಗೊತ್ತಾ?. ಗಲಿನಾ ಅವರ ಮಗಳ ಮೊದಲ ಪತಿ!.

  ವ್ಯಾಚೆಸ್ಲಾವ್​​ ಈ ಮೊದಲು ಗಲಿನಾರ ಮಗಳು ಎಲಿನಾರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಮೂರು ವರ್ಷದಲ್ಲೇ ಇವರಿಬ್ಬರ ಸಂಸಾರದಲ್ಲಿ ಬಿರುಕು ಬಿತ್ತು. ಹಾಗಾಗಿ ವ್ಯಾಚೆಸ್ಲಾವ್​ ಮತ್ತು ಎಲೆನಾ ಇಬ್ಬರು ದೂರವಾದರು. ಅಷ್ಟು ಮಾತ್ರವಲ್ಲ, ಎಲಿನಾ ತನ್ನ ಪತಿಯನ್ನು ಮನೆಯಿಂದ ಹೊರ ಹಾಕಿದಳು. ಅತ್ತ ಉಳಿದುಕೊಳ್ಳಲು ಎಲ್ಲೂ ಮನೆಯಿಲ್ಲದೆ ವ್ಯಾಚೆಸ್ಲಾವ್​ ಅತ್ತೆ ಗಲಿನಾ ಬಳಿ ಹೋಗುತ್ತಾನೆ. ಆಕೆಯೊಂದಿಗೆ ನಡೆದ ಘಟನೆಯನ್ನು ವಿವರಿಸುತ್ತಾನೆ. ನಂತರ ಅಲ್ಲಿಯೇ ಆಶ್ರಯ ಪಡೆಯುತ್ತಾನೆ.

  ಅತ್ತೆ ಗಲಿನಾರೊಂದಿಗೆ ಆಶ್ರಯ ಪಡೆಯುತ್ತಿದ್ದ ವ್ಯಾಚೆಸ್ಲಾವ್​ಗೆ ಆಕೆಯ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ನಂತರ ಇವರಿಬ್ಬರು ಮದುವೆಯಾಗಲು ಮುಂದಾಗುತ್ತಾರೆ. 2010ರಲ್ಲಿ ಅತ್ತೆ ಗಲಿನಾರನ್ನು ವ್ಯಾಚೆಸ್ಲಾವ್​ ವಿವಾಹವಾಗುತ್ತಾರೆ. ಆದರೀಗ ಈ ಸಂಬಂಧಕ್ಕೆ ಹೊಸ ಟ್ವಿಸ್ಟ್​ ಎದುರಾಗಿದೆ. ಇವರಿಬ್ಬರ ಸಂಬಂಧಕ್ಕೆ ಮಗಳು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾಳಂತೆ.

  ಏನದು ಟ್ವಿಸ್ಟ್​?

  ತನ್ನ ಮಗಳ ಬಗ್ಗೆ ದೂರುತ್ತಿರುವ ಗಲಿನಾ, ನನ್ನ ಸಂಸಾರವನ್ನು ಎಲಿನಾ ಹಾಳು ಮಾಡಲು ನೋಡುತ್ತಿದ್ದಾಳೆ. ವ್ಯಾಚೆಸ್ಲಾವ್​ನಿಂದ ದೂರವಾದ ನಂತರ​ ಎಲಿನಾ ಎಲ್ಲಿದ್ದಾಳೆ ಎಂಬುದೇ ಗೊತ್ತಿಲ್ಲ. ಇದೀಗ ಬಂದು ನನ್ನ ಮತ್ತು ವ್ಯಾಚೆಸ್ಲಾವ್​ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿವ ಕೆಲಸ ಮಾಡುತ್ತಿದ್ದಾಳೆ ಎಂದು ತಾಯಿ ಗಲಿನಾ  ದೂರುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗಲಿನಾ ಅವರ ದೂರು ಭಾರೀ ಚರ್ಚೆಯಾಗುತ್ತಿದೆ.

  ಒಂದು ದಶಕದ ಬಳಿಕ ವ್ಯಾಚೆಸ್ಲಾವ್​ನನ್ನು ಎಲಿನಾ ದೂರ ಮಾಡಿದಳು. ಆನಂತರ ಆಕೆ ಎಲ್ಲಿದ್ದಳು ಎಂಬುದೇ ಗೊತ್ತಿಲ್ಲ. ಆದರೀಗ ನನ್ನ ಮತ್ತು ವ್ಯಾಚೆಸ್ಲಾವ್​ ಸಂಸಾರ ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾಳೆ.  ತಾಯಿ ತನ್ನ ಅಳಿಯನೊಂದಿಗೆ ಸುಖವಾಗಿದ್ದಾಳೆಂದು ಅಸೂಹೆ ಪಟ್ಟಿರುವ ಎಲಿನಾ ವ್ಯಾಚೆಸ್ಲಾವ್​ನನ್ನು ತನ್ನನ್ನ ಸೆಳೆಯಲು ಪ್ರಯತ್ನಿಸುತ್ತಿದ್ದಾಳೆ ಎಂಬುದು ಗಲೀನಾರ ದೂರು.

  ಗಲಿಮಾ-ವ್ಲಾಚೆಸಾವ್​-ಎಲಿನಾ


  ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಕನ್ನಡದ ಈ ಬಿಗ್​ ಬಾಸ್​ ನಟಿ!

  ವ್ಯಾಚೆಸ್ಲಾವ್​ ಮತ್ತು ಎಲಿನಾ ಸಂಬಂಧದಲ್ಲಿದೆ ಸ್ವಾರಸ್ಯಕರ ಘಟನೆ:

  ವ್ಯಾಚೆಸ್ಲಾವ್​ ಮತ್ತು ಎಲಿನಾ ಪ್ರೀತಿಯಲ್ಲಿ ಬಿದ್ದು ವಿವಾಹವಾದವರು. ವ್ಯಾಚೆಸ್ಲಾವ್​ ತನ್ನ ಮಾಲೀಕ ಸರಿಯಾಗಿ ಸಂಬಳ ನೀಡಲಿಲ್ಲ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿದ್ದ. ಈ ಘಟನೆಗೆ ಸಂಬಂಧಿಸಿ ಜೈಲು ಸೇರಿದ್ದ. ಜೈಲಿನಲ್ಲಿದ್ದಾಗ ವ್ಯಾಚೆಸ್ಲಾವ್​ ನಾನು ಪ್ರೀತಿಯ ಹುಡುಕಾಟದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಪ್ರತಿಕೆಯಲ್ಲೂ ಪ್ರಕಟಗೊಂಡಿತ್ತು.

  ವ್ಯಾಚೆಸ್ಲಾವ್​ ಹೇಳಿಕೆಗೆ ಮನಸೋತಿದ್ದ ಎಲಿನಾ ಆತನನ್ನು ಹುಡುಕುತ್ತಾ ಹೋಗುತ್ತಾಳೆ. ನಂತರ ಅವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತದೆ. 2017ರಲ್ಲಿ ಜೈಲಿನಿಂದ ಹೊರ ಬಂದ ವ್ಯಾಚೆಸ್ಲಾವ್​ ಮತ್ತು ಎಲಿನಾ ವಿವಾಹವಾಗುತ್ತಾರೆ. ಆದರೆ ವಿವಾಹವಾದ ಮೂರು ವರ್ಷಕ್ಕೆ ದೂರವಾಗುತ್ತಾರೆ.

  ಕ್ರೆಡಿಟ್​ ಕಾರ್ಡ್​ ಬಳಕೆದಾರರೇ ಎಚ್ಚರ! ಈ ಮಾಲ್​ವೇರ್​ ನಿಮಗೆ ಗೊತ್ತಿಲ್ಲದೆ ಪಂಗನಾಮ ಹಾಕಬಹುದು!

  ಇದೀಗ ಎಲಿನಾಗೆ ತನ್ನ ಮಾಜಿ ಪ್ರಿಯಕರ ಬೇಕು ಎನಿಸಿದೆ. ಆದರೆ ಆತ ಆತ್ತೆಯನ್ನು ವಿವಾಹವಾಗಿ ಅನ್ಯೋನ್ಯವಾಗಿದ್ದಾನೆ. ತನ್ನ ತಾಯಿಯೇ ತನ್ನ ಮಾಜಿ ಪತಿಯನ್ನು ವಿವಾಹವಾಗಿರುವುದು ಎಲಿನಾಗೆ ಬೇಸರ ತರಿಸಿದ್ದು, ತಾಯಿ-ಮಗಳ ನಡುವೆ ಜಗಳ ಶುರುವಾಗಿದೆ. ಸದ್ಯ ಈ ವಿಚಾರವೇ ಸುದ್ದಿಯಲ್ಲಿದೆ. ಆದರೆ ಇದು ಹೇಗೆ ಕೊನೆಗೋಳ್ಳುತ್ತದೆ ಎಂಬುದೇ ಪ್ರಶ್ನಾರ್ಥಕವಾಗಿದೆ.
  Published by:Harshith AS
  First published: